Thursday, February 21, 2008

ಕೆಲವು gaadegaLugaadegaLu

೭ನೆ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿ ಒ೦ದು ದಿವಸ ಅ೦ಕ ಗಣಿತದ ಒ೦ದು ಪ್ರಶ್ನೆಯನ್ನು ಬಿಡಿಸುವದರಲ್ಲಿ ಮಗ್ನ ನಾಗಿದ್ದ. ಆಗ ಶಿಕ್ಷಕ ಅತ್ತನ ಹತ್ತಿರ ಬ೦ದು, ಒ೦ದು ಜ್ನಾನ ವ್ರುದ್ಧಿ ಆಗುವ ಸಮಸ್ಯ ಕೇಳುವೆ ಉತ್ತರಿಸುಎಯಾ? ಎ೦ದರು. ಅದಕ್ಕೆ ವಿದ್ಯಾರ್ಥಿ ಆಗಲಿ ಕೇಳಿ ಎ೦ದ. ಆಗ ಶಿಕ್ಷಕ, ಊಹಿಸು! ಒ೦ದು ಮರದ ಟೊ೦ಗೆಯ ಮೇಲೆ ೫ ಕಪ್ಪು ಪಕ್ಷಿಗಳಿವೆ. ನೀನು ಪಿಸ್ತೂಲಿನಿ೦ದ ಒ೦ದು ಪಕ್ಷಿಗೆ ಗು೦ಡು ಹೊಡೆದೆ. ಅಗ ಅಲ್ಲಿ ಉಳಿದಿರುವ ಪಕ್ಷಿಗಳು ಎಷ್ಟು?
ವಿದ್ಯಾರ್ಥಿ ಸ್ವಲ್ಪ ಸಮಯ ವಿಚಾರಿಸಿ ಉತ್ತರಿಸಿದ, "ಸೊನ್ನೆ." ಆಗ ಶಿಕ್ಷಕ, " ಹಾಗೆ ನಿಖರವಾಗಿ ಹೇಗೆ ಹೇಳುವಿ."
ಅದಕ್ಕೆ ವಿದ್ಯಾರ್ಥಿ, " ನಾನು ಒ೦ದು ಪಕ್ಷಿಗೆ ಗು೦ಡು ಹಾರಿಸಿದರೆ ಉಳಿದವು ಹೆದರಿಕೆಯಿ೦ದ ಹಾರಿ ಅಲ್ಲಿ ಏನೂ ಉಳಿಯುವದಿಲ್ಲ."
ಶಿಕ್ಷಕ,"ಅ೦! ನೀನು ನಿಖರವಾಗಿ ಹೇಳಲಿಲ್ಲ. ಆದರೂ ನಿನ್ನ ಬುದ್ಧಿ ಶಕ್ತಿ ನನಗೆ ಹಿಡಿಸಿತು" ಎ೦ದರು.
ಆಗ ವಿದ್ಯಾರ್ಥಿ, " ಸರ್! ನಾನು ನಿಮಗೊ೦ದು ಪ್ರಶ್ನೆ ಕೇಳುವೆ ಉತ್ತರ ಕೊಡುವಿರ?" ಎ೦ದ.
"ಆಗಲಿ ಕೇಳು" ಎ೦ದರು.
"ಮೂವರು ಯುವತಿಯರು ಒ೦ದು ಪಾರ್ಕ ಬೆ೦ಚಿನಮೇಲೆ ಕುಳಿತು ಬುಗುರಿ ಆಕಾರದ ಐಸ್ ಕ್ರೀ೦ ತಿನ್ನುತ್ತಿದ್ದರು. ಅದರಲ್ಲಿ ಒಬ್ಬಳು ಆದನ್ನು ನೆಕ್ಕುತ್ತಿದ್ದಳು. ಇನ್ನೊಬ್ಬಳು ಕಡಿಯುತ್ತಿದ್ದಳು.ಮೂರನೆಯವಳು ಅದನ್ನು ಹೀರುತ್ತಿದ್ದಳು. ಈಗ ಹೇಳಿ ಅವರಲ್ಲಿ ಮದುವೆ ಆದ ಯುವತಿ ಯಾರು?
ಶಿಕ್ಷಕ ಮನಸ್ಸಿನಲ್ಲಿ ವಿಚಾರ ಮಾಡಿ ತನಗೆ ಇದು ಕ್ಲಿಷ್ಟ ಎ೦ದು ಅನಿಸಿತು. ಕೊನೆಗೆ ಉತ್ತರಿಸಿದ, "ನನ್ನ ಊಹೆಯ೦ತೆ ಐಸ್ ಕ್ರೀ೦ ಹೀರುವ ಯುವತಿ ಮದುವೆ ಯಾದವಳು" ಎ೦ದರು.
ಅದಕ್ಕೆ ವಿದ್ಯಾರ್ಥಿ ಉತ್ತರಿಸಿದ," ನಿಜವಾಗಿ ಹೇಳಬೇಕಾದರೆ ಮ೦ಗಳಸೂತ್ರ ಹಾಕಿಕೊ೦ಡ ಯುವತಿ ಮದುವೆ ಆದವಳು." ಎ೦ದು ಮು೦ದುವರೆದು ಹೇಳಿದ ನೀವು ಹೇಳುವ ರೀತಿ ನನಗೆ ಮೆಚ್ಚುಗೆ ಆಯಿತು ಎ೦ದ.
ನಾನು ಮತ್ತು ನನ್ನಾಕೆ ಇಪ್ಪತ್ತೈದು ವರ್ಷ ಸುಖವಾಗಿದ್ದೆವು. ಆಮೇಲೆ, ಪರಸ್ಪರ ನೋಡಿ ಮದುವೆಯಾಗಿಬಿಟ್ಟೆವು.

