ಗರಿಷ್ಠ ಐದು ಬಾಗಿಲುಗಳು ಮಾತ್ರ ತೆರೆದಿರಲಿ
ಕೆಲವು ಸಣ್ಣಪುಟ್ಟ ವಿಚಾರಗಳನ್ನು ಅನುಸರಿಸುವ ಮೂಲಕ ಮನೆಯಲ್ಲಿ ಹೆಚ್ಚು ನೆಮ್ಮದಿ ಮೂಡಿಸಬಹುದು. ಈ ಕೆಳಗಿನ ಅಂಶಗಳನ್ನು ಮನದಲ್ಲಿರಿಸಿಕೊಳ್ಳಿ.
*ಮನೆಯಲ್ಲಿ ಗರಿಷ್ಠ ಐದು ಬಾಗಿಲುಗಳು ಮಾತ್ರ ತೆರೆದಿರಲಿ
*ಬೆಡ್ ರೂಮಲ್ಲಿ ಟೀವಿ ಇರಿಸುವುದು ಸೂಕ್ತವಲ್ಲ
*ಬೆಡ್ ರೂಮಿನಲ್ಲಿ ನೀರಿರುವ ಯಾವುದೇ ವಸ್ತು ಅಥವಾ ಸಸಿಗಳನ್ನು ಇರಿಸಬೇಡಿ
*ಲೀವಿಂಗ್ ರೂಮಿನ ದಕ್ಷಿಣ ಗೋಡೆಯ ಮೇಲೆ ಪ್ರಜ್ವಲಿಸುವ ಸೂರ್ಯೋದಯ ಚಿತ್ರವಿರಲಿ
* ಮುಳ್ಳಿನ ಕಳ್ಳಿಗಿಡ ಅಥವಾ ಇನ್ಯಾವುದೇ ಚುಚ್ಚುವಂತಹ ಗಿಡಗಳನ್ನು ಮನೆಯೊಳಗೆ ಇರಿಸುವುದು ಬೇಡ
*ಅಡುಗೆ ಮನೆಯಲ್ಲಿ ಕನ್ನಡಿ ಬೇಡವೇ ಬೇಡ
*ಪೊರಕೆ ಮತ್ತು ನೆಲಉಜ್ಜುವ ಮಾಪ್‌ಗಳನ್ನು ಅಡುಗೆ ಮನೆಯಲ್ಲಿ ಕಣ್ಣಿಗೆ ಕಾಣದಂತೆ ಇರಿಸಿ
*ತ್ರಿಕೋನ, ಅಂಡಾಕಾರ ಇಲ್ಲವೇ ವೃತ್ತಾಕಾರದ ಕೋಣೆ ಇರಲೇಬಾರದು.
ನಿವೇಶನದ ವಾಸ್ತು
1)ಬೋರ್‌ವೆಲ್ ಅಥವಾ ಸಂಪ್ ನಿವೇಶನದ ಈಶಾನ್ಯ ಭಾಗದಲ್ಲಿರಬೇಕು.
2)ಪ್ರವೇಶ ದ್ವಾರವು ಈಶಾನ್ಯ ಮೂಲೆಯಲ್ಲಿರಬೇಕು ಅಥವಾ ಪೂರ್ವ ಗೋಡೆಯಲ್ಲಿದ್ದರೆ ಪ್ರಶಸ್ತ ಸ್ಥಳ.
3)ನಿವೇಶನದ ಎತ್ತರದ ಸ್ಥಳವು ವಾಯವ್ಯ ಮೂಲೆಯಲ್ಲಿರಬೇಕು.
4)ವಾಯವ್ಯದಿಂದ ಈಶಾನ್ಯಕ್ಕೆ ನಿವೇಶನವು ಇಳಿಜಾರಾಗಿರಬೇಕು
5)ಬಾಗಿಲುಗಳು, ಕಾಲಮ್, ಬೀಮ್‌ಗಳು ಸರಿ ಸಂಖ್ಯೆಯಲ್ಲಿರಬೇಕು.
