Friday, July 19, 2013
ಭಾರತೀಯ ಕ್ರಮದಲ್ಲಿ ಋತುಗಳು
ಆರು ವಿಧದ ಕಾಲ ವಿಭಾಗದಲ್ಲಿ ಮೂರನೆಯ ವಿಭಾಗ ಋತು. ಇದರ ಪರಮಾಣ ವರ್ಷದ ಆರನೆಯ ಒಂದು ಭಾಗ ಎಂದರೆ ಎರಡು ತಿಂಗಳುಗಳ ಕಾಲ ಅಥವಾ ಅರವತ್ತು ದಿವಸಗಳು. ಒಂದು ವರ್ಷದಲ್ಲಿ ಒಟ್ಟು ಆರು ಋತುಗಳಿವೆ. ಚೈತ್ರ ಶುಕ್ಲ ಪ್ರಥಮ ದಿವಸದಿಂದ ವಸಂತ ಋತು ಪ್ರಾರಂಭವಾಗುತ್ತದೆ. ಇದು ವೈಶಾಖ ಮಾಸ ಅಮಾವಾಸ್ಯೆಯಂದು ಮುಗಿಯುತ್ತದೆ. ಜ್ಯೇಷ್ಠ ಶುಕ್ಲ ಪಾಡ್ಯದಿಂದ ಆಷಾಢ ಅಮಾವಾಸ್ಯೆಯತನಕ ಗ್ರೀಷ್ಮ ಋತು. ಶ್ರಾವಣ ಶುಕ್ಲ ಪ್ರಥಮದಿಂದ ಪುಷ್ಯ ಅಮಾವಾಸ್ಯೆಯತನಕ ಹೇಮಂತ ಋತು. ಮಾಘ ಶುಕ್ಲ ಪ್ರಥಮದಿಂದ ಫಾಲ್ಗುಣ ಅಮಾವಾಸ್ಯೆತನಕ ಹೇಮಂತ ಋತು. ಮಾಘ ಶುಕ್ಲ ಪ್ರಥಮದಿಂದ ಫಾಲ್ಗುಣ ಅಮಾವಾಸ್ಯೆಯತನಕ ಶಿಶಿರ ಋತು.
ಈ ಆರು ಋತುಗಳಲ್ಲಿ ಸಾಮಾನ್ಯವಾಗಿ ಶಿಶಿರ, ವಸಂತ ಗ್ರೀಷ್ಮ ಋತುಗಳು ಉತ್ತರಾಯಣಕ್ಕೂ ವರ್ಷ, ಶರತ್, ಹೇಮಂತ ಋತುಗಳು ದಕ್ಷಿಣಾಯಣಕ್ಕೂ ಹೀಗೆ ಶುಕ್ಲ ಪಕ್ಷಾದಿಯಿಂದ ಅಮಾವಾಸ್ಯೆಯವರೆಗೆ ಕಾಲಗಣನೆ ಮಾಡುವ ಋತು ವಿಭಾಗಕ್ಕೆ ಚಾಂದ್ರ ಋತುಗಳೆಂದು ಹೆಸರು.
ವಸಂತದಿಂದ ಶಿಶಿರದವರೆಗೆ:ಋತುಚರ್ಯೆಗೆ ಅನುಗುಣವಾಗಿಯೇ ಜೀವನ ಕ್ರಮ ರೂಪಿತವಾಗಿದ್ದು ಧರ್ಮ ಇದನ್ನು ನಿರ್ದೇಶಿಸುತ್ತದೆ. ಪ್ರತಿ ಭಾರತೀಯ ಆಚರಣೆ ಹಿಮದೆಯೂ ಜೀವನ್ಮುಖಿ ಅರ್ಥವಿದೆ.
ಸೂರ್ಯನ ಪಥ ಸಂಚಲನೆಯಿಂದ ಪ್ರಕೃತಿಯ ಪರಿವರ್ತನೆ. ಪ್ರಕೃತಿಯ ಈ ಪರಿವರ್ತನೆಯ ಪ್ರವೃತ್ತಿಯನ್ನು ಋತುಗಳೆಂದು ಕರೆದರು. ಒಂದು ವರ್ಷಾವಧಿಯಲ್ಲಿ ಎರಡು ಮಾಸಗಳಿಗೊಂದರಂತೆ ಆರು ಋತುಗಳು. ಋತುಚರ್ಯೆಗಳು ಆಯಾ ಪ್ರದೇಶ, ಜೀವರಾಶಿಯ ಮೇಲೆ ಮಹತ್ವದ ಪರಿಣಾಮ ಬೀರುತ್ತವೆ. ಋತುಚರ್ಯೆ ದಿನಚರ್ಯೆ ಎನಿಸಿಕೊಂಡರೆ, ಪ್ರಕೃತಿಯಲ್ಲಿನ ಪರಿವರ್ತನೆಗೆ ಅನುಸರಿಸಿ ನಡೆಯುವುದು ಋತುಚರ್ಯೆ ಎನಿಸಿಕೊಳ್ಳುವುದು. ಋತುಚರ್ಯೆಗೆ ಅನುಗುಣವಾಗಿ ಜೀವನ ಕ್ರಮವಿದೆ. ಧರ್ಮ ಅದನ್ನು ನಿರ್ದೇಶಿಸುತ್ತದೆ.
ಋತು ವೈಶಿಷ್ಟ್ಯ:ಆರು ಋತುಗಳಲ್ಲೂ ಹಗಲು ಇರುಳುಗಳ ಅವಧಿಯ ಪ್ರಮಾಣ, ಸೂರ್ಯನ ಬಿಸಿಲು, ಹವಾಮಾನ, ಆಗ ಬೀಸುವ ಗಾಳಿಗಳು ಹೀಗೆ ಪರಿಸರದಲ್ಲಿ ನಾನಾ ವ್ಯತ್ಯಾಸಗಳು ವೈಶಿಷ್ಟ್ಯಗಳು ಜರುಗುತ್ತವೆ. ನಾವು ಒಂದೇ ತೆರನಾದ ಆಹಾರ ವಿಹಾರ ಕ್ರಮಗಳನ್ನು ಅನುಸರಿಸುತ್ತ ಹೋದರೆ ಒಳಿತಾಗುವುದಿಲ್ಲ. ಆರಂಭ ಮತ್ತು ಅಂತ್ಯದಲ್ಲಿ 'ಪರ್ವ'ಗಳೆಂದು ಗುರುತಿಸಲಾಗಿದೆ.
ವಸಂತ ವಿಲಾಸ:ವಸಂತ ಋತುವಿನಲ್ಲಿ ಸೂರ್ಯ ಮತ್ತು ಚಂದ್ರ ಇಬ್ಬರೂ ಪೂರ್ಣ ಪ್ರಮಾಣದಲ್ಲಿ ಭೂಮಿಗೆ ಪ್ರಕಾಶ ನೀಡುತ್ತಾರೆ. ಆಕಾಶವು ಶುಭ್ರವಾಗಿರುತ್ತದೆ. ಹೂಗಿಡ ಮರಗಳು ಅರಳಿ ಕಂಗೊಳಿಸುತ್ತವೆ. ವಸಂತ ಋತು ಸಮಯದಲ್ಲಿ ಜೀವರಾಶಿಗಳಲ್ಲಿ ವಿಷಯಾಸಕ್ತಿ ವ್ಯಾಮೋಹ ವೃದ್ಧಿಸುವುದು.
ಗ್ರೀಷ್ಮಗಾನ:ಗ್ರೀಷ್ಮ ಋತುವು ಜ್ಯೇಷ್ಠ ಹಾಗೂ ಆಷಾಢ ಮಾಸಗಳನ್ನೊಳಗೊಂಡಿದೆ. ಸೂರ್ಯನು ತನ್ನ ಪ್ರಖರತೆಯಿಂದ ಭೂಮಿ ಹಾಗೂ ಮನುಷ್ಯನ ಸ್ನಿಗ್ಧ ಗುಣವನ್ನು ಹೀರುತ್ತಾನೆ. ಹಣ್ಣು ಹಂಪಲ ಸೇವನೆ, ಸುವಾಸನೆಯ ಪುಷ್ಪಗಳನ್ನು ಮೂಸುವುದು, ಧರಿಸುವುದು, ರಸಿಕತೆ ರಂಜನೆ ಈ ಕಾಲದಲ್ಲಿ ಹಿತಕರ.
ವರ್ಷಾಧಾರೆ:ವರ್ಷ ಋತುವಿನಲ್ಲಿ (ಶ್ರಾವಣ ಭಾದಪ್ರದ)ಭೂಮಿಯ ತೇವ ಮೇಘದ ಮಳೆ ಸುರುವಿಕೆಯಿಂದ ದೇಹದಲ್ಲಿ ಜಠರಾಗ್ನಿಯು ಕ್ಷೀಣವಾಗುವುದು. ಆಮ್ಲಪಾಕ ಉಂಟಾಗಿ ಪಿತ್ತಚಯವು,ಮಂದಾಗ್ನಿಯೂ ಆಗುವುದರಿಂದ ತ್ರಿದೋಷಕಾರಕ ಆಹಾರ ಸೇವಿಸಬೇಕು.
ಶರತ್ ಋತು:ಆಶ್ವೀಜ-ಕಾರ್ತಿಕ ಮಾಸಗಳನ್ನೊಳಗೊಂಡ ಶರತ್ ಋತುವಿನಲ್ಲಿ ಮಳೆಗಾಲದಲ್ಲಿ ಸಂಚಯವಾಗಿದ್ದ ಪಿತ್ತವು ಪ್ರಕೋಪಗೊಳ್ಳುತ್ತದೆ. ಈ ಋತುವಿನಲ್ಲಿ ಮಂಜು ಬೀಳುವ ಸ್ಥಳ, ಅತಿಭೋಜನ, ಮೊಸರು, ತೈಲ, ಮದ್ಯ, ಹಗಲು ನಿದ್ರೆ ಪೂರ್ವ ದಿಕ್ಕಿಗೆ ಬೀಸುವ ಗಾಳಿಗೆ ಎದುರಾಗಿ ನಡೆಯುವುದು ಇತ್ಯಾದಿಯನ್ನು ವರ್ಜಿಸಬೇಕು.
ಹೇಮಂತದ ಹಿಗ್ಗು:ಹೇಮಂತ ಋತುವಿನಲ್ಲಿ ಹಿಮ ಹಾಗೂ ಚಳಿಯಿಂದ ಶರೀರದ ರೋಮ ರಂಧ್ರಗಳೆಲ್ಲ ಆಕುಂಚನವಾಗುವುದರಿಂದ ಶರೀರೋಷ್ಣವು ಹೆಚ್ಚಾಗಿ ಜಠರಾಗ್ನಿಯು ಪ್ರಜ್ವಲಿಸುವುದಕ್ಕೆ ಕಾರಣವಾಗುತ್ತದೆ. ಆದ್ದರಿಂದ ಈ ಋತುವಿನಲ್ಲಿ ಈ ಅಗ್ನಿಯನ್ನು ಶಾಂತಗೊಳಿಸುವುದಕ್ಕೆ ಸಹಜಕ್ಕಿಂತ ಸ್ವಲ್ಪ ಹೆಚ್ಚು ಪ್ರಮಾಣದಲ್ಲಿ ಆಹಾರ ಸೇವಿಸಬೇಕಾಗುತ್ತದೆ. ಸ್ತ್ರೀ ಸಂಪರ್ಕ ಈ ಋತುಕಾಲದಲ್ಲಿ ಅತ್ಯಂತ ಸೂಕ್ತವಾದುದು.
ಶುಷ್ಕತೆಯ ಶಿಶಿರ:ಶಿಶಿರ ಋತುವಿನಲ್ಲಿ ಗಾಳಿ ಬೀಸುತ್ತಲೇ ಇರುವುದು ವಿಶೇಷ ಉಷ್ಣತೆಯಿರುವ ಮನೆಯಲ್ಲಿದ್ದುಕೊಂಡು ಖಾರ, ಕಹಿ, ಒಗರು ಇತ್ಯಾದಿ ವಾತ ವೃದ್ಧಿಕರವಾದ ಆಹಾರ, ಶೀತಕರವಾದ ಆಹಾರ ಪಾನೀಯಗಳನ್ನು ವರ್ಜಿಸಬೇಕಾಗುವುದು ವಾತ ಪ್ರಕೃತಿಯ ವ್ಯಕ್ತಿಗೆ ಗಾಢ ನಿದ್ರೆ ಇರುವುದಿಲ್ಲ.
ಪ್ರಕೃತ್ತಿದತ್ತ:ಪೃಥ್ವಿ, ಆಫ, ತೇಜಸ್ಸು, ವಾಯು ಹಾಗೂ ಆಕಾಶಗಳೆಂಬ ಪಂಚಮಹಾಭೂತಗಳ ಸಂಯೋಗದಿಂದಲೇ ಮಾನವನ ಶರೀರವು ಉತ್ಪತ್ತಿಯಾಗಿದೆ. ನಿಸರ್ಗವೇ ಮಾನವ ಪ್ರಕೃತಿಯ ಹೊರ ಶರೀರವೆನಿಸಿದರೆ ಪ್ರಕೃತಿಯೇ ಅದರ ಒಳ ಶರೀರವೆನಿಸಿದೆ. ಪಂಚಮಹಾಭೂತಗಳ ಮರು ಗುಂಪುಗಳನ್ನು 'ತ್ರಿದೋಷ'ಗಳೆಂದು ಕರೆದರು. ಪೃಥ್ವಿ ಹಾಗೂ ಆಪ್‌ತತ್ವ್ತಗಳು ಸೇರಿ 'ಕಫ'ವಾಗಿಯೂ ವಾಯು ಆಕಾಶ ಸೇರಿ 'ವಾತ'ವೆಂತಲೂ ಮತ್ತು ತೇಜಸ್ ತತ್ತ್ವ ಪ್ರಧಾನವಾದ ದ್ರವ್ಯಕ್ಕೆ 'ಪಿತ್ತ'ವೆಂತಲೂ ಕರೆದರು. ಇವುಗಳು ಕೂಡ ದ್ರವ್ಯಗಳಾಗಿದ್ದು ಕ್ರಮವಾಗಿ ಕಫವು ಸಂಗ್ರಹಣ ಕ್ರಿಯೆಗೂ, ಪಿತ್ತವು ಸಾತ್ಮೀಕರಣ ಕ್ರಿಯೆಗೂ ಹಾಗೂ ವಾತವು ವಿಷ ವಿಸರ್ಜನ ಕ್ರಿಯೆಗೂ ಅಧಿಕಾರಗಳೆನಿಸಿ ದೈಹಿಕ ಕ್ರಿಯೆಗಳನ್ನು ಮಾಡುತ್ತವೆ.
ಪ್ರಕೃತಿಯಲ್ಲಿನ ಈ ಪ್ರವೃತ್ತಿ ಪರಿವರ್ತನೆಯನ್ನೇ ಋತುಚರ್ಯೆಗಳೆಂದು ಕರೆದು ಪಂಚಪರ್ವಗಳನ್ನು ಗುರುತಿಸಿದ್ದಾರೆ. ಋತುಸಂಧಿಯ ಈ ಪರ್ವಗಳ ಆಚರಣೆ, ವಿಧಿ, ವಿಧಾನಗಳು, ನೈವೇದ್ಯಕ್ಕೆಂದು ತಯಾರಿಸುವ ರಸ ಪದಾರ್ಥಗಳು ಒಂದು ರೀತಿಯಲ್ಲಿ ವೈದ್ಯಕೀಯ ಚಿಕಿತ್ಸೆಗಳೇ ಆಗಿವೆ. ಈ ಹಿನ್ನೆಲೆಯಲ್ಲಿ ಪ್ರತಿ ಭಾರತೀಯ ಆಚರಣೆಗೂ ಊಟೋಪಚಾರ, ಉಡುಗೆ-ತೊಡುಗೆಗೂ ಧರ್ಮಾತೀತವಾದ ಜೀವನ್ಮುಖಿ ಅರ್ಥವಿದೆ ಎನ್ನುವುದು ಉತ್ಪ್ರೇಕ್ಷೆ ಅಲ್ಲ.
-ಗುರುರಾಜ ಪೋಶೆಟ್ಟಿಹಳ್ಳಿ
ಅಸ್ತಮಾಕ್ಕೆ ಅಂಜಬೇಕಿಲ್ಲ
ಅಸ್ತಮಾವು ಸಾಮಾನ್ಯ ತೀವ್ರ ಉರಿಯೂತ ರೋಗವಾಗಿದ್ದು, ಆಗಾಗ್ಗೆ ಮರುಕಳಿಸುವ, ಪರಿವರ್ತನೆಯ ಹಾಗೂ ಉಸಿರಾಟಕ್ಕೆ ತಡೆಒಡ್ಡುವ ಗುಣಲಕ್ಷಣಗಳನ್ನು ಹೊಂದಿದೆ. ಉಸಿರಾಟದ ನಾಳಗಳ ರಚನೆಯನ್ನು ಬ್ರಾಂಕೋಸ್ಪಾಸ್ಮ್ ಎಂದು ಕರೆಯಲಾಗುತ್ತದೆ. ಅಸ್ತಮಾದ ಲಕ್ಷಣಗಳಲ್ಲಿ ಉಬ್ಬಸ, ಕೆಮ್ಮು, ಎದೆಬಿಗಿತ ಸೇರಿದೆ. ನಗರಗಳ ಕಾಲುಭಾಗದಷ್ಟು ಮಕ್ಕಳಲ್ಲಿ ಅಸ್ತಮಾದ ತೊಂದರೆ ಕಾಣಿಸಿಕೊಂಡಿರುವುದರಿಂದ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಈ ಕಾಯಿಲೆ ಬಗ್ಗೆ ಜನಜಾಗೃತಿ ಹೆಚ್ಚಾಗಿದೆ.
ಅಸ್ತಮಾವು ಪರಿಸರ ಮತ್ತು ಅನುವಂಶಿಕ ಅಂಶಗಳಿಂದ ಉಂಟಾಗುತ್ತದೆ. ಇದು ತೀವ್ರತರನಾದ ಅಸ್ತಮಾ ಮತ್ತು ಔಷಧಕ್ಕೆ ಪ್ರತಿಕ್ರಿಯಿಸುವುದರ ಮೇಲೆ ಪ್ರಭಾವ ಬೀರಬಲ್ಲದು. ಧೂಳು, ಪ್ರಾಣಿಗಳ ಕೂದಲು, ಪರಾಗರೇಣು ಮುಂತಾದವುಗಳಿಂದ ಉಂಟಾಗುವ ಅಲರ್ಜಿಗಳು ನಮ್ಮ ದೇಹದ ಪ್ರತಿರಕ್ಷಣ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಒಡ್ಡುತ್ತವೆ.
ಅಸ್ತಮಾವು ಎರಡೂ ಲಿಂಗಗಳ ಹಾಗೂ ಎಲ್ಲ ವಯಸ್ಸಿನ ಜನರಿಗೂ ಉಂಟಾಗುತ್ತದೆ. ಆದರೆ ಸಾಮಾನ್ಯವಾಗಿ ಹದಿಹರೆಯದ ಮಕ್ಕಳಲ್ಲೇ ಇದು ಹೆಚ್ಚು. ಏಕೆಂದರೆ ಮಕ್ಕಳಲ್ಲಿ ಕಾಯಿಲೆಗೆ ಸುಲಭವಾಗಿ ಒಳಗಾಗುವ ಲಕ್ಷಣಮತ್ತು ಪ್ರತಿರೋಧ ಶಕ್ತಿಯ ಮಟ್ಟ ಕಡಿಮೆ ಇರುವುದು ಕಾರಣವಾಗಿದೆ. ಒಳಕ್ಕೆ ಎಳೆದುಕೊಳ್ಳುವ ಗಾಳಿ ( ಇನ್ಹೇಲ್ಡ್ ಏರ್ ) , ಸೇವಿಸಿದ ಆಹಾರ ಹಾಗೂ ಇನ್ನೂ ಕೆಲವೊಮ್ಮೆ ಕೆಲ ಔಷಧದಲ್ಲಿರುವ ಅಂಶಗಳಿಂದ ಅಸ್ತಮಾ ಉಂಟಾಗುತ್ತದೆ.
ತಂಬಾಕು, ಮರದ ಹೊಗೆ, ಮಾಲಿನ್ಯಗೊಂಡ ಗಾಳಿಯಲ್ಲಿ ಉಸಿರಾಟಕ್ಕೆ ತೆರೆದುಕೊಳ್ಳುವುದು, ಪರ್ಫ್ಯೂಮ್, ಸ್ವಚ್ಛಗೊಳಿಸುವ ಉತ್ಪನ್ನಗಳ ವಾಸನೆ ತೆಗೆದುಕೊಳ್ಳುವುದು, ಕಚೇರಿಗಳಲ್ಲಿ ಉದ್ರೇಕಕಾರಿ ವಾತಾಯನಕ್ಕೆ ತೆರೆದುಕೊಳ್ಳುವುದರಿಂದಲೂ ಅಸ್ತಮಾ ಉಂಟಾಗುತ್ತದೆ.
