Monday, August 16, 2010

ವಾಸ್ತು ಪರವಾಗಿ ಚಿಂತಿಸುವಾಗ, ಸಂಗ್ರಹ

ಮನೆ ಕಟ್ಟಲು ಅಡಿಕಲ್ಲು
ನಿರ್ಮಾಣದ ಬಗ್ಗೆ ನಾವು ವಾಸ್ತು ಪರವಾಗಿ ಚಿಂತಿಸುವಾಗ, ಸಾಧಾರಣ ನಾವು ಅಡಿಪಾಯ (ಅಡಿ ಕಲ್ಲು) ಹಾಕುವುದರ ಬಗ್ಗೆ ಹೆಚ್ಚು ಗಮನವನ್ನು ನೀಡುವುದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ ಅಡಿಕಲ್ಲಿಗೆ ಹೆಚ್ಚು ಪ್ರಾಶಸ್ತ್ಯವನ್ನು ನೀಡುವುದರಿಂದ ಮನೆಯು ಸುದೃಢವಾಗಿರುತ್ತದೆ.
ಮನೆ ಕಟ್ಟಲು ಅಡಿಕಲ್ಲು ಹಾಕುವ ಮೊದಲು ಭೂಮಿ ಪೂಜೆ ನಡೆಸಿ ವಾಸ್ತು ಪುರುಷನನ್ನು ಸಂತೋಷಗೊಳಿಸಬೇಕು. ಪೂಜೆ ನಡೆಸಿದ ನಂತರವೂ ಕೆಲವು ಕಾರ್ಯಗಳ ಬಗ್ಗೆ ಹೆಚ್ಚು ಶ್ರದ್ಧೆ ವಹಿಸ ಬೇಕೆಂದು ವಾಸ್ತುಶಾಸ್ತ್ರವು ಹೇಳುತ್ತದೆ.
ಕೆಲವು ಅಶುಭಕರವಾದ ಶಬ್ದ ಅಥವಾ ಸನ್ನಿವೇಷಗಳು ಈ ಸಮಯದಲ್ಲಿ ತಲೆದೋರಿದರೆ ಈ ಸಮಾರಂಭವನ್ನು ಇನ್ನೊಂದು ಮುಹೂರ್ತಕ್ಕೆ ಮುಂದೂಡುವುದು ಒಳ್ಳೆಯದು.
1. ಪೂಜೆ ನಡೆಸುವಂತಹ ಪೂಜಾರಿಗೆ ಆಪತ್ತು ತಲೆದೋರುವುದು.
2.ಶತ್ರುಗಳೊಂದಿಗೆ ಕಲಹ ಸಾಧ್ಯತೆಗಳು
3. ಗುಡುಗು ಮಿಂಚು
4.ಅಶುಭಕರವಾದ ವಾರ್ತೆಗಳು ಕೇಳಿಬರುವುದು.
5. ಅಳುವ ಶಬ್ದ
6.ಮನೆಯಲ್ಲಿ ಅಶುದ್ದವಾಗುವುದು
7.ಜ್ವಲಿಸುವ ಅಗ್ನಿ
8.ಹಾವಾಡಿಗ
9.ವಿಧವೆಯ ದರ್ಶನ
10.ಪೂಜಾ ಸಾಮಾಗ್ರಿಗಳು ಚಲ್ಲಾಪಿಲ್ಲಿಯಾಗುವುದು.
11.ತೆಂಗಿನಕಾಯಿ ಒಡೆದು ಹೋಗುವುದು.
12.ಆಯುಧಗಳು

ಮೇಲೆ ಹೇಳಿದಂತಹ ಶಕುನಗಳು ಅಡಿಕಲ್ಲು ಹಾಕುವಾಗ ಎದುರಾದರೆ ಅಶುಭಕರವೆಂದು ವಾಸ್ತು ಶಾಸ್ತ್ರಜ್ಞರ ಅಭಿಪ್ರಾಯ. ಇದರ ಪರಿಹರಿಸಲು ಇನ್ನೊಂದು ದಿನದ ಒಳ್ಳೆಯ ಮುಹೂರ್ತಕ್ಕೆ ಈ ಸಮಾರಂಭವನ್ನು ಮುಂದೂಡ ಬೇಕೆಂದು ಬಲ್ಲವರು ಹೇಳುತ್ತಾರೆ.ಮನೆ ಯಾವ ದಿಕ್ಕಿಗೆ ಮುಖ ಮಾಡಿರಬೇಕು? ಮನೆಯು ಯಾವ ದಿಕ್ಕಿಗೆ ಮುಖಮಾಡಿದೆಯೋ ಅದೇ ದಿಕ್ಕಿಗೆ ಮುಖ್ಯದ್ವಾರ ನಿರ್ಮಿಸುವುದು ಒಳ್ಳೆಯದು.ಬಾಗಿಲಿನ ಮುಂಭಾಗದಲ್ಲಿ ಜಗಲಿ ಇದ್ದರೆ ಅತ್ಯುತ್ತಮ.ದಕ್ಷಿಣಾಭಿಮುಖವಾಗಿರುವ ಮನೆಗೆ ಮಾತ್ರ ಮುಖ್ಯದ್ವಾರವು ದಕ್ಷಿಣ ಭಾಗಕ್ಕಿರಬಾರದು.ಪೂರ್ವ ಅಥವಾ ಪಶ್ಚಿಮ ಭಾಗಕ್ಕೆ ಅಭಿಮುಖವಾಗಿ ಮುಖ್ಯದ್ವಾರ ನಿರ್ಮಿಸಬಹುದು.
ಸಾಗುವಾನಿ,ಬೀಟಿ,ಮಹಾಗನಿ,ಹಲಸು ಮೊದಲಾದ ಉತ್ತಮವಾದ ಮರದಿಂದ ನಿರ್ಮಿಸಿದ ಬಾಗಿಲುಗಳನ್ನು ಉಪಯೋಗಿಸುವುದರಿಂದ ದೀರ್ಘ ಬಾಳ್ವಿಕೆ ಬರುವುದು.ಬಾಗಿಲುಗಳನ್ನು ನಿರ್ಮಿಸುವಾಗ ಒಂದೇ ಮರದ ಹಲಗೆಯಾದರೆ ಉತ್ತಮ.ವಿವಿಧ ಬಗೆಯ ಮರಗಳಿಂದ ಕೂಡಿದ ಬಾಗಿಲುಗಳನ್ನು ನಿರ್ಮಿಸಲೇ ಬಾರದು ಯಾಕೆಂದರೆ ವಿವಿಧ ಕಾಲಾವಸ್ಥೆಗೆ ಅನುಸಾರವಾಗಿ ಕೆಲವೊಂದು ಮರಗಳು ಸ್ಥಿತ್ಯಂತರಗೊಳಪಡುವುದರಿಂದಾಗಿ ಬಿರುಕುಗಳುಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಮುಖ್ಯಬಾಗಿಲನ್ನು ನಿರ್ಮಿಸುವಾಗ ಅಡಿಹಲಗೆಯನ್ನು ಕೊಡಲೇಬೇಕು.ವಾಸ್ತುಶಾಸ್ತ್ರದಲ್ಲಿ ಬಾಗಿಲು,ಕಿಟಿಕಿಗಳನ್ನು ನಿರ್ಮಿಸುವಾಗ ಅಂಗುಲದ ಅಳತೆ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.ಈ ಅಳತೆಯನ್ನು ಸರಿದೂಗಿಸಬೇಕಾದರೆ ಅಡಿಹಲಗೆ ಆವಶ್ಯಕವಾಗಿದೆ.ಹರಿದಾಡುವಂತಹ ಉರಗವರ್ಗ ಜಂತುಗಳು ಒಳಗೆ ಬರದಿರುವಂತೆ ತಡೆಯಲು ಇದು ಒಳ್ಳೆಯದು.ಒಂಟಿ ಹಲಗೆ ಅಥವಾ ಎರಡು ಹಲಗೆಯಿಂದ ಮಾಡಿದ ಬಾಗಿಲುಗಳೇ ಆದರೂ ಒಳಭಾಗಕ್ಕೆ ತೆರೆಯುವಂತಿದ್ದರೆ ಅದು ಉತ್ತಮವೆಂದು ಪರಿಗಣಿಸಲಾಗುತ್ತದೆ.
ಒಂದಕ್ಕಿಂತ ಹೆಚ್ಚು ಬಾಗಿಲುಗಳಿರುವಲ್ಲಿ ಮುಖ್ಯಬಾಗಿಲು ಯಾವಾಗಲೂ ಎಲ್ಲದಕ್ಕಿಂತ ದೊಡ್ಡದಾಗಿರುವಂತೆ ಶ್ರದ್ಧೆವಹಿಸಬೇಕು.ಹಳೆಯ ಕಟ್ಟಡಗಳಿಂದ ತೆಗೆದಿರಿಸಿದಂತಹ ಬಾಗಿಲುಗಳನ್ನು ಹೊಸ ಕಟ್ಟಡಗಳಿಗೆ ಬಳಸುವುದು ಇಂದು ಸರ್ವೇಸಾಮಾನ್ಯವಾದರೂ ವಾಸ್ತುಶಾಸ್ತ್ರ ಇದನ್ನು ನಿಷೇಧಿಸುತ್ತದೆ ಮಾತ್ರವಲ್ಲ ಹೊಸ ಕಟ್ಟಡಗಳಿಗೆ ಹೊಸ ವಸ್ತುಗಳನ್ನು ಬಳಸುವುದು ಶುಭದಾಯಕ ಎಂದು ಪರಿಗಣಿಸಲ್ಪಡುತ್ತದೆ.
ಪ್ರವೇಶ ದ್ವಾರಕ್ಕೆ ಎದುರಾಗಿ ಕನ್ನಡಿ ಬೇಡ ಮನೆಯ ಪ್ರವೇಶ ದ್ವಾರವು ಯಾವುದೇ ಅಡ್ಡಿ-ಅಡಚಣೆಗಳಿಲ್ಲದಂತಿರಬೇಕು. ಮನೆಯ ಪ್ರಮುಖ ಸ್ಥಾನ ಇದಾಗಿರುವುದರಿಂದ ಸರಿಯಾದ ಸ್ಥಳದಲ್ಲಿ ಇದು ಇದ್ದರಷ್ಟೇ ಅದೃಷ್ಟ ಹೆಚ್ಚಲು ಸಾಧ್ಯ ಮತ್ತು ಹೊರಗಿನಿಂದ ಒಳ್ಳೆಯ ಊರ್ಜಾ ಶಕ್ತಿ ಒಳಗೆ ಬರಲು ಸಾಧ್ಯ.