**ಒಳ್ಳೆಯ ಹೆಂಡತಿ ತಾನು ತಪ್ಪು ಮಾಡಿದ್ದಾಗ ಗಂಡನ ತಪ್ಪುಗಳನ್ನೆಲ್ಲ ಉದಾರವಾಗಿ ಕ್ಷಮಿಸುತ್ತಾಳೆ.** **

ನನ್ನ ಹೆಂಡತಿಗೆ ಒಂದು ಕಾರು ಕೊಡಿಸಿದೆ. ಆಕೆಯಿಂದ ಫೋನು ಬಂತು."ಕಾರಿನ ಎಂಜಿನ್ನಿಳೊಗೆ ನೀರು ಸೇರಿದೆ.""ಕಾರು ಎಲ್ಲಿದೆ?""ಕೆರೆಯೊಳಗೆ ಮುಳುಗಿದೆ."

**ಸುಖೀ ಮದುವೆಯ ರಹಸ್ಯ ಎಂದೆಂದಿಗೂ ರಹಸ್ಯವಾಗಿಯೇ ಉಳಿದಿರುತ್ತದೆ.** **

ಜಗಳ ಆಗ ತಾನೇ ಮುಗಿದಿತ್ತು."ನಿಮ್ಮನ್ನು ಮದುವೆಯಾದಾಗ ನನ್ನ ಬುದ್ಧಿ ಕತ್ತೆ ಕಾಯುವುದಕ್ಕೆ ಹೋಗಿತ್ತು. ನಾನು ಪೆದ್ದಿ ಆಗಿದ್ದೆ.""ಹೌದು ಕಣೆ. ಆದರೆ ನಾನು ಆಗ ನಿನ್ನನ್ನು ಪ್ರೀತಿಸುತ್ತಿದ್ದೆ, ನನಗೆ ಗೊತ್ತೇ ಆಗಲಿಲ್ಲ."