ಮೇಲ್ಭಾಗದ ಉಸಿರಾಟದ ಸೋಂಕುಗಳಾದ ಶೀತ, ಜ್ವರ, ಸೈನ್ಸ್, ಬ್ರಾಂಕೈಟಿಸ್, ಶುಷ್ಕ ಹವಾಮಾನ , ಭಾವನಾತ್ಮಕ ಉತ್ಸಾಹ ಅಥವಾ ಒತ್ತಡ, ದೈಹಿಕ ಪರಿಶ್ರಮ ಅಥವಾ ವ್ಯಾಯಾಮದಿಂದಲೂ ಅಸ್ತಮಾ ಉಂಟಾಗುತ್ತದೆ.
ರಾತ್ರಿ ಹೊತ್ತಿನಲ್ಲಿ ಕೆಮ್ಮು, ಉಸಿರಾಟದ ತೊಂದರೆ, ಎದೆ ಬಿಗಿಯಾದ ಭಾವನೆ, ದೀರ್ಘಕಾಲದ ' ಥ್ರೋಟ್ ಕ್ಲೀನಿಂಗ್ ' ಮಾದರಿಯ ಕೆಮ್ಮು ಅಸ್ತಮಾದ ಸಾಮಾನ್ಯ ಲಕ್ಷಣಗಳಾಗಿವೆ. ಕಾಯಿಲೆಯ ತೀವ್ರತೆ ಮತ್ತು ಲಕ್ಷಣದ ಹೆಚ್ಚಳ ಇವೆರಡು ಒಂದಕ್ಕೊಂದು ಸಂಬಂಧ ಹೊಂದಿರುತ್ತವೆ. ಲಕ್ಷಣಗಳು ಕ್ರಮೇಣ ಉಲ್ಬಣಹಂತಕ್ಕೆ ಇಲ್ಲವೇ ಗುಟ್ಟಾಗಿ ಉಲ್ಭಣ ಸ್ಥಿತಿಗೆ ತಲುಪಬಹುದು. ಸಾಮಾನ್ಯವಾಗಿ ಅಸ್ತಮಾ ರೋಗಿಗಳಿಗೆ ಉಬ್ಬಸವಿರುತ್ತದೆ ಎಂಬ ತಪ್ಪು ಅಭಿಪ್ರಾಯ ಇದೆ. ಆದರೆ ಕೆಲ ಅಸ್ತಮಾ ರೋಗಿಗಳಿಗೆ ಉಬ್ಬಸ ಇರುವುದಿಲ್ಲ. ಅವರ ಕಾಯಿಲೆಯು ಇನ್ನೊಂದು ತೀವ್ರ ತಡೆಯೊಡ್ಡುವ ಪಪ್ಪುಸ ಕಾಯಿಲೆಯಾದ ವಾತಶೋಧ ( ಶ್ವಾಸಕೋಶದಲ್ಲಿ ವಾಯುಕೋಶಕ ಉಬ್ಬಿರುವುದು ) ಅಥವಾ ದೀರ್ಘಕಾಲಿನ ಉರಿಯೂತ ದೊಂದಿಗೆ ತಳಕು ಹಾಕಿಕೊಂಡಿರುವ ಸಾಧ್ಯತೆ ಇರುತ್ತದೆ.
ಅಲೋಪತಿ ಔಷಧದ ಜತೆಗೆ ನಾವು ಹೋಮಿಯೊಪತಿ ಔಷಧವನ್ನು ಉಪಯೋಗಿಸಬಹುದಾಗಿದೆ. ಅಲೋಪತಿ ಔಷಧಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಹೋಮಿಯೊಪತಿ ಔಷಧವು ದೇಹದ ಪ್ರತಿರೋಧ ವ್ಯವಸ್ಥೆಯನ್ನು ಬಲಗೊಳಿಸಲು ಕೆಲಸ ಮಾಡುತ್ತದೆ.
ಅಸ್ತಮಾ ಕಾಯಿಲೆಯನ್ನು ಗುಣಪಡಿಸಲು ಪಾಸಿಟಿವ್ ಹೋಮಿಯೋಪತಿಯು ವ್ಯವಸ್ಥಿತ ಮತ್ತು ರಚನಾತ್ಮಕ ಪರಿಹಾರವನ್ನು ಸೂಕ್ತ ಡೋಸೇಜ್ ನೊಂದಿಗೆ ಒದಗಿಸುತ್ತದೆ. ಅಸ್ತಮಾದಂತಹ ದೀರ್ಘಕಾಲಿನ ಕಾಯಿಲೆಗಳಿಗೆ ಹೋಮಿಯೊಪತಿಯು ಶಾಶ್ವತ ಚಿಕಿತ್ಸೆಯನ್ನು ನೀಡುತ್ತದೆ. ರೋಗಿಯ ರೋಗ ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ರೋಗಿಯ ಕುಟುಂಬ ಹಿನ್ನೆಲೆ, ವೈಯಕ್ತಿಕ ಹಿನ್ನೆಲೆ ಮತ್ತು ಆತನ ವರ್ತನೆ ಮತ್ತು ಔಷಧಕ್ಕೆ ಆತ ಪ್ರತಿಕ್ರಿಯಿಸುವ ರೀತಿಯನ್ನು ಗಮನದಲ್ಲಿಟ್ಟುಕೊಂಡು ಪರಿಹಾರವನ್ನು ಸೂಚಿಸಲಾಗುತ್ತದೆ.
ಬಂಜೆತನಕ್ಕೆ ಭಯ ಬೇಡ
ಬಂಜೆತನ ಅನ್ನೋದು ಇತ್ತೀಚೆಗೆ ತೀರ ಸಾಮಾನ್ಯ ಸಮಸ್ಯೆ ಅಂದೆನಿಸಿದೆ.
ಯಾವುದೇ ಒಂದು ಹೆಣ್ಣು ಮದುವೆಯಾದ ಒಂದು ಅಥವಾ ಎರಡು ವರ್ಷದ ಒಳಗೆ ಯಾವುದೇ ಗರ್ಭ ನಿರೋಧಕಗಳನ್ನು ಉಪಯೋಗಿಸದೆ ದಾಂಪತ್ಯ ಜೀವನ ನಡೆಸಿದರೂ ಮಗುವನ್ನು ಪಡೆಯಲು ವಿಫಲವಾದರೆ ಅದನ್ನು ಸಂತಾನಹೀನತೆ ಅಥವಾ ಬಂಜೆತನ ಅನ್ನುತ್ತೇವೆ. ಬಂಜೆತನ ಶೇ. 35ರಿಂದ 40ರಷ್ಟು ಮಹಿಳೆಯರಲ್ಲಿ ಕಂಡು ಬರುತ್ತದೆ. ಇದರಲ್ಲಿ ಶೇ. 10ರಿಂದ 15ರಷ್ಟು ಮಹಿಳೆಯರಲ್ಲಿ ಇದು ಯಾವುದೇ ಕಾರಣವಿಲ್ಲದೆ ಕಾಣಿಸಿಕೊಳ್ಳುತ್ತದೆ.
ಬಂಜೆತನಕ್ಕೆ ಸಾಮಾನ್ಯ ತೊಂದರೆ ಏನೆಂದರೆ ಎಂಡೋಮೆಟ್ರಿಯೊಸಿಸ್. ಅಂದರೆ ಗರ್ಭಕೋಶದ ಸೋಂಕು, ಗರ್ಭನಾಳದ ತೊಂದರೆಗಳಾದ ಟ್ಯೂಬಲ್ ಬ್ಲಾಕ್ ಮತ್ತು ಟ್ಯೂಬಲ್ ಸರ್ಜರಿ. ಅಂಡಾಶಯಗಳ ಉತ್ಪತ್ತಿಯಲ್ಲಿ ಕೊರತೆ, ಥೈರಾಯ್ಡ್ ತೊಂದರೆ, ಪಿಸಿಒಡಿ ಹಾಗೂ ಗರ್ಭಪಾತದ ತೊಂದರೆಗಳು ಕಾಣಿಸುತ್ತವೆ.
ಇನ್ನೂ ಹಲವು ಅಂಶಗಳೆಂದರೆ ಹೆಚ್ಚಿದ ವಯಸ್ಸು, ಮಾನಸಿಕ ಒತ್ತಡ, ಅಪೌಷ್ಠಿಕತೆ, ತೂಕದಲ್ಲಿ ಏರುಪೇರು, ಹಾರ್ಮೋನ್ ಸಮಸ್ಯೆ, ಲೈಂಗಿಕ ಸೋಂಕು, ಅನಾವಶ್ಯ ಔಷಧ ಸೇವನೆ, ಮದ್ಯಪಾನ, ಧೂಮಪಾನ ಇತ್ಯಾದಿ.
ಸಂತಾನಹೀನತೆಗೆ ಹೋಮಿಯೋಪಥಿಯಲ್ಲಿ ಸೂಕ್ತ ಪರಿಹಾರ ಇದೆ. ಈ ಚಿಕಿತ್ಸೆಯಲ್ಲಿ ಸಂತಾನಹೀನತೆಯನ್ನು ಒಂದು ಸಮಸ್ಯೆ ಅಥವಾ ಕೊರತೆ ಎಂದು ಪರಿಗಣಿಸುವುದರ ಜತೆ ಅವರ ದೇಹದ ಪ್ರಕೃತಿ, ಜೀವನಶೈಲಿ ಹಾಗೂ ಮಾನಸಿಕ ಭಾವನೆಗಳನ್ನು ಗಣನೆಗೆ ತೆಗೆದುಕೊಂಡು ಚಿಕಿತ್ಸೆ ನೀಡಲಾಗುತ್ತದೆ. ಇದನ್ನು ಹೋಮಿಯೋಪಥಿಯಲ್ಲಿ ಕಾನ್‌ಸ್ಟಿಟ್ಯೂಷನಲ್ ಟ್ರಿಟ್‌ಮೆಂಟ್ ಎಂದು ಕರೆಯುತ್ತಾರೆ. ಈ ಚಿಕಿತ್ಸೆಯಿಂದ ಬಂಜೆತನವನ್ನು ಹೋಗಲಾಡಿಸಿ ಯಾವುದೇ ಅಡ್ಡ ಪರಿಣಾಮ ಇಲ್ಲದೆ ಮಗುವನ್ನು ಪಡೆಯಬಹುದು.
ವಿದ್ಯಾರ್ಥಿಗಳಿಗೂ ವಾಸ್ತು
ವಿದ್ಯಾರ್ಥಿಗಳು ಸಾಮಾನ್ಯವಾಗಿ ತಮ್ಮ ತಾಯಿ ತಂದೆಯರಲ್ಲಿ ತೋಡಿಕೊಳ್ಳುವ ದೂರುಗಳೆಂದರೆ ಓದಲು ಕಷ್ಟವಾಗುತ್ತಿದೆ, ಹೋಂವರ್ಕ್ ಬಹಳ, ಒಂದೇ ದಿನದಲ್ಲಿ ಓದಲು ಬಹಳ ವಿಷಯ ಕೊಟ್ಟಿದ್ದಾರೆ. ಅದು ಬಹಳ ಹೊರೆ. ಎಷ್ಟೇ ಓದಿದರೂ ತಲೆಗೆ ಮಾತ್ರ ಹತ್ತುವುದಿಲ್ಲ. ಓದದೆ ಶಾಲೆಗೆ ಹೋದರೆ ಟೀಚರ್ ಹೊಡೆಯುತ್ತಾರೆ. ಶಾಲೆಗೆ ಹೋಗಲು ಮನಸ್ಸಾಗುವುದಿಲ್ಲ ಎಂಬ ಮಕ್ಕಳ ಮಾತು ಕೇಳಿದ ಪೋಷಕರು, ಶಿಕ್ಷಕರು ಹಾಗೂ ಶಾಲಾ ಡಳಿತ ಮಂಡಳಿಯವರ ಮೇಲೆ ಸಿಟ್ಟಾಗುತ್ತಾರೆ.
ಯಾವ ಶಾಲೆಯವರಿಗೂ ಮಕ್ಕಳನ್ನು ಕಾಡಿಸುವ ಆಸೆ ಇರುವುದಿಲ್ಲ. ಮಕ್ಕಳಿಗೆ ಹೊರೆ ಅಂದೆನಿಸುವ ಹೋಂವರ್ಕ್ ನೀಡುವುದಿಲ್ಲ. ದೋಷ ಇರುವುದು ವಿದ್ಯಾರ್ಥಿಗಳ ಮನಸಿನಲ್ಲಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲ ಬೀಜಕ್ಕೂ ಹೆಮ್ಮರವಾಗುವ ಶಕ್ತಿ ಇರುವಂತೆ ಪ್ರತಿ ವಿದ್ಯಾರ್ಥಿಯಲ್ಲೂ ದೈಹಿಕ -ಮಾನಸಿಕ ವಾಗಿ ಬೆಳೆದು ಸತ್ಪ್ರಜೆಯಾಗುವ ಶಕ್ತಿ ಇದ್ದೇ ಇದೆ. ಬೀಜ ಬೆಳೆದು ಹೆಮ್ಮರವಾಗಲೂ ಫಲವತ್ತಾದ ಭೂಮಿ, ನೀರು ಹಾಗೂ ಸೂಕ್ತ ವಾತಾವರಣ ಬೇಕಿರುವಂತೆ ವಿದ್ಯಾರ್ಥಿಗಳಿಗೆ ಕೂಡ ಮಾನಸಿಕ ಹಾಗೂ ದೈಹಿಕವಾಗಿ ಬೆಳೆಯಲು ಪೂರಕ ವಾತಾವರಣ ಅಗತ್ಯ. ಅದರಲ್ಲಿ ಒಂದು ವಾಸ್ತು ಪೂರಕ ಪರಿಸರ ಎಂಬುದನ್ನು ಕೂಡ ಮರೆಯಬಾರದು.
ಓದುವ ಕೋಣೆಯಲ್ಲಿ ವಿದ್ಯಾರ್ಥಿಗಳ ಪುಸ್ತಕಗಳನ್ನೆಲ್ಲ ನೈಋತ್ಯ ಭಾಗದಲ್ಲಿರಿಸಬೇಕು. ಸಾಧ್ಯವಾಗದಿದ್ದರೆ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿರಬೇಕು. ಉತ್ತರ ಹಾಗೂ ಪೂರ್ವ ದಿಕ್ಕಿನಲ್ಲಿ ಪುಸ್ತಕಗಳನ್ನು ಗುಡ್ಡೆ ಹಾಕಿ ಭಾರ ಮಾಡಬಾರದು ಅಥವಾ ಯಾವುದೇ ಭಾರದ ವಸ್ತುಗಳನ್ನು ಉತ್ತರ ಅಥವಾ ಪೂರ್ವದಲ್ಲಿರಿಸಬಾರದು. ಅಂಥ ಭಾರದ ವಸ್ತುಗಳು ವಿದ್ಯಾರ್ಥಿಗಳಲ್ಲಿ ತಲೆ ಶೂಲೆಯನ್ನು ಮಾಡುತ್ತವೆ.
ಓದುವ ಟೇಬಲ್, ಕುಳಿತುಕೊಳ್ಳುವ ಕುರ್ಚಿಗಳು, ಗೋಡೆಗೆ ಅಂಟಿಕೊಂಡಂತೆ ಇರಬಾರದು. ಅರ್ಧ ಅಡಿಯಷ್ಟಾದರೂ ಜಾಗ ಖಾಲಿ ಬಿಟ್ಟು ಇಡಬೇಕು. ಓದುವ ಸಂದರ್ಭದಲ್ಲಿ ಯಾವ ಪುಸ್ತಕ ಬೇಕೋ ಅದನ್ನಷ್ಟೇ ಎದುರಿಗಿಟ್ಟು ಓದಬೇಕು. ಇತರ ಪುಸ್ತಕ ನೈಋತ್ಯ ಭಾಗದಲ್ಲಿ ಇರುವ ಕಪಾಟಿನಲ್ಲಿ ಇರಬೇಕು. ಓದುವಾಗ ಟೇಬಲ್ ಲ್ಯಾಂಪ್ ಬಳಸುತ್ತಿದ್ದುದಲ್ಲಿ ಅದನ್ನು ಟೇಬಲಿನ ಆಗ್ನೇಯ ಮೂಲೆಯಲ್ಲಿರಿಸಬೇಕು. ಟೇಬಲಿನ ಆಕೃತಿ ಚೌಕಾಕಾರದಲ್ಲಿಬಾರದು. ಚತುರ್ಭುಜಾಕೃತಿ ಅತ್ಯುತ್ತಮ. ಅತಿ ದೊಡ್ಡ ಟೇಬಲ್ ಆಗಲಿ ಅಥವಾ ಅತಿ ಚಿಕ್ಕ ಟೇಬಲ್ ಕೂಡ ಒಳ್ಳೆಯದಲ್ಲ. ಅತಿ ದೊಡ್ಡ ಟೇಬಲ್‌ನಿಂದ ದೈಹಿಕ ಶಕ್ತಿ ಕ್ಷೀಣಿಸುತ್ತದೆ. ಅತಿ ಸಣ್ಣ ಟೇಬಲ್ ಮಾನಸಿಕ ಶಕ್ತಿ ಕುಂದಿಸುತ್ತದೆ. ಓದುವ ಕೋಣೆಯ ವರ್ಣ ತಿಳಿ ನೀಲಿ ವರ್ಣವಿದ್ದರೆ ವಿದ್ಯಾರ್ಥಿಗಳಲ್ಲಿ ಕಲಿಯುವ ಸಾಮರ್ಥ್ಯ ಹೆಚ್ಚಿಸುತ್ತದೆ.
ರಾತ್ರಿ ಓದಿಯಾದ ನಂತರ ವಿದ್ಯಾರ್ಥಿಗಳು ಮಲಗುವಾಗ ಪೂರ್ವ ದಿಕ್ಕಿನೆಡೆ ತಲೆ ಇಟ್ಟು ಮಲಗಿದರೆ ಭೂಮಿಯ ಅಯಸ್ಕಾಂತದ ಪ್ರವಾಹದ ಗುಣದಿಂದಾಗಿ ಅತ್ಯಂತ ಶಾಂತವಾಗಿ ನಿದ್ದೆ ಮಾಡಲು ಅನುಕೂಲವಾಗುತ್ತದೆ. ಮುಂಜಾನೆ ಎದ್ದಾಗ ಮನಸ್ಸಿನಲ್ಲಿ ಸಕಾರಾತ್ಮಕ ಹುರುಪಿರುತ್ತದೆ. ಓದುವ ಕೋಣೆಯಲ್ಲಿ ಪೂರ್ವ ದಿಕ್ಕಿನ ಗೋಡೆಗೆ ಪೆಂಡುಲಂ ಇರುವ ಗೋಡೆ ಗಡಿಯಾರ ಇರಿಸಿದಲ್ಲಿ ವಿದ್ಯಾರ್ಥಿಗಳ ಮಿದುಳಿನ ಎರಡು ಭಾಗಗಳು ಸಮತೋಲನ ಸ್ಥಿತಿಯಲ್ಲಿದ್ದು ಬಲ ಮತ್ತು ಎಡಭಾಗದ ಮಿದುಳು ಸಮಪ್ರಮಾಣದ ಶಕ್ತಿಯನ್ನು ಹೊಂದುತ್ತದೆ.
ಪ್ರತಿನಿತ್ಯ ರಾತ್ರಿ ಒಂದು ಲೀಟರ್ ಕಾಯಿಸಿ ಆರಿಸಿದ ನೀರಿನಲ್ಲಿ 27 ಶುದ್ಧವಾದ ಹವನೀಕೃತ ಸ್ಪಟಿಕ ಮಣಿ ಇರಿಸಿ, ಮುಂದಿನ ದಿನ ಆ ನೀರನ್ನು ಕುಡಿಯುವುದರಿಂದ ಬುದ್ಧಿ ಚುರುಕಾಗಲೂ ನೆರವಾಗುತ್ತದೆ. ತಾಮ್ರದ ಚೊಂಬನ್ನು ನೀರು ಶೇಖರಿಸಲು ಬಳಸುವುದು ಉತ್ತಮ.
ಇತ್ತೀಚೆಗೆ ವೈಜ್ಞಾನಿಕ ರಂಗದ ನ್ಯೂರೋ ಸೈನ್ಸ್ ವಿಭಾಗದಲ್ಲಿ ನಡೆಸಿರುವ ಸಂಶೋಧನೆಗಳು ಕೂಡ ದಿಕ್ಕುಗಳು ಮಾನವನ ಮಿದುಳಿನ ಮೇಲೆ ಅಪಾರವಾದ ಪರಿಣಾಮ ಬೀರುವುದಾಗಿ ದೃಢಪಡಿಸಿವೆ. ಅದರಲ್ಲೂ ಮಿದುಳಿನ ತಲಾಮಸ್ ಅಂಗದಲ್ಲಿ ಸಿಡಿಯುವ ನ್ಯೂರಾನ್‌ನ ಕ್ರಮದಲ್ಲಿ ಎಚ್ಚೆತ್ತುಕೊಳ್ಳುವ ಗುಣ ಉತ್ತರ ದಿಕ್ಕಿನೆಡೆ ಮುಖ ಮಾಡಿಕೊಂಡಾಗ ಉಂಟಾಗುವುದೆಂದು ಸಂಶೋಧನೆ ಖಚಿತಪಡಿಸಿರುವುದು ನೋಡಿದರೆ ವಾಸ್ತು ವಿಚಾರಗಳು ಮೂಢನಂಬಿಕೆಯಲ್ಲವೆಂದು ಯಾರೂ ಬೇಕಾದರೂ ಹೇಳಬಹುದು.