ಪ್ರವೇಶ ದ್ವಾರದ ಹೊರಗಾಗಲಿ, ಒಳಗಾಗಲಿ ಯಾವುದೇ ಅಡೆತಡೆಗಳಿರಬಾರದು. ಒಂದು ವೇಳೆ ಇದ್ದರೆ ಬರುವ ಒಳ್ಳೆಯ ಅದೃಷ್ಟ ಕೂಡ ದುರದೃಷ್ಟವಾಗಿ ಪರಿವರ್ತನೆ ಹೊಂದುತ್ತದೆ. ಸರಿಯಾದ ಪ್ರವೇಶ ದ್ವಾರ ಸಾಕಷ್ಟು ಬೆಳಕಿರುವ, ಅಡೆತಡೆಯಿಲ್ಲದ ಸೂಕ್ತ ಕೋಣೆಗೆ ತೆರೆದುಕೊಂಡಿರುವಂತಿರಬೇಕು.
ಬಾಗಿಲಿನ ಬಳಿ ಪಾದರಕ್ಷೆಗಳನ್ನಿಡುವ ಪುಟ್ಟದಾದ ಕಪಾಟು ಮತ್ತಿತರ ಅಡೆತಡೆಗಳನ್ನೂ ಇರಿಸಬಾರದು. ಅದೇ ರೀತಿ, ಪ್ರವೇಶ ದ್ವಾರದ ಎದುರಿಗೇ ಕಟ್ಟಡ, ಕಂಬಗಳು ಇರುವುದು ಕೂಡ ದುರದೃಷ್ಟಕರ. ಇಂಥ ಅಡೆ ತಡೆಯಿದ್ದರೆ ಅದು ಗಂಭೀರವಾದುದು. ಆದುದರಿಂದ ತಕ್ಷಣವೇ ಬಾಗಿಲು ಬದಲಾಯಿಸಬೇಕಾಗುತ್ತದೆ.
ಫ್ಲ್ಯಾಟ್‌ಗಳಲ್ಲಿ ಹೆಚ್ಚಾಗಿ ಪ್ರವೇಶ ದ್ವಾರದ ಹೊರಗೆ ಇಂತಹ ಅಡೆತಡೆಗಳು ಸಾಮಾನ್ಯವಾಗಿರುತ್ತದೆ. ಉದಾಹರಣೆಗೆ ಪ್ರವೇಶ ದ್ವಾರದ ಎದುರಿಗೇ ಮೆಟ್ಟಿಲುಗಳಿರುವುದು. ಹೀಗಿದ್ದರೆ ಆ ಮನೆಯಲ್ಲಿರುವವರಿಗೆ ದೋಷ, ಕಷ್ಟ ನಷ್ಟಗಳು ಸಾಮಾನ್ಯವಾಗಿರುತ್ತದೆ. ಆ ಮೇಲೆ, ಕೆಲವರು ಪ್ರವೇಶ ದ್ವಾರದ ಎದುರಿಗೇ ಕನ್ನಡಿ ಇರಿಸುತ್ತಾರೆ.
ಇದು ಅತ್ಯಂತ ಹಾನಿಕಾರಕವಾಗಿದೆ. ಯಾಕೆಂದರೆ ಪ್ರವೇಶ ದ್ವಾರದ ಮೂಲಕ ಪ್ರವೇಶಿಸುವ ಒಳ್ಳೆಯ ಊರ್ಜಾ ಶಕ್ತಿಯಾದ 'ಚಿ' ಕನ್ನಡಿಗೆ ಬಡಿದು ಹಿಂದಕ್ಕೆ ಹೋಗುತ್ತದೆ. ಆದರೆ ಪ್ರವೇಶ ದ್ವಾರದ ಎದುರಿನ ಗೋಡೆ ಖಾಲಿ ಇರಿಸುವುದು ಸರಿಯಲ್ಲ. ಅಲ್ಲಿ ಆಳವಾಗಿರೋದನ್ನು ಭಾಸವಾಗಿಸುವಂತೆ ಏನಾದರೂ ಇರಿಸಬೇಕಾಗುತ್ತದೆ.
ಅದಕ್ಕಾಗಿ ಕನ್ನಡಿ ಬದಲು ಯಾವುದೇ ಚಿತ್ರಗಳನ್ನು ಅಂಟಿಸಬಹುದು. ಒಂದು ಕಾಲು ಹಾದಿ, ಅಂಕು ಡೊಂಕಾದ ರಸ್ತೆ, ಅದರ ಆಳವಾಗಿ ಒಳಹೊಕ್ಕಂತೆ ಕಾಣಿಸುವ ಚಿತ್ರಗಳನ್ನು ಆ ಗೋಡೆಗೆ ಹಚ್ಚಬಹುದು. ಅಂದರೆ ಸಾಂಕೇತಿಕವಾಗಿ ಆಳದ ಭಾವನೆ ಸೃಷ್ಟಿಸುವಂಥ ಚಿತ್ರಗಳು ಬೇಕು.(ಸಾಧಾರ)
ಮನೆ ಖರೀದಿ ಬಗ್ಗೆ ಎಚ್ಚರ
ವಾಹನ ನಿಲ್ಲಿಸುವ ತಾಣಕ್ಕೆ ಕಂಬಗಳು ಮಾತ್ರವೇ ಆಧಾರವಾಗಿರುತ್ತವೆ. ಇಂಥ ಪರಿಸ್ಥಿತಿಯಲ್ಲಿ, ಕಟ್ಟಡದ ಮನೆ ಆರಿಸಿಕೊಳ್ಳುವಾಗ ಮೊದಲ ಅಂತಸ್ತು ಬಿಟ್ಟು ಬೇರೆಯೇ ಅಂತಸ್ತಿನ ಮನೆಯನ್ನೇ ಆಯ್ದುಕೊಳ್ಳುವುದು ಸೂಕ್ತ
ಯಾಕೆಂದರೆ ಕಂಬಗಳ ಮೇಲಿರುವ ಮನೆಯ ಜನ ಜೀವನ ಅಷ್ಟೊಂದು ಸುಖದಾಯಕವಾಗಿರುವುದಿಲ್ಲ. ಈ ಮನೆಗಳಿಗೆ ಭದ್ರ ತಳಹದಿಯ ಕೊರತೆಯಿರುವುದರಿಂದ ಅವರ ಜೀವನವೂ ಸ್ಥಿರವಾಗಿರಲಾರದು ಎಂಬುದು ಇದರ ಹಿಂದಿನ ತಥ್ಯ. ಭದ್ರ ತಳಹದಿಯ ಕೊರತೆಯಿರುವ ಮನೆಗಳ ಅಡಿಯಲ್ಲಿರುವ ಕಂಬಗಳ ಮಧ್ಯೆಯೇ ಊರ್ಜಾ ಶಕ್ತಿ ಮುಕ್ತವಾಗಿ ಪ್ರವಹಿಸುತ್ತದೆ.
ಇದು ಗಂಭೀರವಾದ ದೋಷವಲ್ಲವಾದರೂ ಸಾಧ್ಯವಾದಷ್ಟು ಇಂಥ ಮನೆಗಳನ್ನು ತಪ್ಪಿಸಿ ಎರಡನೇ ಅಥವಾ ಮೇಲಿನ ಮಹಡಿಯ ಮನೆಯನ್ನು ಆಯ್ದುಕೊಳ್ಳಬಹುದು. ಇಂಥ ಕಂಬಗಳ ಮೇಲಿರುವ ಕಟ್ಟಡಗಳಲ್ಲದೆ, ಯಾವುದೇ ಫ್ಲ್ಯಾಟ್ ಖರೀದಿ ಸಂದರ್ಭ ಎಲ್ಲಕ್ಕೂ ಮೇಲಿನ ಅಂತಸ್ತಿನಲ್ಲಿರುವ ಮನೆ ಕೊಳ್ಳುವ ಮುನ್ನ ಸ್ವಲ್ಪ ಯೋಚಿಸಿ. ಅಂದರೆ ನೀವು ಆರಿಸಿದ ಮನೆ ಮೇಲೆ ನೀರಿನ ಟ್ಯಾಂಕ್ ಇದೆಯೇ ಎಂಬುದನ್ನು ಗಮನಿಸಿ. ನೀರಿನ ಟ್ಯಾಂಕ್ ಇದ್ದರೆ ಆ ಮನೆ ವಾಸಯೋಗ್ಯವಲ್ಲ.
ಆದರೆ, ಮನೆಯ ತಲೆ ಮೇಲೆಯೇ ನೀರಿನ ಟ್ಯಾಂಕ್ ಇರದೆ, ಬೇರೆ ಕಡೆಯಲ್ಲಿದ್ದರೆ ಅದನ್ನು ಖರೀದಿಸಬಹುದು. ವಿಶೇಷವಾಗಿ ಮನೆಯ ಮಲಗುವ ಕೋಣೆಯ ಮೇಲೆಯೇ ನೀರಿನ ಟ್ಯಾಂಕ್ ಇದ್ದರೆ ಅದು ಖರೀದಿಗೆ ಸರ್ವಥಾ ಯೋಗ್ಯವಲ್ಲ. ಯಾಕೆಂದರೆ ಫೆಂಗ್ ಶುಯಿ ಪ್ರಕಾರ, ಎತ್ತರದಲ್ಲಿ ನೀರಿರುವುದು ಮತ್ತು ನೀರಿನ ಕೆಳಗೇ ಮಲಗುವುದು ಯಾವತ್ತೂ ಅಪಾಯಕಾರಿ. ಒಂದೇ ಸಾಲಿನಲ್ಲಿ ಮೂರು ಬಾಗಿಲುಗಳು ಇರುವುದು ಅತ್ಯಂತ ದೋಷಕರ.
ಯಾಕೆಂದರೆ ಈ ವ್ಯವಸ್ಥೆಯಿಂದಾಗಿ ಒಂದೇ ಸಾಲಿನಲ್ಲಿರುವ ಮೂರು ಬಾಗಿಲುಗಳಲ್ಲಿ ಚಿ ಶಕ್ತಿಯು ಅತಿ ವೇಗದಿಂದ ಪ್ರವಹಿಸಿ ಹೊರಗೆ ಹೋಗುತ್ತದೆ. ಮನೆಯ ಕೊನೆಯ ಕೋಣೆಯಲ್ಲಿರುವ ವ್ಯಕ್ತಿಯ ಮೇಲೆ ಈ ದೋಷದಿಂದಾಗಿ ಕೆಟ್ಟ ಪರಿಣಾಮ ಉಂಟಾಗುತ್ತದೆ.
ಇದಕ್ಕೆ ಪರಿಹಾರವೆಂದರೆ ಮಧ್ಯದ ಒಂದು ಬಾಗಿಲಿನ ಸ್ಥಾನಾಂತರ ಮಾಡುವುದು.