**ನಾನು ಒಂದೂವರೆ ವರ್ಷದಿಂದ ನನ್ನ ಹೆಂಡತಿಯೊಡನೆ ಮಾತನಾಡೇ ಇಲ್ಲ. ಅವಳ ಮಾತಿಗೆ ಅಡ್ಡ ಬರುವುದಕ್ಕೆ ನನಗೆ ಇಷ್ಟವಿಲ್ಲ.** **

ಗಂಡನ ಕ್ರೆಡಿಟ್ ಕಾರ್ಡು ಕಳೆದುಹೋಗಿತ್ತು. ಆದರೂ ಅವನು ದೂರು ಕೊಡಲಿಲ್ಲ. ಅದನ್ನು ಬಳಸಿ ಅವನ ಹೆಂಡತಿ ಮಾಡುತ್ತಿದ್ದದ್ದಕ್ಕಿಂತ ಕಡಮೆ ಖರ್ಚು ಮಾಡುತ್ತಿದ್ದ ಕಳ್ಳ.**ಮದುವೆಯಾಗುವವರೆಗೆ ಗಂಡಸು ಅಪೂರ್ಣ. ಮದುವೆಯಾದಮೇಲೆ ಅವನ ಕತೆ "ಸಂಪೂರ್ಣ."** **ಪುಟ್ಟ ಹುಡುಗ ಅಪ್ಪನನ್ನು ಕೇಳಿದ. "ಅಪ್ಪಾ, ಮದುವೆಯಾಗುವುದಕ್ಕೆ ಎಷ್ಟು ಖರ್ಚು ಬರುತ್ತೆ?""ಗೊತ್ತಿಲ್ಲ ಮಗೂ. ಮದುವೆ ಆದಂದಿನಿಂದ ತಿಂಗಳು ತಿಂಗಳೂ ದುಡ್ಡು ಕೊಡುತ್ತಲೇ ಇದ್ದೇನೆ, ಇನ್ನೂ ಎಷ್ಟು ಕೊಡಬೇಕೋ ಏನೋ!"**ಮಗ: "ಅಪ್ಪಾ, ಆಫ್ರಿಕಾದಲ್ಲಿ ಕೆಲವು ಕಡೆ ಮದುವೆ ಆಗುವವರೆಗೆ ಹೆಂಡತಿ ಯಾರು, ಎಂಥವಳು ಎಂದು ಗೊತ್ತೇ ಇರುವುದಿಲ್ಲವಂತೆ, ಹೌದೆ?"ಅಪ್ಪ: "ಎಲ್ಲಾ ದೇಶದಲ್ಲೂ ಅದು ಹಾಗೇನೇ ಮಗೂ."** **ಗಂಡನೊಬ್ಬ ಹೇಳಿದ್ದು: "ಮದುವೆಯಾಗುವವರೆಗೆ ನಿಜವಾದ ಸಂತೋಷವೆಂದರೆ ಏನೆಂದು ನನಗೆ ಗೊತ್ತೇ ಇರಲಿಲ್ಲ. ಆದರೆ ಅಷ್ಟು ಹೊತ್ತಿಗೆತೀರ ತಡವಾಗಿತ್ತು."**ಒಬ್ಬಾತ "ಹೆಂಡತಿ ಬೇಕಾಗಿದ್ದಾಳೆ" ಎಂದು ಪೇಪರಿನಲ್ಲಿ ಜಾಹಿರಾತು ಕೊಟ್ಟ.ಮಾರನೆಯ ದಿನ ಇನ್ನೂರೈವತ್ತು ಕಾಗದ ಬಂದಿದ್ದವು. ಎಲ್ಲದರಲ್ಲೂ ಒಂದೇ ಸಮಾಚಾರ."ನನ್ನ ಹೆಂಡತಿಯನ್ನು ಕರೆದುಕೊಂಡು ಹೋಗಬಹುದು."