ಮನೆಯ ಹೆಣ್ಣು ಮಕ್ಕಳು ವಾಯುವ್ಯ ಕೋನದ ಕೋಣೆಯಲ್ಲಿ ವಾಸಿಸುವುದರಿಂದಲೂ ಆ ಕೋಣೆಯಲ್ಲಿ ಪೂರ್ವದ ಕಡೆ ಮುಖ ಮಾಡಿ ಓದುವುದರಿಂದ ಹೆಣ್ಣು ಮಕ್ಕಳು ವಿದ್ಯೆಯಲ್ಲಿ ಮಾತ್ರವಲ್ಲ ಮನೆ ಕೆಲಸಗಳಲ್ಲೂ ಚುರುಕುತನ ಹೊಂದುತ್ತಾರೆ ಎನ್ನುತ್ತದೆ ವಾಸ್ತು. ಅಷ್ಟೇ ಅಲ್ಲ ಮದುವೆಯಾಗದ ಹೆಣ್ಣು ಮಕ್ಕಳು ವಾಯುವ್ಯ ಕೋಣೆಯಲ್ಲಿ ಪೂರ್ವದ ಕಡೆ ತಲೆ ಹಾಕಿ ಮಲಗುವುದರಿಂದ ಬಹುಬೇಗ ಕಂಕಣ ಬಲ ಕೂಡಿ ಬರುತ್ತದೆ ಎನ್ನುವುದು ಸುಳ್ಳಲ್ಲ.
ಮಾರ್ಕಂಡೇಯ ಋಷಿಗಳ ವಾಸ್ತು ಶ್ಲೋಕದ ಪ್ರಕಾರ ಅತಿ ದಡ್ಡ ಮಕ್ಕಳು ಆಗ್ನೇಯ ದಿಕ್ಕಿನ ಕೋಣೆಯಲ್ಲಿ ಈಶಾನ್ಯ ಭಾಗದ ಪೂರ್ವ ದಿಕ್ಕಿನ ಕಡೆ ಮುಖ ಮಾಡಿ ಅಭ್ಯಸಿಸುವುದರಿಂದ ಕಾಲಕ್ರಮೇಣ ಬುದ್ಧಿವಂತರಾಗುವತರೆಂಬ ಉಲ್ಲೇಖವಿದೆ.
-ಡಾ. ಕೆ. ರಮೇಶ್ ಕಾಮತ್
ವಾಸ್ತು ಜಗತ್ತು: ವಿದ್ಯಾಲಯಗಳ ವಾಸ್ತು ಹೇಗಿರಬೇಕು ?
"ವಿದ್ಯಾದದಾತಿ ವಿನಯಂ, ವಿದ್ಯಾ ವಿಹೀನಂ ಪಶು ಸಮಾನಂ". ಇವೆಲ್ಲ ಹಿಂದಿನವರು ಬರೆದು ಹಾಕಿದ ಪದ ಪುಂಜಗಳು. ಬಹಳ ಅರ್ಥಪೂರ್ಣ ಮತ್ತು ಚಿರನೂತನ. ಹಳೆ ಬೇರು, ಹೊಸ ಚಿಗುರು ಕೂಡಿರಲು ಮರ ಸೊಗಸು. ಇದು ಮರೆಯಲಾರದ ಮತ್ತು ಮರೆಯಬಾರದ ಮಾತು.
ಹಾಗೇನೆ ಹಳೆ ನೀತಿ-ಹೊಸ ರೀತಿ ಹೊಂದಿಸಿ ಬಾಳಿದರೆ ಅದೇ ಸ್ವರ್ಗೀಯ ಸ್ಥಿತಿ. ಇದಕ್ಕೆಲ್ಲ ಕಾರಣವಾಗುವುದು ಶಿಕ್ಷಣ. ಶಿಕ್ಷಣ ಎಂದರೆ ತಕ್ಷಣ ನೆನಪಾಗುವುದು ಪದವಿ. ಆದರೆ, ನೆನಪಿರಲಿ ಅದೇ ಸರ್ವಸ್ವ ಲ್ಲ. ಹೂವಿದ್ದರೆ ಸಾಲದು ಅದರೊಡನೆ ಪರಿಮಳವೂ ಬೇಕು. ಹಾಗೇನೆ ವಿದ್ಯೆಯೊಡನೆ ಬುದ್ಧಿಯು ಮೇಳೈಸಿರಬೇಕು. ಪ್ರತಿಭೆ ಹಾಸು ಹೊಕ್ಕಾಗಿರಬೇಕು. ಇವೆಲ್ಲವನ್ನು ಸೇರಿಸಿ ಬೆಳೆಯುವ ದೊಡ್ಡ ಗುಣ ವಿದ್ಯಾರ್ಥಿಗಳಲ್ಲಿರಬೇಕು. ಅಹಂಕಾರ ಅಧಃಪತನಕ್ಕೆ ದಾರಿ. ವಿದ್ಯಾವಂತ ಇದರ ಪ್ರವೇಶಕ್ಕೆ ಅವಕಾಶ ಕೊಡಲೇ ಬಾರದು. ಯಾಕೆಂದರೆ ಬೆಳೆ ಬೆಳೆದಲ್ಲಿ ಕಳೆಯೂ ಬೆಳೆಯುವುದು ಸಹಜ ತಾನೆ ಅದನ್ನು ಕಿತ್ತು ಬಿಸಕುವುದೇ ಜಾಣರ ಲಕ್ಷಣ. ವಿದ್ಯಾವಂತರ ಎರಡು ದಿವ್ಯಾಸ್ತ್ರಗಳೆಂದರೆ ಕರುಣೆ ಮತ್ತು ಕ್ಷಮೆ. ಕ್ಷಮಯಾಧರಿತ್ರಿ ಎಂಬುದು ವಿದ್ಯಾವಂತ ಜ್ಞಾನಿಗಳ ಬಾಯಿಯಿಂದ ಹೊರಹೊಮ್ಮಿದ ದಿವ್ಯವಾಣಿ ಅಲ್ಲವೇ ? ಇಂತಹ ವಿದ್ಯೆ ದೊರೆಯುವ ತಾಣವನ್ನು ನಾವು ವಿದ್ಯಾ ಮಂದಿರ ಶಿಕ್ಷಣ ಸಂಸ್ಥೆ ಮುಂತಾದ ಹೆಸರುಗಳಿಂದ ಕರೆಯುತ್ತೇವೆ. ಅದೇ ಶಾರದೆಯ ಆಲಯವು ಕೂಡ.
ದೇವಾಲಯ, ಮನುಷ್ಯಾಲಯಗಳಿಗೆ ಹೇಗೆ ವಾಸ್ತು ಬಲ ಬೇಕೋ ಹಾಗೇನೆ ವಿದ್ಯಾಲಯಕ್ಕೂ ಬೇಕು. ಕಾರಣ ಅನಿಶ್ಚಿತತೆಯ ಬದುಕಿನಲ್ಲಿ ನಿಶ್ಚಿತತೆಯನ್ನು ಹುಡುಕುವುದೇ ಜೀವನ. ಇಂತಹ ಜೀವನಕ್ಕೆ ರೂಪ ಕೊಡುವ ಕೆಲಸ ನಡೆಯುವುದೇ ಈ ವಿದ್ಯಾ ಸಂಸ್ಥೆಗಳಲ್ಲಿ . ಇದಕ್ಕೆ ಬೇಕು ದೈವಿಕ ಬಲ. ದೈವಿಕ ಬಲ ಎಂದರೆ ಪಂಚಭೂತಗಳ ಬೆಂಬಲ. ವಸ್ತು ಸ್ಥಿತಿಗಳನ್ನು ವಾಸ್ತವಿಕತೆಯೊಡನೆ ಮೇಳೈಸಿ ನಿರ್ಮಿಸುವ ಯಾವುದೇ ನಿರ್ಮಾಣವನ್ನು ವಾಸ್ತು ಎಂದು ಕರೆದರು ನಮ್ಮ ತ್ರಿಕಾಲ ಜ್ಞಾನಿಗಳಾದ ಋಷಿಮುನಿಗಳು. ಅದಕ್ಕೊಂದು ಶಾಸ್ತ್ರ ರೂಪ ಕೊಟ್ಟು ಗ್ರಂಥಸ್ಥಗೊಳಿಸಿ ಬೋಧಿಸಿದವರು ಆ ಮಹಾ ಮಹಿಮರು. ಶಾರದೆ ವಿದ್ಯಾಧಿದೇವತೆ. ಅವಳು ಎಲ್ಲರ ಪಂಚೇಂದ್ರಿಯಗಳ ಒಡತಿ. ಎಲ್ಲರ ತಾಯಿ. ಆಗರ್ಭ ಶ್ರೀಮಂತರನ್ನು ಸಾಮಾನ್ಯವಾಗಿ ಲಕ್ಷ್ಮೀ ಪತಿಗಳೆಂದು ಕರೆಯುವುದು ವಾಡಿಕೆ. ಆದರೆ, ಆಜನ್ಮ ವಿದ್ವಾಂಸರನ್ನು , ಜ್ಞಾನಿಗಳನ್ನು, ಋಷಿಮುನಿಗಳನ್ನು ಎಲ್ಲರನ್ನೂ ಕರೆಯುವುದು ಮಾತ್ರ ಸರಸ್ವತಿ ಪುತ್ರರೆಂದೇ. ಸರಸ್ವತಿಪತಿ ಎಂಬ ಶಬ್ದ ಎಲ್ಲೂ ಉಪಯೋಗಿಸಲ್ಪಟ್ಟಿಲ್ಲ. ಇದರಿಂದ ನಾವು ಅರಿಯಬಹುದು ಶಾರದೆಯ ಘನತೆ, ವಿದ್ಯೆಯ ಮಹತ್ವ. ಇದುವೇ ಇರುವ ವ್ಯತ್ಯಾಸ ಧನಸಂಪತ್ತು ಮತ್ತು ವಿದ್ಯಾ ಸಂಪತ್ತಿನ ನಡುವೆ. ಮಣ್ಣಿನ ಮುದ್ದೆಗೆ ಮಾನವರೂಪ ಕೊಡುವ ವಿದ್ಯಾಸಂಸ್ಥೆ ಹೇಗಿರಬೇಕು ? ವಾಸ್ತು ಶಾಸ್ತ್ರ ಈ ಕುರಿತು ಏನನ್ನು ನಿರೂಪಿಸುತ್ತದೆ ನೋಡೋಣ.
ವಿದ್ಯಾಲಯಗಳನ್ನು ಪೂರ್ವಮುಖವಾಗಿ ನಿರ್ಮಿಸಿದರೆ ಪ್ರಸಿದ್ಧಿ ಮತ್ತು ಶ್ರೇಯಸ್ಸು ಬರುವುದು. ಉತ್ತರ ಮುಖವಾಗಿ ಕಟ್ಟಿದಲ್ಲಿ ಉತ್ತಮ ಫಲಿತಾಂಶದೊಡನೆ ವಿದ್ಯಾರ್ಥಿಗಳು ಬುದ್ಧಿವಂತರೂ ಆಗುವರು. ಪಶ್ಚಿಮ ದಿಕ್ಕಿಗೆ ಎದುರಾಗಿ ಕಟ್ಟಿದಲ್ಲಿ ವಿದ್ಯೆಯೊಡನೆ ಧಾರ್ಮಿಕ ಸಂಸ್ಕೃತಿ ಬೆಳೆದು ಬರುವುದು. ದಕ್ಷಿಣ ದಿಕ್ಕಿಗೆ ಮುಖ್ಯ ದ್ವಾರ ಬರುವಂತೆ ಕಟ್ಟಿದರೆ ಉನ್ನತ ವ್ಯಾಸಂಗಕ್ಕೆ ಹೆಚ್ಚಿನ ಬಲ ಬರುವುದು. ಅರ್ಥಾತ್ ವೃತ್ತಿ ಪರತೆಗೆ ಹೆಚ್ಚಿನ ಒತ್ತು ಸಿಗುವುದು. ಆದರೆ ಯಾವುದೇ ಕಾರಣಕ್ಕೂ ಮೂಲೆ ದಿಕ್ಕುಗಳಿಗೆ ಮುಖ ಮಾಡಿ ವಿದ್ಯಾಲಯ ಕಟ್ಟಡ ಕಟ್ಟಬಾರದು.ಅಂದರೆ ನೈರುತ್ಯ ವಾಯುವ್ಯ, ಈಶಾನ್ಯ ಹಾಗೂ ಆಗ್ನೇಯ ದಿಕ್ಕುಗಳು ಸಿಂಹದ್ವಾ ಇಡಲು ನಿಷಿದ್ಧ. ಈ ಸಂಸ್ಥೆಗಳ ಎದುರಿನಿಂದ ಹಾದುಹೋಗುವ ಮಾರ್ಗವು ದಕ್ಷಿಣದಿಂದ ಉತ್ತರಕ್ಕೆ ತಗ್ಗಾಗಿ, ಪಶ್ಚಿಮದಿಂದ ಪೂರ್ವಕ್ಕೆ ಇಳಿಜಾರಾಗಿ ಹರಿದು ಹೋಗಿದ್ದರೆ ಸಂಸ್ಥೆಯ ಕೀರ್ತಿ ಹೆಚ್ಚುವುದು. ಪೂರ್ವ ಮತ್ತು ಉತ್ತರ ದಿಕ್ಕುಗಳಲ್ಲಿ ನೀರ ಹರಿವು ವಿದ್ಯಾಲಯಕ್ಕೆ ಶ್ರೇಯಸ್ಸನ್ನುಂಟು ಮಾಡುವುದು.
ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ನೈರುತ್ಯದ ಕೊಠಡಿಯಲ್ಲಿ ಪೂರ್ವ ಅಥವಾ ಉತ್ರ ಮುಖ್ಮಾಡಿ ಕುಳಿತುಕೊಳ್ಳಬೇಕು. ಈ ಕೋಣೆಯ ನೆಲಮಟ್ಟ ಬೇರೆಲ್ಲ ಕಡೆಗಿಂತ ಹೆಚ್ಚು ಎತ್ತರವಾಗಿರಬೇಕು. ಅಧ್ಯಾಪಕ ಕಠಡಿ ಪಶ್ಚಿಮ ಅಥವಾ ದಕ್ಷಿಣದಲ್ಲಿ ಇರಬೇಕು. ಅವರೂ ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ಕುಳಿತುಕೊಳ್ಳುವಂತೆ ಆಸನ ವ್ಯವಸ್ಥೆ ಮಾಡಬೇಕು. ಪ್ರಯೋಗ ಶಾಲೆ ದಕ್ಷಿಣದಲ್ಲಿ ಉತ್ತಮ. ಗ್ರಂಥಾಲಯ ಉತ್ತರದಲ್ಲಿದ್ದು ವಾಚನಾಲಯವನ್ನು ಈಶಾನ್ಯದಲ್ಲಿ ವ್ಯವಸ್ಥೆಗೊಳಿಸಬೇಕು. ಪ್ರವಚನ ಮಂದಿರ ಅಂದರೆ ಪಾಠ ಹೇಳುವ ಕೊಠಡಿಗಳಿಗೆ ಪೂರ್ವ ಮತ್ತು ಉತ್ತರದ ಬದಿ ಹೆಚ್ಚು ಫಲದಾಯಕ. ಅಧ್ಯಾಪಕ ವೇದಿಕೆ ಪಶ್ಚಿಮ ಅಥವಾ ದಕ್ಷಿಣದ ಬದಿಯಲ್ಲಿರಬೇಕು. ಆಗ ಅವರು ಪೂರ್ವ ಹಾಗೂ ಉತ್ತರ ದಿಕ್ಕಿಗೆ ಮುಖ ಮಾಡಿ ಪಾಠ ಮಾಡಲು ಅನುಕೂಲಕರವಾಗುವುದು. ಹೀಗೆ ವ್ಯವಸ್ಥೆಗೊಳಿಸುವುದರಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಿ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು.
ವಿದ್ಯಾರ್ಥಿಗಳಿಗೆ ಆಟೋಟದ ಬಯಲು ಉತ್ತರ ಅಥವಾ ಪೂರ್ವದಲ್ಲಿ ನಿರ್ಮಿಸಬೇಕು. ಒಟ್ಟಾರೆಯಾಗಿ ಜ್ಞಾನಕಾರಕ ಹಾಗೂ ಶ್ರೇಯಸ್ಸನ್ನು ಅನುಗ್ರಹಿಸುವ ರವಿ, ಬುಧ, ಗುರು ಮತ್ತು ಶುಕ್ರ ಮಹಾಗ್ರಹಗಳ ಅನುಗ್ರಹ ವಿದ್ಯಾಸಂಸ್ಥೆಯ ಮೇಲೆ ಸಂಪೂರ್ಣವಾಗಿ ಇರಬೇಕು. ಅವರ ಅಧಿಪತ್ಯಕ್ಕೆ ಒಳಪಡುವ ದಿಕ್ಕುಗಳಿಗೆ ಯಾವುದೇ ನ್ಯೂನ್ಯತೆ ಉಂಟಾಗಬಾರದು. ಕೊರತೆಯಾದಲ್ಲಿ ನಿರೀಕ್ಷಿತ ಫಲಿತಾಂಶ ದೊರಕಲಾರದು. ಎಲ್ಲವೂ ಸರಿಯಾಗಿದ್ದು, ನಿರ್ಮಾಣ ವಾಸ್ತು ಶಾಸ್ತ್ರಕ್ಕೆ ಅನುಗುಣವಾಗಿ ಆದಲ್ಲಿ ವಿದ್ಯಾಮಂದಿರ ಜ್ಞಾನದೇಗುಲ ಆಗುವುದರಲ್ಲಿ ಯಾವುದೇ ಸಂಶಯ ಬೇಡ.
-ಜೆ.ಕೆ. ಜೈನ್
ನವರತ್ನ ಮಾಲಿಕೆ: ಶತ್ರು ನಾಶಕ್ಕೆ ಹವಳ
ಆಭರಣಗಳೊಂದಿಗೆ ರತ್ನಗಳನ್ನು ಬೆಸೆದು ಧಾರಣೆ ಮಾಡುವುದು ನಮ್ಮ ಸಂಪ್ರದಾಯಗಳಲ್ಲಿ ಒಂದು. ರತ್ನ ಧಾರಣೆಯಿಂದ ಆರೋಗ್ಯ ಸುಧಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ. ಜ್ಯೋತಿಷ್ಯಶಾಸ್ತ್ರ ರೀತ್ಯ ಒಂಬತ್ತು ಗ್ರಹಗಳಿರುವಂತೆ ಗ್ರಹಗಳ ವರ್ಣಧಾತುವಿಗೆ ಸಂಬಂಧಿಸಿದಂತೆ ರತ್ನಗಳಿವೆ. ನಾವು ಈಗಾಗಲೇ ಮುತ್ತು ಮತ್ತು ಮಾಣಿಕ್ಯವನ್ನು ಧಾರಣೆ ಮಾಡುವುದರಿಂದ ಆಗುವ ಪ್ರಯೋಜನಗಳನ್ನು ತಿಳಿದುಕೊಂಡಿದ್ದೇವೆ. ನಾವಿಂದು ಹವಳದ ಬಗ್ಗೆ ತಿಳಿದುಕೊಳ್ಳೋಣ.
ಹವಳವನ್ನು ಆಂಗ್ಲಭಾಷೆಯಲ್ಲಿ ಕೋರಲ್ ಎಂದು ಕರೆಯುತ್ತಾರೆ. ಹವಳವು ಸಮುದ್ರದಲ್ಲಿ ವಾಸಿಸುವ ಅಕಶೇರುಕಗಳಿಂದ ಸಿಗುತ್ತದೆ. ಈ ಬಗೆಯ ಅಕಶೇರುಕಗಳು ಉಷ್ಣವಲಯದಲ್ಲಿರುವ ಸಾಗರಗಳಲ್ಲಿ ವಾಸಿಸುತ್ತವೆ. ತಮ್ಮ ಅಸ್ಥಿಗಳಿಂದ ಕ್ಯಾಲ್ಷಿಯಂ ಕಾರ್ಬನೇಟ್ ರಾಸಾಯನಿಕವನ್ನು ಸ್ರವಿಸುತ್ತವೆ. ಕೆಂಪು ಹವಳಗಳು ನಳಿಕೆಯಂತೆ ಒಂದಕ್ಕೊಂದು ಕೂಡಿಕೊಂಡಿರುತ್ತವೆ. ಹವಳದಲ್ಲಿ ಕೆಂಪು ಹವಳಕ್ಕೆ ಹೆಚ್ಚು ಪ್ರಾಶಸ್ತ್ಯ. ಇನ್ನುಳಿದಂತೆ ಗುಲಾಬಿ ಬಣ್ಣದಲ್ಲೂ ಲಭ್ಯವಾಗುತ್ತದೆ. ಹವಳವನ್ನು ಲತಾಮಹ, ಅಂಗಾರಕಮಣಿ, ರಕ್ತಾಂಗ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಸಮುದ್ರದಲ್ಲಿ ಸಿಗುವ ಹವಳಗಳ ತೂಕ ಅಷ್ಟಾಗಿ ಇರುವುದಿಲ್ಲ. ಮೇಲಾಗಿ ಅಸಲಿ ಹವಳವನ್ನು ನೆಲ ಅಥವಾ ಯಾವುದೇ ಹೊರಮೈಗೆ ಉಜ್ಜಿದಾಗ ಶಬ್ದ ಬರುವುದಿಲ್ಲ.