ಭೋಜನ ಕೋಣೆ ಹೇಗಿರಬೇಕು?
ಮನೆಯ ಕೋಣೆಗಳ ಬಗ್ಗೆ ಉಲ್ಲೇಖಿಸುವಾಗ ಭೋಜನ ಕೋಣೆಯ ಬಗ್ಗೆಯೂ ಗಮನ ಹರಿಸಬೇಕಾದುದು ಮುಖ್ಯ. ಯಾಕೆಂದರೆ ನಾವು ಸೇವಿಸುವ ಆಹಾರ ಎಷ್ಟೇ ಉತ್ತಮವಾಗಿದ್ದರೂ ಅದನ್ನು ಸೇವಿಸುವ ಸ್ಥಳ ಅಥವಾ ಪರಿಸರವು ಉತ್ತಮ ಮತ್ತು ಆರಾಮದಾಯಕವಾಗಿದ್ದರೆ ಮಾತ್ರ ಆಹಾರವು ಸರಿಯಾಗಿ ಪಚನಗೊಳ್ಳುವುದು.
ಸೂಕ್ತ ಸ್ಥಳದಲ್ಲಿ ಆಹಾರ ಸೇವಿಸುವುದರಿಂದ ದೇಹಕ್ಕೆ ಆರೋಗ್ಯವೂ ಮನಸ್ಸಿಗೆ ಹಿತವೂ ಲಭಿಸುತ್ತದೆ. ಮನೆಯಲ್ಲಿ ಆಹಾರ ಸೇವನೆಗಾಗಿ ಭೋಜನೆ ಕೋಣೆ ಇರುವುದು ಸಾಮಾನ್ಯ. ಅಲ್ಲಿರುವ ವಸ್ತುಗಳನ್ನು ಚೊಕ್ಕವಾಗಿ ಇಟ್ಟರೆ ಮಾತ್ರ ಅಲ್ಲಿ ಭೋಜನ ಸೇವಿಸಲು ಹಿತವೆನಿವುದು. ಭೋಜನ ಕೋಣೆಯಲ್ಲಿ ವಸ್ತುಗಳ ಇರಿಸುವಿಕೆಯು ಜೀವನದ ಮೇಲೆ ಪ್ರಭಾವವನ್ನು ಬೀರುತ್ತದೆ ಎಂದು ಫೆಂಗ್‌ಶುಯಿ ಶಾಸ್ತ್ರ ಹೇಳುತ್ತದೆ.
ಎಂದಿಗೂ ಮನೆಯ ಮುಖ್ಯದ್ವಾರಕ್ಕೆ ಎದುರಾಗಿ ಭೋಜನದ ಮೇಜನ್ನು ಇರಿಸಬೇಡಿ. ಸ್ನಾನಗೃಹದ ಹತ್ತಿರ ಅಥವಾ ಮುಂಭಾಗದಲ್ಲಿ ಮೇಜನ್ನು ಇರಿಸಲೇಬೇಡಿ. ಎರಡು ಕೋಣೆಗಳನ್ನು ವಿಂಗಡಿಸುವಂತೆ ಮಧ್ಯದಲ್ಲಿರಿಸಬೇಡಿ.
ನಿಮ್ಮ ಭೋಜನದ ಮೇಜು ಅಡಿಗೆ ಕೋಣೆಗೆ ಮುಖಮಾಡಿದೆ ಅಥವಾ ಅಲ್ಲಿಯೇ ಇದೆಯೆಂದಾದರೆ ಅದು ಮಾನಸಿಕ ಒತ್ತಡವನ್ನುಂಟು ಮಾಡುತ್ತದೆ. ಹವಾನಿಯಂತ್ರಕ, ಫ್ಯಾನ್‌ ಮೊದಲಾದುವುಗಳನ್ನು ಭೋಜನ ಕೋಣೆಯ ಎಡಭಾಗಕ್ಕಿರಿಸುವುದು ಉತ್ತಮ.ಭೋಜನ ಕೋಣೆಯು ಆದಷ್ಟು ಶುಚಿ ಹಾಗೂ ವಾಯುಯುಕ್ತವಾಗಿರಲಿ.
ಅತಿಥಿಗಳನ್ನು ಆದರಿಸುವ ಮನೆಯ ಮುಖ್ಯದ್ವಾರಮನೆಯ ಮುಖ್ಯದ್ವಾರವು ಮನೆಗೆ ಅತಿಥಿಗಳನ್ನು ಆದರದಿಂದ ಬರಮಾಡಿಕೊಳ್ಳುವ ಪ್ರತೀಕವಾದುದರಿಂದ ಮನೆಯ ಮುಖ್ಯದ್ವಾರಕ್ಕೆ ವಾಸ್ತುಶಾಸ್ತ್ರದಲ್ಲಿ ಹೆಚ್ಚು ಪ್ರಾಶಸ್ತ್ಯವನ್ನು ನೀಡಲಾಗಿದೆ.ಮುಖ್ಯದ್ವಾರವು ಯಾವ ದಿಕ್ಕಿನಲ್ಲಿರಬೇಕು? ಬಾಗಿಲು ನಿರ್ಮಿಸಲು ಯಾವ ಮರವನ್ನು ಆಯ್ಕೆ ಮಾಡಬೇಕು? ಮನೆಯ ಮುಂದಿನ ಗೇಟು ಯಾವ ರೀತಿ ಇರಿಸಬೇಕು?ಎಂಬುದನ್ನು ಶಾಸ್ತ್ರೀಯ ರೀತಿಯಲ್ಲಿ ವಾಸ್ತುಶಾಸ್ತ್ರವು ವಿವರಿಸುತ್ತದೆ.
ಮನೆಯ ಬಾಗಿಲು ತೆರೆದು ಪ್ರಸನ್ನವದನರರಾಗಿ ಅತಿಥಿಗಳನ್ನು ಬರಮಾಡಿಕೊಳ್ಳುವ ರೀತಿಯು ಅತಿಥಿಗಳ ಮನದಣಿಯುವಂತಿದ್ದರೆ ಮುಖ್ಯದ್ವಾರಕ್ಕೆ ಅಲಂಕಾರಗಳು ಯಾಕೆ ಬೇಕು ಹೇಳಿ? ಆದರೂ ಮುಖ್ಯದ್ವಾರವನ್ನು ಆದಷ್ಟು ಶೃಂಗರಿಸಲು ಪ್ರತಿಯೊಬ್ಬರೂ ಶ್ರಮಿಸುತ್ತಾರೆ ಯಾಕೆಂದರೆ ಮುಖ್ಯದ್ವಾರವು ಪ್ರತೀಮನೆಯ ಆಕರ್ಷಣಾ ಬಿಂದು ಆದುದರಿಂದಲೇ ಪ್ರತಿಯೊಬ್ಬರೂ ಅದಕ್ಕೆ ಹೆಚ್ಚು ಪ್ರಾಶಸ್ತ್ಯವನ್ನು ನೀಡಲು ಬಯಸುತ್ತಾರೆ.ಮನೆಯ ಪ್ರಮುಖ ದ್ವಾರವನ್ನು ಶೃಂಗರಿಸುವುದು ಐಶ್ವ್ಯರ್ಯದ ಸಂಕೇತ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ.ಮುಖ್ಯದ್ವಾರದ ಬಾಗಿಲುಗಳಲ್ಲಿ ಲಕ್ಷ್ಮಿ,ಸರಸ್ವತಿ,ಗಜಲಕ್ಷ್ಮಿ ಮೊದಲಾದ ಕೆತ್ತನೆಗಳಿದ್ದರೆ ಉತ್ತಮ, ಜೊತೆಗೆ ಇವು ಬಾಗಿಲಿನ ಸೌಂದರ್ಯವನ್ನು ವರ್ಧಿಸುತ್ತವೆ.
ಮನೆಯ ಮಧ್ಯಭಾಗದಲ್ಲಿ ಬರುವಂತೆ ಮುಖ್ಯದ್ವಾರ ನಿರ್ಮಿಸಿದರೆ ಉತ್ತಮ.ಈ ಬಾಗಿಲಿನ ನೇರ ರೇಖೆಯಲ್ಲಿ ಇನ್ನ್ಯಾವುದೇ ಬಾಗಿಲುಗಳು ಇರಬಾರದು.ಮುಖ್ಯದ್ವಾರದ ನೇರವಾಗಿ ಮನೆಯ ಗೇಟನ್ನು ಇರಿಸಬಾರದು.ಈ ಬಾಗಿಲಿನ ನೇರ ಮುಂಭಾಗದಲ್ಲಿ ಯಾವುದೇ ಕಂಬಗಳು ಅಥವಾ ಯಾವುದೇ ಮನೆಗಳೋ ಇರಬಾರದು.ಒಂದು ವೇಳೆ ನಿಮ್ಮ ಮನೆಯ ನೇರ ಮುಂಭಾ-ಗದಲ್ಲಿ ಇನ್ನೊಂದು ಮನೆಯಿದ್ದರೆ ಆ ಮನೆಯ ಬಾಗಿಲಿನ ನೇರವಾಗಿ ನಿಮ್ಮ ಮನೆಯ ಬಾಗಿಲು ಇರದಂತೆ ಶ್ರದ್ಧೆವಹಿಸಿ.
ಮನೆಗೆ ಭಾಗ್ಯತರುವ 'ಭಾಗ್ಯ ಬಿದಿರು' 'ಲಕ್ಕಿ ಬಾಂಬೂ' ಎಂದು ಕರೆಯಲ್ಪಡುವ 'ಭಾಗ್ಯ ಬಿದಿರು' ಎಂಬ ಸಸ್ಯವು ಮನೆಗೆ ಭಾಗ್ಯವನ್ನು ತರುತ್ತದೆ ಎಂದು ಫೆಂಗ್‌ಶುಯಿ ಹೇಳುತ್ತದೆ.
ಬಾಂಬೂ ಎಂದು ಕರೆಯಲ್ಪಟ್ಟರೂ ಇದು ಬಿದಿರಿನ ವರ್ಗಕ್ಕೆ ಸೇರಿದ ಸಸ್ಯವಲ್ಲ. ನೀರಿನಲ್ಲಿರಿಸಿ ಬೆಳೆಸಬಹುದಾದ ಈ ಸಸ್ಯವು ಮನೆಗೆ ಐಶ್ವರ್ಯ ಮತ್ತು ಆರೋಗ್ಯವನ್ನು ಪ್ರಧಾನ ಮಾಡುತ್ತದೆ ಮತ್ತು ಇದನ್ನು ಯೋಗ್ಯ ದಿಕ್ಕಿನಲ್ಲಿರಿಸುವುದರಿಂದ ಅಭಿವೃದ್ಧಿ ಸುನಿಶ್ಚಿತ ಎಂದು ಫೆಂಗ್‌ಶುಯಿ ವಿಶ್ವಾಸ.