6)ವಾಯವ್ಯ ಮೂಲೆಯಲ್ಲಿ ಕಿಟಕಿಗಳು ಇರಬಾರದು.
ಮನೆಯ ವಾಸ್ತು
1)ಹಾಸಿಗೆ ಮೇಲ್ಭಾಗದಿಂದ ಬೆಳಕು ಬೀಳಬಾರದು.
2) ಮಾಸ್ಟರ್ ಬೆಡ್‌ರೂಂ ನೈರುತ್ಯ ಮೂಲೆಯಲ್ಲಿ ಮತ್ತು ಹಾಸಿಗೆ ದಕ್ಷಿಣದ ಗೋಡೆಗೆ ಇರಬೇಕು.
3)ಬಾಲಕರಿಗೆ ಮಲಗುವ ಕೋಣೆಯು ಪೂರ್ವ ಅಥವಾ ಆಗ್ನೇಯ ಮೂಲೆಯಲ್ಲಿರಬೇಕು ಮತ್ತು ಹಾಸಿಗೆ ಪೂರ್ವ ಗೋಡೆಗೆ ತಾಗಿರಬೇಕು.
4) ಪ್ರವೇಶದ 8 ಅಡಿ ಅಥವಾ ಬಾಗಿಲಿನ ಎತ್ತರದಷ್ಟು ದೂರ ಯಾವುದೇ ಪೀಠೋಪಕರಣಗಳನ್ನು ಇಡಬಾರದು.
5)ಊಟದ ಮೇಜು ಚೌಕ ಅಥವಾ ಆಯತಾಕಾರದಲ್ಲಿದ್ದರೆ ಒಳ್ಳೆಯದು.
6) ಕಂಪ್ಯೂಟರ್ ನೈರುತ್ಯ ದಿಕ್ಕಿನಲ್ಲಿರಬೇಕು.
7)ಮೆಟ್ಟಿಲು ದಕ್ಷಿಣ ಮತ್ತು ಪಶ್ಚಿಮದ ದಿಕ್ಕಿಗೆ ಇರಬೇಕು.
8)ಕನ್ನಡಿ ಹಾಸಿಗೆಗೆ ನಿಖರವಾದ ವಿರುದ್ಧ ದಿಕ್ಕಿನಲ್ಲಿ ಇರಬಾರದು.
ಮನೆ
1.ನಿಮ್ಮ ಹಣ ಸಂಪತ್ತುಗಳನ್ನು ಯಾವಾಗಲೂ ಮನೆಯ ಉತ್ತರ ಭಾಗದಲ್ಲಿರಿಸಿ.
2.ಆಭರಣಗಳನ್ನಿಡುವ ಕಪಾಟು ದಕ್ಷಿಣಕ್ಕೆ ಮುಖ ಮಾಡಿದ್ದರೆ ಐಶ್ವರ್ಯ ವೃದ್ದಿಸುತ್ತದೆ.
3.ಮಲಗುವ ಕೋಣೆ ದಕ್ಷಿಣದಲ್ಲಿದ್ದರೆ ಉತ್ತಮ, ಮತ್ತು ಮಲಗುವಾಗ ತಲೆ ದಕ್ಷಿಣ ದಿಕ್ಕಿಗಿರಿಸಬೇಕು.
4.ಭೋಜನ ಕೋಣೆಯು ಮನೆಯ ಪಶ್ಚಿಮ ದಿಕ್ಕಿಗೆ ಮುಖ ಮಾಡಿರಬೇಕು.
5.ಸ್ನಾನಗೃಹದ ನಿರ್ಮಾಣವನ್ನು ಪೂರ್ವ ಭಾಗ ಅಥವಾ ವಾಯುವ್ಯ ಭಾಗದಲ್ಲಿ ಮಾಡಿ.
6.ಓದುವ ಕೋಣೆ ವಾಯುವ್ಯ ದಿಕ್ಕಿನಲ್ಲಿ ಉತ್ತಮವಾಗಿರುವುದು.