** **ಹೆಂಗಸೊಬ್ಬಳು ಗೆಳತಿಗೆ ಹೇಳುತ್ತಿದ್ದಳು: "ನನ್ನ ಮದುವೆಯಾದಮೇಲೆ ಗಂಡ ಲಕ್ಷಾಧೀಶ್ವರನಾದ."ಗೆಳತಿ: "ಹೌದೆ, ಮೊದಲು ಏನಾಗಿದ್ದ?"ಹೆಂಗಸು: "ಕೋಟ್ಯಧೀಶನಾಗಿದ್ದ."**ಮದುವೆ ಎಂಬುದು ಕಲ್ಪನೆಯು ವಿವೇಕದ ಮೇಲೆ ನಡೆಸುವ ದಿಗ್ವಿಜಯ.ಎರಡನೆಯ ಮದುವೆ ಎಂಬುದು ಆಶಾವಾದವು ಅನುಭವದ ಮೇಲೆ ಸಾಧಿಸುವ ದುರಂತದ ಗೆಲುವು.** **ಮದುವೆಯಾದ ಗಂಡಸರು ಮದುವೆಯಾಗದವರಿಗಿಂತ ದೀರ್ಘಕಾಲ ಬದುಕುತ್ತಾರೆ ಅನ್ನುವುದು ಸುಳ್ಳು.ಮದುವೆಯ ನಂತರದ ಬದುಕು ಕೊನೆಯಿಲ್ಲದ್ದು, ಬಲು ದೀರ್ಘ ಅನ್ನಿಸುತ್ತದೆ ಅಷ್ಟೆ.**ಯಶಸ್ವೀ ಗಂಡನೆಂದರೆ ಹೆಂಡತಿ ಖರ್ಚುಮಾಡುವುದಕ್ಕಿಂತ ಹೆಚ್ಚು ಸಂಪಾದಿಸುವವನು.ಯಶಸ್ವೀ ಹೆಂಡತಿಯೆಂದರೆ ಅಂಥ ಗಂಡನನ್ನು ಹುಡುಕಿ ಪಡೆಯುವವಳು.** **ಬಾಟಲಿಯೊಳಗಿದ್ದ ಭೂತ ಗಂಡನೆದುರು ಪ್ರತ್ಯಕ್ಷವಾಗಿತ್ತು. ನೀನು ಕೇಳಿದ್ದೆಲ್ಲ ಕೊಡುವೆ ಎಂದಿತು. ಆದರೆ ಒಂದೇ ಕಂಡೀಷನ್ನು. ನಿನಗೆ ಸಿಕ್ಕಿದ್ದರ ಎರಡರಷ್ಟುನಿನ್ನ ಅತ್ತೆಗೆ ದೊರೆಯುತ್ತದೆ ಅಂದಿತು. ಗಂಡ ಬಹಳ ಯೋಚನೆ ಮಾಡಿ ಹೇಳಿದ. ನನಗೆ ಕೋಟಿ ರೂಪಾಯಿ ಕೊಡು, ಆಮೇಲೆ ಅರೆಜೀವವಾಗುವಂತೆ ಚೆನ್ನಾಗಿ ಹೊಡಿ.**ಕಿವಿ ಚುಚ್ಚಿಸಿಕೊಂಡ ಗಂಡಸರು ಮದುವೆಗೆ ತಕ್ಕ ರೀತಿಯಲ್ಲಿ ಪ್ರಿಪೇರ್ ಆಗಿರುತ್ತಾರೆ. ಅವರಿಗೆ ನೋವೂ ಗೊತ್ತು, ಕಿವಿಗೆ ಒಡವೆ ಪರ್ಚೇಸ್ ಮಾಡಿಯೂ ಗೊತ್ತು.** **ಕೊಂಚ ಯೋಚಿಸಿ ನೋಡಿ. ಮದುವೆ ಎಂಬುದಿರದಿದ್ದರೆ ಗಂಡಸರೆಲ್ಲ ತಾವು ಪರಿಪೂರ್ಣರು ಎಂಬ ಭ್ರಮೆಯಲ್ಲಿರುತ್ತಿದ್ದರು, ಅಲ್ಲವೆ?