ಉತ್ತಮ ಆರೋಗ್ಯಕ್ಕಾಗಿ ಇದನ್ನು ಪೂರ್ವ ದಿಕ್ಕಿನಲ್ಲಿಯೂ, ಧನಲಬ್ಧಿಗಾಗಿ ಆಗ್ನೇಯ ದಿಕ್ಕಿನಲ್ಲಿಯೂ ಇರಿಸುವುದು ಸೂಕ್ತವಾಗಿದೆ. ಆ ಸಸ್ಯದ ಕಾಂಡಗಳನ್ನು ಕೆಂಪು ರಿಬ್ಬನ್‌ನಿಂದ ಸುತ್ತಿದರೆ ಅದು ಚೈತನ್ಯವನ್ನು ಉತ್ಪಾದಿಸುತ್ತದೆ ಎಂದು ನಂಬಲಾಗುತ್ತದೆ. ಕಾಂಡಗಳನ್ನಿರಿಸುವಾಗ ಅವುಗಳ ಸಂಖ್ಯೆಗಳಲ್ಲಿ ಜಾಗರೂಕರಾಗಿರಬೇಕು
1. ಮೂರು ಕಾಂಡಗಳನ್ನು ಒಟ್ಟಿಗೆ ಕಟ್ಟಿದರೆ ಸಂತೋಷ ಪ್ರಧಾನವಾಗುತ್ತದೆ.
2. ಐದು ಕಾಂಡಗಳನ್ನು ಒತ್ತೊಟ್ಟಿಗೆ ಇರಿಸಿದರೆ ಧನಲಾಭವಾಗುತ್ತದೆ.
3. ಇಪ್ಪತ್ತೊಂದು ಕಾಂಡಗಳನ್ನು ಒತ್ತೊಟ್ಟಿಗೆ ಇರಿಸುವುದರಿಂದ ಸರ್ವೈಶ್ವರ್ಯಗಳು ಬಾಗಿಲಿಗೆ ಬಂದು ಸೇರುವುವು.
4. ನಾಲ್ಕು ಕಾಂಡಗಳನ್ನು ಒಟ್ಟಿಗೆ ಕಟ್ಟಿದರೆ ಮರಣ ಎಂಬ ಪ್ರತೀತಿ ಇದೆ. ಅದು ಹೇಗೆಂದರೆ Four- ಫೋರ್ ಎಂಬ ಪದಕ್ಕೆ ಸದೃಶವಾಗಿರುವ ಪದವು ಚೈನಾದಲ್ಲಿ ಮರಣವೆಂಬ ಅರ್ಥವನ್ನು ಹೊಂದಿದೆ. ಆದುದರಿಂದ ನಾಲ್ಕು ಕಾಂಡಗಳನ್ನು ಒಟ್ಟಿಗೆ ಎಂದೂ ಬಳಸಬಾರದು.
ಬೆಳೆಸುವ ವಿಧಾನ
ಇದನ್ನಿರಿಸುವ ನೀರಿನಲ್ಲಿ ಕ್ಲೋರಿನ್ ಅಂಶ ಇರದಂತೆ ಜಾಗ್ರತೆವಹಿಸಬೇಕು ಮತ್ತು ಅಲ್ಪ ಸೂರ್ಯಪ್ರಕಾಶ ತಾಗುವಂತಿರಬೇಕು. ಅತಿ ಉಷ್ಣಾಂಶವಿದ್ದರೆ ಇವುಗಳು ಹಳದಿ ಬಣ್ಣಕ್ಕ ತಿರುಗುತ್ತವೆ ಆದುದರಿಂದ ಕೋಣೆಯ ಉಷ್ಣತೆ ಮಿತವಾಗಿರಲಿ. ಎಳೆ ಕಾಂಡದ ಕತ್ತರಿಸಿದ ಭಾಗಗಳನ್ನು ನೀರಿನಲ್ಲಿರಿಸಿದರೆ ಅವುಗಳು ಕ್ರಮೇಣ ಬೆಳೆಯಲಾರಂಭಿಸುತ್ತವೆ. ಬುಡದಲ್ಲಿ ನೀರು ಅಧಿಕವಾಗಿ ತಂಗಿನಿಲ್ಲದಂತೆ ಜಾಗ್ರತೆವಹಿಸಿದರೆ ಇವುಗಳು ದಟ್ಟವಾಗಿ ಬೆಳೆಯುವುವು.
ಮನೆಗೆ ದೋಷ ತರುವ ಮರಗಳು ಮನೆಯ ಪರಿಸರದಲ್ಲಿ ಗಿಡ ಮರಗಳನ್ನು ನೆಡುವಾಗ ಕೆಲವು ವಾಸ್ತು ಸಂಬಂಧಿತ ಕಾರ್ಯಗಳ ಬಗ್ಗೆ ಎಚ್ಚರ ವಹಿಸಬೇಕಾಗಿದೆ.ಕೆಲವು ಮರಗಳು ಋಣಾತ್ಮಕ ಪ್ರಭಾವವನ್ನು ಬೀರುವಂತವುಗಳಾಗಿದ್ದು ಅವುಗಳನ್ನು ಮನೆ ಪರಿಸರದಿಂದ ಆದಷ್ಟು ದೂರವಿರಿಸಿದರೆ ಉತ್ತಮ. ದುಷ್ಟ ಶಕ್ತಿಗಳನ್ನು ಆಕರ್ಷಿಸುವ ಮರಗಳು, ಬೇಗನೆ ಮುರಿದು ಬೀಳುವಂತಹ ಮರಗಳು, ಕಾಂಡದಲ್ಲಿ ಹಾಲಿರುವ ಮರಗಳು ಇತ್ಯಾದಿಗಳನ್ನು ಮನೆಯಿಂದ ಆದಷ್ಟು ದೂರವಿರಿಸಿದರೆ ಉತ್ತಮ.
ಕಾಸರಕ, ಬೇವಿನ ಮರ, ಹಾಳೆಮರ, ಪಪ್ಪಾಯಿ ಮೊದಲಾದವುಗಳನ್ನು ಸಾಮಾನ್ಯವಾಗಿ ಮನೆಯ ಹತ್ತಿರದಲ್ಲಿ ನೆಡಬಾರದು. ಹಿತ್ತಿಲಲ್ಲಿ ಇವುಗಳನ್ನು ಬೆಳೆಸುವುದರಿಂದ ಅಷ್ಟು ದೋಷಗಳೇನೂ ತಲೆದೋರುವುದಿಲ್ಲ.
ಮೇಲೆ ತಿಳಿಸಿದಂತಹ ಮರಗಳು ಋಣಾತ್ಮಕ ಗುಣಗಳನ್ನು ಆಕರ್ಷಿಸುವ ಶಕ್ತಿಯುಳ್ಳವುಗಳಾಗಿವೆ.ಇವುಗಳು ಮನೆಯ ಸಮೀಪವಿದ್ದರೆ ಪೈಶಾಚಿಕ ಶಕ್ಕಿಗಳ ಸಾನಿಧ್ಯದಿಂದಾಗಿ ದೃಷ್ಟಿ ದೋಷವು ಉಂಟಾಗಲು ಸಾಧ್ಯತೆ ಇದೆ. ಭಾಗ್ಯದೋಷ, ಆಪತ್ತುಗಳನ್ನು ಇವುಗಳು ಆಹ್ವಾನಿಸುತ್ತವೆ ಎಂದು ವಾಸ್ತು ಶಾಸ್ತ್ರವು ಹೇಳುತ್ತದೆ.
ಅಲಂಕಾರಕ್ಕಾಗಿ ಬಳಸುವ ಹೂಗಳಿರುವ ಕಳ್ಳಿಗಿಡದಂತಿರುವ ಸಸ್ಯಗಳನ್ನು ವರ್ಜಿಸುವುದು ಒಳ್ಳೆಯದು. ತಾಳೆಮರದಿಂದಲೂ ದೋಷವುಂಟಾಗಲು ಸಾಧ್ಯವಿರುವುದರಿಂದಾಗಿ ಇದನ್ನು ಹೋಲುವಂತಿರುವ ಅಲಂಕಾರಿಕ ಸಸ್ಯಗಳನ್ನು ಸಹ ಮನೆಯಲ್ಲಿರಿಸುವುದು ಒಳ್ಳೆಯದಲ್ಲ. ಆದರೆ ಕೊನ್ನೆ ಹೂ, ದೇವದಾರು ಮೊದಲಾದ ವೃಕ್ಷಗಳನ್ನು ನೆಡುವುದರಿಂದ ಇಂತಹ ದೋಷಗಳನ್ನು ಹೋಗಲಾಡಿಸ ಬಹುದು.
ವಾಸ್ತು ನಿಮ್ಮ ಮಕ್ಕಳ ಒತ್ತಡ ತಗ್ಗಿಸಬಹುದುಸಣ್ಣಪುಟ್ಟ ವಾಸ್ತುಶಾಸ್ತ್ರದ ವಿಧಾನಗಳನ್ನು ಅನುಸರಿಸುವ ಮೂಲಕ ನಿಮ್ಮ ಮಕ್ಕಳ ಪರೀಕ್ಷಾ ಒತ್ತಡವನ್ನು ತಗ್ಗಿಸಬಹುದು. ಪರೀಕ್ಷೆ ಸಮೀಪಿಸುತ್ತಲೇ ಹೆಚ್ಚು ಅಂಕ ಪಡೆಯಲೋಸುಗ ಸದಾಕಾಲ ಪುಸ್ತಕ ಹಿಡಿದು ಓದುವಂತೆ ಮಕ್ಕಳನ್ನು ಹಿಂಸಿಸುವುದು ಅವರ ಮನಸ್ಸಿನ ಮೇಲೆ ಅಡ್ಡಪರಿಣಾಮ ಬೀರಬಹುದು. ಮಕ್ಕಳ ಹೆತ್ತವರು ನೀವಾಗಿದ್ದರೆ, ಇಲ್ಲ ನಿಮ್ಮ ಮನೆಯಲ್ಲಿ ಓದುವ ಮಕ್ಕಳಿದ್ದರೆ ಇಲ್ಲಿ ಕೊಟ್ಟಿರುವ ಕೆಲವು ಸರಳ ಸೂತ್ರಗಳನ್ನು ಗಮನಿಸಿ.
ನಿಮ್ಮ ಮಗುವು-
*ಎಂದಿಗೂ ಪಶ್ಚಿಮ ಮತ್ತು ಉತ್ತರಕ್ಕೆ ತಲೆ ಹಾಕಿ ಮಲಗಬಾರದು.