ಹವಳದ ವಿಧಗಳು :
ಹವಳವನ್ನು ವರ್ಣಗಳ ಆಧಾರದ ಮೇಲೆ ವಿಂಗಡಿಸಲಾಗಿದೆ.
1. ಬ್ರಾಹ್ಮಣ ಹವಳ : ರಕ್ತದಂತೆ ಕೆಂಪಾಗಿರುತ್ತದೆ.
2. ಕ್ಷತ್ರಿಯ ಹವಳ : ಸಿಂಧೂರ ವರ್ಣವುಳ್ಳದ್ದಾಗಿದ್ದು ಗಡುಸಾಗಿರುತ್ತದೆ.
3 ವೈಶ್ಯ ಹವಳ : ಹಳದಿ ಅಥವಾ ಗುಲಾಬಿ ಬಣ್ಣವನ್ನು ಹೊಂದಿರುತ್ತದೆ. ಅಷ್ಟೇನು ಕಾಂತಿಯುಕ್ತವಾಗಿರುವುದಿಲ್ಲ.
4. ಶೂದ್ರ ಹವಳ : ಕಮಲದ ಬಣ್ಣವನ್ನು ಹೊಂದಿದ್ದು ಕಠಿಣವಾಗಿರುತ್ತದೆ.
ಯಾರು ಧರಿಸಿದರೆ ಶುಭ?
ಹವಳವು ಮಂಗಳ (ಕುಜ) ಗ್ರಹವನ್ನು ಪ್ರತಿನಿಧಿಸುತ್ತದೆ. ಯಾರ ಜಾತಕದಲ್ಲಿ ಕುಜನು ಶುಭಸ್ಥಾನದಲ್ಲಿರುತ್ತಾನೋ ಅಂತಹವರು ಹವಳವನ್ನು ಧರಿಸಿದರೆ ಶುಭಪ್ರದವಾಗುತ್ತದೆ.
1. ಮೇಷ ರಾಶಿ : ಮೇಷರಾಶಿಯವರಿಗೆ ಕುಜನು ರಾಶ್ಯಾಧಿಪತಿಯಾಗಿದ್ದಾನೆ. ಹಾಗಾಗಿ ಈ ರಾಶಿಯವರು ಹವಳವನ್ನು ಧರಿಸುವುದರಿಂದ ಆಯಸ್ಸು ವೃದ್ಧಿ, ಉತ್ತಮ ಆರೋಗ್ಯ, ಕೀರ್ತಿಯನ್ನು ಪಡೆಯುತ್ತಾರೆ.
2. ಕಟಕ ರಾಶಿ : ಕಟಕ ರಾಶಿಯವರಿಗೆ ಕುಜನು 5 ಮತ್ತು 10 ಸ್ಥಾನದ ಅಧಿಪತಿಯಾಗಿರುತ್ತಾನೆ. ಕಟಕ ರಾಶಿಯ ರಾಶ್ಯಾಧಿಪತಿ ಚಂದ್ರ. ಚಂದ್ರ ಮತ್ತು ಕುಜ ಮಿತ್ರರು. ಕಟಕರಾಶಿಯವರು ಹವಳವನ್ನು ಧರಿಸುವುದರಿಂದ ಒಳ್ಳೆಯ ಫಲಗಳನ್ನು ಪಡೆಯುತ್ತಾರೆ. ಸಂತಾನ ಲಾಭ, ಯಶಸ್ಸು, ಕೀರ್ತಿ ಲಭ್ಯವಾಗುತ್ತದೆ.
3. ಸಿಂಹ ರಾಶಿ : ಸಿಂಹ ರಾಶಿಯವರಿಗೆ ಕುಜನು 4 ಮತ್ತು 9ನೇ ಮನೆಯ ಅಧಿಪತಿಯಾಗಿದ್ದಾನೆ. ಸಿಂಹರಾಶಿಯ ರಾಶ್ಯಾಧಿಪತಿ ರವಿ. ರವಿ ಮತ್ತು ಕುಜ ಸ್ನೇಹಿತರು. ಸಿಂಹರಾಶಿಯವರು ಹವಳ ಧರಿಸುವುದರಿಂದ ಮಾನಸಿಕ ಶಾಂತಿ, ಭೂಮಿ, ಗೃಹ ಲಾಭವನ್ನು ಪಡೆಯುವರು. ಇನ್ನುಳಿದಂತೆ ಕಳತ್ರ ಸೌಖ್ಯ, ಮಾತೃ ಭಾಗ್ಯ, ಯಶಸ್ಸು ಲಭಿಸುವುದು.
4 ವೃಶ್ಚಿಕ ರಾಶಿ : ವೃಶ್ಚಿಕರಾಶಿಯ ರಾಶ್ಯಾಧಿಪತಿ ಕುಜ. ಈ ರಾಶಿಯವರು ಹವಳವನ್ನು ಧರಿಸುವುದರಿಂದ ಆಯುರ್ ವೃದ್ಧಿ, ಆರೋಗ್ಯ ಭಾಗ್ಯ, ಕೀರ್ತಿ ಲಭಿಸುವುದು.
5. ಧನಸ್ಸು ರಾಶಿ : ಧನಸ್ಸು ರಾಶಿಯವರಿಗೆ ಕುಜನು 5 ಮತ್ತು 12ನೇ ಮನೆಯ ಅಧಿಪತಿಯಾಗುತ್ತಾನೆ. ಧನಸ್ಸು ರಾಶಿಯ ರಾಶ್ಯಾಧಿಪತಿ ಗುರು. ಗುರು ಮತ್ತು ಕುಜ ಮಿತ್ರರು. ಆದ್ದರಿಂದ ಈ ರಾಶಿಯವರು ಹವಳವನ್ನು ಧರಿಸಬಹುದು. ಸಂತಾನ, ಆರೋಗ್ಯ ಲಾಭಗಳು ಉಂಟಾಗುತ್ತವೆ. ಅದರಲ್ಲೂ ಕುಜದೆಸೆ ನಡೆಯುವಾಗ ಹವಳದ ಉಂಗುರ ಧರಿಸುವುದರಿಂದ ಹೆಚ್ಚಿನ ಲಾಭ ಸಿಗುತ್ತದೆ.
6. ಮಕರ ರಾಶಿ : ಮಕರ ರಾಶಿಯವರಿಗೆ ಕುಜನು 4 ಮತ್ತು 11ನೇ ಮನೆಯ ಅಧಿಪತಿಯಾಗಿದ್ದಾನೆ. ಮಕರ ರಾಶಿಯ ಅಧಿಪತಿ ಶನಿ. ಶನಿ ಮತ್ತು ಕುಜ ಸಮಾನರು. ಹಾಗಾಗಿ ಈ ರಾಶಿಯವರು ಹವಳವನ್ನು ಧರಿಸುವುದರಿಂದ ಸಾಧಾರಣ ಫಲವನ್ನು ನಿರೀಕ್ಷಿಸಬಹುದು.
7. ಮೀನ ರಾಶಿ : ಮೀನರಾಶಿಯವರಿಗೆ ಕುಜನು 2 ಮತ್ತು 9ನೇ ಮನೆಯ ಅಧಿಪತಿಯಾಗಿದ್ದಾನೆ. ಮೀನರಾಶಿಯ ಅಧಿಪತಿ ಗುರುವಾಗಿದ್ದಾನೆ. ಕುಜನಿಗೆ ಗುರು ಮಿತ್ರನಾಗಿರುವುದರಿಂದ ಹವಳ ಧರಿಸುವುದರಿಂದ ಉತ್ತಮ ಫಲಗಳನ್ನು ನಿರೀಕ್ಷಿಸಬಹುದು.
ಧಾರಣೆ ಹೇಗೆ?
ಹವಳವನ್ನು ಹಸುವಿನ ಹಾಲಿನಲ್ಲಿ ಮಂಗಳವಾರ ಸ್ವಲ್ಪ ಕಾಲ ನೆನೆ ಹಾಕಬೇಕು. ನಂತರ ಹವಳವನ್ನು ಕೆಂಪು ಅಕ್ಷತೆ, ಕುಂಕುಮ, ಕೆಂಪು ಕಣಗಿಲ ಹೂವಿನಿಂದ ಪೂಜಿಸಬೇಕು. ನಂತರ ಕುಜ ದೇವರ ಪ್ರೀತ್ಯರ್ಥವಾಗಿ ಓಂ ಕುಜಾಯ ನಮಃ ಎಂಬ ಮಂತ್ರವನ್ನು ಏಳು ಸಾವಿರ ಬಾರಿ ಜಪಿಸಬೇಕು. ನಂತರವಷ್ಟೇ ಹವಳದ ಉಂಗುರವನ್ನು ಧರಿಸಬೇಕು.
-ಮಂಡಗದ್ದೆ ಪ್ರಕಾಶ್ ಬಾಬು
ದಾಂಪತ್ಯದಲ್ಲಿ ಹೊಂದಾಣಿಕೆಗೆ ರಜ್ಜು ಕೂಟ
'ನೋಡ್ರಿ ಹೇಗಾಯ್ತು ಅವರ ಸಂಸಾರ! ಇನ್ನೂ ಮದುವೆಯಾಗಿ ಆರು ತಿಂಗಳಾಗಿಲ್ಲ... ಕೇದಾರನಾಥದಲ್ಲಿ ಕಟ್ಟಡ ಉರುಳಿದಂತೆ ಉರುಳಿ ಹೋಯ್ತಲ್ರಿ' ಶಾಲಿನಿ ಪಕ್ಕದ ಮನೆಯವರ ಜತೆ ಒಂದೇ ಸಮನೆ ಗೊಣಗ್ತಾ ಇದ್ದಳು .
ಅಲ್ರೀ ಅವರಿಗೇನಾಗಿತ್ತು.. ಮೊದಲೇ ಜೋಯಿಸ್ರ ಕುಟುಂಬದವರು... ಸರಿಯಾಗಿ ಜಾತಕ ತೋರ‌್ಸಿ ಮದುವೆ ಆಗಬಾರದಿತ್ತಾ! ಅದೇನೋ ಹೇಳ್ತಾರಲ್ಲಾ ... ಗ್ರಹ ಸಾಮ್ಯತೆ ಇರ‌್ಲಿಲ್ವೇನೋ! ಅದೇನೋ ಅಂದ್ರು ನಮ್ ಮಲ್ಲಿ... ಒಳ್ಳೇ ಮಲ್ಲಿಗೆಯಂತ ಹುಡುಗಿ ಕಣ್ರಿ. ಅವಳ ಬಾಳು ಹೀಗಾಗಬಾರದಿತ್ತು... ಛೇ... ಕಮಲಮ್ಮನದು ಅದೇ ವ್ಯಂಗ್ಯನೋಟ.
ಇಲ್ರೀ.. ಕಮಲಮ್ಮ, ಅವರೂ ಜಾತಕ ತೋರಿಸಿ, ಅದೇನೋ ಕವಡೆ ಪ್ರಶ್ನೆ, ಮನೆ ದೇವರ ಮುಂದೆ ನಂದಾದೀಪದ ಪ್ರಶ್ನೆ ಇಟ್ಟ ನಂತರವೇ ಮುಂದುವರಿದದ್ದು... ಈ ಜಾತಕ, ಜ್ಯೋತಿಷ್ಯ ಅವರಿಗೇನು ಹೊಸದಲ್ಲ ಬಿಡಿ.... ಅಷ್ಟೆಲ್ಲಾ ನೋಡಿದ್ರೂ ,,,,, ಶಾಲಿನಿಯದು ಮತ್ತದೇ ರಾಗ.
ಹೌದು, ಈಚಿನ ದಿನಗಳಲ್ಲಿ ವಧು-ವರರ ಜನ್ಮಕುಂಡಲಿಗಳು ಕೂಡಿಬಂದು ವಿವಾಹ ಆದರೂ, ವಿವಾಹ ಸಂಬಂಧ ಮುರಿದು ಬೀಳುತ್ತಿವೆ. ಒಂದಾಗ ಬೇಕಿದ್ದ ಕುಟುಂಬಗಳು ಪರಸ್ಪರ ಬೇರೆ ಬೇರೆಯಾಗುತ್ತಿವೆ. ಸತಿ-ಪತಿಯರು ದೂರವಾಗುತ್ತಿದ್ದಾರೆ. ಪ್ರತಿನಿತ್ಯ ಇಂತಹ ಅನೇಕ ಪ್ರಸಂಗಗಳು ನಮ್ಮ ಮುಂದೆ ಕಾಣಿಸುತ್ತಿವೆ. ಯಾಕೆ ಹೀಗಾಯ್ತು? ಅಂತ ಕೊರಗೋ ಬದಲು ಮತ್ತೊಮ್ಮೆ ಜಾತಕ ಪರಿಶೀಲಿಸಿ. ವಧೂ-ವರರ ರಜ್ಜುಕೂಟದಲ್ಲಿ ಸಾಮ್ಯತೆ ಇದೆಯೇ ಎಂದು ನೋಡಿ. ಇದನ್ನೇ ಕಾಲ ಪ್ರಕಾಶಕ ಗ್ರಂಥದಲ್ಲಿ, 'ರಜ್ಜುರ್ ಮಾಂಗಲ್ಯ ವೃದ್ಧಿಶ್ಚ' ಎಂದು ಉಲ್ಲೇಖಿಸಲಾಗಿದೆ.
ಏನಿದು ರಜ್ಜುಕೂಟ?
ಗ್ರಹ ಕೂಟಗಳಿಗೆ ಇರುವಂತೆ ಇದಕ್ಕೆ ಅಂಕ ಇಲ್ಲ. 27 ನಕ್ಷತ್ರಗಳನ್ನು ಕಾಲ ಪ್ರಕಾಶಕ ಅಂಗಾಂಗಳ ರೂಪದಲ್ಲಿ ತೋರಿಸಲಾಗಿದೆ. ಆ ಅಂಗಾಂಗಳೇ ಪಾಕ, ಕಟಿ, ಉದರ, ಕಂಠ ಮತ್ತು ಶಿರಗಳಾಗಿವೆ. ಆ ವಿವರಗಳನ್ನು ಕೆಳಗೆ ಕೊಡಲಾಗಿದೆ.
ಪಾದ : ಅಶ್ವಿನಿ, ಆಶ್ಲೇಷ, ಮಖ, ಜ್ಯೇಷ್ಠ, ಮೂಲ ಮತ್ತು ರೇವತಿ
ಕಟಿ (ಸೊಂಟ) : ಭರಣಿ, ಪುಷ್ಯ, ಪುಬ್ಬ, ಅನುರಾಧಾ, ಪೂರ್ವಾಷಾಢ ಮತ್ತು ಉತ್ತರಾಭಾದ್ರ
ಉದರ (ಹೊಟ್ಟೆ) : ಕೃತ್ತಿಕೆ, ಪುನರ್ವಸು, ಉತ್ತರೆ, ವಿಶಾಖ, ಉತ್ತಾರಾಷಾಢ ಮತ್ತು ಪೂರ್ವಾಭಾದ್ರ
ಕಂಠ (ಕುತ್ತಿಗೆ) : ರೋಹಿಣಿ, ಆರಿದ್ರಾ, ಹಸ್ತ, ಸ್ವಾತಿ, ಶತಭಿಷ
ಶಿರ ( ತಲೆ) : ಮೃಗಶಿರ, ಚಿತ್ತ ಮತ್ತು ಧನಿಷ್ಠ
ಆಗುವ ತೊಂದರೆಯೇನು?
ವಧೂ-ವರರ ರಜ್ಜು ಒಂದೇ ಇರಬಾರದು. ಅಂತಹವರು ಪರಸ್ಪರ ಜಗಳವಾಡುತ್ತಾರೆ. ಶಿರ ರಜ್ಜು ಇದ್ದರೆ ಪತಿಗೆ ಮಾರಕ. ಕಂಠ ರಜ್ಜುವಿದ್ದರೆ ಪತ್ನಿಗೆ ಮಾರಕ, ಉದರ ರಜ್ಜುವಿದ್ದರೆ ಸಂತಾನ ಹೀನತೆ, ಕಟಿ ರಜ್ಜು ಇದ್ದರೆ ಬಡತನ, ಪಾದರಜ್ಜು ಇದ್ದರೆ ಸತಿ-ಪತಿಯರಿಬ್ಬರೂ ಉದ್ಯೋಗದಲ್ಲಿದ್ದರೆ ಬೇರೆ ಬೇರೆ ಊರುಗಳಲ್ಲಿರುತ್ತಾರೆ. ಇಬ್ಬರೂ ಒಂದಾಗುವುದು ಅಪರೂಪ.
ಶಾಸ್ತ್ರ ಸಮ್ಮತ ವಿಷಯ
ಆದರೆ ಕೆಲವೊಂದು ವಿಷಯದಲ್ಲಿ ರಜ್ಜು ಒಂದೇ ಇದ್ದರೂ ಕೂಡಿ ಬರುತ್ತದೆ. ಸತಿ-ಪತಿಯರ ನಕ್ಷತ್ರ, ರಾಶಿ ಒಂದೇ ಆಗಿದ್ದರೆ, ಸಮ ಸಪ್ತದಲ್ಲಿದ್ದರೆ, ಗ್ರಹ ಮಿತ್ರತ್ವವಿದ್ದರೆ ವಿವಾಹವನ್ನು ಮಾಡಬಹುದು ಎಂದು ಕಾಲ ಪ್ರಕಾಶಕ ಗ್ರಂಥದಲ್ಲಿ ಹೇಳಲಾಗಿದೆ. ಅದೇ ರೀತಿ ರಾಶಿ, ಗ್ರಹ ಮಿತ್ರತ್ವ, ದಿನಕೂಟ ಮತ್ತು ಮಹೇಂದ್ರ ಕೂಟಗಳಲ್ಲಿ ಸಾಮ್ಯತೆ ಕಂಡು ಬಂದರೂ, ರಜ್ಜುಕೂಟದಲ್ಲಿ ದೋಷವಿದ್ದರೂ ಪರವಾಗಿಲ್ಲ. ಈ ಅಂಶವನ್ನು ಮುಹೂರ್ತ ದರ್ಪಣ ಗ್ರಂಥದಲ್ಲಿ ನೋಡಬಹುದು.
ಫಲಾಫಲಗಳು
ಆದರೆ ಇತ್ತೀಚೆಗಿನ ವಿಜ್ಞಾನ ಆಧಾರದಂತೆ ಕೆಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಪಾದದ ನಕ್ಷತ್ರದವರಿಗೆ ಸಾಡೇಸಾತ್ ಕಂಡು ಬಂದಾಗ, ವಿನಾಕಾರಣ ತಿರುಗಾಟ ಕಂಡು ಬರುತ್ತದೆ. ನೌಕರ ವರ್ಗದವರಾಗಿದ್ದರೆ ವರ್ಗಾವಣೆ ಸನ್ನಿಹಿತವಾಗುತ್ತದೆ. ಅಂತೆಯೇ ಕಟಿ ವರ್ಗಕ್ಕೆ ಸೇರಿದ ನಕ್ಷತ್ರದವರಿಗೆ ನಕ್ಷತ್ರ ದಶಾ ಕಾಲದಲ್ಲಿ ಸೊಂಟ ನೋವು ಉಂಟಾಗುತ್ತದೆ. ಉದರ ವರ್ಗಕ್ಕೆ ಸೇರಿದ ನಕ್ಷತ್ರದವರಿಗೆ, ಮಹಿಳೆಯರಾದರೆ ಜನನ ಕಾಲದಲ್ಲಿ ಕಷ್ಟ ಉಂಟಾಗುತ್ತದೆ. ಕಂಠ ವರ್ಗಕ್ಕೆ ಸೇರಿದ ನಕ್ಷತ್ರದವರಿಗೆ ಗ್ರಹದೋಷವಿದ್ದ ಕಾಲದಲ್ಲಿ ಗಂಟಲು, ಥೈರಾಯ್ಡ್ ಸಂಬಂಧ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಶಿರ ಸಂಬಂಧ ನಕ್ಷತ್ರದವರಿಗೆ ಕುಜರಾಹು ಸಂಧಿಕಾಲದಲ್ಲಿ ಅವಘಡ ಉಂಟಾಗಿ ತಲೆಗೆ ಪೆಟ್ಟು ತಗಲುವ ಸಾಧ್ಯತೆ ಹೆಚ್ಚು.
ಪರಿಹಾರ ಹೇಗೆ?