7.ಮನೆಯ ಹೊರಗಿರುವ ಸ್ಥಳದಲ್ಲಿ ನೀರು ಈಶಾನ್ಯ ದಿಕ್ಕಿಗೆ ಹರಿದು ಹೋಗುವಂತಿರಲಿ.
8.ಮನೆಯಲ್ಲಿರುವ ಬಾಗಿಲು,ಕಿಟಿಕಿಗಳ ಸಂಖ್ಯೆಯು ಸಮಸಂಖ್ಯೆಯಲ್ಲಿರಲಿ ಉದಾಹರಣೆಗೆ 2,4,6 ಮತ್ತು ಅವುಗಳು 10,20 ಸಂಖ್ಯೆಗಳಲ್ಲಿ ಕೊನೆಗೊಳ್ಳಬಾರದು.
9.ಮೆಟ್ಟಿಲುಗಳ ಸಂಖ್ಯೆಯು 3 ರಿಂದ ಭಾಗಿಸಲ್ಪಡುವಂತಿದ್ದು ಶೇಷ 2 ಬರುವಂತಿರಬೇಕು. ಉದಾಹರಣೆಗೆ 11,17,20...ಇತ್ಯಾದಿ
10.ಮನೆಯ ಕೋಣೆಗೆ ತಿಳಿಯಾದ ಬಣ್ಣವನ್ನು ಹಚ್ಚಿ ,ಯುದ್ದ, ಕಾಗೆ,ಬೇಸರದಿಂದಿರುವ ಮುಖಗಳು, ಅಶ್ಲೀಲ ಚಿತ್ರಗಳನ್ನು ಗೋಡೆಯಲ್ಲಿ ತೂಗು ಹಾಕಬೇಡಿ.
ನಿಮ್ಮ ಮನೆಯ ವಾಸ್ತು ಹೀಗಿರಲಿ...
* ಮನೆಯ ಮುಂಬಾಗಿಲು ಪೂರ್ವ ಅಧವಾ ಉತ್ತರ ದಿಕ್ಕಿನೆಡೆಗಿರಲಿ.
* ದಕ್ಷಿಣ ಮತ್ತು ಪೂರ್ವ ದಿಕ್ಕಿನ ಗೋಡೆಗಿಂತ ಉತ್ತರ ಮತ್ತು ಪಶ್ಚಿಮ ದಿಕ್ಕಿನ ಗೋಡೆ ಗಟ್ಚಿಮುಟ್ಟಾಗಿರಲಿ.
* ದಕ್ಷಿಣ ಅಧವಾ ಪೂರ್ವ ಭಾಗದಲ್ಲಿ ಅಡುಗೆ ಕೋಣೆ ಇರಲಿ
* ಪಶ್ಚಿಮ ದಿಕ್ಕಿನಲ್ಲಿ ಊಟದ ಕೋಣೆ ಇದ್ದರೆ ಆರೋಗ್ಯ ವರ್ಧಿಸುತ್ತದೆ.
ಗೃಹನಿರ್ಮಾಣದಲ್ಲಿ ಆಯಗಳು
ಗೃಹ ಇತ್ಯಾದಿ ನಿರ್ಮಾಣದ ವೇಳೆ ನಿವೇಶನದ ಆಕಾರ, ದಿಕ್ಕುಗಳು, ಇತ್ಯಾದಿಗಳನ್ನಾಧರಿಸಿ ಮಾಹಿತಿ ನೀಡುತ್ತದೆ.
ನಿವೇಶನಗಳನ್ನು ವಾಸ್ತುವಿನಲ್ಲಿ ಆಯಗಳಾಗಿ ವಿಭಾಗಿಸಿ ಮನೆಯ ವಿಸ್ತಾರಕ್ಕನುಗಣವಾಗಿ ನಿರ್ದೇಶಿಸಲಾಗುವುದು. ಇದರಂತೆ ಧ್ವಜ ಆಯ, ಗಜ ಆಯ ಮುಂತಾಗಿ ಹೆಸರಿಸಲಾಗುವುದು.
ವಾಸ್ತುವು ನಿರ್ಮಾಣ ಪರಿಸರದಲ್ಲಿರುವ ಶುಭಾರಕ ಶಕ್ತಿಯನ್ನು ಮಾಲಕನ ಹಿತಕ್ಕನುಗುಣವಾಗಿ ಮನೆಯೊಳಗೆ ಆವಾಹಿಸುವಂತಹ ಒಳಿತನ್ನುಂಟುಮಾಡುತ್ತದೆ. ಮನೆ ಇತ್ಯಾದಿ ನಿರ್ಮಾಣಗಳು ಯಾವ ದಿಕ್ಕಿಗೆ ಅಭಿಮುಖವಾಗಿರಬೇಕು. ಅನುಬಂಧಿತ ಕಟ್ಟಡಗಳು ಯಾವ ದಿಕ್ಕಿನಲ್ಲಿದ್ದರೆ ಅಶುಭ.
ಆರೋಗ್ಯ ಮತ್ತು ಸಂಪತ್ತಿಗೆ ವಾಸ್ತು ಟಿಪ್ಸ್
* ಕಸ ಗುಡಿಸುವ ಪೊರಕೆಗಳನ್ನು ಕಣ್ಣಿನಿಂದ ಮರೆಯಾಗುವಂತೆ ಮೂಲೆಯಲ್ಲಿ ತಲೆಕೆಳಗಾಗಿ ಇಡುವುದರಿಂದ ಕುಟುಂಬದ ಜೀವನ ತೊಳೆದುಹೋಗದಂತೆ ತಪ್ಪಿಸುತ್ತದೆ.
* ಸ್ನಾನದ ಗೃಹ ಅಥವಾ ಅಡುಗೆ ಮನೆಯ ನಲ್ಲಿಗಳಲ್ಲಿ ನೀರು ತೊಟ್ಟಿಕ್ಕದಂತೆ ಖಾತರಿ ಮಾಡಿಕೊಳ್ಳಿ.ಸತತ ನೀರಿನ ತೊಟ್ಟಿಕ್ಕುವಿಕೆಯು ನಕಾರಾತ್ಮಕ ಶಕ್ತಿಯನ್ನು ಸೂಸುವುದರಿಂದ ನೀರಿನ ತೊಟ್ಟಿಕ್ಕುವಿಕೆಯು ಸಂಪತ್ತಿನ ಸೋರುವಿಕೆಯನ್ನು ಸಂಕೇತಿಸುತ್ತದೆ.
* ಸ್ವಚ್ಛವಾದ ಡೆಸ್ಕ್ ಸ್ಪಷ್ಟ ಯೋಚನೆಗೆ ಪ್ರೋತ್ಸಾಹಿಸುತ್ತದೆ. ಇದು ಆರ್ಥಿಕ ಶಕ್ತಿ ಮತ್ತು ಸೃಜನಶೀಲತೆಯನ್ನು ಸಂಕೇತಿಸುತ್ತದೆ. ಕಂಪ್ಯೂಟರ್, ಫೋನ್ ಮುಂತಾದುವನ್ನು ಡೆಸ್ಕ್‌ನಲ್ಲಿ ಬಳಸಬಹುದು.
* ಎಲ್ಲ ಗಡಿಯಾರಗಳು ಸುಸ್ಥಿತಿಯಲ್ಲಿ ಇರಬೇಕು. ಕಾರ್ಯನಿರ್ವಹಿಸದ ಗಡಿಯಾರವು ಹಣಕಾಸು ಸ್ಥಿತಿ ಸುಧಾರಿಸದೇ ಅಲ್ಲೇ ನಿಲ್ಲುವಂತೆ ಮಾಡುತ್ತದೆ. ನಿಧಾನ ಗಡಿಯಾರದಿಂದ ನಿಮ್ಮ ಕೆಲಸಗಳು ವಿಳಂಬವಾಗುತ್ತದೆ.
* ನಿಮ್ಮ ಮಲಗುವ ಕೋಣೆಯ ಕಿಟಕಿಗಳನ್ನು ಕನಿಷ್ಠ 20 ನಿಮಿಷಗಳ ಕಾಲ ತೆರೆದು ಹೊಸ ಗಾಳಿ ಒಳಪ್ರವೇಶಕ್ಕೆ ಅವಕಾಶ ನೀಡಿ. ಇಲ್ಲದಿದ್ದರೆ ಪ್ರತಿ ರಾತ್ರಿ ನೀರಸ ಗಾಳಿಯೊಂದಿಗೆ ನೀವು ಮಲಗಬೇಕಾಗುತ್ತದೆ. ಅದಕ್ಕೆ ಅವಕಾಶ ನೀಡಿದರೆ, ಜೀವನದಲ್ಲಿ ಉತ್ತಮ ಅದೃಷ್ಟವನ್ನು ನೀವು ಹೇಗೆ ನಿರೀಕ್ಷಿಸುತ್ತೀರಿ?
* ನೆಲದಿಂದ ಒಂದು ಅಡಿ ಎತ್ತರದಲ್ಲಿ ಹಾಸಿಗೆಯಿರಬೇಕು. ಇದರಿಂದ ನೆಲದಲ್ಲಿ ಮುಕ್ತವಾಗಿ ಶಕ್ತಿ ಹರಿಯಲು ಅವಕಾಶ ಕಲ್ಪಿಸುತ್ತದೆ. ಶಕ್ತಿಯ ಮುಕ್ತ ಹರಿಯುವಿಕೆ ತಡೆದರೆ ನಿಮ್ಮ ಸಂಪತ್ತು ಗಳಿಸುವ ಅವಕಾಶ ಕೂಡ ಮೊಟಕಾಗುತ್ತದೆ.
* ತಲೆಯ ಹಿಂಭಾಗದಲ್ಲಿ ಭದ್ರಗೋಡೆಯೊಂದಿಗೆ ಮಲಗಿ. ಈ ಸ್ಥಿತಿಯು ನೀವು ಮಾಡುವ ಕೆಲಸದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ತಲೆಯ ಹಿಂಭಾಗದಲ್ಲಿ ಕಿಟಕಿಗಳು ಮತ್ತು ಬಾಗಿಲಿಗೆ ಅವಕಾಶ ಕೊಡಬಾರದು.
* ನೆಲವನ್ನು ಮನೆಯ ಒಳಗೆ ಗುಡಿಸಿಕೊಂಡು ಹೋಗಬೇಕು. ಮುಖ್ಯ ದ್ವಾರದತ್ತ ಕಸ ಗುಡಿಸುವುದರಿಂದ ಸಂಪತ್ತು ಕ್ಷೀಣಿಸುತ್ತದೆ.
* ಕಸದ ಬುಟ್ಟಿಗಳನ್ನು ಸದಾ ಮುಚ್ಚಿರಬೇಕು. ಇಲ್ಲದಿದ್ದರೆ ಸಂಪತ್ತಿನ ಶಕ್ತಿಯ ಭ್ರಷ್ಟತೆಗೆ ದಾರಿಕಲ್ಪಿಸುತ್ತದೆ.
* ಮನೆಯ ಮುಖ್ಯದ್ವಾರದಲ್ಲಿ ಚಪ್ಪಲಿಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಬಾರದು. ಮುಖ್ಯದ್ವಾರದಲ್ಲಿ ಮುಕ್ತ ಮತ್ತು ಸ್ವಚ್ಛ ಜಾಗವಿರಬೇಕು. ಇಲ್ಲದಿದ್ದರೆ ಗಾಳಿಯೊಂದಿಗೆ ಹರಿಯುವ ಶಕ್ತಿಯು ಬೂಟುಗಳು ಮತ್ತು ಚಪ್ಪಲಿಗಳ ವಾಸನೆಯೊಂದಿಗೆ ಮಿಶ್ರಣಗೊಂಡು ಮನೆಯಲ್ಲಿ ನಷ್ಟಗಳು ಪ್ರಾಪ್ತವಾಗುತ್ತದೆ.
* ತೊಳೆಯದ ಪಾತ್ರೆಗಳನ್ನು ಸಿಂಕ್‌ನಲ್ಲಿ ಹಾಗೇ ಬಿಡದೇ ಆದಷ್ಟು ಬೇಗ ತೊಳೆಯುವುದು ಒಳ್ಳೆಯದು. ತಕ್ಷಣವೇ ತೊಳೆಯದಿರುವುದು ಅಪೂರ್ಣತೆಯ ಸಂಕೇತವಾಗಿದ್ದು, ಹಣಕಾಸು ಪರಿಸ್ಥಿತಿಯ ಅವ್ಯವಸ್ಥೆಗೆ ಪುರಾವೆ ಒದಗಿಸುತ್ತದೆ.
* ಮುಖ್ಯ ಪ್ರವೇಶದ್ವಾರದ ಮೇಲೆ ಶೌಚಾಲಯಗಳು ಇರಬಾರದು. ಅದು ನಕಾರಾತ್ಮಕ ಶಕ್ತಿಯನ್ನು ಸೂಸುತ್ತದೆ. ಇದು ಮುಖ್ಯದ್ವಾರದಿಂದ ಪ್ರವೇಶಿಸುವ ನಕಾರಾತ್ಮಕ ಶಕ್ತಿಗೆ ಹಸ್ತಕ್ಷೇಪ ಉಂಟುಮಾಡುತ್ತದೆ.
* ಉತ್ತರದ ಕಡೆ ತಲೆಹಾಕಿಕೊಂಡು ನಿದ್ರೆ ಮಾಡಬೇಡಿ. ದಕ್ಷಿಣ ಅಥವಾ ಪೂರ್ವದಿಕ್ಕಿನಲ್ಲಿ ತಲೆಇಟ್ಟುಕೊಂಡು ಮಲಗುವುದರಿಂದ ಪ್ರಶಾಂತ ನಿದ್ರೆ ಮತ್ತು ಆರೋಗ್ಯಕರ ಜೀವನ.
* ಕೆಲಸಮಾಡುವಾಗ, ಓದುವಾಗ ಅಥವಾ ಗ್ರಾಹಕರ ಜತೆ ವ್ಯವಹರಿಸುವಾಗ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಮುಖವಿರಲಿ. ಉತ್ತರದಿಂದ ಹರಿಯುವ ಆಯಸ್ಕಾಂತೀಯ ಶಕ್ತಿ ನಿಮ್ಮ ಮುಖಕ್ಕೆ ಬಡಿಯುತ್ತದೆ ಮತ್ತು ಕ್ಷಿಪ್ರ ಮತ್ತು ಹರಿತ ಸ್ಮರಣಶಕ್ತಿ ನಿಮ್ಮದಾಗುತ್ತದೆ. ಸೂಕ್ತ ನಿರ್ಧಾರವನ್ನು ಕ್ಷಿಪ್ರಗತಿಯಲ್ಲಿ ತೆಗೆದುಕೊಳ್ಳುತ್ತೀರಿ ಮತ್ತು ಗ್ರಹಣ ಶಕ್ತಿ ಹೆಚ್ಚುತ್ತದೆ.
* ಅಡುಗೆಮಾಡುವಾಗ, ತಿನ್ನುವಾಗ ಅಥವಾ ಕುಡಿಯುವಾಗ ಉತ್ತರದಿಕ್ಕನ್ನು ನಿವಾರಿಸಿ. ಉತ್ತಮ ರುಚಿಗಾಗಿ, ಜೀರ್ಣಶಕ್ತಿಗಾಗಿ ಮತ್ತು ಆರೋಗ್ಯಕರ ದೇಹಕ್ಕಾಗಿ ಪೂರ್ವದ ಕಡೆ ಮುಖವಿರಲಿ.
* ಉತ್ತಮ ಏಕಾಗ್ರತೆ ಮತ್ತು ಭಕ್ತಿಗೆ ಪೂಜೆ ಮಾಡುವಾಗ ಉತ್ತರ ಅಥವಾ ಪೂರ್ವದ ಕಡೆ ಮುಖವಿರಲಿ.
* ಆರೋಗ್ಯ ಮತ್ತು ಸಂತೋಷ ಕಾಯ್ದುಕೊಳ್ಳಲು ಮನೆಯ ಗೋಡೆಗಳಲ್ಲಿ ಒಂದೇ ಬಣ್ಣವನ್ನು ಹಾಕಬೇಡಿ.
* ಹಾಸಿಗೆ ಮುಂಭಾಗದಲ್ಲಿ ಕನ್ನಡಿ ಇಡಬೇಡಿ. ಕೆಟ್ಟ ಕನಸುಗಳನ್ನು ತಪ್ಪಿಸಲು ಕನ್ನಡಿಯಿದ್ದರೆ ಅದನ್ನು ಮುಚ್ಚಿ.
* ಹೊರಹೊಮ್ಮುವ ವಿಕಿರಣದಿಂದ ಕೋಣೆಯ ಪ್ರಭಾವದ ಮಟ್ಟ ನಾಶವಾಗುವುದರಿಂದ ಟಿವಿ ಅಥವಾ ಕಂಪ್ಯೂಟರ‌್‌ನ್ನು ಮಲಗುವ ಕೋಣೆಯಲ್ಲಿ ಬಳಸುವುದನ್ನು ಕಡಿಮೆಮಾಡಿ.
* ವಾಯುವನ್ನು ಶುದ್ಧಗೊಳಿಸಲು ಈಶಾನ್ಯ ದಿಕ್ಕಿನಲ್ಲಿ ತುಳಸಿ ಅಥವಾ ರಬ್ಬರ್ ಗಿಡವನ್ನು ಇಡಿ.
* ಖಿನ್ನತೆ, ಸ್ಮರಣೆ ಕುಂಠಿತ ಮತ್ತು ತಲೆನೋವು ತಪ್ಪಿಸಲು ಬೆಳಕು ಕೆಳಕ್ಕೆ ಬೀಳುವ ಜಾಗದಲ್ಲಿ ಮಲಗಬೇಡಿ.
* ಗರ್ಭವತಿ ಮಹಿಳೆಯರು ಗರ್ಭಪಾತ ತಪ್ಪಿಸಲು ಈಶಾನ್ಯ ಕೋಣೆಯಲ್ಲಿ ನಿದ್ರೆಮಾಡಬಾರದು.
* ನೈರುತ್ಯ ಕಿಟಕಿಗಳ ಬದಲಿಗೆ ಉತ್ತರ ಮತ್ತು ಪೂರ್ವದ ಕಿಟಕಿಗಳನ್ನು ತೆರೆದಿಡುವುದರಿಂದ ಆರೋಗ್ಯ, ಸಂತೋಷ ಮತ್ತು ಕುಟುಂಬದ ಸಾಮರಸ್ಯ ಉಂಟಾಗುತ್ತದೆ.
* ಹೃದಯ ಮತ್ತು ಮೆದುಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ತಪ್ಪಿಸಲು ಲೋಹದ ಹಾಸಿಗೆಗಳಲ್ಲಿ ಮಲಗಬೇಡಿ.
* 90 ಡಿಗ್ರಿ ಮೂಲೆಗಳಿರುವ ಎರಡು ಕಡೆ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ರಸ್ತೆಗಳಿರುವ ನಿವೇಶನ ಅತ್ಯುತ್ತಮ ನಿವೇಶನ. ಉತ್ತರ ಮತ್ತು ಪೂರ್ವದಲ್ಲಿ ಖಾಲಿ ನಿವೇಶನವು ದಕ್ಷಿಣ ಮತ್ತು ಪಶ್ಚಿಮಕ್ಕಿಂತ ಹೆಚ್ಚಿಗೆಯಿರಬೇಕು.
* ಸೂರ್ಯನ ಬೆಳಕು ಗರಿಷ್ಠ ಬೀಳುವಂತೆ ಮತ್ತು ಗೋಡೆಗಳ ಎದುರುಬದುರು ಕಿಟಕಿಗಳನ್ನು ಇಡುವ ಮೂಲಕ ತಂಪಾದ ಗಾಳಿ ಒಳಕ್ಕೆ ಪ್ರವೇಶಿಸಿ ಬಿಸಿ ಗಾಳಿ ಹೊರಕ್ಕೆ ಹೋಗಲು ಅವಕಾಶ ನೀಡಬೇಕು.
* ಪೂರ್ವ ಮತ್ತು ಉತ್ತರ, ಈಶಾನ್ಯ ದಿಕ್ಕಿನಲ್ಲಿ ಯಾವುದೇ ರೀತಿಯ ಮರ ಬೆಳೆಸಬಾರದು. ಉತ್ತರ, ಪೂರ್ವ ಮತ್ತು ಈಶಾನ್ಯ ದಿಕ್ಕಿನಲ್ಲಿ ಸಣ್ಣ ಗಿಡವನ್ನು ನೆಡಬೇಕು. ಯಾವುದೇ ಮರದ ನೆರಳು ಮನೆಯ ಮೇಲೆ ಬೀಳಬಾರದು.
* ಒಲೆಯನ್ನು ಪೂರ್ವ ಆಗ್ನೇಯ ದಿಕ್ಕಿನಲ್ಲಿ ವ್ಯವಸ್ಥೆ ಮಾಡಿ, ಅಡುಗೆ ಮಾಡುವವರ ಮುಖ ಪೂರ್ವ ದಿಕ್ಕಿನ ಕಡೆ ಇರಬೇಕು.
ಮನೆಯಲ್ಲಿ ಕೋಣೆಗಳು ಯಾವ ದಿಕ್ಕಿನಲ್ಲಿರಬೇಕು* ಮನೆಯ ನಿವೇಶನದಲ್ಲಿ ನೀರಿನ ಮುಖ್ಯ ಮೂಲವು ಈಶಾನ್ಯ ದಿಕ್ಕಿನಲ್ಲಿರಬೇಕು. ಅಡುಗೆಮನೆ, ಜನರೇಟರ್ ಕೋಣೆ, ಬಾಯ್ಲರ್ ಆಗ್ನೇಯ ದಿಕ್ಕಿನಲ್ಲಿರಬೇಕು.
* ಅತಿಥಿಗೃಹ, ಸ್ಟೋರ್ ಅಥವಾ ಮಕ್ಕಳ ಕೋಣೆ ವಾಯವ್ಯ ದಿಕ್ಕಿನಲ್ಲಿ, ಮಾಸ್ಟರ್ ಬೆಡ್‌ರೂಂ, ಸಿಇಒ ಕಚೇರಿ ನೈರುತ್ಯ ದಿಕ್ಕಿನಲ್ಲಿ ಮುಖ ಮಾಡಿರಬೇಕು.
* ದಕ್ಷಿಣಕ್ಕೆ ಹೋಲಿಸಿದರೆ ಉತ್ತರ ಮತ್ತು ಪೂರ್ವಾಭಿಮುಖವಾಗಿ ಹೆಚ್ಚಿನ ಖಾಲಿ ಸ್ಥಳವಿರಬೇಕು.
ದಕ್ಷಿಣ ಮತ್ತು ಪಶ್ಚಿಮದ ನೆಲದ ಮಟ್ಟವು ಉತ್ತರ ಮತ್ತು ಪೂರ್ವಕ್ಕಿಂತ ಜಾಸ್ತಿಯಿರಬೇಕು.
* ದಕ್ಷಿಣ ಮತ್ತು ಪಶ್ಚಿಮದ ಕಾಂಪೌಂಡ್ ಗೋಡೆ ಉತ್ತರ ಮತ್ತು ಪೂರ್ವದ ಗೋಡೆಗಿಂತ ಎತ್ತರದಲ್ಲಿರಬೇಕು.
* ಉತ್ತರ ಅಥವಾ ಪೂರ್ವದಿಂದ ಪ್ರವೇಶ ದ್ವಾರವಿರಬೇಕು.
* ದಕ್ಷಿಣಾಭಿಮುಖವಾಗಿ ತಲೆ ಇರಿಸಿಕೊಂಡು ಮಲಗಬೇಕು.
No comments:
Post a Comment