*ನಿಮ್ಮ ಮಗುವು ಹುಡುಗನಾಗಿದ್ದರೆ, ಮನೆಯ ಅಥವಾ ಕೊಠಡಿಯ ವಾಯುವ್ಯ ಭಾಗದಲ್ಲಿ ಮಲಗಿ ನಿದ್ರಿಸದಂತೆ ಎಚ್ಚರ ವಹಿಸಿ.
*ಹುಡುಗಿಯಾಗಿದ್ದಲ್ಲಿ ಮನೆಯ ಅಥವಾ ಕೊಠಡಿಯ ನೈರುತ್ಯ ಭಾಗದಲ್ಲಿ ನಿದ್ರಿಸದಿರಲಿ.
*ಮಲಗುವ ಕೋಣೆಯಲ್ಲಿ ಕನ್ನಡಿಗಳು ಬೇಡ.
*ಮಕ್ಕಳು ಅಭ್ಯಾಸಕ್ಕೆ ಬಳಸುವ ಜಾಗದ ದಕ್ಷಿಣ ಮತ್ತು ಪಶ್ಚಿಮ ಗೋಡೆಗಳಲ್ಲಿ ಕನ್ನಡಿಗಳನ್ನು ಅಳವಡಿಸಬೇಡಿ.
*ಅಭ್ಯಾಸ, ಓದಿನ ವೇಳೆಗೆ ಪೂರ್ವ ಅಥವಾ ಉತ್ತರದತ್ತ ಮುಖಮಾಡಲಿ.
*ಸುತ್ತಮುತ್ತ ಪುಸ್ತಕ ಹಾಳೆಗಳನ್ನು ಹರಡದೆ ಅಭ್ಯಾಸದ ಮೇಜನ್ನು ಶುದ್ಧವಾಗಿಸಿ.
*ಮನೆಯ ಅಥವಾ ಕೊಠಡಿಯ ಈಶಾನ್ಯ ಭಾಗದಲ್ಲಿ ಮಕ್ಕಳಿಗೆ ಓದುವ ಜಾಗವನ್ನು ಅನುವು ಮಾಡಿ ಕೊಡಿ.
*ಮಕ್ಕಳು ಹೆಚ್ಚಿನ ಒತ್ತಡದಲ್ಲಿದ್ದರೆ, ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಲು ಹೇಳಿ.
*ಕುಟುಂಬದ ಸದಸ್ಯರು ಒಟ್ಟಾಗಿ ಕಲೆಯು ಲೀವಿಂಗ್ ರೂಮಿನ ಈಶಾನ್ಯ ದಿಕ್ಕಿಗೆ ಮೀನುಗಳ ಅಕ್ವೇರಿಯಂ, ನೀರಿನ ಕಾರಂಜಿ ಅಥವಾ ಅರ್ಧ ಡಜನ್ ಬಿದಿರಿನ ಸಸಿಗಳನ್ನಿಡಿ. ಆದರೆ ಎಂದಿಗೂ ಇವುಗಳನ್ನು ಮೂಲೆಯಲ್ಲಿ ಇಡಬೇಡಿ.
*ಮಕ್ಕಳು ಮಲಗುವ ಮತ್ತು ಅಭ್ಯಾಸ ನಡೆಸುವ ಸ್ಥಳಗಳಲ್ಲಿ ಹಸಿರು ಮತ್ತು ಹಳದಿ ಬಣ್ಣಗಳು ಯಥೇಚ್ಛವಾಗಿರಲಿ. ಹೊದಿಕೆ, ಅಭ್ಯಾಸ ಮೇಜಿನ ಹಾಸು ವಸ್ತ್ರ, ಕಿಟಿಕಿ ಬಾಗಿಲಿನ ಪರದೆಗಳು, ಮನೆಯೊಳಗಿಡುವ ಗಿಡಗಳು, ದಿಂಬಿನ ಕವರ್ ಇತ್ಯಾದಿಗಳನ್ನು ಈ ಬಣ್ಣದಲ್ಲೇ ಆರಿಸಿ.
*ಊಟ ಮಾಡುವ ವೇಳೆ, ಹುಡುಗಿಯಾಗಿದ್ದಲ್ಲಿ, ಪೂರ್ವಕ್ಕೂ, ಹುಡುಗನಾಗಿದ್ದರೆ ಉತ್ತರಕ್ಕೂ ಮುಖಮಾಡಿರಲಿ.
*ಕಲಿಕಾ ನಿರತವಾಗಿರುವ ಮಕ್ಕಳು ಬಳಸುವ ಜಾಗ ಮತ್ತು ಮಲಗುವ ಜಾಗವನ್ನು ಇತರರು ಬಳಸದಂತೆ ಜಾಗೃತೆ ವಹಿಸಿ
*ಬೆಳಿಗ್ಗೆ ಎದ್ದೊಡನೆ ಬರಿಯ ಹೊಟ್ಟೆಗೆ ಕೆಲವು ತುಳಸಿ ಎಲೆಗಳನ್ನು ತಿನ್ನುವ ಅಭ್ಯಾಸ ಮಾಡಿಸಿ
*ಎಂದಿಗೂ ಕಿವಿಗಡಚಿಕ್ಕುವ ಸಂಗೀತವನ್ನು ಕೇಳಿಸಲೇ ಬೇಡಿ. ಇದು ಅವರ ಮನಸ್ಸಿನ ಕೇಂದ್ರೀಕರಣಕ್ಕೆ ಧಕ್ಕೆ ತರಬಹುದು ಮತ್ತು ಒತ್ತಡವುಂಟುಮಾಡಹುದು.
*ಅತ್ಯಂತ ಕನಿಷ್ಠ ಧ್ವನಿಯಲ್ಲಿ ಮೃದುವಾಗ ಲಘಸಂಗೀತವನ್ನು ರಾತ್ರಿಯ ವೇಳೆ ಅವರ ಮಲಗುವ ಕೋಣೆಯಲ್ಲಿ ಕೇಳಿಸಿ. ಇದು ಗಾಯತ್ರಿ ಮಂತ್ರವೂ ಆಗಿರಬಹುದು.
*ಸೇರಿದ ಗೋಡೆಗಳ ಕೋನಕ್ಕೆ ಬಾಗಿಲಿರುವ ಕೋಣೆಯಲ್ಲಿ ಮಕ್ಕಳು ಮಲಗುವುದು ಮತ್ತು ಅಧ್ಯಯನ ನಡೆಸುವುದು ಬೇಡ.
*ಇವಿಷ್ಟು ಅಂಶಗಳನ್ನು ಗಮನಿಸುವುದರೊಂದಿಗೆ ಮಕ್ಕಳಲ್ಲಿ ಧನಾತ್ಮಕ ಮನೋಭಾವ ತುಂಬಿ. ಅವರ ಬಗ್ಗೆ ಧನಾತ್ಮಕವಾಗಿ ಮಾತನಾಡದಿರಿ. ನೀವು ಮಕ್ಕಳನ್ನು ಪ್ರೀತಿಸುತ್ತೀರೆಂಬ ಭದ್ರತಾ ಭಾವನೆ ಅವರಲ್ಲಿ ಮೂಡುವಂತೆ ಮಾಡಿ.
*ಮಧ್ಯೆ ಮಧ್ಯೆ ಅವರಿಗೆ ವಿಶ್ರಾಂತಿ ಪಡೆಯಲು ಅನುಕೂಲ ಮಾಡಿ. ಆಟವಾಡಲು ಅಥವಾ ಅವರ ಇಷ್ಟದಲ್ಲಿ ತೊಡಗಲು ಇಲ್ಲವೇ ಯೂವುದಾದರೂ ಹೊಟೇಲಿಗೆ ಕರೆದೊಯ್ಯಿರಿ
*ಮಕ್ಕಳ ಮನಸ್ಸನ್ನು ಬೇರೆಡೆಗೆ ಸೆಳೆಯುವಂತಹ ಯಾವದೇ ವಸ್ತುವನ್ನು ಅವರ ಅಭ್ಯಾಸ ಜಾಗದಲ್ಲಿ ಇರಿಸಬೇಡಿ. *ಮಕ್ಕಳು ವ್ಯಾಯಾಮ ಧ್ಯಾನ ಮಾಡಲು ಪ್ರೇರೇಪಿಸಿ. ಆದರೆ ಯಾವುದೇ ವಿಚಾರದಲ್ಲೂ ಅವರನ್ನು ಒತ್ತಾಯಿಸುವುದೇ ಬೇಡವೇ ಬೇಡ
ಸರಿ, ಇದೀಗ ನಿಮಗೂ, ನಿಮ್ಮ ಮಗುವಿಗೂ ಶುಭಹಾರೈಕೆಗಳು. ವಾಸ್ತು ಸಹಾಯದಿಂದ ನಿಮ್ಮ ಮಗುವು ಒತ್ತಡರಹಿತವಾಗಿ ಪರೀಕ್ಷೆ ಬರೆಯುವಂತಾಗಲಿ.
ಫೆಂಗ್‌ಶುಯಿ ಪ್ರಕಾರ ಚಿತ್ರಗಳ ಪಾತ್ರ ಫೆಂಗ್‌ಶುಯಿ ಶಾಸ್ತ್ರದ ಪ್ರಕಾರ ಮನೆಯೊಳಗೆ ನಾವಿರಿಸುವಂತಹ ಚಿತ್ರಗಳು ಅಥವಾ ವರ್ಣಚಿತ್ರಗಳು ಅಲ್ಲಿ ವಾಸಿಸುವವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಮನಸ್ಸಿಗೆ ಮುದ ನೀಡುವಂತಹ ಚಿತ್ರಗಳನ್ನು ಭಿತ್ತಿಯಲ್ಲಿ ತೂಗುಹಾಕುವುದರಿಂದ ಮನೆಯೊಳಗೆ ಧನಾತ್ಮಕ ಚೈತನ್ಯವು ಮೂಡಿ ಬರುವುದು ಎಂದು ಶಾಸ್ತ್ರವು ಹೇಳುತ್ತದೆ. ಮಲಗುವ ಕೋಣೆಯಲ್ಲಿ ಉತ್ತಮವಾದ ಚಿತ್ರಗಳು ಅಂದರೆ ನಗುವ ಮಗು, ಹೂವಿನ ಚಿತ್ರಗಳನ್ನಿರಿಸುವುದರಿಂದ ಮನಸ್ಸಿಗೆ ಹಿತಕರವಾಗಿದ್ದು ಚೆನ್ನಾಗಿ ನಿದ್ದೆಮಾಡಲು ಸಹಕಾರಿಯಾಗಿದೆ. ಫೆಂಗ್‌ಶುಯಿ ಪ್ರಕಾರ ಕೋಣೆಯೊಳಗಿರುವ ಚಿತ್ರಗಳು ನಮ್ಮ ಜೀವನದ ಮೇಲೆ ಪ್ರಮುಖ ಪರಿಣಾಮವನ್ನು ಬೀರುತ್ತವೆ. ಅಂತಹ ಕೆಲವು ಉದಾಹರಣೆಗಳನ್ನು ಕೆಳಗೆ ಕೊಡಲಾಗಿದೆ.
.ಈಜುವ ಮೀನಿನ ಚಿತ್ರವು ದೀರ್ಘಕಾಲ ಬಾಳ್ವಿಕೆಯನ್ನು ಪ್ರತಿಬಿಂಬಿಸುತ್ತದೆ..
ಕುರಿಮರಿಗಳ ಚಿತ್ರವು ಭಾಗ್ಯದ ಪ್ರತೀಕ.
.ಸೂರ್ಯೋದಯ, ಪರ್ವತಗಳ ಚಿತ್ರಗಳು ಶುಭ ನಿರೀಕ್ಷೆಯನ್ನು ಸೂಚಿಸುತ್ತವೆ.
.ಜಲಪಾತದ ಚಿತ್ರವು ಶುಭದಾಯಕ.
.ನಗುಮುಖದ ವ್ಯಕ್ತಿಗಳ ಪೊಟ್ರೇಟ್‌ಗಳು ಧನಾತ್ಮಕ ಅನುಭವಗಳನ್ನು ಮೈಗೂಡಿಸಲು ಸಹಾಯಕವಾಗುತ್ತದೆ.
.ಕಡು ಬಣ್ಣದ ಅಥವಾ ದಟ್ಟವಾದ ಬಣ್ಣದ ಚಿತ್ರಗಳು ಅನಾರೋಗ್ಯವನ್ನುಂಟುಮಾಡುತ್ತವೆ.
.ರೇಖಾಗಣಿತದ ಆಕೃತಿಗಳನ್ನು ಹೋಲುವ ವರ್ಣ ಚಿತ್ರಗಳು ಮನಸ್ಸಿನ ಮೇಲೆ ಹಾನಿಕರವಾದ ಪರಿಣಾಮಗಳನ್ನು ಬೀರುವುದು
.ಕಡು ಕೆಂಪು ಬಣ್ಣವನ್ನು ಅತಿಯಾಗಿ ಬಳಸಿದ ವರ್ಣಚಿತ್ರಗಳು ಗೊಂದಲವನ್ನು ಸೃಷ್ಟಿಸುವ ಸಾಧ್ಯತೆಗಳಿರುತ್ತವೆ.
.ಕ್ರೂರ ಮೃಗಗಳ ಅಥವಾ ಭಯಾನಕ ಚಿತ್ರಗಳು ಆರೋಗ್ಯವನ್ನು ಕೆಡಿಸುತ್ತದೆ.
ಹೀಗೆ ಸೂಕ್ತವಾದ ಚಿತ್ರಗಳನ್ನು ಕೋಣೆಯೊಳಗಿರಿವುದರಿಂದ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ದೊರಕುವುದು
ಅದೃಷ್ಟ ತರುವ ಸಸ್ಯಗಳುಫೆಂಗ್‌ಶುಯಿ ದೃಷ್ಟಿಕೋನದಿಂದ ಸಸ್ಯಗಳು ಶುಭಕರವೆನಿಸಿವೆ. ಮನೆಯಲ್ಲಿ ಸಸ್ಯಗಳನ್ನು ನೆಡುವುದು ಸದಾ ಒಳ್ಳೆಯದು. ಕಚೇರಿಯಲ್ಲಿ ಸಸ್ಯಗಳಿದ್ದರೆ ಅವು ನಿಮ್ಮ ವೃತ್ತಿಜೀವನದಲ್ಲೂ ಅದೃಷ್ಟ ತರಬಲ್ಲದು. ಕಚೇರಿಯ ಪೂರ್ವ, ದಕ್ಷಿಣ ಮತ್ತು ಆಗ್ನೇಯ ಮ‌ೂಲೆಗಳಲ್ಲಿ ಗರಿಷ್ಠ ಅದೃಷ್ಟ ಗಳಿಸಲು ಗಿಡಗಳನ್ನು ಇರಿಸಿ. ನೀವು ವಿವಾಹಿತ ದಂಪತಿಯಾಗಿದ್ದು, ಮಕ್ಕಳನ್ನು ಬಯಸಿದ್ದರೆ ಮಲಗುವ ಕೋಣೆಯಲ್ಲಿ ಹೂವುಗಳನ್ನು ಇರಿಸಬೇಡಿ.
ದಾಳಿಂಬೆ ಹಣ್ಣುಗಳು
ಬದಲಿಗೆ ಹಣ್ಣುಗಳ ಬುಟ್ಟಿಯನ್ನು ಮಲಗುವ ಕೋಣೆಯಲ್ಲಿಡಿ. ಹಣ್ಣುಗಳು ವಿಶೇಷವಾಗಿ ದಾಳಿಂಬೆ ಹಣ್ಣುಗಳು ಸಂತಾನ ಫಲದ ಸಂಕೇತವಾಗಿದೆ. ಮನೆಯೊಳಗೆ ಮುಳ್ಳಿನ ಗಿಡಗಳನ್ನು ಇರಿಸಬೇಡಿ. ಮುಳ್ಳಿನ ಗಿಡಗಳು ರಕ್ಷಣಾತ್ಮಕ ಕವಚವಾಗಲಿದ್ದು, ಮನೆಯ ಹೊರಕ್ಕೆ ಇರಿಸಬಹುದು. ಮುಂಬಾಗಿಲಿಗೆ ಅತೀ ಸಮೀಪದಲ್ಲಿ ಇರಿಸಬೇಡಿ. ಮುಂಬಾಗಿಲಿನಿಂದ ದೂರದಲ್ಲಿ ಬಾಲ್ಕನಿ ಬಳಿ ಇರಿಸಿ.
ಮನೆಯ ಹೊರಗೆ ಅಥವಾ ಒಳಗೆ ಬೋನ್ಸಾಯಿ ಗಿಡಗಳನ್ನು ಇರಿಸಬೇಡಿ. ಅವು ಕುಂಠಿತ ಬೆಳವಣಿಗೆಯನ್ನು ತೋರಿಸುತ್ತದೆ. ನಿಮ್ಮ ಸಸ್ಯಗಳನ್ನು ಆಗಾಗ್ಗೆ ಟ್ರಿಮ್ ಮಾಡುತ್ತಿರಿ. ಅತಿಯಾಗಿ ಬೆಳೆದ ಸಸ್ಯಗಳು ಕೆಟ್ಟಶಕ್ತಿಗೆ ಉತ್ತೇಜಿಸುತ್ತದೆ. ಇದೇ ರೀತಿ ನಿಮ್ಮ ತೋಟದಲ್ಲಿ ನಿಯಮಿತವಾಗಿ ಮರಗಳ ಅನವಶ್ಯಕ ಭಾಗ ಕತ್ತರಿಸಿ ಓರಣಗೊಳಿಸಿ. ನಿಮ್ಮ ಮನೆಯನ್ನು ಮರಗಳು ಆವರಿಸದಂತೆ, ಅದರ ನೆರಳು ಬೀಳದಂತೆ ನೋಡಿಕೊಳ್ಳಿ. ನಿಮ್ಮ ಕೋಣೆಯಲ್ಲಿ ತಾಜಾ ಹೂವುಗಳನ್ನು ಕಾಯಮ್ಮಾಗಿ ಇರಿಸಿ. ಆದರೆ ಹೂವು ಬಾಡಿದರೆ ಬಿಸಾಕಿ. ಒಣಗಿದ ಹೂವುಗಳನ್ನು ಮನೆಯಲ್ಲಿ ಇಡಬೇಡಿ. ಅದರಿಂದ ದುರಾದೃಷ್ಟ ತರುತ್ತದೆಂದು ಹೇಳಲಾಗಿದೆ.
ಕೃತಕ ಹೂವುಗಳು ಆದ್ಯತೆಯ ಆಯ್ಕೆಯಾಗಿದ್ದು, ಅವು ಅದೃಷ್ಟ ತರುತ್ತದೆಂದು ಭಾವಿಸಲಾಗಿದೆ.ಯಾವುದೇ ಹೂವು, ಸಸ್ಯಗಳು ಮತ್ತು ಯಾವುದೇ ಶುಭಕರ ಫೆಂಗ್ ಶುಯಿ ಸಂಕೇತವನ್ನು ಸ್ನಾನದ ಕೋಣೆಯಲ್ಲಿ ಇರಿಸಬೇಡಿ. ಅದೃಷ್ಟವು ದುರಾದೃಷ್ಟಕ್ಕೆ ತಿರುಗಬಹುದು. ಅಂಗಡಿಗಳ ದ್ವಾರದಲ್ಲಿ ನಿಂಬೆಹಣ್ಣುಗಳನ್ನು ತೂಗುಹಾಕಿರುವುದನ್ನು ನೀವು ನೋಡಿರಬಹುದು. ಹಿಂದು ನಂಬಿಕೆಯ ಪ್ರಕಾರ ಅವು ಕೆಟ್ಟ ದೃಷ್ಟಿಯನ್ನು ನಿವಾರಿಸುತ್ತದೆ. ಇದೇ ರೀತಿ ಕಿತ್ತಲೆ ಮತ್ತು ನಿಂಬೆಹಣ್ಣು ಅದೃಷ್ಟದ ಶಕ್ತಿಶಾಲಿ ಸಂಕೇತವೆಂದು ನಂಬಲಾಗಿದ್ದು ಮನೆಗೆ ಸಂಪದಭಿವೃದ್ಧಿಯನ್ನು ತರುತ್ತದೆ. ಅವುಗಳನ್ನು ಮನೆಯ ಪ್ರವೇಶದ್ವಾರದಲ್ಲಿ ಇರಿಸಬೇಕು. ಇದಕ್ಕಿಂತ ಮುಂಚೆ ಒಂದು ಮಾತನ್ನು ಸ್ಪಷ್ಟಪಡಿಸಬೇಕಾಗಿದೆ. ಶ್ರಮದ ದುಡಿಮೆಗೆ ಪರ್ಯಾಯ ಯಾವುದೂ ಇಲ್ಲ. ಬುದ್ಧಿವಂತಿಕೆ ಶೇ.99ರಷ್ಟು ಬೆವರುಹರಿಸುವುದರ ಫಲ ಮತ್ತು ಸ್ಫೂರ್ತಿ ಶೇ.1ರಷ್ಟು ಇರುತ್ತದೆ.
ಲೇಡಿ ಲಕ್
ಆದರೆ ಕೆಲವೊಮ್ಮೆ ಅತ್ಯಂತ ಶ್ರಮಪಡುವ ಜನರು ಕೂಡ ದುರಾದೃಷ್ಟದ ಕಾರಣದಿಂದ ಏಳಿಗೆ ಹೊಂದುವುದಿಲ್ಲ. ಲೇಡಿ ಲಕ್ ನಿಮ್ಮ ಪಥದಲ್ಲಿ ನಗೆಬೀರಬೇಕೆಂದು ಬಯಸಿದ್ದರೆ ಕೆಲವು ಟಿಪ್ಸ್‌ಗಳನ್ನು ಅನುಸರಿಸಿ. ಮ‌ೂರು ಕಾಲುಗಳ ಕಪ್ಪೆಯು ಸಂಪತ್ತಿನ ಬಲವಾದ ಸಂಕೇತವಾಗಿದ್ದು, ನಿಮ್ಮ ಮಲಗುವ ಕೋಣೆಯಲ್ಲಿ ಎಲ್ಲಾದರೂ ಇರಿಸಿ. ನಿಮ್ಮ ಕಚೇರಿಯಲ್ಲಿ ಗೋಡೆ ಬೆನ್ನಿಗಿರುವಂತೆ ಕುಳಿತುಕೊಳ್ಳಿ. ಆದರೆ ಕಿಟಕಿ ಅಥವಾ ತೆರೆದ ಪುಸ್ತಕದ ಶೆಲ್ಫ್ ಹಿಂಭಾಗದಲ್ಲಿರುವಂತೆ ಕುಳಿತುಕೊಳ್ಳಬೇಡಿ. ನೀವು ವಂಚನೆಗೆ ಗುರಿಯಾಗುವ ಸಂಭವವಿರುತ್ತದೆ
ನಿಮ್ಮ ಹಿಂಭಾಗದ ಗೋಡೆಯಲ್ಲಿ ಪರ್ವತಶ್ರೇಣಿಯ ವರ್ಣಚಿತ್ರ ಅಥವಾ ಚಿತ್ರವನ್ನು ಇರಿಸಿ. ಬಾಗಿಲಿಗೆ ಬೆನ್ನುಮಾಡಿ ಕುಳಿತುಕೊಳ್ಳಲೇಬೇಡಿ. ಹರಿಯುವ ನೀರು ಸದಾ ಶುಭಕರ. ನಿಮ್ಮ ರಿಸೆಪ್ಶನ್ ಸ್ಥಳದಲ್ಲಿ ನೀರಿನ ಚಿಲುಮೆಯಿದ್ದರೆ, ನೀರು ಒಳಕ್ಕೆ ಬರುವಂತೆ ಖಾತರಿ ಮಾಡಿಕೊಳ್ಳಿ. ಹೊರಕ್ಕೆ ಹೋಗಲು ಅವಕಾಶ ಕೊಟ್ಟರೆ ನಿಮ್ಮ ಹಣವೂ ಕೂಡ ಹೊರಕ್ಕೆ ಸೋರಿಹೋಗಬಹುದು.ಬಿರುಸಾಗಿ ಹರಿಯುವ ನದಿಗೆ ಸಮೀಪದಲ್ಲಿ ವಾಸಿಸಬೇಡಿ. ಸಂಪತ್ತು ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಬಹುದು. ತೊರೆಗೆ ಸಮೀಪದಲ್ಲಿ ವಾಸಿಸುವುದು ಒಳ್ಳೆಯದು.
ಮನೆಯೊಳಗೆ ಶುಭ ಸಂಕೇತಗಳು ಚೀನಿಯರು ಪೂರ್ವಕಾಲದಲ್ಲಿ ತಮ್ಮ ಮನೆಗಳೊಳಗೆ ಶುಭಕಾರಕ -ಮಂಗಲಕಾರಕ ಬರಹ ಮತ್ತು ಸಂಕೇತಗಳನ್ನು ಬಳಸುತ್ತಿದ್ದರು. .
ಭಾರತೀಯರು ತಮ್ಮ ಶುಭಸಂಕೇತಗಳಾದ ಸ್ವಸ್ತಿಕ ಮತ್ತು ಓಂ ಸಂಕೇತಗಳನ್ನು ಪ್ರದರ್ಶಿಸುತ್ತಿದ್ದರು. ಇವುಗಳು ಉತ್ತಮ ಅದೃಷ್ಟ ಸಂಕೇತಗಳು. ಮಂಗಲಕಾರಕ ಬರಹ ಮತ್ತು ಸಂಕೇತಗಳನ್ನು ವಿಶಿಷ್ಟ ಚಿತ್ರಗಳಂತೆ ತೂಗು ಹಾಕಬಹುದು. ಕಟ್ಟಿಗೆ ಮೇಲಾಗಲಿ ಅಥವಾ ಪೀಠೋಪಕರಣಗಳ ಮೇಲಾಗಲಿ ಕೆತ್ತಿಸಬಹುದು.

ಸ್ವಸ್ತಿಕ , ಓಂ ಹಾಗೂ ತ್ರಿಶೂಲ ಈ ಸಂಕೇತಗಲು ಶುಭ ನೀಡುತ್ತವೆ. ಇವುಗಳನ್ನು ಒಟ್ಟಾಗಿಯೂ ಬಳಸಬಹುದು ಇವುಗಳು ಅತ್ಯಂತ ಲಾಭದಾಯಕವೆಂದು ಸಿದ್ಧವಾಗಿವೆ. ಪ್ರವೇಶದ್ವಾರದ ಅಕ್ಕಪಕ್ಕಕ್ಕೆ, ಮನೆಯ ಭದ್ರತೆಗಾಗಿ ಈ ಸಂಕೇತಗಳನ್ನು ಅಂಟಿಸಿಕೊಳ್ಳಬಹುದು. ವೈಯಕ್ತಿಕ ಸುರಕ್ಷಿತತೆ ಹಾಗೂ ಅದೃಷ್ಟಕ್ಕಾಗಿ ದಿನಚರಿ ಪುಸ್ತಕದ ಮೇಲೂ ಇವುಗಳನ್ನು ಅಂಟಿಸಬಹುದು.(ಸಾಧಾರ)
ದಾಂಪತ್ಯಕ್ಕೆ ಪೂರಕ ಅಂಶಗಳು
ಫೆಂಗ್‌ ಶುಯಿ ವಾಸ್ತುಶಾಸ್ತ್ರದಲ್ಲಿ ದಾಂಪತ್ಯ ದೃಢಪಡಿಸುವಂತಹ ಕೆಲವೊಂದು ಮಾಹಿತಿಗಳನ್ನು ತಿಳಿಸಲಾಗಿದೆ. ಅವಿವಾಹಿತರಿಗೆ ಕಂಕಣಬಲ ಕೂಡಿಸುವ ಆ ಸಂಕೇತಗಳು, ವಿವಾಹಿತರ ಸೌಭಾಗ್ಯವನ್ನು ಬಲಪಡಿಸುತ್ತವೆ.
ಇಂತಹ ಸಂಕೇತಗಳಲ್ಲಿ ಜೋಡಿ ಹಕ್ಕಿಗಳು, ಸ್ಪಟಿಕ ಶಿಲೆಗಳು,ಫೀನಿಕ್ಸ್‌, ಡ್ರ್ಯಾಗನ್‌, ಪಿಯೋನಿಹೂವುಗಳು , ಕೆಂಪುಬಣ್ಣದ ದೀಪಗಳು ಇತ್ಯಾದಿಗಳು ಸೇರಿವೆ.
ಜೋಡಿಹಕಕಿಗಳನ್ನು ಮಲಗುವ ಕೋಣೆಯ ನೈಋತ್ಯ ಭಾಗದಲಿ ಇರಿಸಬೇಕು, ಇದರಿಂದ ದಂಪತಿ ಪ್ರೇಮ ಬಾಂಧವಯ ದೃಢಗೊಳ್ಳುತ್ತದೆ. ಫೀನಿಕ್ಸ್‌ ಹಾಗೂ ಡ್ರಾಗನ್‌ ಜೋಡಿಗಳನ್ನು ನೈರುತ್ಯ ಭಾಗದಲ್ಲಿ ಇರಿಸಿದರೆ ಶುಭಕಾರಕ ಶಕ್ತಿಗಳು ಹೆಚ್ಚು ಪ್ರಚುರಗೊಳ್ಳುತ್ತವೆ.
ಪಿಯೋನಿ ಪುಷ್ಪಗಳನ್ನು ವಿವಾಹ ಪ್ರಾಯವಿರುವ ಮಗ ಅಥವಾ ಮಗಳ ಮಲಗುವ ಕೋಣೆಯ ಹೊರಗಡೆ ಇರಿಸಿದರೆ ಅವರ ವಿವಾಹ ಯೋಗ ಕೂಡಿ ಬರುವುದು. ವಿವಾಹಿತರು ತಮ್ಮ ಶಯನಗೃಹದಲ್ಲಿ ಈ ಹೂವುಗಳನ್ನು ಇರಿಸಿದರೆ ಶುಭಕಾರಕವಾಗಿರುತ್ತದೆ.
ಫೆಂಗ್ ಶುಯಿಗೆ ಗಂಟೆಗಳ ನೆರವು
ಗಂಟೆಗಳು ಫೆಂಗ್ ಶುಯಿ ಶಾಸ್ತ್ರದಲ್ಲಿ ಮಹತ್ತರವಾದ ಮಾತ್ರ ವಹಿಸುತ್ತದೆ. ಇವುಗಳು ಪರಿಸರವನ್ನು ಶುದ್ಧಗೊಳಿಸುವುದರೊಂದಿಗೆ ಶುಭ ಸಮಾಚಾರವನ್ನು ತರುತ್ತವೆ.
ಈ ಗಂಟೆಗಳು ಲೋಹದಿಂದಾಗಲೀ ಅಥವಾ ಪಿಂಗಾಣಿ ಮಣ್ಣಿನಿಂದಾಗಲಿ ತಯಾರಿಸಬಹುದು. ಇವುಗಳಲ್ಲಿ ಅತೀ ದೊಡ್ಡವುಗಳೆಂದರೆ ಓಂ ಗಂಟೆ ಹಾಗೂ ಅತೀ ಚಿಕ್ಕವುಗಳೆಂದರೆ ಕಚೇರಿಯ ಹೊರ ಬಾಗಿಲಿಗೆ ಹಾಕುವ ಗಂಟೆಗಳು. ಈ ಗಂಟೆಗಳು ಯಾಂಗ್‌ ಚೀಯನ್ನು ಹೊರಹೊಮ್ಮಿಸುತ್ತವೆ.