ರಜ್ಜು ಕೂಟ ದೋಷ ಪರಿಹಾರಕ್ಕಾಗಿ ಹಿಂದೂ ಧರ್ಮೀಯರು ಬುಧವಾರ ವಿಷ್ಣು ಸಹಸ್ರನಾಮ ಪಠಿಸಬೇಕು. ಜೈನರಾದರೆ, ಪ್ರತಿನಿತ್ಯ ಭಕ್ತಾಂಗುರ ಪೂಜೆ ಮಾಡಬೇಕು. ಇತರ ಧರ್ಮೀಯರಾದರೆ, ನವರತ್ನ ಉಂಗುರವನ್ನು ಮಧ್ಯದ ಬೆರಳಿನಲ್ಲಿ ಧರಿಸುವುದರಿಂದ ಫಲ ಕಾಣಬಹುದು. ಪುರುಷರು ಬಲಗೈಯಲ್ಲಿ ಧರಿಸಬೇಕು, ಸ್ತ್ರೀಯರು ಎಡಗೈಯಲ್ಲಿ ಧರಿಸುವುದು ಒಳ್ಳೆಯದು. ನವರತ್ನ ಉಂಗುರ ಧರಿಸುವಾಗ ನೀಲರತ್ನ ಮೇಲ್ಬದಿಯಲ್ಲಿರುವಂತೆ ನೋಡಿಕೊಳ್ಳಬೇಕು.
-ರತ್ನರಾಜ್ ಜೈನ್
ನವರತ್ನ ಮಾಲಿಕೆ: ಕುಟುಂಬ ಶಾಂತಿಗೆ ಪಚ್ಚೆ
ಹಸಿರು ಶಾಂತಿಯ ಸಂಕೇತ. ಹಸಿರು ನಮ್ಮ ಜೀವನದ ಉಸಿರಾಗಬೇಕು. ಆ ಪ್ರಕೃತಿಯೊಡನೆ ನಾವು ಮೈಮರೆಯಬೇಕು. ನವರತ್ನಗಳಲ್ಲಿ ನಾಲ್ಕನೆಯದಾದ ಪಚ್ಚೆ ಯ ಬಣ್ಣ ಹಸಿರು. ಪಚ್ಚೆಯನ್ನು ಧರಿಸುವುದರಿಂದ ಮನಸ್ಸಿಗೆ ನೆಮ್ಮದಿ ಉಂಟಾಗುತ್ತದೆ. ಮನಸ್ಸಲ್ಲಿ ನೆಮ್ಮದಿ ಮನೆ ಮಾಡಿದಾಗ, ಕುಟುಂಬದಲ್ಲಿ ಶಾಂತಿ ತಾನಾಗೇ ಹರಡುತ್ತದೆ.
ಪಚ್ಚೆಯ ರೂಪ
ಪಚ್ಚೆ ಷಡ್ಬುಜಾಕಾರದಲ್ಲಿರುತ್ತದೆ. ಹಸಿರು ವರ್ಣದ್ದಾಗಿದೆ. ನವಗ್ರಹಗಳಲ್ಲಿ ಬುಧ ಗ್ರಹದ ಅಧಿಪತಿ. ಬೇರುಂಡ ಎಂಬ ಪಚ್ಚೆ ಹೆಚ್ಚು ಪ್ರಸಿದ್ಧವಾಗಿದೆ. ಆದರೆ ಇದರ ಬೆಲೆ ಅಧಿಕ. ಇನ್ನುಳಿದಂತೆ ಮಾರುಕಟ್ಟೆಯಲ್ಲಿ ಹಳದಿ ಮಿಶ್ರಿತ ಪಚ್ಚೆಗಳು ಹೆಚ್ಚಾಗಿ ಸಿಗುತ್ತವೆ. ಇವುಗಳ ಬೆಲೆ ಅಷ್ಟೇನು ದುಬಾರಿಯಲ್ಲ. ಪಚ್ಚೆಗೆ ಮರಕತ, ಪಾಚಿ, ಹರಿತಮಣಿ, ಗರಲಾರಿ ಎಂಬ ಹೆಸರುಗಳಿವೆ.
ಬಗೆ ಬಗೆ ಪಚ್ಚೆ
ಪಚ್ಚೆಗಳಲ್ಲಿ ನಾಲ್ಕು ವಿಧಗಳಿವೆ. ಅದೆಂದರೆ 1. ಬ್ರಾಹ್ಮಣ ಪಚ್ಚೆ - ಇದರ ಬಣ್ಣ ಶಿರೀಷ ಪುಷ್ಪದಂತಿರುತ್ತದೆ.
2. ಕ್ಷತ್ರಿಯ ಪಚ್ಚೆ - ಹಸಿರು ಬಣ್ಣ 3. ವೈಶ್ಯ ಪಚ್ಚೆ - ಹಳದಿ ಮತ್ತು ಹಸಿರು ಮಿಶ್ರಿತವಾಗಿರುತ್ತದೆ. 4. ಶೂದ್ರ ಪಚ್ಚೆ : ಕಡು ಹಸಿರು ಅಥವಾ ಶ್ಯಾಮಲ ವರ್ಣದಲ್ಲಿರುತ್ತದೆ. ಅಮೆರಿಕದಲ್ಲಿ ಪಚ್ಚೆಗೆ ಬಕ್ಸ ಎನ್ನುತ್ತಾರೆ. ಆಫ್ರಿಕಾದಲ್ಲಿ ಲಭ್ಯವಿರುವ ಪಚ್ಚೆಗಳು ಶ್ಯಾಮಲ ವರ್ಣದಲ್ಲಿರುತ್ತವೆ. ಆದರೆ ಬ್ರೆಜಿಲ್‌ನಲ್ಲಿ ಲಭ್ಯವಿರುವ ಪಚ್ಚೆ ಹರಳು ಹಳದಿ ಮಿಶ್ರಿತವಾಗಿರುತ್ತವೆ.
ಪತ್ತೆ ಹೇಗೆ?
ಮಾರುಕಟ್ಟೆಯಲ್ಲಿ ಸಾಕಷ್ಟು ನಕಲಿ ಪಚ್ಚೆಗಳು ಲಭ್ಯವಿವೆ. ಶುದ್ಧ ಪಚ್ಚೆ ಎಂದು ನಿರ್ಣಯಿಸಲು ಪಚ್ಚೆಯ ಹರಳನ್ನು ಬಿಳಿಯ ಬಟ್ಟೆಯ ಮೇಲಿಡಬೇಕು. ಆಗ ಪಚ್ಚೆಯ ಬೆಳಕಿಗೆ ಬಟ್ಟೆಯೂ ಹಸಿರು ಬಣ್ಣದಂತೆ ಕಂಡರೆ ಅದು ಶುದ್ಧವಾದ ಹರಳು ಎಂದರ್ಥ. ನಕಲಿ ಪಚ್ಚೆಗಳು ಗಾಜಿನಂತೆ ಹೊಳೆಯುತ್ತವೆ.
ಯಾರಿಗೆ ಶುಭ?
ವೃಷಭ : ವೃಷಭ ರಾಶಿಯ ಅಧಿಪತಿ ಶುಕ್ರ. ಬುಧನಿಗೆ ಶುಕ್ರ ಮಿತ್ರನಾದ್ದರಿಂದ ವೃಷಭ ರಾಶಿಯವರು ಧರಿಸಬಹುದು.
ಮಿಥುನ : ಮಿಥುನ ರಾಶಿಯ ಅಧಿಪತಿ ಬುಧ. ಹಾಗಾಗಿ ಈ ರಾಶಿಯವರು ಪಚ್ಚೆಯನ್ನು ಧರಿಸುವುದರಿಂದ ಆಯಸ್ಸು ವೃದ್ಧಿಯಾಗುತ್ತದೆ, ಮಾತೃವರ್ಗದಿಂದ ಲಾಭ, ವಾಹನ ಯೋಗ, ವಿಶೇಷ ಧನಲಾಭ ಉಂಟಾಗುತ್ತದೆ.
ಸಿಂಹ : ಸಿಂಹ ರಾಶಿಯ ಅಧಿಪತಿ ರವಿ. ಬುಧನಿಗೆ ರವಿ ಮಿತ್ರ. ಹಾಗಾಗಿ ಪಚ್ಚೆ ಧರಿಸುವುದರಿಂದ ಸಂತಾನ ಸುಖ, ಧನಲಾಭ, ಹೆಚ್ಚಿನ ಕೀರ್ತಿ ಉಂಟಾಗುತ್ತದೆ.
ಕನ್ಯಾ : ಬುಧನೇ ರಾಶ್ಯಾಧಿಪತಿ. ಹಾಗಾಗಿ ಬುಧ ದೆಸೆಯಲ್ಲಿ ಪಚ್ಚೆ ಧರಿಸಿದರೆ ಹೆಚ್ಚಿನ ಲಾಭ. ಆರೋಗ್ಯ ಭಾಗ್ಯ ಉಂಟಾಗುವುದು.
ತುಲಾ : ರಾಶ್ಯಾಧಿಪತಿ ಶುಕ್ರ. ಬುಧ, ಶುಕ್ರ ಸ್ನೇಹಿತರು. ಹಾಗಾಗಿ ಈ ರಾಶಿಯವರು ಪಚ್ಚೆಯನ್ನು ಧರಿಸಬಹುದು.
ಮಕರ : ರಾಶ್ಯಾಧಿಪತಿ ಶನಿ. ಬುಧ, ಶನಿ ಸ್ನೇಹಿತರು. ಹಾಗಾಗಿ ಈ ರಾಶಿಯವರು ಪಚ್ಚೆಯನ್ನು ಧರಿಸಬಹುದು.
ಕುಂಭ : ಅಧಿಪತಿ ಶನಿಯಾದ್ದರಿಂದ ಪಚ್ಚೆ ಧರಿಸಬಹುದು.
ಧಾರಣೆ ಹೇಗೆ?
ಪಚ್ಚೆಯನ್ನು ಬುಧವಾರ ಧರಿಸಬೇಕು. ಪಚ್ಚೆ ಉಂಗುರವನ್ನು ಹಸಿರು ವಸ್ತ್ರದ ಮೇಲಿರಿಸಿ, ಹಸಿರು ಗಂಧ, ಹಸಿರು ಅಕ್ಷತೆ, ಹಸಿರು ಬಣ್ಣದ ಧೂಪದಿಂದ ಪೂಜಿಸಬೇಕು. ಉಂಗುರ ಧಾರಣೆಗೆ ಮುನ್ನ 'ಓಂ ಬುಂ ಬುಧಾಯ ನಮಃ' ಎಂಬ ಮಂತ್ರವನ್ನು 1700 ಬಾರಿ ಜಪಿಸಬೇಕು. ಪಚ್ಚೆಯ ಉಂಗುರವನ್ನು ಬಲಗೈಯ ಕನಿಷ್ಠ ಬೆರಳಿಗೆ ಧರಿಸುವುದು ಉತ್ತಮ.
ಬ್ಯಾಕ್‌ಪೇನ್‌ಗೆ ಭಯ ಬೇಡ
ಕುಳಿತರೂ ನಿಂತರೂ ಕಾಡುವ ಬೆನ್ನುನೋವು ಹಿಂಡಿ ಹಿಪ್ಪೆ ಮಾಡಿ ಬಿಡುತ್ತದೆ. ಅಂದಾಜಿನ ಪ್ರಕಾರ, ಇತ್ತೀಚಿಗೆ ಶೇ. 80ರಷ್ಟು ಜನ ಬೆನ್ನುನೋವಿನಿಂದ ನರಳುತ್ತಿದ್ದಾರೆ.
ತೀರ ಸಾಮಾನ್ಯವಾದ ಲಕ್ಷಣಗಳನ್ನೊಳಗೊಂಡ ಬೆನ್ನುನೋವು ಬಗ್ಗಿ ಏನಾದರೂ ಕೆಲಸ ಮಾಡುವಾಗ, ಭಾರ ಎತ್ತುವಾಗ, ಅಂಕುಡೊಂಕಾದ ರಸ್ತೆಗಳಲ್ಲಿ ವಾಹನ ಚಾಲಿಸುವಾಗ, ನೃತ್ಯ ಮಾಡುವಾಗ ಒಮ್ಮಿಂದೊಮ್ಮೆ ಬೆನ್ನು ಹಿಡಿದುಕೊಂಡಂತಾಗಿ ನೋವು ಕಾಣಿಸಬಹುದು.
ಕಾರಣ
ಬೆನ್ನುಹುರಿಯ ಮಣಿ ಶಿರದಲ್ಲಾಗುವ ತೊಂದರೆ, ಊತ, ಕ್ಷಯ, ಗುಲ್ಮ, ಬೆನ್ನು ಮೂಳೆ ಸವೆತ, ಕೆಲಸದ ಒತ್ತಡ, ಅತಿಯಾದ ಶ್ರಮ, ಸೊಟ್ಟದಾಗಿ ಕುಳಿತುಕೊಳ್ಳುವುದು, ಒಮ್ಮಿಂದೊಮ್ಮೆ ಹೊರಳಾಡುವುದು, ಬಾಗುವುದು, ವಯಸ್ಸು ಹೆಚ್ಚಾದಂತೆ ಸಂದು ಸವೆತ, ಮೂಳೆ ಸವೆತ, ಆಶಕ್ತತೆ, ಧೂಮಪಾನ, ಮದ್ಯಪಾನ, ಮಾದಕ ದ್ರವ್ಯ ಸೇವನೆ, ಸದಾ ಸುತ್ತುವ ಯಂತ್ರಗಳಲ್ಲಿ ಕೆಲಸ ಮಾಡುವುದು, ಖಿನ್ನತೆ, ಸ್ಥೂಲತೆ ಮೊದಲಾದವು ಬೆನ್ನು ನೋವು ಉಂಟಾಗಲು ಸಾಮಾನ್ಯ ಕಾರಣಗಳು.
ತೀವ್ರ ಸ್ವರೂಪದ ಬೆನ್ನುನೋವಿಗೆ ಉಳುಕು, ಬೆನ್ನು ಹುರಿಯ ಹಾನಿ, ಮೂಳೆ ಮುರಿತ, ಸ್ನಾಯು ಅಸ್ಥಿರಜ್ಜುಗಳು ಹರಿಯುವಿಕೆಯಿಂದಾಗುವ ಬಾವು, ಅಪಘಾತ, ಸವಕಳಿ, ಸೋಂಕು, ಕ್ಷಯರೋಗ, ಮಣಿಶಿರಗಳಲ್ಲಿರುವ ಪದರು ಸರಿಯುವುದು ಕಾರಣ.
ವಿಶೇಷವಾಗಿ ಸ್ತ್ರೀಯರಲ್ಲಿ ಕಂಡು ಬರುವ ಬೆನ್ನುನೋವಿಗೆ ಮನೆಯಲ್ಲಿ ಅತಿಯಾದ ಕೆಲಸ, ಅತಿಯಾದ ಲೈಂಗಿಕತೆ, ಗರ್ಭಾವಸ್ಥೆ, ಶಸ್ತ್ರ ಚಿಕಿತ್ಸೆ, ಅತಿಯಾದ ಋತುಸ್ರಾವ, ಬಿಳಿ ಸೆರಗು, ಪೌಷ್ಠಿಕ ಆಹಾರ ಕೊರತೆ,ಕ್ಯಾಲ್ಷಿಯಂ, ಜೀವಸತ್ಯ ಕೊರತೆ ಇತ್ಯಾದಿಗಳು ಮುಖ್ಯ ಕಾರಣ.
ಹೋಮಿಯೋಪಥಿಯಲ್ಲಿ ಬೆನ್ನುನೋವಿಗೆ ಉತ್ತಮ ಚಿಕಿತ್ಸೆಯಿದ್ದು, ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ಕೊಡಲಾಗುವುದು. ಸಾಮಾನ್ಯ ನೋವು ಬಂದಾಗ ಹಿತವೆನಿಸಿದ ಭಂಗಿಯಲ್ಲಿ ನಿಲ್ಲುವುದು, ಕೂರುವುದು ಇಲ್ಲವೇ ಮಲಗುವುದು, ನೋವಿನ ಜಾಗಕ್ಕೆ ಮಂಜುಗಡ್ಡೆ ಇಟ್ಟುಕೊಳ್ಳುವುದು, ವಿಶ್ರಾಂತಿ ತೆಗೆದುಕೊಳ್ಳವುದು ನೋವು ನಿವಾರಣೆಗೆ ಸಹಕಾರಿ.
ಡಾ. ಮುರಳಿ(ಎಂ.ಡಿ. ಹೋಮಿಯೋ)
ಸ್ಟಾರ್ ಹೋಮಿಯೋಪಥಿ, ಬೆಂಗಳೂರು, ಜಯನಗರ, ಮಲ್ಲೇಶ್ವರಂ, ಹುಬ್ಬಳ್ಳಿ, ಮಂಗಳೂರು,
8792338888/8792334444
ವಿಷಕ್ಕೆ ಮನೆಮದ್ದು ಅಮೃತ
ಮಳೆಗಾಲ ಅಂದರೆ ಮೈ ಮನ ಮುದುಡಿ ಕೂರುತ್ತದೆ. ವಾತಾವರಣದಲ್ಲಾಗುವ ಬದಲಾವಣೆ ಒಂದಿಷ್ಟು ರೋಗಗಳನ್ನು ಹೊತ್ತು ತರುತ್ತದೆ.
ಇದೇ ಮಳೆ ವಿಷಜಂತುಗಳ ಉಪಟಳ ಹೆಚ್ಚಿಸುತ್ತದೆ. ಒಮ್ಮೊಮ್ಮೆ ಇವು ಮನುಷ್ಯರನ್ನು ಅಪಾಯಕ್ಕೆ ಸಿಲುಕಿಸುತ್ತವೆ.
ಮನೆಯೊಳಗೆ ನುಸುಳುವ ಇವು ಇದ್ದಕ್ಕಿದ್ದಂತೆ ಹಾಸಿಗೆ, ದಿಂಬು ಬೆಚ್ಚನೆ ಬಟ್ಟೆಗಳಲ್ಲಿ ಅಡಗಿ ಕುಳಿತು ಅರಿವಾಗದಂತೆ ತಮ್ಮ ಮೊನಚಾದ ಹಲ್ಲುಗಳನ್ನು ಬೆರಳ ತುದಿಗೋ ಇನ್ನೆಲ್ಲೋ ಊರಿಬಿಡುತ್ತವೆ. ಇದರಿಂದಾಗುವ ನೋವು ಸಹಿಸಲು ಅಸಾಧ್ಯ. ಅಷ್ಟೆ ಅಲ್ಲ , ವಿಷ ದೇಹದೊಳಗೆ ಸೇರಿ ಜೀವವನ್ನೇ ಬಲಿ ತೆಗೆದುಕೊಳ್ಳುತ್ತದೆ. ವಿಷಜಂತುಗಳ ಕಡಿತಕ್ಕೆ ಒಳಗಾದಾಗ ತಕ್ಷಣ ಚಿಕಿತ್ಸೆ ಪಡೆಯಬೇಕು. ವೈದ್ಯರ ತನಕ ಹೋಗುವ ಮೊದಲು ಮನೆಮದ್ದು ಟ್ರೈ ಮಾಡಿ.
ಬಾಳೆ ದಿಂಡಿನ ರಸ ತೆಗೆದು ಇದರಿಂದ ಒಂದೊಂದು ಔನ್ಸಿ ನಷ್ಟು ರಸವನ್ನು 5 ನಿಮಿಷಗಳಿಗೊಮ್ಮೆ ಸೇವಿಸುತ್ತಿದ್ದರೆ ಹಾವಿನ ವಿಷ ಇಳಿಯುತ್ತದೆ.
ಹಾವು ಕಚ್ಚಿದ ಭಾಗದಿಂದ ಸ್ವಲ್ಪ ರಕ್ತವನ್ನು ಹೊರಗೆ ತೆಗೆದು ಗಾಯವಾದ ಭಾಗದಲ್ಲಿ ಎಕ್ಕೆ ಗಿಡದ ಹಾಲನ್ನು ಎಡಬಿಡದೇ ಹಾಕುವುದರಿಂದ ಮತ್ತು ಎಳೆಯ ಎಲೆಗಳನ್ನು ತಿನ್ನುವುದರಿಂದ ವಿಷ ಮೇಲಕ್ಕೇರುವುದಿಲ್ಲ.
ನೇರಳೆಗಿಡದ ಎರಡುಮೂರು ಎಲೆಗಳನ್ನು ನೀರಿನೊಡನೆ ಅರೆದು ರಸ ಸೇವಿಸುವುದರಿಂದ ಹಾವಿನ ವಿಷ ಇಳಿಯುತ್ತದೆ.
ಮುತ್ತುಗದ ಬೇರಿನ ತೊಗಟೆಯನ್ನು ಕುಟ್ಟಿ ಅರೆದು ಶುಂಠಿಯ ಕಷಾಯದೊಡನೆ ಸೇವಿಸಬೇಕು.
ಬೇರುಸಹಿತವಾಗಿ ಕಿರುಕಸಾಲೆ ಸೊಪ್ಪಿನ ಗಿಡವನ್ನು ಅಕ್ಕಿ ತೊಳೆದ ನೀರಿನಲ್ಲಿ ಅರೆದು ಶೋಧಿಸಿ 15 ನಿಮಿಷಗಳಿಗೊಮ್ಮೆ 10-10 ಗ್ರಾಂ ನಂತೆ ಕುಡಿಸುತ್ತಿರುವುದರಿಂದ
ಉಗ್ರ ಸರ್ಪದ ವಿಷವೂ ಶಾಂತವಾಗುತ್ತದೆಯಂತೆ.
ಚೇಳು ಕಚ್ಚಿದಲ್ಲಿ 'ಗ್ರ್ಯಾಮಫೋನ್ ರೆಕಾರ್ಡ್'ನ ತುಂಡೊಂದನ್ನು ಕಲ್ಲಿನ ಮೇಲೆ ಸ್ವಲ್ಪ ಸೇರಿಸಿ ತೇದು ಗಾಯಕ್ಕೆ ಹಚ್ಚುವುದರಿಂದ ಗುಣವಾಗುತ್ತದೆ.
ಹಸಿಯಾಗಿರುವ ಗರಿಕೆ ಹುಲ್ಲನ್ನು ತುಪ್ಪದೊಂದಿಗೆ ಅರೆದು ತಿಕ್ಕುವುದರಿಂದ ಚೇಳಿನ ವಿಷವು ಗುಣವಾಗುವುದು.
ನಿಂಬೆರಸದಲ್ಲಿ ಉಪ್ಪು ಕಲಕಿ ಹಚ್ಚುವುದರಿಂದ ವಿಷವು ಕಮ್ಮಿಯಾಗುವುದು.
ತುಳಸಿ ಎಲೆ ಅಥವಾ ವೀಳ್ಯದೆಲೆ ಮತ್ತು ಉಪ್ಪು ಸೇರಿಸಿ ಅರೆದು ಲೇಪಿಸಿದರೆ ಚೇಳು ಕಡಿತಕ್ಕೆ ಒಳ್ಳೆಯದು.
ನವಸಾಗರ ಮತ್ತು ಸುಣ್ಣವನ್ನು ಕಲಸಿ ಮೂಗಿಗೆ ಮೂಸಿ ನೋಡುತ್ತಿದ್ದರೆ ಚೇಳಿನ ವಿಷ ತಕ್ಷಣಕ್ಕೆ ಇಳಿಯುತ್ತದೆ.
ಪ್ರಿಯಾ. ಎಂ. ಭಟ್
ಮೂಲವ್ಯಾಧಿಯ ಮೂಲ ಅರಿಯಿರಿ
ಚಾಲಕರು, ಗರ್ಭಿಣಿಯರು ಹಾಗೂ ಮಲಬದ್ಧತೆ ಉಂಟಾದಾಗ ಮೂಲವ್ಯಾಧಿ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಇದನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಅದಕ್ಕೆ ಹೋಮಿಯೋಪಥಿಯಲ್ಲಿ ಸೂಕ್ತವಾದ ಚಿಕಿತ್ಸೆ ಇದೆ. ಹಾಗಾದರೆ ಮೂಲವ್ಯಾಧಿ ಎಂದರೇನು, ರೋಗಲಕ್ಷಣ ಹಾಗೂ ಚಿಕಿತ್ಸೆ ಬಗ್ಗೆ ಇಲ್ಲಿದೆ ವಿವರ.
ಸಾಮಾನ್ಯ ಭಾಷೆಯಲ್ಲಿ ಹೇಳುವ ಹೇಮರೊರೈಟ್ಸ್ ಅನ್ನು ಪೈಲ್ಸ್ ಅಥವಾ ಮೂಲವ್ಯಾಧಿ ಎಂದು ಕರೆಯುತ್ತೇವೆ.
ಇವುಗಳು ಗುದದ್ವಾರದಲ್ಲಿ ಹಿಗ್ಗಿದ ರಕ್ತನಾಳಗಳು. ಇವು ಸಣ್ಣ ಕಾಂಡ, ಉನ್ನತ, ಮಧ್ಯಮ ಮತ್ತು ಕೆಳಮಟ್ಟದ ಗುದನಾಳದ ರಕ್ತನಾಳದಲ್ಲಿ ರೂಪುಗೊಂಡಿರುತ್ತದೆ.
ಇದನ್ನು ಒಳ ಹಾಗೂ ಹೊರ ಭಾಗ ಎಂದು ಎರಡು ವಿಧಗಳಾಗಿ ವಿಂಗಡಿಸಲಾಗಿದೆ. ಒಳಭಾಗ ಅಂದರೆ ಗುದದ್ವಾರದ ಒಳಗೆ ಹಾಗೂ ಗುದದ್ವಾರದ ರಂಧ್ರದಲ್ಲಿ ಕಾಣಿಸುತ್ತದೆ. ಇದು ಒಳ ಚರ್ಮದಿಂದ ಮುಚ್ಚಲ್ಪಟ್ಟಿದ್ದು ಕಡು ಕೆಂಪು ಅಥವಾ ನೇರಳೆ ಬಣ್ಣ ಹೊಂದಿರುತ್ತದೆ. ಗುದನಾಳದ ವರ್ತುಲದಿಂದ ಆರಂಭವಾಗಿ ಡೆಂಟೆಟ್ ಲೈನ್‌ನಲ್ಲಿ ಅಂತ್ಯವಾಗುತ್ತದೆ.
ಹೊರ ಭಾಗದ ಮೂಲವ್ಯಾಧಿ ಗುದದ್ವಾರದ ರಂಧ್ರದ ಹೊರಗೆ ಕಾಣಿಸುತ್ತದೆ. ಇದು ಚರ್ಮದಿಂದ ಸುತ್ತುವರಿದಿರುತ್ತದೆ. ಹೊರಭಾಗದ ಮೂಲವ್ಯಾಧಿ ಎರಡು ಷರತ್ತುಗಳಿಗೆ ಸಂಬಂಧಿಸಿದೆ.
1.ಗುದ ಅಂಚಿನಲ್ಲಿ ರಕ್ತನಾಳಗಳು ಜಡ ಜೀವನದ ವ್ಯಕ್ತಿಗಳಲ್ಲಿ ಕೆಲವೊಮ್ಮೆ ವಿಶೇಷವಾಗಿ ಸೆಳೆತದಿಂದಾಗಿ ಕಾಣಬಹುದು.
2.ಗುದದ್ವಾರದ ಹೊರಭಾಗದ ಹೊಮೊಟೊಮಾ ಅಥವಾ ಥ್ರೋಮ್‌ಬೋಸ್ಡ್‌ನ ಹೊರಗೆ ಪೈಲ್ಸ್ ಕಾಣಿಸಬಹುದು.
ಕಾರಣಗಳು
1. ವಂಶಪರಂಪರೆ: ಕುಟುಂಬದ ಸದಸ್ಯರಿಗೆ ಈ ಸಮಸ್ಯೆ ಇದ್ದರೆ ವಂಶಪಾರಂಪರರ್ಯವಾಗಿ ಬರುವ ಸಾಧ್ಯತೆ ಇದೆ.
2. ಅಂಗರಚನಾ ಶಾಸ್ತ್ರ: ಇದು ಆಂತರಿಕ ಮೂಲವ್ಯಾದಿ. ಮಾನವನ ಮಾನವ ಭಂಗಿಯಿಂದಾಗಿ ಸ್ವಾಭಾವಿಕ ಪರಿಣಾಮ ರೂಪಾಂತರವಾಗಿದೆ ಎಂದು ಸೂಚಿಸಲಾಗಿದೆ.
3.ಅನುಪಸ್ಥಿತಿಯ ಕವಾಟುಗಳಲ್ಲಿ ಶ್ರೇಷ್ಠ ಮೂಲವ್ಯಾಧಿಯ ರಕ್ತನಾಳಗಳು, ಗುದದ 10 ಸೆ.ಮೀ ಮೇಲ್ಭಾಗದಲ್ಲಿ ಗುದಾನಾಳದ ಸ್ನಾಯುಗಳು ಇವೆ. ಅದರ ಮೇಲೆ ರಕ್ತನಾಳಗಳು ಹಾದು ಹೋಗುತ್ತವೆ. ಮಲವಿಸರ್ಜನೆ ಸಮಯದಲ್ಲಿ ರಕ್ತನಾಳದ ಮುಚ್ಚುವಿಕೆ ಮತ್ತು ದಟ್ಟಣೆ ಆಗುತ್ತದೆ.
4.ಅಚ್ಚರಿದಾಯಕ ಕಾರಣ:ಮಲಬದ್ಧತೆ ಉಂಟಾದಾಗ ಅದನ್ನು ಹೊರಹಕುವಾಗ ಅಭಿಧಮನಿ ನರ ತಂತುಗಳ ಜಾಲ ಹಿಗ್ಗುತ್ತದೆ. ಒಂದು ಅಭಿಧಮನಿ ನರತಂತುಗಳ ಹಿಗ್ಗುವ ಜತೆಗೆ ಭಾಗಶಃ ಕರುಳಿನ ಚಲನೆ ಉಂಟಾಗುತ್ತದೆ.ಕೊಲೈಟಿಸ್, ಭೇದಿ, ಎಂಟೆರಿಟಿಸ್ ಮೊದಲಾದವುಗಳು ಸುಪ್ತವಾದ ಮೂಲವ್ಯಾಧಿಯನ್ನು ಉಲ್ಬಣಗೊಳಿಸಬಹುದು.
5. ಶಾರೀರಿಕ ಕಾರಣ: ಗುದನಾಳದ ವ್ಯಾಪಕ ಅಭಿಧಮನಿ ಪ್ಲೆಕ್ಸಸ್ ಶರೀರ ವೈಜ್ಞಾನಿಕ ಎಂದು ಇತ್ತೀಚೆಗೆ ವೈದ್ಯರು ಪರಿಗಣಿಸಿದ್ದಾರೆ. ಈ ರೋಗಲಕ್ಷಣವನ್ನು ಮೂಲವ್ಯಾಧಿ ಪ್ಲೆಕ್ಸಸ್ ಎಂದು ಕರೆಯಲಾಗುತ್ತದೆ. ವಾಸ್ತವವಾಗಿ ಉತ್ಥಾಪಕವು (್ಚಟ್ಟಟ್ಠ ್ಚಛ್ಟ್ಞಿಟಠ್ಠಞ) ನೇರವಾಗಿ ಅಪಧಮಿನಿಗೆ ಸಂಪರ್ಕ ಹೊಂದಿದೆ.ೀ ಪ್ಲೆಕ್ಸಸ್‌ಅನ್ನು ಉತ್ಥಾಪಕ ಗುದನಾಳ ಎನ್ನಲಾಗುತ್ತದೆ. ಇದು ಗುದನಾಳದ ಮೇಲಿನ ಮೂರನೇ ಒಂದು ಸಾಮಾನ್ಯ ಅಂಗವಾಗಿದೆ. ಈ ಹೈಪರ್ಪ್ಲಾಸಿಯ ಮೂಲವ್ಯಾಧಿಯ ಸ್ತರಗಳ ಊತ ಮತ್ತು ಮೂಲವ್ಯಾಧಿಯಿಂದಾಗಿ ಉನ್ನತ ಮಟ್ಟದಲ್ಲಿ ಅಪಧಮನಿಯ ಉತ್ಪಾದನೆಯನ್ನು ನಿಯಂತ್ರಿಸಲು ಯಾಂತ್ರಿಕ ವೈಫಲ್ಯ ಉಂಟಾಗಬಹುದು.
6 ಡಯಟ್: ನಾರಿನಂಶ ಕಡಿಮೆ ಇರುವ ಪಾಶ್ಚಮಾತ್ಯ ಆಹಾರವು ಮೂಲವ್ಯಾಧಿ ರಚನೆಯನ್ನು ಪ್ರಚೋದನೆ ಮಾಡಬಹುದು. ನಾರಿನಂಶ ಹೆಚ್ಚಿರುವ ಆಹಾರ ಸೇವಿಸಿದಾಗ ಮೂಲವ್ಯಾಧಿಯನ್ನು ತಡೆಗಟ್ಟಬಹುದು.
ಎರಡನೇ ವಿಧದ ಮೂಲವ್ಯಾಧಿ: ಕೆಲವು ಕಾಯಿಲೆಗಳಿಗೆ ನೀಡುವ ಚಿಕಿತ್ಸೆಯೂ ಮೂಲವ್ಯಾಧಿಗೆ ಕಾರಣವಾಗಬಹುದು.
*ಉದಾಹರಣೆಗೆ ಕಾರ್ಸಿನೋಮಾ, ಗುದದ್ವಾರದ ಕ್ಯಾನ್ಸರ್ ಅಭಿಧಮನಿಗಳನ್ನು ಕುಗ್ಗಿಸಿ ಮೂಲವ್ಯಾಧಿ ಉಂಟು ಮಾಡುತ್ತದೆ.
*ಗರ್ಭಾವಸ್ಥೆ ಹಾಗೂ ಗರ್ಭಾಶಯದ ಗಡ್ಡೆಗಳು ಗುದನಾಳವನ್ನು ಕುಗ್ಗಿಸುತ್ತದೆ.
*ಗಂಭೀರ ಮಲಬದ್ಧತೆ
*ಮೂತ್ರ ವಿಸರ್ಜನೆ ಕಷ್ಟ:ಮೂತ್ರ ವಿಸರ್ಜನಾ ನಾಳದ ಆಕ್ಷೇಪಣೆ ಅಥವಾ ಪುರುಷರ ಜನನೇಂದ್ರಿಯ ಹಿಗ್ಗಿದಾಗ ಒಳ ಹೊಟ್ಟೆ ದೊಡ್ಡದಾಗುತ್ತದೆ ಮತ್ತು ಗುದನಾಳದ ರಕ್ತನಾಳದ ಅಭಿಧಮಿನಯಲ್ಲಿ ಒತ್ತಡ ಹೆಚ್ಚಾಗಿ ಮೂಲವ್ಯಾಧಿ ರೂಪ ಪಡೆಯುತ್ತದೆ.
*ಅಧಿಕ ಒತ್ತಡ ಕೂಡ ಕೆಲವೊಮ್ಮೆ ಕಾರಣವಾಗಬಹುದು.
ರೋಗ ಲಕ್ಷಣ ಶಾಸ್ತ್ರ: ಫ್ರೋಟೋಸ್ಕೋಪ್ ಮೂಲಕ ಒಳಗಿನ ಮೂಲವ್ಯಾಧಿ ಕಾಣಿಸುತ್ತದೆ ಮತ್ತು ಇದನ್ನು ಮೂರು ವಿಧಗಳಾಗಿ ವಿಂಗಡಿಸಬಹುದು. ದೇಹದ ಒಳಗಿನ ಮೂಲವ್ಯಾಧಿ ಹಾಗೂ ಹೊರಭಾಗದ ಮೂಲವ್ಯಾಧಿಯೊಂದಿಗೆ ಸೇರಿಕೊಂಡಿರುವುದು. ಪ್ರತಿ ಒಳಭಾಗದ ಪೈಲ್ ಸಣ್ಣ ಕಾಂಡವನ್ನು ಗುದನಾಳದಲ್ಲಿ ಹೊಂದಿದ್ದು, ಇದು ಗುದನಾಳದ ಸ್ವಲ್ಪ ಮೇಲ್ಭಾಗದಲ್ಲಿ ಇರುತ್ತದೆ.
ರೋಗ ಲಕ್ಷಣ
*ಪ್ರಾಥಮಿಕ ಲಕ್ಷಣವೆಂದರೆ ರಕ್ತಸ್ರಾವ. ಇದು ಕಡು ಕೆಂಪು, ನೋವು ರಹಿತ, ಮಲ ವಿಸರ್ಜನೆ ಜತೆಗೆ ರಕ್ತ ಹೋಗುತ್ತದೆ. ರೋಗಿಗಳು ಎರಚಿದ ರೀತಿಯಲ್ಲಿ ಮಲ ವಿಸರ್ಜನೆ ಆಗುತ್ತದೆ ಎನ್ನುತ್ತಾರೆ. ಕೆಲವು ಸಂದರ್ಭದಲ್ಲಿ ದಪ್ಪಗಾದ ಲೋಳೆ ಪೊರೆಯು ಕೆಳಗೆ ಜಾರುತ್ತದೆ.
* ಮುಂದಿನ ಲಕ್ಷಣ ಹೊರಕ್ಕೆ ಬರುವುದು.
* ನೋವು, ಹೆಪ್ಪುಗಟ್ಟುವಿಕೆ, ಬಿರುಕುವಿಕೆಯಿಂದ ಉರಿ ಉಂಟಾಗುತ್ತದೆ.
*ಪ್ರಮುಖ ರೋಗಲಕ್ಷಣವೆಂದರೆ ಲೋಳೆ ವಿಸರ್ಜನೆ. ಇದು ಲೋಳೆಯ ಪೊರೆಯಿಂದ ಉಂಟಾಗುತ್ತದೆ. ಹೀಗಾಗಿ ಲೋಳೆ ವಿಸರ್ಜನೆಯಾಗುತ್ತದೆ.
*ದೀರ್ಘಾವಧಿಯ ಮೂಲವ್ಯಾಧಿಯಲ್ಲಿ ನಿರಂತರವಾಗಿ ರಕ್ತ ಸ್ರಾವವಾಗುವುದರಿಂದ ರಕ್ತಹೀನತೆ ಉಂಟಾಗುತ್ತದೆ.
ವಿಪರೀತ ನಾರಿನಿಂದ ತುಂಬಿದ ಅಂಗಾಂಶ ರಚನೆಯು ಒಳ ಭಾಗದ ಮೂಲವ್ಯಾಧಿಯನ್ನು ಹೆಪ್ಪುಗಟ್ಟುವಂತೆ ಮಾಡುತ್ತದೆ . ಒಳ ಭಾಗದ ಮೂಲವ್ಯಾಧಿಗೆ ಹೋಲಿಸಿದಾಗ ಹೊರ ಭಾಗದ ಮೂಲವ್ಯಾಧಿಯಲ್ಲಿ ವಿಪರೀತ ನಾರಿನಿಂದ ತುಂಬಿದ ಅಂಗಾಂಶ ರಚನೆಯು ಸಹಜ.
ಚಿಕಿತ್ಸೆ
ಕರುಳನ್ನು ನಿಯಂತ್ರಣದಲ್ಲಿಡುವ ಮೂಲಕ ರೋಗವನ್ನು ಹತೋಟಿಯಲ್ಲಿಡಬಹುದು. ಆದರೆ ಒಂದು ಬಾರಿ ಮೂಲವ್ಯಾಧಿ ಉಂಟಾದರೆ ಸುಲಭವಾಗಿ ಕೈಗೊಳ್ಳಬಹುದಾದ ಪ್ರಕ್ರಿಯೆಗಳಿಲ್ಲ. ಇದನ್ನು ಗುರುತಿಸುವ ಬದಲು ನಿಯಂತ್ರಣದಲ್ಲಿಡಬೇಕು. ಪ್ರಥಮ ಹಂತದಲ್ಲಿ ಕರುಳನ್ನು ನಿಯಂತ್ರಣದಲ್ಲಿಡುವುದು ಅತ್ಯಗತ್ಯ.
*ಕರುಳಿನ ನಿಯಂತ್ರಣ:ಮೂಲವ್ಯಾಧಿಯ ಲಕ್ಷಣವೆಂದರೆ ಆಯಾಸದಿಂದ ವಿಪರೀತ ಮಲವಿಸರ್ಜನೆಯಾಗುವುದನ್ನು ತಪ್ಪಿಸಬೇಕು.
ಪಥ್ಯಾಹಾರ ಮತ್ತು ಸೌಮ್ಯವಾಗಿ ಮಲ ವಿಸರ್ಜನೆ ಮಾಡಿ ಎಂದು ಸಲಹೆ ನೀಡಬಹುದು.
* ಆ ಭಾಗಕ್ಕೆ ಎಣ್ಣೆಯನ್ನು ಹಚ್ಚಿಕೊಂಡರೆ ಊತ ಮತ್ತು ತುರಿಕೆ ಶಮನವಾಗುತ್ತದೆ.
ಹೋಮಿಯೋಪಥಿ ಚಿಕಿತ್ಸೆ
ದೀರ್ಘಕಾಲಿನ ಕಾಯಿಲೆಗಳಿಗೆ ಹೋಮಿಯೋಪಥಿಯು ಶಾಶ್ವತ ಚಿಕಿತ್ಸೆಯನ್ನು ನೀಡುತ್ತದೆ. ರೋಗಿಯ ರೋಗ ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ರೋಗಿಯ ಕುಟುಂಬ ಹಿನ್ನೆಲೆ, ವೈಯಕ್ತಿಕ ಹಿನ್ನೆಲೆ ಮತ್ತು ಆತನ ವರ್ತನೆ ಮತ್ತು ಔಷಧಕ್ಕೆ ಆತ ಪ್ರತಿಕ್ರಿಯಿಸುವ ರೀತಿಯನ್ನು ಗಮನದಲ್ಲಿಟ್ಟುಕೊಂಡು ಪರಿಹಾರವನ್ನು ಸೂಚಿಸಲಾಗುತ್ತದೆ.
ಮೂಲವ್ಯಾಧಿ ಶಸ್ತ್ರ ಚಿಕಿತ್ಸೆ ಮಾಡಬಹುದಾದ ಕಾಯಿಲೆ, ಒಳ್ಳೆಯ ಚಿಕಿತ್ಸೆ ಅಂದರೆ ಔಷಧಗಳನ್ನು ನೀಡುವುದು. ಹೋಮಿಯೋಪಥಿಗೆ ರೋಗವನ್ನು ಪತ್ತೆ ಹಚ್ಚುವ ಅಥವಾ ರೋಗದ ಹೆಸರನ್ನು ತಿಳಿಯುವ ಅಗತ್ಯವಿಲ್ಲ. ಇದು ಕಾನ್‌ಸ್ಟಿಟ್ಯೂಷನಲ್ ಚಿಕಿತ್ಸೆ ಮೂಲಕ ಬಗೆಹರಿಸುತ್ತದೆ.
ಋತುಚಕ್ರದ ಸಾಮಾನ್ಯ ಅರಿವು
ಸಾಮಾನ್ಯವಾಗಿ ಹೆಣ್ಣುಮಕ್ಕಳು ಪ್ರೌಢಾವಸ್ಥೆಗೆ ಬರುತ್ತಿರುವಾಗ ಋತುಚಕ್ರದ ಬಗ್ಗೆ ಕುತೂಹಲ ಇರುತ್ತದೆ. ಹೆಣ್ಣುಮಕ್ಕಳು ಯಾವಾಗ ಋತುಮತಿಯಾಗುತ್ತಾರೆ, ಹೇಗೆ ಸ್ವಚ್ಛತೆ ಕಾಪಾಡಬೇಕು ಎಂಬ ಬಗ್ಗೆ ಇಲ್ಲಿ ವಿವರಿಸಲಾಗಿದೆ.
* ಸಾಮಾನ್ಯವಾಗಿ 10-13 ವರ್ಷದಲ್ಲಿ ಋತುಮತಿಯಾಗುತ್ತಾರೆ. ಕೆಲವರು ಬೇಗನೆ 9 ವರ್ಷಕ್ಕೆ ಅಥವಾ ತಡವಾಗಿ 16 ವಯಸ್ಸಿಗೆ ಆಗುತ್ತಾರೆ. ಇದೊಂದು ನಿಸರ್ಗ ಪ್ರಕ್ರಿಯೆ ಮತ್ತು ಋತುಚಕ್ರ ಅವಧಿಯಲ್ಲಿ ಯಾವುದೇ ಸಮಸ್ಯೆಯಿಲ್ಲದೆ ಜೀವನ ಸಾಗಿಸಬಹುದು.
* ಸರಾಸರಿ 28 ದಿನಗಳಿಗೊಮ್ಮೆ ಮುಟ್ಟು ಆಗುತ್ತದೆ. ಅದರಲ್ಲಿ ಐದು ದಿನ ಆಚೀಚೆ ಆಗಬಹುದು.
* ಈ ಅವಧಿ 2-7ದಿನ ಇರುತ್ತದೆ. ಸರಾಸರಿ ಐದು ದಿನ.
* ಒಂದು ಋತುಚಕ್ರಕ್ಕೆ 1/2 ಕಪ್ ರಕ್ತ (25-80 ಎಂಎಲ್) ಹೋಗುತ್ತದೆ.
* ಒಂದಷ್ಟು ಕಿರಿಕಿರಿ ಹಾಗೂ ಮುಟ್ಟಿಗೆ ಮೊದಲು ಒತ್ತಡ ಕಂಡುಬರಬಹುದು.
* ಮಹಿಳೆ ಗರ್ಭ ಧರಿಸಿಲ್ಲ ಎಂಬುದಕ್ಕೆ ಮುಟ್ಟು ಒಂದು ಸೂಚನೆ.
ಹೇಗೆ ಸ್ವಚ್ಛತೆ ಕಾಪಾಡುವುದು?
* ಪ್ರತಿನಿತ್ಯ ಸ್ನಾನ ಮಾಡಬೇಕು.
* ರಕ್ತವು ದುರ್ವಾಸನೆಯಿಂದ ಕೂಡಿರುವುದರಿಂದ ಜನನೇಂದ್ರಿಯವನ್ನು ನಿಯಮಿತವಾಗಿ ತೊಳೆಯಬೇಕು.
* ಸಾನಿಟರಿ ಪ್ಯಾಡ್ ಅಥವಾ ಬಟ್ಟೆಯನ್ನು ದಿನಕ್ಕೆ ಎರಡು ಸಾರಿಯಾದರೂ ಬದಲಾಯಿಸಬೇಕು.
* ಮನೆಯಲ್ಲಿಯೇ ಮಾಡಿದ ಬಟ್ಟೆಯ ನ್ಯಾಪಿಕನ್ ಉಪಯೋಗಿಸುವುದಾದರೆ ಅದನ್ನು ಸೋಪು ಮತ್ತು ನೀರು ಹಾಕಿ ಚೆನ್ನಾಗಿ ತೊಳೆದು ಬಿಸಿಲು, ಗಾಳಿಯಲ್ಲಿ ಒಣಗಿಸಬೇಕು.
* ಸಾನಿಟರಿ ಪ್ಯಾಡ್ ಅನ್ನು ಬೇರೆ ಪೇಪರ್‌ನಲ್ಲಿ ಸುತ್ತಿ ಮುಚ್ಚಳವಿರುವ ಕಸದಬುಟ್ಟಿಗೆ ಹಾಕಬೇಕು ಮತ್ತು ಶೌಚಾಲಯದೊಳಗೆ ಹಾಕಿ ನೀರು ಹಾಕುವುದು ಸರಿಯಲ್ಲ.
ಕುತ್ತಿಗೆ ನೋವಿಗೆ ಪರಿಹಾರ
ವರ್ಟಿಬ್ರೆಗಳ ಸವೆತದಿಂದ ಉಂಟಾಗುವ ತೊಂದರೆಯನ್ನು cervical spondy losis ಅಥವಾ ಕತ್ತು ನೋವಿನ ಸಮಸ್ಯೆ ಎಂದು ಕರೆಯುತ್ತೇವೆ. ವಯಸ್ಸು ಹೆಚ್ಚಾದಾಗ ಕುತ್ತಿಗೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ನಮ್ಮ ಕುತ್ತಿಗೆ ಭಾಗದಿಂದ (spinal) ಸ್ಪೈನಲ್ (verlibrae)ವರ್ಟಿಬ್ರೆಗಳು ಆಕಾರದಲ್ಲಿ ಇರುತ್ತವೆ. ಇವು ಮಾಂಸಖಂಡಗಳು, ಸ್ನಾಯುಗಳಿಂದ ಮಾರ್ಪಾಡುಗೊಂಡಿರುತ್ತದೆ. ಮಾಂಸಖಂಡಗಳಲ್ಲಿ ತೊಂದರೆಯಾಗಿ, ಸ್ನಾಯುಗಳು ತಮ್ಮ ಪ್ರಬಲತೆಯನ್ನು ಕಳೆದುಕೊಂಡಾಗ ಕುತ್ತಿಗೆ ನೋವಿನ ಸಮಸ್ಯೆ ಉಂಟಾಗುತ್ತದೆ.
ಸಾಮಾನ್ಯವಾಗಿ 10ರಲ್ಲಿ 9 ಜನರಲ್ಲಿ ಕುತ್ತಿಗೆ ನೋವು ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಮುಖ್ಯವಾಗಿ 60 ವರ್ಷದ ವಯಸ್ಸಿನ ಆಸುಪಾಸಿನಲ್ಲಿರುವವರಲ್ಲಿ, ಈ ಕತ್ತು ನೋವಿನ ಸಮಸ್ಯೆ ಹೆಚ್ಚು.
ಕುತ್ತಿಗೆ ನೋವಿನ ಸಮಸ್ಯೆಯ ಪ್ರಮುಖ ಲಕ್ಷಣಗಳೆಂದರೆ ಕುತ್ತಿಗೆಯಲ್ಲಿ ಸೆಳೆತ ಮತ್ತು ಹಿಡಿತ, ತಲೆನೋವು, ಕೆಲವೊಮ್ಮೆ ಕುತ್ತಿಗೆಯಲ್ಲಿ ನರಗಳ ಸೆಳೆತ ಉಂಟಾಗುತ್ತದೆ. ಅದರಿಂದ ನೋವಿನ ಸಾಂಧ್ರತೆ ಹೆಚ್ಚಾಗಿ ಸೆಳೆತದ ನೋವು ನಮ್ಮ ಭುಜಗಳು ಮತ್ತು ಕೈಗಳವರೆಗೂ ಸಂಚರಿಸಿ, ತೊಂದರೆ ಉಂಟು ಮಾಡುತ್ತದೆ. ಮರಗಟ್ಟುವಿಕೆ ಒಂದು ಮುಖ್ಯ ರೋಗದ ಲಕ್ಷಣವಾಗಿದ್ದು, ಕುತ್ತಿಗೆ ನೋವು ಸಂಚರಿಸಿದಾಗ, ಸ್ಪರ್ಶ ಜ್ಞಾನ ಕಡಿಮೆಯಾಗುವ ಲಕ್ಷಣಗಳು ಹೆಚ್ಚಾಗುತ್ತವೆ.
ಕತ್ತು ನೋವಿನ ಸಮಸ್ಯೆಯಲ್ಲಿ ಹೋಮಿಯೋಪಥಿ ಚಿಕಿತ್ಸೆಯ ಗುಣಮಟ್ಟದ, ಅಡ್ಡಪರಿಣಾಮಗಳಿಲ್ಲದ, ಔಷಧಗಳು ದೊರೆಯುತ್ತವೆ. ಈ ಚಿಕಿತ್ಸೆಯಲ್ಲಿ ನೋವಿನ ಸಾಂಧ್ರತೆ ಕಡಿಮೆ ಮಾಡಿ ಕೊಡುವುದರ ಜತೆಗೆ ನೋವಿನ ಹಿಡಿತವನ್ನು ಕೆಲವೇ ದಿನಗಳಲ್ಲಿ, ಸಂಪೂರ್ಣವಾಗಿ ಪರಿಹಾರ ಕಂಡುಕೊಳ್ಳಬಹುದು. ದೀರ್ಘಕಾಲಿಕವಾಗಿ ಈ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಚೇತರಿಕೆಯ ಗುಣಮಟ್ಟವು ನಿಧಾನವಾಗಿ ಕಾಣಿಸುತ್ತದೆ.
ಈ ಸಮಸ್ಯೆ ಬಾರದಂತೆ ತಡೆಗಟ್ಟಲು ಅನುಸರಿಸಬೇಕಾದ ಮುಂಜಾಗ್ರತೆ ಕ್ರಮಗಳೆಂದರೆ ಕುಳಿತುಕೊಳ್ಳುವ ಮತ್ತು ಮಲಗುವ ಆಸನ ಕ್ರಮಬದ್ಧವಾಗಿರಬೇಕು. ವಾಹನಗಳು ಓಡಿಸುವಾಗ ಮುಂಜಾಗ್ರತೆ ವಹಿಸಿ ನಿಧಾನವಾಗಿ ಚಲಿಸಬೇಕು. ತುಂಬ ಸಮಯದವರೆಗೆ ಕುಳಿತುಕೊಂಡು ಕೆಲಸ ಮಾಡುವುದನ್ನು ಬದಲಿಸಬೇಕು. ಜೀನವ ಶೈಲಿಯ ಬದಲಾವಣೆಯು ಈ ಸಮಸ್ಯೆಯನ್ನು ತಡೆಗಟ್ಟುವುದಕ್ಕೆ ಮುಖ್ಯ ಪರಿಹಾರ.
ಮಂತ್ರ ಶಕ್ತಿಯುಳ್ಳ 'ಹತ್ ಜೋಡಿ'
ಹತ್ -ಜೋಡಿ ಇದು ಎರಡು ಕೈಗಳು ಜೋಡಿಸಿದ ಆಕೃತಿಯುಳ್ಳ ಒಂದು ಗಿಡದ ಅಪರೂಪದ ಬೇರು. ತಂತ್ರ ಶಾಸ್ತ್ರಲೋಕಕ್ಕೆ ನಿಸರ್ಗದ ಒಂದು ಮಹಾನ್ ಕೊಡುಗೆ. ಹತ್-ಜೋಡಿ/ಹಸ್ತ-ಜೋಡಿ ಅಥವಾ ಹತ್ ಜೋರಿ ಎಂದು ಕರೆಯಲಾಗುವ ಉತ್ತರ ಭಾರತದ ಮಧ್ಯಪ್ರದೇಶದ ಕಾಡುಗಳಲ್ಲಿ ಲಭ್ಯವಾಗುವ ಈ ವಸ್ತುವನ್ನು ಅಲ್ಲಿನ ಗುಡ್ಡಗಾಡು ಜನಾಂಗ ಇದನ್ನು ಶೋಧಿಸಿ ತರುತ್ತಾರೆ. ವಿಧ-ವಿಧವಾದ ಅಳತೆಗಳಲ್ಲಿ ಇವು ಲಭ್ಯ. ಸಣ್ಣದು ಬೆಲೆಯಲ್ಲಿ ಕಡಿಮೆಯಾದರೂ ನಿಜವಾದ ದೊಡ್ಡ ಹತ್-ಜೋಡಿ ಕೊಂಚ ದುಬಾರಿ.
ಉತ್ತಮವಾದ ಹಾಗೂ ದೊಡ್ಡದಿರುವ ಹತ್-ಜೋಡಿಯನ್ನು ಪೂಜಿಸುವವರ ದುರಾದೃಷ್ಟವನ್ನು ಹೋಗಲಾಡಿಸುತ್ತದೆ. ಆಕರ್ಷಣೆ, ಸಮ್ಮೋಹನ, ವಶೀಕರಣ ಶಕ್ತಿ ನಿಜವಾದ ಹತ್-ಜೋಡಿಗೆ ಇದೆ ಎಂದು ಹೇಳಲಾಗಿದೆ. ಎರಡು ಕೈಗಳನ್ನು ಜೋಡಿಸಿ ಮುಷ್ಟಿಯನ್ನು ಬಿಗಿ ಹಿಡಿದಂತೆ ಕಾಣುವ ಈ ಅಪರೂಪದ ಬೇರನ್ನು 'ಸಾಕ್ಷಾತ್ ದೇವಿ ಚಾಮುಂಡಿಯ ಅವತಾರವೆಂದು ಹೇಳುತ್ತಾರೆ.' ಇದು ಅತ್ಯಂತ ಶಕ್ತಿಶಾಲಿ, ಪೂಜಾ ಕ್ರಮವರಿತು ಉಪಾಸಿಸುವವರಿಗೆ ಎಲ್ಲ ಕೋರಿಕೆಗಳನ್ನು ನೀಡುವುದೆಂದು ನಂಬಿರುತ್ತಾರೆ. ಪ್ರಯಾಣ ಸಮಯದಲ್ಲಿ ಅಪಘಾತದಿಂದಲೂ, ಕೋರ್ಟು, ಕಚೇರಿ, ವ್ಯಾಜ್ಯಗಳಿಂದ ಇದು ರಕ್ಷಿಸುತ್ತದೆ ಎನ್ನಲಾಗಿದೆ. ಅತಿಮಾನುಷ ಶಕ್ತಿಗಳು, ಭೂತ-ಪ್ರೇತ ಭಾದೆಗಳು ಇದನ್ನು ಆರಾಧಿಸುವವರಿಗೆ ಉಂಟಾಗುವುದಿಲ್ಲ. ಇದನ್ನು ಧರಿಸುವವರು ಐಶ್ಚರ್ಯವಂತರೂ, ಮಾನಸಿಕ ಸ್ವಾಸ್ಥ್ಯವುಳ್ಳವರೂ ಆಗುತ್ತಾರೆ. ಆದರೆ ಹತ್-ಜೋಡಿಯು ಉತ್ತಮವಾದದ್ದೂ, ಯಾವಾಗಲೂ ಶುದ್ಧತೆಯಿಂದ ಕೂಡಿರಬೇಕು.
ಹತ್-ಜೋಡಿಯನ್ನು ಒಂದು ಉತ್ತಮವಾದ ದಿವಸ ಪಡೆದು ಗಂಗೆಯಲ್ಲಿ ಶುದ್ಧೀಕರಿಸಬೇಕು. ನಂತರ ಕೆಂಪು ಬಣ್ಣದ ಬಟ್ಟೆಯಲ್ಲಿ ಇರಿಸಬೇಕು. ಒಣಗಿದ ನಂತರ ಸಾಸಿವೆ ಎಣ್ಣೆಯಲ್ಲಿ ಅದನ್ನು ಸಂಪೂರ್ಣ ಮುಳುಗಿಸಿ ದೈವ ಸನ್ನಿಧಿಯಲ್ಲಿ ಇರಿಸಬೇಕು. ಹೀಗೆ ಇರಿಸಿದ ಅದನ್ನು 21 ದಿವಸಗಳ ಕಾಲ ಅಲ್ಲಿಂದ ಕದಲಿಸಕೂಡದು. ನಂತರ ಅದನ್ನು ಆ ಎಣ್ಣೆಯಿಂದ ಹೊರತೆಗೆದು ಒಂದು ಕೆಂಪು ಬಟ್ಟೆಯಲ್ಲಿ ಇರಿಸಿ ಕುಂಕುಮ, ಗಂಧ, ಹೂವುಗಳಿಂದ ಪೂಜಿಸಿ, ಶ್ರೀ ಹನುಮಂತದೇವರ ಜಪವನ್ನು 21 ಬಾರಿ ಮಾಡಿ ಒಂದು ಪೆಟ್ಟಿಗೆಯೊಳಗೆ ಪಚ್ಚೆಕರ್ಪೂರ ಹಾಗೂ ಒಂದು ಬೆಳ್ಳಿಯ ತುಂಡಿನೊಂದಿಗೆ ಇರಿಸಬೇಕು. ಪ್ರತಿದಿನ ಧೂಪ, ದೀಪಗಳಿಂದ ಪೂಜಿಸಿ, 'ಐಂ ಹ್ರೀ ಕ್ಲೀಂ ಚಾಮುಂಡಾಯೈ ವಿಚ್ಚೈ' (ಇದು ನವರ್ಣವ ಮಂತ್ರ ಎಂದು ಪ್ರಸಿದ್ಧಿ) ಎಂಬ ಮಹಾಮಂತ್ರವನ್ನು ಪ್ರತಿದಿನ 108 ಸಲ ಜಪಿಸುತ್ತಿರಬೇಕು. ಹೀಗೆ ಮಾಡುತ್ತಿದ್ದಲ್ಲಿ ಸರ್ವಭಾದೆ ನಿವಾರಣೆಯಾಗಿ ಅಷ್ಟೈಶ್ವರ್ಯ ಸಂಪತ್ತು ಲಭಿಸುವುದು.
-ಡಿ.ವಿ.ಸುಬ್ಬಣ್ಣ
ಆಷಾಢದಲ್ಲಿ ಜನಿಸಿದವರ ಯೋಗಾಯೋಗ
ವಿ.ನಾರಾಯಣ ಶೆಟ್ಟಿ ಪದ್ಮಸಾಲಿ
ಬ್ರಹ್ಮಾಂಡದಲ್ಲಿ ಸೂರ್ಯನಿಂದ 5,900 ಮಿಲಿಯನ್ ಕಿ.ಮೀ.ಗಳವರೆಗೆ ವಿಸ್ತಾರಗೊಂಡ ಸೌರ ಮಂಡಲದಲ್ಲಿ 11 ಗ್ರಹಗಳು ಹಲವು ಗ್ರಹಗಳನ್ನು ಪ್ರದಕ್ಷಿಣೆ ಮಾಡುವ 63 ರಿಂದ 64 ಉಪಗ್ರಹಗಳು (ಚಂದಿರಗಳು) ಸ್ಥಿರ ಕಕ್ಷೆಯ ಚಲನ ಸಿದ್ಧಾಂತದಲ್ಲಿ ಎರಕ ಹೊಯ್ಯುವ ನಭೋ ಪ್ರಭಾವಕ್ಕೂ ಪೃಥ್ವಿ ಮೇಲೆ ಆತ್ಮದ ಭೌತಿಕ ಗುಣಗಳಿಗೂ ಅವಿನಾಭಾಜ್ಯ ಸಂಬಂಧಗಳಿರುವುದು ಕಠೋರ ಸತ್ಯ. ಪೃಥ್ವಿಯು ಎರಡು ಧ್ರುವಗಳನ್ನು ಹೊಂದಿರುವ ನಭೋಮಂಡಲದ ನಿರಂತರ ಪ್ರಯಾಣಿಕ ಆತ್ಮವು ಎರಡು ನಿರ್ದಿಷ್ಟ ನಭೋನಿಲ್ದಾಣಗಳನ್ನು ಹೊಂದಿರುವ ನಿರಂತರ ಪ್ರಯಾಣಿಕ. ಪೃಥ್ವಿಯ ಎರಡು ಧ್ರುವಗಳ ಮಧ್ಯೆ ಪ್ರಯಾಣಿಸುವ ಆತ್ಮದ ಎರಡು ನಿಲ್ದಾಣಗಳ ಮಧ್ಯೆ ಸಂಭವಿಸುವ ಭೌತಿಕ ಅಂತರ್ ಗ್ರಹಣ ಮತ್ತು ಗ್ರಹಗಳ ಛಾಯಾ ರೂಪದ ಸಿದ್ಧಾಂತ ಚಿದಂಬರ ರಹಸ್ಯವಾಗಿಯೇ ಉಳಿದಿದೆ. ಆತ್ಮದ ನಭೋ ಪರಿಭ್ರಮಣ ಕ್ರಿಯೆ, ಸರ್ವಚೇತನ ಜ್ಞಾನಮಾರ್ಗ, ಖರ್ಗೋತ್ಮದ ಸರ್ವ ಋತು ಸಿದ್ಧಾಂತಗಳನ್ನು ಮನೋವೈಜ್ಞಾನಿಕ ಶಾಸ್ತ್ರದ ಮಜಲಿನಿಂದ ಭೇದಿಸಿದರೆ ಪೃಥ್ವಿಯ ಮೇಲ್ಮೈ ಋತುಗಳು ಮತ್ತು ಆತ್ಮದ ಭೌತಿಕ ಗುಣಗಳ ಮಧ್ಯೆ ಸಂಭವಿಸುವ ಅಂತರ್ ಗ್ರಹಣಗಳ ಅಲ್ಪ ಜ್ಞಾನ ತಿಳಿಯಬಹುದು.
ಸೂರ್ಯನಿಂದ 1,427 ಮಿಲಿಯನ್ ಕಿ.ಮೀ ದೂರದಲ್ಲಿ 16 ಚಂದಿರಗಳನ್ನು ಹೊಂದಿರುವ ನಭೋಮಂಡಲದಲ್ಲಿಯೇ ಎರಡನೇ ದೊಡ್ಡದಾದ ಶನಿಗ್ರಹದ ನಭೋಪ್ರಭಾವ ಪೃಥ್ವಿಯ ಮೇಲ್ಮೈ ಆತ್ಮದ ಭೌತಿಕಾಯ (ಮುಕ್ಕೊಟಿ ಜೀವರಾಶಿ) ಗಳ ಮೇಲೆ ಬಿದ್ದಾಗ ಸಂಭವಿಸುವ ಭೌತಿಕ ಅಂತರ್ ಗ್ರಹಣಗಳನ್ನು ವಿಜ್ಞಾನವಲ್ಲದ ಮನೋವೈಜ್ಞಾನಿಕ ಶಾಸ್ತ್ರದಿಂದ ಭೇದಿಸಿ 2013 ಆಷಾಢ ಮಾಸದಲ್ಲಿ ಜನಿಸುವ ಮಕ್ಕಳ ಅಷ್ಟಾಂಗ ಶನಿ ಪ್ರಭಾವಗಳನ್ನು ತಿಳಿಸಲಾಗಿದೆ. ಆಸಕ್ತರು ಹಲವು ಸಲ ಪ್ರಯತ್ನಿಸಿದರೆ ಉತ್ತಮ ಫಲಿತಾಂಶ ಸಿಗುವುದರಲ್ಲಿ ಸಂಶಯವೇ ಇಲ್ಲ.
ಆಷಾಢ ಹುಣ್ಣಮೆ
ಆಷಾಢ ಹುಣ್ಣಿಮೆ ಜುಲೈ 22 ರ ಕಾಲಮಾನದಲ್ಲಿ ಸೂರ್ಯನು ಕಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ ಹೊಂದುವ ಕಾಲಮಾನವಾದ್ದರಿಂದ ದೆಸೆಗ್ರಹ ರವಿಯು (Rulling Planet) ಉಚ್ಚಗ್ರಹ ಶುಕ್ರನು (Planet Exalted) ಮತ್ತು ಯಾವುದೇ ನೀಚಗ್ರಹ (Planet Debilitated) ಇರುವುದಿಲ್ಲ. ಇದರಿಂದ ಅಂದು ಜನಿಸಿದ ಮಕ್ಕಳಿಗೆ ಯಾವುದೇ ಗ್ರಹ ದೋಷಗಳು ಜೀವನವಿಡೀ ಬರಲಾರವು. ಜ್ಞಾನ, ಬಲ, ಐಶ್ವರ್ಯ, ಶಕ್ತಿ, ಸಾಹಸ, ಪರಾಕ್ರಮ, ಬುದ್ಧಿಬಲ ಮತ್ತು ತೇಜಸ್ಸುಗಳು ತಾವಾಗಿಯೇ ವೃದ್ಧಿಸುತ್ತಲಿರುತ್ತವೆ. ದೇಹ ಬೆಳೆದಂತೆಲ್ಲ ಅಧಿಕ ಜ್ಞಾಪಕ ಶಕ್ತಿ, ಅಹಂಭಾವ, ಸ್ವೇಚ್ಛಾಚಾರಗಳು ವೃದ್ಧಿಸಿ, ಸಂಸ್ಕೃತಿ, ಸಮಾಜ, ರಾಜಕೀಯ ಮತ್ತು ಧರ್ಮಾಚರಣೆಯಲ್ಲಿ ಆಸಕ್ತಿ ಇದ್ದು ಅಧಿಕ ಆಯಸ್ಸು, ಕೀಡೆ, ಕಲೆ ಮತ್ತು ವಿಜ್ಞಾನದಲ್ಲಿ ಪ್ರಗತಿ ಸಾಧನೆ, ಅಂದು ಪಾತ್ರಃ ಕಾಲ ಜನಿಸಿದ ಹೆಣ್ಣು ಮಗುವಿನಲ್ಲಿ ಸಿಂಹಿಣಿ ಗುಣಗಳು ತಾವಾಗಿಯೇ ವೃದ್ಧಿಸುತ್ತವೆ. ಶನಿಯು ಅಷ್ಟಾಂಗ ಯೋಗದಲ್ಲಿ ರಾಜಯೋಗ ಮತ್ತು ಶುಕ್ರ ದೆಸೆಗಳನ್ನು ತರುತ್ತಲಿರುತ್ತಾನೆ. ಜೀವನದಲ್ಲಿ ಯಾವುದೇ ಅವಘಡಗಳು ಮತ್ತು ಆಘಾತಗಳು ಸಂಭವಿಸಲಾರವು. ಆಗಸ್ಟ್ 29 ರಂದು ಪ್ರಾತಃಕಾಲ ನವಗ್ರಹಗಳಿಗೆ ಅಭಿಷೇಕ ಮಾಡಿರಿ.
ಆಷಾಢ ಅಮಾವಾಸ್ಯೆ
ಆಷಾಢದ ಅಮಾವಾಸ್ಯೆ ಜುಲೈ 8 ಮತ್ತು ಆಗಸ್ಟ್ 6ರಂದು ಸೂರ್ಯನು ಸಿಂಹರಾಶಿಯಲ್ಲಿಯೇ ಸಂಚರಿಸುವುದರಿಂದ ಕಾಲಗಣನಾಚಕ್ರವು ಗುರು ಮತ್ತು ಶುಕ್ರ ಗ್ರಹಗಳಿಗೆ ಆಷಾಢ ಅಮಾವಾಸ್ಯೆಗಳು ಪ್ರಿಯಕರ ದಿನಗಳಾಗಿರುತ್ತವೆ. ಅಂದಿನ ದಿನಗಳಲ್ಲಿ ಜನಿಸಿದ ಮಕ್ಕಳಲ್ಲಿ 6-11 ವರ್ಷಗಳಲ್ಲಿ ಗುರು ಮತ್ತು ಶುಕ್ರದೆಸೆಗಳು ಮರುಕಳಿಸುತ್ತಲೇ ಇರುತ್ತವೆ. ಅವರ ದೇಹವೇ ಅಷ್ಟಾಂಗ ಯೋಗ ಮಂದಿರವಾಗಿ ಶನಿಯ ನಭೋ ಪ್ರಭಾವ ಹೆಚ್ಚಿನದಾಗಿ ಇರುತ್ತದೆ. ಇಂಥ ದೆಸೆಗಳನ್ನು ಸದ್ವಿನಿಯೋಗ ಮಾಡಿಕೊಂಡರೆ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಪಂಚದ ಮಹಾನ್ ವ್ಯಕ್ತಿ ಆಗುವುದರಲ್ಲಿ ಸಂಶಯವೇ ಇಲ್ಲ. ಜೀವನ ಮಧ್ಯ ಭಾಗದಲ್ಲಿ ಆಕಸ್ಮಿಕ ಅದೃಷ್ಟಗಳು, ದೆಸೆ ಗ್ರಹಗಳು ರವಿ ಮತ್ತು ಚಂದ್ರ ಆಗಿರುವುದರಿಂದ ಶರೀರದಲ್ಲಿ ದೈವ ಶಕ್ತಿಯೊಂದು ಅಡಕವಾಗಿರುತ್ತದೆ. ಅದೇ ಶಕ್ತಿಯು ಮುಂದಿನ ಭವಿಷ್ಯದಲ್ಲಿ ಅದೃಷ್ಟಗಳನ್ನು ತರಲಿದೆ. ಅಷ್ಟಮದಲ್ಲಿ ಶನಿ ಸಂಚರಿಸಿದರೆ ಬ್ರಹ್ಮಚರ್ಯ, ಸನ್ಯಾಸ ಯೋಗ, ದೈವಜ್ಞರಾಗಿ ಪರಿವರ್ತನೆಗೊಳ್ಳುತ್ತಾರೆ. ಕಲಾ ಪ್ರಪಂಚದಲ್ಲಿ ಸಾಧನೆ ಮತ್ತು ಸಮಾಜ ಸುಧಾರಣೆಯಲ್ಲಿ ಸೇವೆ, ಮಾರ್ಚ್ 21 ಮತ್ತು ಸೆಪ್ಟೆಂಬರ್ 23 ರಂದು ಪ್ರತಿ ವರ್ಷವೂ ಮಗುವಿಗೆ ಪ್ರಾತಃಕಾಲ ಸೂರ್ಯದರ್ಶನ ಮಾಡಿಸಿರಿ.
ಆಷಾಢ ಕ್ಷೀಣ ಮತ್ತು ವೃದ್ಧಿ ಚಂದ್ರ
ಆಷಾಢ ಮಾಸದ ಕ್ಷೀಣ ಮತ್ತು ವೃದ್ಧಿ ಚಂದ್ರಕಾಲ ಮಾನದಲ್ಲಿ ರವಿಯ ನಭೋಪ್ರಭಾವ ಪೃಥ್ವಿಯ ಮೇಲೆ ಹೆಚ್ಚಿನದಾಗಿ ಎರಕ ಹೊಯ್ಯುತ್ತಿರುತ್ತದೆ. ಏಕೆಂದರೆ ಸಿಂಹರಾಶಿಯು ಪ್ರಮುಖ 52 ನಕ್ಷತ್ರಗಳಿಂದ ಸಂಯೋಜನೆಗೊಂಡ ತಾರಾಮಂಡಲ. 12 ತಾರೆಗಳು ಪ್ರಭಾವ ತಾರೆಗಳಾಗಿದ್ದು 21 ನೇ ತಾರೆಯು ಪೃಥ್ವಿಗೆ ಹತ್ತಿರವಾಗಿದ್ದು 21 ನೇ ತಾರೆಯು ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ. ಏಕೆಂದರೆ, 21ನೇ ತಾರೆಯು ಪೃಥ್ವಿಗೆ ಹತ್ತಿರವಾಗಿದ್ದು ಮೂರು ನಕ್ಷತ್ರಗಳನ್ನು ಹೊಂದಿದ್ದು ಈ ನಕ್ಷತ್ರದಿಂದ ಎರಕ ಹೊಯ್ಯುವ ನಭೋ ಪ್ರಭಾವವು ಶನಿಗ್ರಹದ ಎಲ್ಲ ಚಂದಿಗಳ ಮೇಲೆ ಹಾದು ಅಂತರ್ ಗ್ರಹಣ ಉಂಟಾಗಿ ಪೃಥ್ವಿಯ ಮೇಲೆ ಬೀಳುತ್ತಲಿರುತ್ತದೆ. ಇದರಿಂದ ಈ ಕಾಲಮಾನದಲ್ಲಿ ರವಿ ಮತ್ತು ಶನಿಯ ಪ್ರಭಾವ ಹೆಚ್ಚಿನದಾಗಿ ಇರುತ್ತದೆ. ಈ ನಕ್ಷತ್ರಕ್ಕೆ ಟ್ರೈಸರ್ಪ್ ಅಥವಾ ಸುಕ್‌ಸಾನ್ ಎಂದು ನಾಮಕರಣ ಮಾಡಲಾಗಿದೆ. ಈ ಕಾಲಮಾನದಲ್ಲಿ ಹಗಲು ಜನಿಸಿದ ಗಂಡು ಮಗುವಿಗೆ ರಾಜಪಟ್ಟಾಭಿಷೇಕ ಮತ್ತು ರಾತ್ರಿಯಲ್ಲಿ ಜನಿಸಿದ ಹೆಣ್ಣು ಮಗುವಿಗೆ ರಾಣಿ ಪಟ್ಟಾಭಿಷೇಕಗಳು ಪ್ರಾಪ್ತಿ. ಸಾಗರ ಮತ್ತು ಬಾಹ್ಯ ಸಂಶೋಧನೆ, ಜಲಕ್ರೀಡೆಯಲ್ಲಿ ಪ್ರಗತಿ, ಅಧಿಕ ಜ್ಞಾಪಕಶಕ್ತಿ, ಬುದ್ಧಿ ಬ್ರಹ್ಮಾಂಡ, ಆರನೇ ಸೆನ್ಸ್ ಇರುತ್ತದೆ. ಸಕಲ ಕಲಾವಲ್ಲಭನಾಗಿ ವಿಜೃಂಭಣೆ, ವಿದೇಶ ವಾಸ್ತವ್ಯ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ವಿಶೇಷ. ಡಿಸೆಂಬರ್ 24ರಂದು ಪ್ರಾತಃಕಾಲ ಸ್ನಾನ ಮಾಡಿಸುವಾಗ ಸೂರ್ಯನ ಕಿರಣಗಳು ಮಗುವಿನ ಮೇಲೆ ಬೀಳಲಿ.
ಚರ್ಮ ರೋಗ ನಿವಾರಕ 'ಪುಷ್ಯರಾಗ'
ಮಂಡಗದ್ದೆ ಪ್ರಕಾಶ್‌ಬಾಬು
ಅತ್ಯಂತ ಲೋಕಪ್ರಿಯವಾದ ರತ್ನ ಪುಷ್ಯರಾಗ. ಇದರ ನಿಜವಾದ ಬಣ್ಣ ಹಳದಿ. ಉತ್ತಮವಾದ ಪುಷ್ಯರಾಗದಲ್ಲಿ ಎಂಟು ಗುಣಗಳಿರುತ್ತವೆ. ಪುಷ್ಯರಾಗವನ್ನು ಕೈಯಲ್ಲಿ ಹಿಡಿದುಕೊಂಡರೆ ಭಾರವಿರುವುದು, ದಪ್ಪ ಇರುವುದು, ಪದರಗಳಿರುವುದಿಲ್ಲ, ಮೃದುವಾಗಿರುತ್ತದೆ. ಆಕರ್ಷಣೆಯಾಗಿರುವುದು, ಉತ್ತಮವಾದ ಪುಷ್ಯರಾಗವನ್ನು ಒರೆಗಲ್ಲಿಗೆ ತಿಕ್ಕಿದರೆ ಅದರ ಬಣ್ಣ ಹೆಚ್ಚಾಗುವುದು. ನುಣುಪಾಗಿರುವ ಮತ್ತು ಹೊಳಪಾದ ಪುಷ್ಯರಾಗವು ಶುಭಕರವಾದವು. ಇವುಗಳನ್ನು ಧರಿಸುವುದರಿಂದ ವಂಶವೃದ್ಧಿ, ಚರ್ಮರೋಗ ನಿವಾರಣೆ, ಕನ್ಯೆಯವರಿಗೆ ಶೀಘ್ರ ವಿವಾಹ, ಪಿಶಾಚಿಗಳ ಬಾಧೆಯಿಂದ ನಿವಾರಣೆ ಹಾಗೂ ಅಪಮೃತ್ಯು ನಿವಾರಣೆ ಆಗುವುದು. ದೋಷ ಇರುವ ಪುಷ್ಯರಾಗ ಧರಿಸಿದರೆ ಅನೇಕ ರೀತಿಯ ಕಷ್ಟಗಳು ಬರುವುದು. ಇದರ ಭಸ್ಮವು ಕಫ, ಶೀತ, ಕುಷ್ಟರೋಗ ಹಾಗೂ ಚರ್ಮ ರೋಗಕ್ಕೆ ಔಷಧವಾಗಿದೆ. ಪುಷ್ಯರಾಗವು ಗುರು ಗ್ರಹದ ಪ್ರತಿನಿಧಿ. ಯಾರ ಜಾತಕದಲ್ಲಿ ಗುರು ಶುಭ ಸ್ಥಾನಗಳಲ್ಲಿ ಇರುವನೋ ಅಂಥವರಿಗೆ ಶುಭ.
ಪುಷ್ಯರಾಗದಲ್ಲಿ ನಾಲ್ಕು ವಿಧ
* ಬ್ರಾಹ್ಮಣ ಪುಷ್ಯರಾಗ: ಶುಭ್ರ ವರ್ಣದಾಗಿರುತ್ತದೆ.
* ಕ್ಷತ್ರಿಯ ಪುಷ್ಯರಾಗ: ಗುಲಾಬಿ ಬಣ್ಣದಾಗಿರುತ್ತದೆ.
* ವೈಶ್ಯ ಪುಷ್ಯರಾಗ: ಹಳದಿ ಬಣ್ಣದಾಗಿರುತ್ತದೆ.
* ಶೂದ್ರ ಪುಷ್ಯರಾಗ: ಶ್ಯಾಮಲ ವರ್ಣದಾಗಿರುತ್ತದೆ.
ಯಾರು ಧರಿಸಬಹುದು
* ಮೇಷ:ಈ ರಾಶಿಯ ಅಧಿಪತಿ ಕುಜ. ಗುರುವಿಗೆಕುಜ ಮಿತ್ರ. ಈ ರಾಶಿಯವರು ಪುಷ್ಯರಾಗ ಧರಿಸಬಹುದು.
* ಕಟಕ: ಅಧಿಪತಿ ಚಂದ್ರ. ಗುರುವಿಗೆ ಚಂದ್ರ ಮಿತ್ರನಾಗಿರುವನು. ಇವರು ಧರಿಸಬಹುದು. ಇದರಿಂದ ಪಿತೃಸುಖ, ತೀರ್ಥ ಕ್ಷೇತ್ರಗಳ ದರ್ಶನ ಪರೋಪಕಾರ ಬುದ್ಧಿ ಹೆಚ್ಚುವುದು.
* ಸಿಂಹ: ಅಧಿಪತಿ ರವಿ. ಗುರುವಿಗೆ ರವಿ ಮಿತ್ರನಾಗಿರುವುದರಿಂದ ಈ ರಾಶಿಯವರು ಪುಷ್ಯರಾಗವನ್ನು ಆಜೀವ ಪರ್ಯಂತ ಧರಿಸಬಹುದು. ಇದರಿಂದ ಧನಲಾಭ ಮತ್ತು ಮೇಲಧಿಕಾರಿಗಳ ಪ್ರೀತಿ, ಉದ್ಯೋಗದಲ್ಲಿ ಉನ್ನತಿ ಸಿಗುವುದು.
* ವೃಶ್ಚಿಕ: ಅಧಿಪತಿ ಕುಜ. ಗುರುವಿಗೆ ಕುಜ ಮಿತ್ರನಾಗಿರುವುದರಿಂದ ಪುಷ್ಯರಾಗವನ್ನು ಧರಿಸಬಹುದು. ಇದರಿಂದ ಜೀವನದಲ್ಲಿ ಉನ್ನತಿ, ಯಶಸ್ಸು, ಮಕ್ಕಳಿಂದ ಸುಖ, ಧನಲಾಭ ಸಿಗುವುದು.
* ಧನಸ್ಸು: ಅಧಿಪತಿ ಗುರು. ಈ ರಾಶಿಯವರು ಪುಷ್ಯರಾಗವನ್ನು ನಿರಂತರವಾಗಿ ಧರಿಸುವುದು ಒಳ್ಳೆಯದು. ಮಾತೃ ಸುಖ, ಕೀರ್ತಿ, ಮನೆ, ಆಸ್ತಿ ಸಿಗುವುದು.
* ಮೀನ: ಅಧಿಪತಿ ಗುರು. ಇವರು ಪುಷ್ಯರಾಗವನ್ನು ನಿರಂತರವಾಗಿ ಧರಿಸಬೇಕು. ಇದರಿಂದ ವಿದ್ಯಾಲಾಭ, ಧನಲಾಭ, ಕೀರ್ತಿ, ಮನೆ, ಆಸ್ತಿ ಸಂಪಾದನೆ ಆಗುವುದು.
ಧರಿಸುವುದು ಹೇಗೆ
ಪುಷ್ಯರಾಗ ಇರುವ ಉಂಗುರವನ್ನು ಗುರುವಾರ ಹಾಗೂ ಪುಷ್ಯ ನಕ್ಷತ್ರ ಇರುವ ದಿನ ಹಸುವಿನ ಹಾಲಿನಲ್ಲಿ ಸ್ವಲ್ಪ ಸಮಯ ಇಟ್ಟು ನಂತರ ಅದಕ್ಕೆ ಹಳದಿ ಹೂ, ಹಳದಿ ಅಕ್ಷತೆ, ಹಳದಿ ಗಂಧ, ದೀಪ ಬೆಳಗಿಸಿ ಪೂಜಿಸಿ. ಓಂ ಗುಂ ಗುರುವೇ ನಮಃ ಎಂಬ ಮಂತ್ರವನ್ನು 16 ಸಾವಿರ ಬಾರಿ ಜಪಿಸಬೇಕು. ಬಲ ಕೈಯ ಮಧ್ಯದ ಬೆರಳಿಗೆ ಧರಿಸಬೇಕು.
Subscribe to:
Comments (Atom)