ಎದ್ದು ಬಂದು ಎದೆಗೆ ಒದ್ದರೆ, ಇದ್ದಿದ್ದು ಇದ್ದಂಗೆ ಹೇಳಿದ್ರಂತೆಅರ್ಧ ರಾತ್ರೀಲಿ ಕೊಡೆ ಹಿಡಿದರೆ ಅಲ್ಪನಿಗೆ ಐಶ್ವರ್ಯ ಸಿಕ್ಕಿದಳಂತೆಮೀಸೆ ಮಣ್ಣಾದ್ರು ಜಟ್ಟಿ ಕೆಳಗೆ ಬೀಳಲಿಲ್ಲವಂತೆಕುಲಾವಿ ಹೊಲಿಸೋಕೆ ಮುಂಚೆ ಕೂಸು ಹುಟ್ತಿಸಿದರುಬೇವಿನ ಕಾಯಿಗೆ ಹಾಗಲ ಕಾಯಿ ಸಾಕ್ಷಿನಮ್ಮ ಮನೆ ಕಾವಲಿ ತೂತಾದರೆ ಎಲ್ಲಾರ ಮನೆ ದೋಸೆ ತೂತುಚಂಡಾಲ ಶಿಶ್ಯರು ಚೋರ ಗುರುಪೂಜಾರಿ ವರ ಕೊಟ್ರು ದೇವ್ರು ವರ ಕೊಡತುಸು ತಿನ್ನೋದಕ್ಕಿಂತ ಕಸ ತಿನ್ನುಗಾದೆ ಸುಳ್ಳಾದರೂ ವೇದ ಸುಳ್ಳಾಗದುನೀರು ಕುಡಿದ ಮೇಲೆ ಉಪ್ಪು ತಿನ್ನಲೇ ಬೇಕುಬುದ್ದಿ ಬಂದ ಮೇಲೆ ಕೆಟ್ಟಿದ್ದಾಯ್ತುಮುನಿದರೆ ಮಾರಿ ಅಗುತ್ತಾಳೆ ನಾರಿಬೆಳಿಗ್ಗೆ ಎದ್ದು ರಾಮನಿಗು ಸೀತೆಗು ಏನು ಸಂಬಂಧ ಅಂದಿದ್ದಕ್ಕೆ ರಾತ್ರಿ ಎಲ್ಲಾ ರಾಮಯಣ ನೋಡಿದ್ರಂತೆಮೂರನೆಯವನಿಗೆ ಲಾಭ ಅಗಿದ್ದಕ್ಕೆ ಇಬ್ಬರ ಜಗಳಕೋಲು ಮುರಿದರೂ ಹಾವು ಸಾಯಬಾರದುಹೆಂಡ ಕುಡಿಸಿದರೆ ಕೋತಿಯಂತೆಎಮ್ಮೆಗೆ ಬರೆ ಎಳೆದಿದ್ದಕ್ಕೆ ಎತ್ತಿಗೆ ಜ್ವರ ಬಂತಂತೆಕಜ್ಜಾಯಕ್ಕೆ ತಕ್ಕ ಕಾಸುಹಸ್ತ ನುಂಗಿದರೆ ಬೆರಳು ತೋರಿಸಿದನಂತೆಯಥಾ ಪ್ರಜಾ ತಥಾ ರಾಜಹೆಗಲು ಮುಟ್ತಿ ನೋಡಿಕೊಂಡಿದ್ದಕ್ಕೆ ಕುಂಬಳ ಕಾಯಿ ಕಳ್ಳ ಅಂದ್ರಂತೆಆನೆಗೆ ಹೋದ ಮಾನ ಅಡಿಕೆ ಕೊಟ್ಟರೂ ಬರೊಲ್ಲದೇವ ಲೋಕ ಹಾಳಾದರೆ ನಾಯಿ ಬೊಗಳುತ್ತದೆಯೆ ?ದಡ್ಡನಿಗೆ ಮಾತಿನ ಪೆಟ್ಟು ಜಾಣನಿಗೆ ದೊಣ್ಣೆ ಪೆಟ್ಟುಕೈಲಾಸ ಇದ್ರೆ ಕಾಸುಬಾಯಿ ಮೊಸರಾದರೆ ಕೈ ಕೆಸರುಇಲಿ ಹಿಡಿದು ಬೆಟ್ಟ ಅಗೆದ್ರಂತೆಹುಲಿ ಬಂದ್ರೆಇಲಿ ಬಂತು ಅಂದ್ರಂತೆಸುಳ್ಳಿಗೆ ಸಾವಿಲ್ಲ ಸತ್ಯಕ್ಕೆ ಸುಖವಿಲ್ಲಕೊಟ್ಟವನು ವೀರಭದ್ರ ಇಸ್ಕೊಂಡವನು ಕೋಡಂಗಿಕುರುಬನಿಗೆ ಲಾಭ ಆದಷ್ಟೂ ಕುರಿ ಕೊಬ್ಬಿತುತೋಳ ಕಾಯೋದಕ್ಕೆ ಕುರಿ ಕಳಿಸಿದರಂತೆಇರುವೆ ಬಿಟ್ಕೊಂಡು ಇರಲಾರದಾದರುಕರುಳರಿಯದಿದ್ದರ್ರೂ ಕಣ್ಣರಿಯಿತುಶಸ್ತ್ರಾಭ್ಯಾಸ ಸಮಯದಲ್ಲಿ ಯುದ್ಢದ್ರಾಕ್ಷಿ ಹುಳಿಯಾದರೆ ಕೈಗೆ ಎಟುಕುವುದಿಲ್ಲಗುಡಿಸಲಿಗಿಂತ ಹಂಗಿನ ಅರಮನೆಯೆ ಲೇಸುಪಟ್ಟಣ ಸೇರಿ ಕೆಡುಬಚ್ಚಿಟ್ಟದ್ದು ತನಗೆ ಕೊಟ್ಟದ್ದು ಪರರಿಗೆವಿಷ ಕುಡಿದ ಮಕ್ಕಳೆ ಬದುಕೊಲ್ಲ ಇನ್ನು ಹಾಲು ಕುಡಿದ ಮಕ್ಕಳು ಬದುಕುತ್ತಾರ ?

No comments: