Tuesday, July 27, 2010

ಮನಮೆಚ್ಚಿದ ಹುಡುಗಿ

ಮಾಗಿಚಳಿಯಲ್ಲಿಬೇಗಎದ್ದು ಮಂಜಿನಹನಿ ಹೊದ್ದು
ಮನೆಯಂಗಳಗುಡಿಸಿ ಓಲವ ರಂಗವಲ್ಲಿ ಮುಂಬಾಗಿಲಲ್ಲಿ ಮೆದ್ದು
ನಲ್ಲನ ಬರುವಿಗಾಗಿ ಸಂತಸದ ಸುಮವ ದಾರಿಗೆಚಲ್ಲಿ
ಕಾದಿಹಳು ನನ್ನ ಮನಮೆಚ್ಚಿದ ಹುಡುಗಿ ಮುದ್ದು
ಅವಳಿಗೆ ಕೇಳಿಸದು ಯಾವಸದ್ದು ಕಾಣಿಸದು ಏನಿದ್ದೂ
ಎಲ್ಲಾ ಅವಳಿಗೆ ತನ್ನ ನಲ್ಲನ ಒಲವೇ ಮದ್ದು
ಎಲ್ಲ ಮರೆವಳು ಓಲವಲ್ಲಿ ಬಿದ್ದು.
ನಿಂದಿಹಳು ಚಲುವ ಹೊದ್ದು ನನ್ನ ಹೃದಯ ಕದ್ದು
ಅವಳೇ ನನ್ನ ಮನಮೆಚ್ಚಿದ ಹುಡುಗಿ ಪದ್ದು.
ಕೃಷ್ಣಮೊರ್ತಿ ಅಜ್ಜಹಳ್ಳಿ

ವಿರಹದಲಿಮನ

ನೀನಿಲ್ಲದೆ ಅನುದಿನ ವಿರಹ ಎನ್ನತುಂಬ
ನಿನ್ನ ಮುಗ್ದಮೊಗವೇ ನೀರಲ್ಲರಳಿದ ನಳಿನಬಿಂಬ
ಪ್ರತಿ ಇರುಳು ಕಾಡುತಿಹುದು ಮೌನ
ಮನಮಾಡುತಿಹುದು ನಿನ್ನ ಹೆಸರದ್ಯಾನ
ಯಾರೇ ಅಡ್ಡಿಮಾಡಲಿ ಯಾವುದೇ ಕಷ್ಟಬರಲಿ
ನಿನ್ನಲಿಗೆ ಬರುವೆ ಎಲ್ಲವ ತೂರಿ ಗಾಳಿಗೆ
ತಾರೆಗಳು ನಗುತಿವೆ ಶಶಿಯಕಂಡು
ಶ್ರಾವಣದ ಇರುಳಚಳಿಗೆ ಇಟ್ಟಿರುವೆ ನೀನಿತ್ತ ಮುತ್ತ
ಕವನದಲ್ಲಿ ಬರೆಯಲಾರೆ ಎನ್ನ ಮನದ ಉತ್ತರ
ನನ್ನವಳೆ ಇಲ್ಲಿ ತಾರೆ ನಿನ್ನ ಅದರ ಹತಿರ
ನಿನ್ನ ನಯನ ದರ್ಪಣದಿ ಮರೆವೆ ಮನದ ಎಲ್ಲ ನೋವನು
ಹೂಬಳ್ಳಿಯಂತೆ ಬಳುಕೊ ನಡುವ ಕುರಿತು ಕವನ ಕೊರೆವೆನು
ಸಂಜೆ ಕೆಂಪು ಪ್ರೀತಿಗೆ ದ್ಯೋತಕ ವಾಗಿದೆ
ಹರಿವ ನೀರು ಶೃಂಗಾರಕ್ಕೆ ದ್ಯೋತಕ ವಾಗಿದೆ
ಕವನ ಕನಸಿನಾಚೆಗೂ ನಿನ್ನ ಪ್ರೀತಿ
ಅಚ್ಚಳಿಯದೆ ಉಳಿವುದು ಓಲವರೀತಿ
ನೋವನುಂಗಿ ಬದುಕೆ ಬಾಳೆ ಹೂವಮಲ್ಲಿಗೆ
ಕಾಡದಿರು ಇನ್ನ ಮುಂದಾದರೂ ನೀ ಬಾಮೆಲ್ಲಗೆ
ಅರಳಿ ಕಂಪಸೂಸೋ ಸಂಜೆ ಮಲ್ಲಿಗೆ
-ಕೃಷ್ಣಮೊರ್ತಿ

ಆ ಒಂದು ಚಲುವೆಯ ನಗು(ಬಣ್ಣದ ಚಿಟ್ಟೆ)

ಒಂದು ದಿನ ಸುಮ್ಮನೆ ನಾ ನೋಡಿದೆ ನಿನ್ನನೇ
ನೀ ನಕ್ಕು ಸೇರಿದೆ ಎದೆಗೂಡನೆ ನಿನ್ನ ನಗುವಿಗೆ
ನನ್ನ ಮನಸು,ಹೃದಯ ಕೊಟ್ಟೆ
ನಿನ್ನ ಕನಸಲ್ಲಿ ನಾ ಮಲಗಿಬಿಟ್ಟೆ ಊಟ ಬಿಟ್ಟೆ
ಕೆಲಸ ಬಿಟ್ಟೆ ಆಟ ಬಿಟ್ಟೆ ಅಪ್ಪ ಅಮ್ಮನ ಬಿಟ್ಟೆ
ನಿನ್ನ ಪ್ರೀತಿ ಹೊಳೆಯಲ್ಲಿ ಜಾರಿ ಬಿಟ್ಟೆ
ನೆನಪುಗಳಲ್ಲಿ ನಲಿದು ಬಿಟ್ಟೆ ಕನವರಿಕೆಯಲ್ಲಿ ಕುಣಿದು ಬಿಟ್ಟೆ
ನನ್ನ ತನ ಮರೆತು ಬಿಟ್ಟೆ ನಿನ್ನ ದಾಸನಾಗಿಬಿಟ್ಟೆ
ನೀ ಈಗ ಅದೇ ನಗುವಿಂದ ಬಳಿಬಂದು ಬಿಟ್ಟೆ
ನಿನ್ನ ಪ್ರಿಯತಮನ ತಂದು ನನ್ನ ಕೈ ಕುಲುಕಿಸಿ ಬಿಟ್ಟೆ
ಇವರು ನನ್ನ ಬಾವಿ ಪತಿಎಂದು ಬಿಟ್ಟೆ
ವಿರಹ ಸಾಗರದಿ ನನ್ನ ನೂಕಿ ಬಿಟ್ಟೆ ಬಾವಿ ಪತಿಯೊಂದಿಗೆ ಗಾಡಿ ಹತ್ತಿ ಬಿಟ್ಟೆ
ನೀ ಎಲ್ಲವ ಮರೆತು ಬಿಟ್ಟೆ ನೋವು,ನೆನಪು,ಕಹಿ,ನನಗೆ ಬಿಟ್ಟೆ
ನನಗೆ ಟಾಟಾ ಎಂದು ಬಿಟ್ಟೆ ನನ್ನ ಪಾಲಿಗೆ ಬಣ್ಣದ ಚಿಟ್ಟೆ
ನೀನಾಗಿ ಬಿಟ್ಟೆ ನಿನ್ನಿಂದ ನಾ ವಿರಹಿ ಯಾಗಿಬಿಟ್ಟೆ
-ಕೃಷ್ಣಮೊರ್ತಿ

ಚಲುವ ಕನ್ನಡ ಕಸ್ತೂರಿ

ಕೋಟಿ ಕೋಟಿ ಹುಡೂಗಿಯರಲ್ಲಿ
ಲಕ್ಷಾಂತರ ಚಲುವೆಯರಲ್ಲಿ
ನೀ ಮನಸಿಗೆ ಹಿಡಿಸಿದೆಯಮ್ಮ ಚಲುವ ಕನ್ನಡ ಕಸ್ತೂರಿ
ಭಾರತ ದೇಶದ ಕರ್ನಾಟಕ ರಾಜ್ಯದಲ್ಲಿ
ಭುವನೇಶ್ವರಿಯ ಮುದ್ದಿನ ಮಗಳಾಗಿ
ನೀ ಜನಿಸಿರುವೆ ಚಲುವ ಕನ್ನದ ಕಸ್ತೂರಿ
ನೂರಾರು ಹುಡುಗಿಯರ ನಾ ನೋಡಿದೆ
ಹಿಡಿಸಲಿಲ್ಲ ನನ್ನ ಮನಸಿಗೆ ನಿನ್ನ ಹಾಂಗ್ಯಾರು
ನಿನ್ನ ನೋಡಿದಾಗಿಂದ ನಿನ್ನ ಬಿಂಬಎದೆಯಲ್ಲಿ ಚಲುವ ಕನ್ನಡ ಕಸ್ತೂರಿ
ಚಲುವೆಯರ ಚಲುವೆ ನೀನು ಚಂದನದ ಗೊಂಬೆ ನೀನು
ಚಂದಿರನ ಸೋದರಿ ನೀನು ಇಂದಿರನ ಮಗಳು ನೀನು
ಜಕ್ಕಣ್ಣನ ಕಲೆಯು ನೀನು ಚಲುವ ಕನ್ನಡ ಕಸ್ತೂರಿ
ಉತ್ತಮ ಸಂಸ್ಕೃತಿಯ ವನಿತೆ ನೀನು
ನಿನ್ನಂತವಳ ಎಲ್ಲೂ ಕಾಣೆ ನಾನು
ನಿನ್ನ ತಾಳ್ಮೆ ಯಾರಲು ಇಲ್ಲ ನಿನ್ನ ಕರುಣೆ ಎಲ್ಲರಲಿಲ್ಲ
ನಿನ್ನದೆ ಕಂಪು ಜಗದಲೆಲ್ಲ ನಿನ್ನ ಮರೆತರೆ ಜೀವನವಿಲ್ಲ ಚಲುವ ಕನ್ನಡ ಕಸ್ತೂರಿ
-ಕೃಷ್ಣಮೊರ್ತಿ

*ಯುಗಾದಿ*

ಬಂತು ಯುಗಾದಿ ಮನೆ ಮನೆಗೆ
ತುಂಬಿ ತಳಿರು ತೋರಣ ಹೊಸ್ತಿಲಿಗೆ
ಬಣ್ಣ ಬಣ್ಣದ ರಂಗವಲ್ಲಿಮುಂಬಾಗಿಲಿಗೆ
ಅಬ್ಯಂಜನ ಸ್ನಾನ ಜಿಡ್ದು ಹಿಡಿದ ಮೈ ಮನಗಳಿಗೆ
ಸಿಹಿ ಬೆಲ್ಲ ಕಹಿ ಬೇವುಎಲ್ಲ ನಾಲಿಗೆಗೆ
ನೋವು ನಲಿವು ಸಮ ಪಾಲು ಎಲ್ಲರ ಬಾಳ್ವೆಗೆ
ಎಲೆ ಉದುರಿ ಮರಚಿಗುರಿ ಚೈತ್ರ ವಾಯ್ತು ಜಗಕೆ
ಮೈತೊಳೆದು ಮಡಿಯುಟ್ಟು ಬೇವು ಬೆಲ್ಲತಿಂದರಾಯ್ತುಯುಗಾದಿ ಜನಕೆ.
-ಕೃಷ್ಣಮೊರ್ತಿ

ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾರೈಕೆಗಳು*

ಮರೆಯಾಗುತ್ತಿರುವ ವರ್ಷ ನೋವ ಮರೆಸಿ
ಬರಲಿರುವ ವರ್ಷ ನಲಿವ ತರಿಸಿ
ತೊಡಕು ನೂರೆಂಟು ದೂರವಾಗಿ
ಬದುಕಿನ ಬಂಡಿ ಸುಖವಾಗಿ ಸಾಗಲಿ
ಯುಗಾದಿಯಂದು
ಕರುನಾಡ ಜನತೆಗೆಶುಭಾರೈಸುವೆ.
ಅರಳಿ ನಗುವ ಚೈತ್ರದ ಹಾಗೆ
ಕುಹು ಕುಹು ಕೊರಳ ದನಿಯ ಹಾಗೆ
ಅನು ದಿನವೂ ಪ್ರಜ್ವಲಿಸುವಉಷೆಯ ಹಾ
ಕರುನಾಡ ಜನರ ಬದುಕು ಪ್ರಜ್ವಲಿಸಲೆಂದು
ಯುಗಾದಿಯಂದು ಶುಭಾರೈಸುವೆ.
-VK

ನನ್ನ ಬದುಕು

ದಿಟ್ಟೆ ಮನಸು ಏಕೆ ಕೊಟ್ಟೆ
ನನ್ನ ಸ್ಥಿತಿ-ಗತಿ ನೋಡಿಷ್ಟೆ
ಮುರುಕು ಮನೆ -ಅರಕು ಚಾಪೆ
ನನ್ನ ಮನೆಯು
ಮುರಿದ ಮನಸ್ಸು ಅರಿದ ಕನಸು
ನನ್ನ ಎದೆಯು
ಹೊಂಗೆ ನೆರಳು ಎನ್ನ ಸೂರು
ಮಾಗಿಯ ಚಳಿಗೆ
ನಿನಗೆ-ನಾ-ನನಗೆ ನೀ
ಕಂಬಳಿ
ಬೇಸಿಗೆಯ ಬಿಸಿಲಿಗೆ
ನಿನಗೆ ನನ್ನ ನನಗೆ ನಿನ್ನ
ಮೆಲ್ನುಡಿಯ ತಂಗಾಳಿ
ಒಲವೇ ನಿನ್ನ ನನ್ನ ಮೈಗೆ
ವಸ್ತ್ರ ನಮ್ಮ ಪ್ರೀತಿ ಆಗಲಿ
ಪವಿತ್ರ ನಂಬಿಕೆಯೇ ನಿನಗೆ
ನಾ ಕಟ್ಟುವ ತಾಳಿ
ಆದರ್ಶವ ಹಂಚೊಣ
ಒಂದಾಗಿ ಬಾಳಿ
-ಕೃಷ್ಣಮೊರ್ತಿ

ಯಾರು ನನ್ನವರು

ಬೆವರ ಸುರಿಸಿ ಉತ್ತು ಬಿತ್ತು
ದವಸ ದಾನ್ಯ ಬೆಳೆದುಇತ್ತವರೇ
ತಮಗಿಲ್ಲದಿದ್ದರೂ ನಮಗೆ ನೀಡಿದವರೇ
ಸೊಗಸಾಗಿ ಮಾಡಿ ತಿಂದು ಉಂಡು
ಕಾಲ ಕಳೆವ ಮಡದಿ ಮಕ್ಕಳೇ(ಜನಗಳೆ)
ಕಲ್ಲು ಹೊತ್ತು ಕುಳಿ ಕಿತ್ತು
ಮನೆ ಕಟ್ಟಿ ಬಣ್ಣ ಹೊಡೆದು ನಮಗೆ ನೆಲೆ ಮಾಡಿದವರೆ
ಕೂಲಿ ಪಡೆದು ನಮ್ಮ ಮರೆತು ಹೋದವರೆ
ಮನೆ ಬಹಳ ದೊಡ್ಡದೆಂದು ಬಂಧು ಬಳಗ ಬಂದು ನೆಲೆಸಿ
ನೆರಳ ಸುಖವ ಪಡುವವರೆ ಯಾರು ನನ್ನವರು
ಅಂಗಳದಲೆಲ್ಲ ಕಸ ಕಡ್ಡಿ ಹರಡಿ ಮಣ್ಣು ಮಸಿ ಎಲ್ಲ ಕದಡಿ
ಮನೆಯಂಗಳದಲ್ಲಿರುವ ಹೊಗಿಡಗಳ ತುಳಿದು
ಹಾಳು ಮಾಡುವ ಮನೆ ಮಕ್ಕಳು ಮಹಿಳೆಯೇ
ಯಾರು ನನ್ನವರು ಯಾರು ನನ್ನವರು
-VK

"ಜೀವನ"

ಹೂವ ಹಾಸಿಗೆಯೊ
ಅಲ್ಲ
ಮುಳ್ಳಿನ ಮಂಚವೂ
ಅಲ್ಲ
ಎಲ್ಲ ಸುಖ ದುಖಗಳ
ಅನುಬವಿಸಿದ ಒಳ್ಳೆಯ
ಹೃದಯದಲ್ಲಿ ಅರಳಿದ
ಕೆಂಪು ಗುಲಾಬಿ
-ಕೃಷ್ಣಮೊರ್ತಿ

ಏನು ಫಲ

ಹೆತ್ತ ತಾಯ್ತಂದೆ ಗಳ ಚಿತ್ತವ ನೋಯಿಸಿ
ನಿತ್ಯ ಧಾನವ ಮಾಡುವ ಮಕ್ಕಳಿದ್ದೇನು ಫಲ
ಸ್ನಾನ ಪಾನಕೆ ಒದಗುವ ಜಲ ತಾ
ಕಾನನದಲ್ಲಿದ್ದರೇನು ಫಲ
ಗುಟ್ಟು -ಕ್ಷಮಾ ಗುಣ ವಿಲ್ಲದ ಹೆಣ್ಣಲ್ಲಿ
ಸೌಂದರ್ಯ-ಸಿರಿ ತಾನಿದ್ದೇನು ಫಲ
ಸತ್ಯ,ಶ್ರದ್ದೆ ಇಲ್ಲದ ಶರಣನು
ಸಾವಿರ ಜಪವನು ಮಾಡಿದರೇನು ಫಲ
ಮುಕ್ತಿ ಮಾರ್ಗವ ಕೊಡುವಾ ಶ್ರೀಹರಿಯ
ಮನದಲಿ ನೆನೆಯದ ಮನುಜನು ಬದುಕಿದ್ದೇನು ಫಲ
-VK

ಜೀವದ ಜೀವವಾದವಳಿಗೆ

ನನ್ನ ಬದುಕಿಗೆ
ಹಸಿರಾದವಳು ನೀನು
ನನ್ನ ಉಸಿರಿಗೆ
ಮಲ್ಲೆ ಮಲ್ಲಿಗೆ ಪರಿಮಳ
ಸುರಿದವಳು ನೀನು
ನನ್ನ ಕನಸಿಗೆ ಬಣ್ಣ
ಬಳಿದವಳು ನೀನು
ನನ್ನ ಜಡನಡಿಗೆಗೆ
ಚೈತನ್ಯ ತಂದವಳು
ನೀನು
ನನ್ನ ಜೀವದ ಜೀವಕ್ಕೀಗ
ವಿರಸದ ವಿಷವ ಸುರಿದು
ಹೋಗುವೆಯಾ.....?
ನೀನು ನನ್ನ ಮರೆತು
ಬದುಕಲಿಚ್ಚಿಸುವೆಯಾ...?
-ಕೃಷ್ಣಮೊರ್ತಿ

"ಯಾರೀಕೆ" (ನನ್ನ ಕನಸಿನ ಕೋಮಲೆ)

ನೀಲಿ ಬಾನಿನ ನವ ಚಂದ್ರಿಕೆ
ಯಾಕೆ ಬಂದಳೋ ಭೂಮಿಗೆ
ಯಾಕೆ ಕಂಡಳೋ ಕಣ್ಣಿಗೆ
ಮಾತನಾಡಿಸೋ ಮುನ್ನ
ಮನವ ಸೇರಿದಳು (ಚಿನ್ನ) ನನ್ನ
ನೂರು ದೀವಿಗೆ ಬೆಳಕು ಅವಳು
ಉಟ್ಟಿಹ ಸೀರೆಯೊಳಗಿನ ಮಿಣುಕು
ನೂರು ತಾರೆಗೂ ಅಣಕು ಅವಳ ಮೈ ಮಾಟದ ಬೆಡಗು
ಯಾರು ನೋಡದಾ ಚಲುವೆ ಜಾರಿ ಬಂದಳು ಹೊತ್ತು ಒಲವೆ
ನನ್ನ ಮನಸೊಂದು ಪುಷ್ಪಕಾ ವಿಮಾನ
ಅದರಲ್ಲಿ ಅವಳ ಯಾನ
ನನ್ನೆದೆಯು ಮಿಡಿವ ಗಾನ ಅವಳದೆ ಒಲವರಾಗ
ನನಗವಳೇ ದೇವಯಾನಿ ನಾ ಅವಳ ಅಭಿಮಾನಿ
ನನ್ನೆದೆಯ ರತ್ನಸಿಂಹಾಸನದಲ್ಲಿ
ರಾರಾಜಿಸುವ ರಾಣಿ ಈ ಹೃದಯ
ಸಾಂಮ್ರಾಜ್ಯದ ರಾಣಿ ಮಹರಾಣಿ
ಈ ತನುವೆಂಬ ಧರೆಯು ಬಯಸೊ ಹೂಮಳೆ
ನನ್ನ ಕನಸಿನ ಕೋಮಲೆ
- ಕೃಷ್ಣಮೊರ್ತಿ

*ನನ್ನ ಸ್ವಪ್ನ ಸುಂದರಿ*

ಕಣ್ಮುಚಿದರೆ ಬರುವಳು
ಮನದ ಮನೆಯೊಳಗೆ
ಕುಣಿದು ನಲಿವಳು
ನನ್ನ ಸ್ವಪ್ನ ಸುಂದರಿ
ನನ್ನವಳು
ಚಲುವೆಯರಲ್ಲಿ ಚಲುವೆ
ರಂಬೆ ಅಪ್ಸರೆಯ ನಾಚಿಸುವಳು
ಪರಿಮಳ ತುಂಬಿದ ಪಾರಿಜಾತ
ನನ್ನ ಸ್ವಪ್ನ ಸುಂದರಿ
ನನ್ನವಳು
ಮಾತು ಕನ್ನಡ ಕಸ್ತೂರಿ
ಮಾತಿನಿಂದಲೇ ಮಾಡಿದಳು
ನನ್ನ ಮನಸೂರೆ ವಯ್ಯಾರದ ನೀರೆ
ನನ್ನ ಸ್ವಪ್ನ ಸುಂದರಿ
ನನ್ನವಳು
ಮಂದಹಾಸ ಚೆಲ್ಲಿ
ನನ್ನ ಸ್ವಾಗತಿಸುವಳು
ಹೆಜ್ಜೆ ಮೇಲೆ ಹೆಜ್ಜೆ ಅಂದಿಗೆ ಕಾಲ್ಗೆಜ್ಜೆ
ನೀರಾದವಳೇ
ನನ್ನ ಸ್ವಪ್ನ ಸುಂದರಿ
ನನ್ನವಳು ಕೆನೆ ಹಾಲಕೈಗೆ ನೀಡಿ
ಮನೆ ಮಾಡಿದಳು ಎದೆಗೆ
ಒಲವ ಚಿಲುಮೆ ಹರಿಯುವಂತೆ
ಎದೆಗೂಡಿಗೆ ಮೊಕವಾಯ್ತು
ಮನ ಅವಳ ಮೋಡಿಗೆ
-ಕೃಷ್ಣಮೊರ್ತಿ

ಆಶಯ ಗೆಳೆಯ/ಗೆಳತಿ ಯರಿಗೆ

ಹುಚ್ಚೆದ್ದು ಕುಣಿವ ಹುಚ್ಚು
ಮನಸಿನ ಬಾವನೆ ಗಳಿಗೆ ನಿನ್ನ
ಹೃದಯದ ಬಾಗಿಲು ಮುಚ್ಚಿರಲಿ
ಅಚ್ಚು ಮೆಚ್ಚಿನ ಶುಚಿತ್ವದ
ಮನಸಿನ ಬಾವನೆಗಳಿಗೆ ನಿನ್ನ
ಹೃದಯದ ಬಾಗಿಲು ಸದಾ ತೆರೆದಿರಲಿ ಎಂದು ಆಶಿಸುತ್ತೇನೆ
ಪ್ರಿಯ ಮಿತ್ರರೇ
-VK

ಪ್ರಾರ್ಥನೆ

ಮಂಜು ಮಾಲಿನಿ
ತುಂಬಿರುವೆ ನನ್ನ
ಮನವ ನೀ
ಕನಸು-ಕನವರಿಕೆಯಲ್ಲು
ಕಾಂಬೆ ನೀ
ಕಲಕಿದೆ ನನ್ನ ಮನದ
ಕೊಳವ ನೀ
ಮೊಡಿಸಿದೆ ಮನದಾಸೆ ನೀ
ಮೌನದಲ್ಲಿದ್ದು ಮನಕೆ
ನೋವ ತುಂಬಿ ನನ್ನ
ಜೀವ ಹಿಂಡುವೆ ಏಕೆ ನೀ
ಬಂದು ನನ್ನ ಬಾಳ ಬೆಳಗಿಸು
ಇದು ನನ್ನ ಹೃದಯದ
ಪ್ರಾರ್ಥನೆ
-ಕೃಷ್ಣಮೊರ್ತಿ

ವಿನುತ(ವನಿತ)

ನಿನ್ನ ಕೀರ್ತಿ ಏರಲಿ
ದಿಗಂತ
ನಿನ್ನ ಸಾದ(ಧ)ನೆಗೆ
ನನ್ನ ಹೃದಯಾಭಿನಂದನೆ
ಅನಂತಾನಂತ
ಸದಾ ಹಸಿರಾಗಿರಲಿ
ಪ್ರೀತಿ,ವಾತ್ಸಲ್ಯ,ಅನುಕಂಪ
ನಿನ್ನಲ್ಲಿ ಸಿರತ
ಬದುಕಲ್ಲಿ ಗೆಲುವು ಸಿಗಲಿ
ನಿನಗೆ ಸತತ
-ಕೃಷ್ಣಮೊರ್ತಿ

ನನಗೊಂದು ಹೆಣ್ಣು ಬೇಕು ಅವಳು ಈ(ಹೀ)ಗಿರಬೇಕು

"ನನಗೊಂದು ಹೆಣ್ಣು ಬೇಕು
ಅವಳು ಈಗಿರಬೇಕು(ಹೀಗಿರಬೇಕು)"
ಮನದ ಮೃದಂಗ ನುಡಿಸಿ
ಎದೆಯಲ್ಲಿ ಪ್ರೇಮರಾಗ ಮಿಡಿವಂತೆ
ಮಾಡುವ ಮುಗ್ದ ಮುದ್ದು ಹೆಣ್ಣೊಂದು ಬೇಕು
ಅಂದಕಾರದ ಬದುಕಿಗೆ ಬೆಳಕಾಗಬಲ್ಲ
ಅರಿವಿನ ಅ(ಹ)ರಿಣಿ ಅವಳಾಗಬೇಕು
ಜೀವಕ್ಕೆ ಉಸಿರು-ಹಸಿರಾಗ ಬಯಸುವ
ಚೈತ್ರ ಚಲುವ ಹೆಣ್ಣಾಗಿರಬೇಕು
ಬರಡಾದ ಬದುಕಿಗೆ ಜೀವಕಳೆಯ
ತುಂಬಬಲ್ಲ ಹೆಣ್ಣು ಅವಳಾಗಬೇಕು
ಬತ್ತಿದೆದೆಯಲ್ಲಿ ಬರವಸೆಯ ಜಲವ
ತುಂಬುವಂತಹ ತರುಣಿ ಅವಳಾಗಬೇಕು
ಮನದ ಮೌನ ಮುರಿದು ಜೀವದಲಿ
ಹೊಸಕಳೆಯ ತರಬಲ್ಲ ಹುಡುಗಿಯಾಗಬೇಕು
ಮನದ ಬಾವ ಅರಿತು ನಡೆವ ನುಡಿವ
ನವ ತರುಣಿಮಣಿ ಅವಳಾಗಬೇಕು
ಮನದ ಹಸಿವು-ದಾಹಗಳ ಅರಿತು
ತೀರಿಸ ಬಲ್ಲ ಹೆಣ್ಣು ಅವಳಾಗಲುಬೇಕು
ವನಪು ವಯ್ಯಾರ ಮರೆತಿರಬೇಕು
ಒಲವು-ಛಲವು ಜೊತೆಗಿದ್ದರೆ ಸಾಕು
ಬೆಳ್ಳಿಗೆಜ್ಜೆ ಯಾರಿಗೆ ಬೇಕು
ಒಳ್ಳೆ ಲಜ್ಜೆ ಅವಳಿಗಿದ್ದರೆ ಸಾಕು
ಮುತ್ತು ರತ್ನ ಯಾರಿಗೆ ಬೇಕು
ಮುಗುಳ್ನಗೆ ಸದಾಇರಲಿ ಸಾಕು
ಸಿರಿ ಸಂಪತ್ತು ಯಾಕೆ ಬೇಕು
ಸನ್ನಡತೆಯಲಿ ಎನ್ನ ಪ್ರೀತಿಸುತಿರೆ ಸಾಕು
- ಕೃಷ್ಣಮೊರ್ತಿ

ಜಾನಪದಶೈಲಿಯ ಗೀತೆ

ಹರಯದ ಹುಡುಗಿ ಹಸು ಮೇಸುತ್ತ ಹಳ್ಳಿ ಬಯಲಾಗ ಕುಂತಿತ್ತ
ಹಾದಿಲಿ ಹೊಗ್ತಿದ್ದ ಹರಯದ ಹುಡುಗನ ಕಣ್ಣು ಆಕಿ ಮ್ಯಾಲಬಿತ್ತ
ಸಂಜೆ ವೇಳೆಗೆ ಸುತ್ತಲು ಸಣ್ಣಗೆ ಮಳೆಯು ಹನಿಯತಿತ್ತ
ಪ್ಯಾಟೆಯಿಂದ ಊರಿಗೆ ಬರುತಿದ್ದ ಹುಡುಗ ಹುಡುಗಿಯ ಪಕ್ಕಕೆ ಬಂದು ನಿಂತಿತ್ತ "ಪ"
ಹುಡುಗನ ಕಂಡ ಹುಡುಗಿ ಬೆಚ್ಚಿ ದೂರ ಸರಿದಿತ್ತ
ಎಲೆಯ ಮರೆಯಲಿ ನಿಂತು ಹುಡುಗನ ಕದ್ದು ನೋಡತಿತ್ತ
ಹುಡುಗಿ ತೊಟ್ಟಿದ್ದ ಲಂಗ ದಾವಣಿ ಹುಡುಗನ ಮನದ ಕದವನ ತಟ್ಟಿತ್ತ "ಹ"
ಎದ್ದು ಬರುವಂತಿದ್ದ ಉಬ್ಬು-ತಗ್ಗಿಗೆ ಹುಡುಗನ ಮನವು ಉಬ್ಬಿ ಹೊಗಿತ್ತ
ಹುಡುಗನ ಕಣ್ಣು ಹುಡುಗಿಯ ಉದ್ದ ಅಗಲ ಲೆಕ್ಕ ಹಾಕತಿತ್ತ
ಅದನು ಕಂಡ ಹುಡುಗಿಯ ಕಾಲು ನೆಲದಿ ರಂಗೊಲಿ ಹಾಕತಿತ್ತ "ಹ"
ಬಾಯತೆರೆದು ಮಾತಾಡಲೊದ ಹುಡುಗನ ಗಂಟಲೆ ಹಿಡಿದಿತ್ತ
ಬಯದಲಿ ಹುಡುಗನ ಕೈಕಾಲು ನಡುಗಿತ್ತ
ತೊದಲುತ-ಅಂಜುತ ಹುಡುಗಿ ಕೈಯ ಹಿಡಿದಿತ್ತ
ಹಿತವಾಗಿ ಉಲಿದ ಹುಡುಗಿಯ ಕಂಡ ಹುಡುಗನ ಮನ ಮುದವಗೊಂಡಿತ್ತ "ಹ"
ಬಳ್ಳಿ ಮರವ ಬಳಸಿದಂತೆ ಹುಡುಗಿ ಹುಡುಗನ ಬಾಚಿತಬ್ಬಿತ್ತ
ನಾಚಿ ನಡುಗುತ ಮೆಲ್ಲನೆ ನಗುವ ಚಿಮ್ಮಿತ್ತಾ
ಪ್ರೀತಿಯು ಹೊಮ್ಮಿ ಹೊಳೆಯಾಗಿ ಹರಿದಿತ್ತಾ "ಹ"
-ಕೃಷ್ಣಮೊರ್ತಿ

ಇಳೆಗಿಳಿದ ಮುಂಗಾರಿನ ಮೊದಲ ಮಳೆ

ಮಳೆ ಬಂತು ಮುಂಗಾರು ಮಳೆ ಬಂತು
ಇಳೆ ನೆನೆದು ಚೈತ್ರ ನಲಿಯಿತು
ಬಾನಿಂದ ಮಳೆ ಬಂತು ಭರಣಿ ಮಳೆ ಬಂತು
ಧರಣಿಯೊಡಲು ತಣಿಯಿತು "ಪ"
ಸರ್ವಜಿತುವಿನ ಮೊದಲ ಮಳೆ ಉತ್ಸವಕ್ಕೆ
ಗಂಟೆ ಗಟ್ಟಲೆ ಹಚ್ಚಿದ ಗುಡುಗು ಸಿಡಿಲಿನ ಮದ್ದುಗುಂಡು
ಮಿಂಚಿನ ಮತಾಪು ಕಡ್ಡಿಯ ಸುಸ್ವಾಗತ ಮಳೆಗೆ "ಮಳೆ"
ವರ್ಷದಾದಿಯ ಮೊದಲ ದೀಪಾವಳಿಯಾಯ್ತು
ಭರಣಿಯು ಧರಣಿಯ ತಣಿಸಿದಂದು
ಸರ್ವಜಿತುವಿನ ಮುಂಗಾರಿನ ಮಳೆಯಾಯ್ತು "ಮಳೆ"
ಧರೆಯ ಮರಗಿಡ ಹಸಿರಿನಿಂದ ನಳ ನಳಿಸುತ್ತಿದೆ
ಮಾಮರದಿ ಕೋಗಿಲೆ ಇಂಚರದಿ ಕೂಗಿದೆ
ಹೊ(ಓ)ಣಗಿದ್ದ ಬಯಲಲ್ಲಿ ಹಸಿರ ಚಿಗುರು ಕಾಣುತಿದೆ "ಮಳೆ"
ನೊಂದ ರೈತ ಮನಕೆ ಸಣ್ಣ ಬರವಸೆ ಮೂಡಿದೆ
ಧರಣಿಗೆ ಭರಣಿಯು ಬಿದ್ದರೆ ಸಂಮೃದ್ದಿ ಎಂಬ
ನಾಣ್ನುಡಿಯ ಬರವಸೆಯಲಿ ಮನ ನಂಬಿದೆ "ಮಳೆ"
ಮುಂಗಾರಿನ ಮಳೆ ಇಳೆಗಾಗಿದೆ ಎಲ್ಲ ಮನಕೆ
ಬರವಸೆಯ ಮೇಣದ ಬತ್ತಿ ಹತ್ತಿಸಿದೆ
-ಕೃಷ್ಣಮೊರ್ತಿ ಅಜ್ಜಹಳ್ಳಿ

ಒಲವ ಗೀತೆ

ಲಗ್ಗೆ ಇಟ್ಟು ಆಗಾಗ್ಗೆ ಕಾಡಬೇಡ
ಕದ್ದು ಕದ್ದೆನ್ನ ನೀ ನೋಡಬೇಡ
ಈ ಹೃದಯ ಓಕೆ ನಾ ? ಈ ಗೆಳೆಯ ಇಷ್ಟಾನಾ ?
ಹೇಳೆ ನೀ ಕೇಳೆ ನೀ ಹೇಳೆ ಕೇಳೆ ಗೆಳತಿ "ಪ"
ಮರೆಯದಿರು ಜೋಪಾನ ಮನ
ಮಂದಿರದಿ ನಿನಗೆ ಸನ್ಮಾನ
ಈ ಹೃದಯ ಓಕೆ ನಾ ? ಈ ಗೆಳೆಯ ಇಷ್ಟಾನಾ ?
ಹೇಳೆ ನೀ ಕೇಳೆ ನೀ ಹೇಳೆ ಕೇಳೆ ಗೆಳತಿ " ಲಗ್ಗೆ "
ಬಾ ಗೆಳತಿ ಇದುವೆ ನಿನಗೆ ಆಹ್ವಾನ
ನೀ ಕೂರಲು ಕಾದಿದೆ ಹೃದಯ ಸಿಂಹಾಸನ
ಈ ಗೆಳೆಯ ಇಷ್ಟವಾದ್ರೆ ಬಾ ಅವನ ಮನಸು ಸ್ಪಸ್ಟವಾದ್ರೆ ಬಾ " ಲಗ್ಗೆ "
ಬಾ ಚಲುವೆ ಬಾ ಈ ಪ್ರೀತಿ ಅರಮನೆಗೆ ಬಾ
ಅಲ್ಲಿದ್ದರೆ ರೀತಿ,ನೀತಿ ನೀ ಬಾ ಗೆಳತಿ ಬಾ
ಬರವಸೆ ನಿನ್ನಲ್ಲಿದ್ದರೆ ಬಾ ಚಲುವೆ ಬಾ "ಲಗ್ಗೆ"
ಅತಿ ಆಸೆ ನಿಮ್ಮೂರಲ್ಲೇ ಬಿಟ್ಟು ಬಾ
ನಾನೆಂಬುದ ಬಿಟ್ಟು(ಸುಟ್ಟು)ಪ್ರೀತಿಯೊಂದ ಉಟ್ಟು ಬಾ
ಬಾ ಚಲುವೆ ಬಾ ಒಲವೆ ಬಾ ಗೆಳತಿ ಬಾ "ಲಗ್ಗೆ"
ನಂಬಿಕೆ ಇಟ್ಟು ಬಾ ಅಂಜಿಕೆ ಸುಟ್ಟು(ಬಿಟ್ಟು) ಬಾ
ನಿನ್ನ ಮನಸು ಎನ್ನ ಬಯಸುವುದಾದರೆ ಬಾ
ನಿಮ್ಮವರ ಬಿಟ್ಟು ಪ್ರೀತಿಗೆ ಬೆಲೆ ಕೊಟ್ಟು ಬರುವುದಾದರೆ ಬಾ "ಲಗ್ಗೆ"
-ಕೃಷ್ಣಮೊರ್ತಿ

"ಪ್ರೀತಿಸಿದ ಹುಡುಗಿ"

ಪ್ರೀತಿಸಿದ ಹುಡುಗಿ ಕೈ ಕೊಟ್ಟು ಓಡಿದಳು
ನಂಬಿದ ನನಗೆ ಮೋಸವನು ಮಾಡಿದಳು
||ನಂಬದಿರಿ ನೀವ್ಯಾರು ಮೋಸದ ಹುಡುಗಿಯರನು||
ನಂಬಿದ್ದೆ ನಾನೊಂದು ಹೆಣ್ಣ
ಅಣ್ಣ ನಂಬಿದ್ದೆ ನಾನೊಂದು ಹೆಣ್ಣ ನಂಬ್ಯಾಡಿ ನೀವ್ಯಾರು ಹೆಣ್ಣ ಅಣ್ಣ
ಸುರಿದಾರು ನಿಮಗೆ ಬಿಸಿಯಾದ ಸುಣ್ಣ ||ಪ
ಬಣ್ಣದ ಮಾತಾಡಿ ಕಣ್ಣೊಡೆದಳಣ್ಣ
ಕಣ್ಣಲ್ಲಿ ನಾ ಅವಳ ತುಂಬಿ ಕೊಂಡೆನಣ್ಣ
ಕನಸು ಮನಸಲ್ಲಿ ಅವಳಿದ್ದಳಣ್ಣ ||ನಂಬಿದ್ದೆ||
ಏಳ್ದಂಗೆ ಕೇಳ್ತಿದ್ದೆ ಅವಳಮಾತ ಅಣ್ಣ
ನೀನಿಲ್ದೆ ನಾನಿಲ್ಲ ಅಂತಿದ್ದಳಣ್ಣ
ನನ್ನ ಮರೆತು ಬಿಡು ಅಂತೇಳಿ ಹೊಂಟೊದಳಣ್ಣ ||ನಂಬಿದೆ||
ನಗುನಗುತ ಮಾತಾಡುತಿದ್ಲು ಎಲ್ಲರತ್ರ ಅವಳು
ನಗುವಿನ ನೆನಪೊಂದ ಬಿಟ್ಟೊದಳವಳು
ನಂಬಿಸಿ ನನಗವಳು ಮೋಸವ ಮಾಡಿದಳು||ನಂಬಿದ್ದೆ||
ತುಪ್ಪದಂತ ಮಾತಾಡಿ ತೆಪ್ಪಗಾದಳಣ್ಣ
ಕಪ್ಪಗಿದ್ರು ಕೊಟ್ಟಿದ್ದೆ ನನ್ಮಸನ್ನ
ಕೊನೆಗವಳು ಕೊಟ್ಟೊದ್ಲು ಬರಿ ಕನಸನ್ನ ||ನಂಬಿದ್ದೆ||
ಅವಳ ಮಾತ ನಾ ಕೇಳಿ ಮನೆಮಂದಿ ಬಿಟ್ಟೆ
ಅವಳ ಪ್ರೀತಿ ಮಾತಿಗೆ ಹುಚ್ಚನಾಗಿ ಬಿಟ್ಟೆ
ಅವಳ್ ಕೈ ಕೊಟ್ಟು ಹೊದಾಗಿಂದ ಕುಡಿಯೊದ್ ಕಲ್ತು ಬಿಟ್ಟೆ ||ನಂಬಿದ್ದೆ||
ನಿನ್ನ ಬಿಟ್ಟು ಬದುಕಲ್ಲ ಅಂತಿದ್ದಳಣ್ಣ
ವಿಷ ಕುಡ್ದು ಹೊದ್ದಾಡತಿದ್ರು ಅವಳು
ನನ್ನ ತಿರುಗಿ ನೊಡಲಿಲ್ಲವಣ್ಣ ||ನಂಬಿದ್ದೆ||
- ಕೃಷ್ಣಮೊರ್ತಿ ಅಜ್ಜಹಳ್ಳಿ

ಆಶಯ

ನುಸುಳಿ ಬರುವ ಚೈತ್ರ ಚಿಗುರು
ಸೂಸಿ ತರಲಿ ಸವಿ ಸುಖದ ತಂಪೆಲರು
ಅಳಿಸಿ ಮನದ ಹೊಲಸು ಬಾವ
ಉಳಿಸಿ ಬಿಡಲಿ ಚಿರವಾಗುವಂತೆ ಜೀವ
ಮರೆಸಿ ಬಾಳಿನೆಲ್ಲ ನೋವ
ಸುರಿಸಿ ಬದುಕಲ್ಲಿ ಸಂತಸವ
ಬೆರೆಸಿ ಬದುಕಲ್ಲಿ ಅರಿವ ಗುರುವ
ಇಣುಕುತಿರುವ ಮುಂಗಾರು ಮಳೆ
ತೊಳೆದು ಬಿಡಲಿ ಮೈ ಮನದ ಕೊಳೆ
ಬೆಳೆದು ನಿಲ್ಲಲಿ ಎಲ್ಲಕಡೆ ಜ್ನಾನದ ಬೆಳೆ
ಮನದಲಿರುವ ಮತ,ಧರ್ಮಗಳ ಜಿಡ್ಡತೊಳೆ
ಜಗದಿ ಇರುವುದೆರಡು ಹೆಣ್ಣು-ಗಂಡು
ಜೊತೆಗೆ ಬೆರೆತು ಸಂತಸವ ಉಂಡು
ಜೀವನದ ಅರ್ಥವನ್ನು ಜನತೆ ಕಂಡು
ಬದುಕಿದರೆ ಬಾಳು ಬಂಗಾರದ ತುಂಡು
ಅರಿತು ಅಣ್ಣತಮ್ಮಂದಿರಂತೆ ನಡೆದರೆ ದಂಡು
ಮರೆತು ಬಿಡಬಹುದು ಕೊರ್ಟು,ಕಛೇರಿ,ಪೌಂಡು
ಅಕ್ಕಪಕ್ಕದ ಹೆಣ್ಣಕಂಡು ಅಕ್ಕತಂಗಿಯೆಂದುಕೊಂಡು
ಚಿಕ್ಕ ಚಿಕ್ಕ ಮಕ್ಕಳಲ್ಲೇ ಬೆಳೆಸಬೇಕು ಪ್ರೀತಿ,ಓಲವ ಬ್ರಾಂಡು
ಅನುಸರಿಸಬೇಕು ಅನ್ಯರೆಲ್ಲ ನಮ್ಮ ಒಲವು-ಗೆಲುವು ಕಂಡು
ಎಷ್ತು ಕೂಡಿಟ್ಟರೇನು ಆಸ್ತಿ ಹಣ
ಒಂದಿಷ್ಟೂ ಇರದಮೇಲೆ ಮಿದುಳಲ್ಲಿ ಜ್ನಾನ
ಬದುಕಲು ಇದುವೆ ಮನಿಜಗೆ ದಿವ್ಯ ಸಾದನ
ಇದುವೆ ಓದುಗರಿಗೆ ನನ್ನ ಆಶಯ ಕವನ
-ಕೃಷ್ಣಮೊರ್ತಿ ಅಜ್ಜಹಳ್ಳಿ

ಉದ್ದೇಶ

ನಾ ನಿನ್ನ ಪ್ರೀತಿಸುತ್ತೇನೆ
ನಿನ್ನ ನಯನಗಳಲ್ಲಿ ನನ್ನ ನೊಟವನ್ನು
ಸೇರಿಸಿರಲಿಲ್ಲ(ಸೇರಿಸಲಲ್ಲ)
ಮಾತಿನ ನಡುವೆ ಮಿಂಚಿನ ಸಂಚನು
ಮಾಡಿರಲಿಲ್ಲ(ಮಾಡಲೂ ಅಲ್ಲ)
ನಾ ನಿನ್ನ ಪ್ರೀತಿಸುತಿದ್ದುದು
ನಿನ್ನ ಮೃದು ಮೈಯನು ಸ್ಪರ್ಶಿಸಲೂ ಅಲ್ಲ(ಸ್ಪರ್ಶಿಸಿರಲಿಲ್ಲ)
ಸೇಬು ಗಲ್ಲವ ಚುಂಬಿಸಲೂ ಅಲ್ಲ(ಚುಂಬಿಸಿರಲಿಲ್ಲ)
ನನ್ನ ಬಿರುಕು ಎದೆಯ ಮೇಲೆ ನಿನ್ನ ಸೀರೆಯ
ಹೊದಿಸಿರಲಿಲ್ಲ ತೆರೆಯಲ್ಲೇ ನಿನ್ನಲಿನ
ಮುತ್ತು ಕಳವು ಮಾಡಲೂ ಅಲ್ಲ(ಮಾಡಿರಲೂ ಇಲ್ಲ)
ನಾ ನಿನ್ನ ಪ್ರೀತಿಸುತ್ತಿದ್ದೆ
ನಿನ್ನಿಂದ ಅಗಾದವಾದದ್ದೇನು ಪಡೆಯ ಬೇಕೆಂದಲ್ಲ
ಸೊಗಸು,ಸವಿಸ್ವಪ್ನ ಕಾಣಬೇಕೆಂದಲ್ಲ(ಕಾಣಲೂ ಇಲ್ಲ)
ನಾ ನಿನ್ನ ಪ್ರೀತಿಸುತ್ತಿದ್ದೇನೆ ಈಗಲೂ ಎಂದೆಂದಿಗೂ
ಏಕೆಂದರೆ ಕಸದ ತೊಟ್ಟಿಯಲ್ಲಿದ್ದ ನನ್ನತಂದು
ನಿನ್ನ ಮಮತೆ,ವಾತ್ಸಲ್ಯದ
ಮಡಿಲ ಬೆಚ್ಚನೆಯ ತಾಪದಲ್ಲಿ ಸುಖ ನೀಡಿ
ಹೆತ್ತವರಂತೆ(ಹೆರದಿದ್ದರೂ)ನನ್ನ ಕಾಪಾಡಿದಕ್ಕೆ
ನನ್ನ ದುಗುಡ ದುಮ್ಮಾನತುಂಬಿದ
ಶಿರವಿರಿಸಿ ಕಣ್ಣೀರ ಪನ್ನೀರಲ್ಲಿ ನಿನ್ನ ನಳಿನ ಪಾದತೊಳೆದು
ಚಿರರುಣಿಯಾಗುವ ಬಯಕೆಗಾಗಿ
-ಕೃಷ್ಣಮೊರ್ತಿಅಜ್ಜಹಳ್ಳಿ

ಪ್ರೇಮದ ಅಮಲು(ಕವನ)

ಈ ಪ್ರೇಮ ನಂಬಿದರೆ ಬರಿ ಕಣ್ಣೀರಿನ ಗೋಳು
ಹೀಗೇಕೆ ಆಯಿತು ನನ್ನ (ಯೌವ್ವನದ)ಹದಿನೆಂಟರ ಬಾಳು
ಈ ಬಾಳೆಲ್ಲ ಬರಿ ವ್ಯತೆಯು ಬರಿ ಕಣ್ಣೀರಿನ ಕಥೆಯು "ಪ"
ಪ್ರೀತಿಯೆ ಸತ್ಯ ನೀತಿಯೆ ಧರ್ಮ
ಎಂದು ನಾ ತಿಳಿದೆ ಆ ಆ ಆ
ಪ್ರೇಮವು ಅಮರ ಪ್ರೀತಿಯು ಮದುರ
ಎಂದು ನಾ ತಿಳಿದೆ ಆ ಆ ಆ
ಹೆಣ್ಣಿನ ಪ್ರೀತಿಯ ನಂಬಿ ಮೋಸಹೋದೆ
ನನ್ನ ಬದುಕಲ್ಲಿ ಕತ್ತಲೆ ತುಂಬಿದೆ "ಈ ಪ್ರೇಮ"
ಕಂಡೆ ಹೆಣ್ಣಲಿ ಪ್ರೇಮಾನುರಾಗ
ಹೊಮ್ಮಿ ಬಂತು ಪ್ರೀತಿ ಸುಯೋಗ
ಎಂದು ನಾ ತಿಳಿದೆ ಆ ಆ ಆ
ಎಲ್ಲವ ತೊರೆದು ನಾ ಬಂದೆ
ಪ್ರೇಮದ ಸುಖವ ನಾ ಕಾಣಲೆಂದೆ
ಪ್ರೀತಿಯ ಮೋಹಕೆ ಸಿಲುಕಿ ಪ್ರೇಮವೆ ಆಸರೆ ಎಂದೆ
ಬಾಳಲ್ಲಿ ನಾ ಬಲು ನೊಂದೆ ಬದುಕು ಸಾಕೆಂದೆ "ಈ ಪ್ರೇಮ"
- ಕೃಷ್ಣಮೊರ್ತಿ ಅಜ್ಜಹಳ್ಳಿ

ಯುಗಾಧಿಯ ಶುಭಾರೈಕೆ

ಮರಚಿಗುರಿದ ಹಾಗೆ ಕಲ್ಪನೆಗಳು ಚಿಗುರಲಿ
ಮರಿಕೋಗಿಲೆ ಹಾಗೆ ಮನ ಉಲ್ಲಾಸದಿಂದಾಡಲಿ
ಪುಷ್ಪವರಳಿದ ಹಾಗೆ ಆಸೆಗಳು ಅರಳಲಿ
ಚೈತ್ರದ ಸೊಬಗಂತೆ ಬಾಳೆಲ್ಲ ಕಂಗೊಳಿಸಲಿ
ಬೇವು ಬೆಲ್ಲದ ಹಾಗೆ ಬಾಳಿನೆಲ್ಲಾ ನೋವು ನಲಿವಿರಲಿ
ಎಂದು ಯುಗಾಧಿಯ ಶುಭಾರೈಕೆ.
-ಕೃಷ್ಣಮೂರ್ತಿ ಅಜ್ಜಹಳ್ಳಿ

ಧಯ,ವಿದಾಯ.

||ಅವರನ್ನ ಕಂಡ್ರೆ ಎಲ್ರಿಗೂ ಭಯ||
ಯಾಕಂದ್ರೆ ಅವರಲ್ಲಿರಲಿಲ್ಲ ಧಯ.(ಕರುಣೆ)
ಈಗ ಹೊರಟವರೆ ಹೇಳಿ ವಿದಾಯ.
-ಕೃಷ್ಣಮೂರ್ತಿ ಅಜ್ಜಹಳ್ಳಿ

ಪಾರ್ ಕರ್ ಪೆನ್ನು

ಪೆನ್ನು ಕೊಟ್ಟ್ರೆ ಮಾಡಾಕ್ ಬರಲ್ಲ ಸೈನು
ಆದರೂ ಅವನ ಜೇಬಲ್ಲಿ ಪಾರ್ ಕರ್ ಪೆನ್ನು
ಸರಿ ಇಲ್ಲವಂತೆ ಅವನ ಬ್ರೈನು.
-ಕೃಷ್ಣಮೂರ್ತಿ ಅಜ್ಜಹಳ್ಳಿ

ಮರೆಯಲೆಂದು

||ಕೈ ಕೊಟ್ಟ ಹುಡುಗಿಯ
ಮರೆಯಲೆಂದು ಕುಡಿಯುತ್ತಿದ್ದೆ ವೈನು||
ಕನಸಲ್ಲೂ ಕಾಡುತ್ತಿತ್ತು ||ಹುಡುಗಿನಿನ್ನ ಕಾಲ್ ಚೈನು||.
-ಕೃಷ್ಣಮೂರ್ತಿ ಅಜ್ಜಹಳ್ಳಿ

ಜೇನಿನ ಹಾಗೆ ಒಗ್ಗಟ್ಟಿರಲಿ

||ಜೇನಿನ ಹಾಗೆ ಒಗ್ಗಟ್ಟಿರಲಿ||
ವಾ ವಾ ವಾ
ಮಾನಿನಿ ಹಾಗೆ ಒಳಗುಟ್ಟಿರಲಿ.
-ಕೃಷ್ಣಮೂರ್ತಿ ಅಜ್ಜಹಳ್ಳಿ

ಜೇನಿನ ಹಾಗೆ ಒಗ್ಗಟ್ಟಿರಲಿ

*||ಜೇನಿನ ಹಾಗೆ ಒಗ್ಗಟ್ಟಿರಲಿ||
ವಾ ವಾ ವಾ
ಮಾನಿನಿ ಹಾಗೆ ಒಳಗುಟ್ಟಿರಲಿ.
-ಕೃಷ್ಣಮೂರ್ತಿ ಅಜ್ಜಹಳ್ಳಿ

ನಿನ್ನ ಪಡೆಯಲೆಂದು

||ನಿನ್ನ ಪಡೆಯಲೆಂದು
ನಾ ಎಲ್ಲವನ್ನೂ ಬಿಟ್ಟೆ ||
ನೀ ನನ್ನೇ ಬಿಟ್ಟೆ........
- ಕೃಷ್ಣಮೂರ್ತಿ ಅಜ್ಜಹಳ್ಳಿ

ಕಾರಣ

ನನಗೆ ನಿನ್ನಲ್ಲಿ ಮನಸಾಗಿದೆ
ವಾ ವಾ ವಾ
ನನಗೆ ನಿನ್ನಲ್ಲಿ ಮನಸಾಗಿದೆ
ಆದ್ದರಿಂದಲೇ
ನನ್ನ ಹೃದಯ ನಿನ್ನೊಳಗಿದೆ.
-ಕೃಷ್ಣಮೂರ್ತಿ ಅಜ್ಜಹಳ್ಳಿ

ಖಾಲಿ

ನೀರಿಲ್ಲದೆ ಬಾವಿ ಆಗಿದೆ ಖಾಲಿ
ವಾ ವಾ ವಾ
ಬೀರಿಲ್ಲದೆ ಬಾಟಲ್ ಆಗಿದೆ ಖಾಲಿ
ನೀನಿಲ್ಲದೆ ಹೃದಯ ಆಗಿದೆ ಖಾಲಿ.
-ಕೃಷ್ಣಮೂರ್ತಿ ಅಜ್ಜಹಳ್ಳಿ

ಪ್ರಕಟಣೆ (ಜಾಹಿರಾತು)

ಮಾಗಿಯ ಮೈನಡುಗುವ ಚಳಿಗೆ
ಅತ್ಯವಷ್ಯಕ,ಅಮೂಲ್ಯ ಔಷದಿ
ಮಡದಿ !
ಇದ್ದರೆ ಪಡೆದುಕೋ
ಇಲ್ಲದಿದ್ದರೆ ಹುಡುಕಿಕೋ....
-ಕೃಷ್ಣಮೂರ್ತಿ ಅಜ್ಜಹಳ್ಳಿ

ಹೃದಯ ಮೀಸಲು

ಗೆಳತೀ.....
ನನ್ನ ಹೃದಯದಲ್ಲಿ
ನಿನ್ನೊಬ್ಬಳಿಗೆ ಸ್ಥಾನ !!!
ಏಕೆಂದರೆ
ಎಲ್ಲರಿಗೂ ಸಮ್ಮತಿಸಲು
ಆಗಿಲ್ಲ ಎನ್ನ ಹೃದಯ
ದೇವಸ್ಥಾನ......!!!
-ಕೃಷ್ಣಮೂರ್ತಿ ಅಜ್ಜಹಳ್ಳಿ

ಕಿಸ್ಸ್(ಚುಂಬನ)

ಚಿತ್ತವ ಬ್ರಮೆಗೊಳಿಸಿ
ಕತ್ತಲಲ್ಲೂ ಮೂಡಿಬರುವ
ಹುಡುಗಿಯ ಪ್ರೀತಿಯೆಂಬ ವಿದ್ಯುತ್ ಗೆ
ಹುಡುಗ ಕೊಡುವ ಬಿಲ್ಲು
ಕಿಸ್ಸ್(ಚುಂಬನ)
-ಕೃಷ್ಣಮೂರ್ತಿ ಅಜ್ಜಹಳ್ಳಿ

ಕಾವಲು

ವಸುದೆಯ ಮೇಲೆ
ಯಾರೂ ಹಾಕದಂತೆ
ಕಣ್ಣು
ಕಾವಲಿಟ್ಟಿದ್ದಾನೆ
ವರುಣ
ಹಗಲಿಗೆ ಸನ್ (SUN)
ಇರುಳಿಗೆ ಮೂನ್ (MOON)
-ಕೃಷ್ಣಮೂರ್ತಿ ಅಜ್ಜಹಳ್ಳಿ

ನಾನು- ಅವಳು

ಅವಳು ನನಗೆ
ಬಳುಕುವಾ
ಕೋಮಲೆ (ಕಮಲೆ)
ನಾನು ಅವಳಿಗೆ
ಕಬ್ಬಿಣದ
ಕಡಲೆ !
-ಕೃಷ್ಣಮೂರ್ತಿ ಅಜ್ಜಹಳ್ಳಿ

ಸ್ನೇಹ

ನಯನ ನಿನ್ನವಾದಲ್ಲಿ
ಅದರೊಳಗಿನ
ಕಂಬನಿ
ನನ್ನದಾಗಲಿ
ಹೃದಯ ನಿನ್ನದಾದಲ್ಲಿ
ಅದರ ಮಿಡಿತ
ನನ್ನದಾಗಿರಲಿ
ನಮ್ಮ ಸನಿಹ ಎಷ್ಟು
ಆಳವೆಂದರೆ ನಿನ್ನ ಉಸಿರು ನಿಲ್ಲುವಂತಾದಾಗ
ಸಾವು ನನ್ನದಾಗಿರಲಿ.........
-ಕೃಷ್ಣಮೂರ್ತಿ ಅಜ್ಜಹಳ್ಳಿ

ನಿತ್ಯ ನಮನ

ಮುಂಜಾನೆ ಎದ್ದು
ಮಂಜಿನ ಮಳೆಯಲ್ಲಿ ಮಿಂದು
ಹೂದೀಪ ಹಚ್ಚಿ
ಪರಿಮಳವ ಚೆಲ್ಲಿ
ಹಾಡಿ ಇಂಚರದಲ್ಲಿ
ಮರಗಿಡಗಳೆಲ್ಲಾ
ಸಲ್ಲಿಸುತ್ತಿವೆ
ಬಾನ ಬಾಸ್ಕರನಿಗೆ
ನಿತ್ಯ ನಮನ.
-ಕೃಷ್ಣಮೂರ್ತಿ ಅಜ್ಜಹಳ್ಳಿ

ಗಂಡ ದಂಡ

ಇಂದಿನ ಹೆಣ್ಣು
ಸ್ವಾವಲಂಬಿ ದಿಟ್ಟೆ
ಗಂಡ
ತಾಳಕ್ಕೆ ಕುಣಿಯದಿದ್ದರೆ
ಹೇಳುತಾಳೆ
ನೀ ದಂಡ !!!
ನಾ
ಹೊರಟೆ !!!
-ಕೃಷ್ಣಮೂರ್ತಿ ಅಜ್ಜಹಳ್ಳಿ

ಬರುವೆಯಾ .....

ಗೆಳತಿ
ಬರುವುದಾದರೆ
ಬಾ
ನನ್ನ ಬದುಕೆಂಬ
ಕಂಪನಿಗೆ
ಪಾಲುದಾರಳಾಗಿ
ಸಹ ಬಾಳ್ವೆಯಿಂದ
ಬಂದ ಲಾಬ ನಷ್ಟದಲ್ಲಿ
ಸಮಪಾಲು
ನಮ್ಮಿಬ್ಬರಿಗೆ
-ಕೃಷ್ಣಮೂರ್ತಿ ಅಜ್ಜಹಳ್ಳಿ

ನನ್ನವರು

ಒಲಿದರೆ
ಹೂವಿನ ಚಂಡು
ಮುನಿದರೆ
ಬಂದೂಕಿನ ಗುಂಡು
-ಕೃಷ್ಣಮೂರ್ತಿ ಅಜ್ಜಹಳ್ಳಿ

ವ್ಯತ್ಯಾಸ (ಓದಿದ್ದು)

ಹುಡುಗಿ ಒಲಿದರೆ
ಹುಡುಗ ಹುಡುಗಿ ಸುತ್ತುವರು
ಬೈಕಲ್ಲಿ ಪಾರ್ಕು,ಸಿನಿಮಾ,ಪಿವಿ ಆರ್ ಡಿಟಿಎಸ್ ರೌಂಡು
ಹುಡುಗಿ ಕೈಕೊಟ್ಟರೆ ಹುಡುಗನ
ಮನೆಮುಂದೆ ತಮಟೆ ಡಿಟಿ ಎಸ್ ಸೌಂಡು.
_ಕೃಷ್ಣಮೂರ್ತಿ ಅಜ್ಜಹಳ್ಳಿ

ವ್ಯತ್ಯಾಸ(hanigavana)

ಹುಡುಗಿ
ಒಲಿದರೆ
ಪ್ರೇಮಾಯಣ
ಮುನಿದರೆ
ಹುಡುಗ ಹೆಣ
-ಕೃಷ್ಣಮೂರ್ತಿ ಅಜ್ಜಹಳ್ಳಿ

ನ್ಯಾಯವೇ....

ಪ್ರಿಯೆ !ನಿನ್ನ ಮರೆಯ ಬೇಕೆಂದು ಮಧುರೆಯ
ಮತ್ತಲ್ಲಿ ನಾ ಮತ್ತನಾಗಿ ಮಲಗಿರಲು
ನೀ ಬಂದು ಮನಕೆ ಮುತ್ತಿಟ್ಟು
ನನ್ನ ನಿದ್ದೆಯನು ಸುಟ್ಟು ಚಿಂತೆಯ ಕೊಟ್ಟು
ಹೋಗುವುದು ನ್ಯಾಯವೇ ಪುಟ್ಟು ?
-ಕೃಷ್ಣಮೂರ್ತಿ ಅಜ್ಜಹಳ್ಳಿ