ಉತ್ತರ , ಪಶ್ತಿಮ ಹಾಗೂ ವಾಯುವ್ಯ ದಿಕ್ಕುಗಳಲ್ಲಿ ಲೋಹದ ಗಂಟೆಗಳನ್ನು ಉಪಯೋಗಿಸಿದರೆ, ಈಶಾನ್ಯ, ನೈಋತ್ಯ ಹಾಗೂ ದಕ್ಷಿಣದಲ್ಲಿ ಪಿಂಗಾಣಿ ಮಣ್ಣಿನಿಂದ ತಯಾರಾದ ಗಂಟೆಗಳನ್ನು ಉಪಯೋಗಿಸ ಬೇಕು. ಹಾಗೆಯೇ ಪೂರ್ವ ಮತ್ತು ಆಗ್ನೇಯ ಸ್ಪಟಿಕದ ಗಂಟೆಗಳನ್ನು ಉಪಯೋಗಿಸಬೇಕು. ನಿಮ್ಮ ಕಚೇರಿಯ ಮುಖ್ಯದ್ವಾರ ಯಾವ ದಿಕ್ಕಿಗೆ ಮುಖ ಮಾಡಿರುತ್ತದೆಂಬುದನ್ನು ಖಚಿತ ಪಡಿಸಿಕೊಂಡ ಮೇಲೆಯೇ ಈ ಗಂಟೆಗಳನ್ನು ಹೊರಬಾಗಿಲಿನ ಕಿಟಕಿಗೆ ಕಟ್ಟಬೇಕಾಗುತ್ತದೆ.
ಫೆಂಗ್‌ಶುಯಿ: ಶುಭಕಾರಕ ಪ್ರಾಣಿಗಳ ಲಾಂಛನ
ಫೆಂಗ್‌ ಶುಯಿ ಚೀನಿಯರು ನಂಬುವ ವಾಸ್ತುಶಾಸ್ತ್ರ. ಇದೀಗ ಇತರ ದೇಶಗಳಲ್ಲೂ ಜನಪ್ರಿಯವಾಗಿ ಬಳಕೆಯಾಗುತ್ತಿದೆ. ಮನೆ-ಕಚೇರಿ ಮುಂತಾದ ಆವಾಸ ಕಟ್ಟಡಗಳಲ್ಲಿ ಶುಭ ಲಾಂಚನಗಳನ್ನು ಅಳವಡಿಸಿ, ವಾತಾವರಣದಲ್ಲಿರುವ ಶುಭ ಶಕ್ತಿಗಳನ್ನು ಆಹ್ವಾನಿಸಿ, ಅಶುಭಕಾರಕಗಳನ್ನು ಹೊರಗಟ್ಟುವುದು ಈ ಆಚರಣೆಯ ಮುಖ್ಯ ಅಂಶ.
ಫೆಂಗ್‌ ಶುಯಿ ಅಂದರೆ ನೀರು ಮತ್ತು ಗಾಳಿಯನ್ನಾಧರಿತ ವಾಸ್ತು ನಿಯಂತ್ರಣ ಕ್ರಿಯೆಗಳು. ಭಾರತೀಯವಾದ ಪಂಚಭೂತ ತತ್ವ ಇದರಲ್ಲಿ ಸರಿಹೊಂದುತ್ತದೆ. ಫೆಂಗ್‌ ಶುಯಿಶಾಸ್ತ್ರ ಹೇಳುವಂತೆ ಭೂ-ದೃಶ್ಯ ಶಾಲೆಗಳಿಗೆ ಮಹತ್ವ ವಿದೆ. ಇದರಲ್ಲಿ ನಾಲ್ಕು ಸ್ವರ್ಗೀಯ ಪ್ರಾಣಿಗಳ ಲಾಂಛನ ಬಳಕೆಯಾಗುತ್ತದೆ. ಭೂ ದೃಶ್ಯ ಶಾಲೆಗಳಲ್ಲಿ ಕಟ್ಟಡಗಳ ಆಕಾರ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಆಕಾರವು ಶುಭ ಅಶುಭ ಫಲ ನೀಡುವುದು. ಇದನ್ನು ಫೆಂಗ್‌ ಶುಯಿಯಲ್ಲಿ ನಾಲ್ಕು ಸ್ವರ್ಗೀಯ ಪ್ರಾಣಿಗಳ ಸ್ವಭಾವವನ್ನು ಆಧಾರವಾಗಿರಿಸಿ ಜೋಡಿಸಲಾಗುವುದು.
ಪ್ರಸ್ತುತ ನಾಲ್ಕು ಪ್ರಾಣಿಗಳೆಂದರೆ- 1. ಡ್ರಾಗನ್‌. 2.ಹುಲಿ. 3.ಫಿನಿಕ್ಸ್‌ 4.ಆಮೆ. - ಈ ನಾಲ್ಕು ಪ್ರಾಣಿಗಳು ನಾಲ್ಕು ಬಣ್ಣಗಳನ್ನು ಹೊಂದಿದ್ದು ನಾಲ್ಕು ದಿಕ್ಕುಗಳಂತೆ ಕಾರ್ಯ ನಿರ್ವಹಿಸುತ್ತವೆ.
ಡ್ರಾಗನ್‌- ದಂತಕಥೆಯಿಂದ ಸೃಷ್ಟಿಯಾದ ಪ್ರಾಣಿಯಾಗಿದ್ದು, ಫೆಂಗ್‌ ಶುಯಿಯಲ್ಲಿ ಬಹುಮುಖ್ಯ ಪಾತ್ರ ಪಡೆದಿದೆ.ಹಸಿರು ಬಣ್ಣದಿಂದ ಕೂಡಿದ್ದು, ಎಡ ಭೂಭಾಗವನ್ನು ಹೊಂದಿರುತ್ತದೆ. ಸಮೃದ್ಧಿ- ಅಭಿವೃದ್ದಿಯ ಸಂಕೇತವಾಗಿರುವ ಈ ಪ್ರಾಣಿ ಶುಭ ಸಂಕೇತವಾಗಿರುತ್ತದೆ.ಕಟ್ಟಡದ ಎಡಭಾಗದಲ್ಲಿರಿಸಿ, ಇತರ ಪ್ರತೀಕಗಳಿಗಿಂತ ಎತ್ತರದಲ್ಲಿರಬೇಕು.
ಎರಡನೇ ಲಾಂಛನ- ಹುಲಿ. ಇದು ಬಿಳಿ ಬಣ್ಣದ್ದಾಗ್ದ್ದು ಭೂಭಾಗದ ಬಲಭಾಗದಲ್ಲಿ ಸ್ಥಾಪನೆಯಾಗಬೇಕಿದೆ. ಇದು ಹೆಣ್ಣು ಬಿಳಿ ಹುಲಿಯಾಗಿದ್ದು, ಗಂಡು ಡ್ರಾಗನ್‌ಗೆ ಜೊತೆಗಾತಿಯಾಗಿದೆ. ಇದು ರಕ್ಷಣಾ ಕಾರ್ಯ ಮಾಡುತ್ತಿದೆ. ಇದು ಡ್ರಾಗನ್‌ನಷ್ಟು ಶಕ್ತಿ ಹೊಂದಿರುವುದಿಲ್ಲ. ಪ್ರಾಚೀನ ಚೀನೀಯರ ನಂಬಿಕೆಯಂತೆ ಪರ್ವತದ ತಳ ಪ್ರದೇಶದಲ್ಲಿ ಡ್ರಾಗನ್‌ ಮತ್ತು ಹುಲಿಗಳು ವಾಸವಾಗಿದ್ದು, ಇವುಗಳು ಸಂಕೇತಿಸುವ ಭೂಭಾಗ ವಾಸಸ್ಥಳಕ್ಕೆ ಅತೀ ಯೋಗ್ಯವಾಗಿರುತ್ತದೆ. ಕುದುರೆಯ ಲಾಳದಲ್ಲೂ ಈ ರೂಪ ಸಂಕೇತವಾಗಿರುತ್ತದೆ.
ಮೂರನೆಯದಾಗಿ- ಆಮೆ. ಇದು ಕಪ್ಪು ಬಣ್ಣದ್ದಾಗಿದ್ದು, ಭೂಭಾಗದ ಹಿಂದೆ ಇರಿಸಿದರೆ, ಹಿಂಭಾಗದಿಂದ ರಕ್ಷಣೆ ನೀಡುವುದು. ಬಲಿಷ್ಠ ಚಿಪ್ಪಿನ ಪ್ರಾಣಿಯಾಗಿರುವುದರಿಂದ ದೃಢತೆ ಮತ್ತು ಬೆನ್ನೆಲುಬಿನಂತೆ ಆಧಾರ ನೀಡುವುದು. ನಾಲ್ಕನೆಯ ಪ್ರತೀಕ- ಫೀನಿಕ್ಸ್‌. ಇದು ಕೆಂಪು ಬಣ್ಣ ಹೊಂದಿದ್ದು, ನಿವೇಶನ ಮುಂಭಾಗದಲ್ಲಿ ಇರಿಸಬೇಕು. ಫೀನಿಕ್ಸ್‌ ತಾನು ಸುಟ್ಟ ಬೂದಿಯಿಂದಲೇ ಮರು ಹುಟ್ಟುಪಡೆಯುವುದೆಂಬ ನಂಬಿಕೆಯಿಂದಾಗಿ, ಇದನ್ನು ವಿಜಯದ, ಸದವಕಾಶಗಳ ಸಂಕೇತ ಬಳಸುತ್ತಾರೆ.
ಮನೆ ನಿರ್ಮಿಸುವಾಗ ಹಿಂಭಾಗದಲ್ಲಿ ಬೆಟ್ಟವಿದ್ದರೆ ಆಮೆಯನ್ನು ಚಿಪ್ಪಿನಂತೆ ರಕ್ಷಿಸುವುದು. ಮೆಮುಂದಿನ ಖಾಲಿ ಜಾಗದಲ್ಲಿ ಫೀನಿಕ್ಸ್‌ ಸಂಕೇತವು ಉತ್ತಮ ಸದವಕಾಶಗಳನ್ನು ಪ್ರತಿನಿಧಿಸುತ್ತದೆ. ಮನೆಯ ಎಡಭಾಗದಲ್ಲಿರುವ ಕಟ್ಟಡ ಮನೆಗಿಂತ ತಗ್ಗಿನಲ್ಲಿರಬೇಕು. ಇದು ಡ್ರಾಗನ್‌ ಪ್ರಾಣಿಯ ಸಂಕೇತಕ್ಕೆ ಪೂರಕವಾಗುತ್ತದೆ. ಬಲಗಡೆಯ ಕಟ್ಟಡವು ಮನೆಯ ಹಿಂದೆ ಹಾಗೂ ಎಡಗಡೆಯ ಕಟ್ಟಡಕ್ಕಿಂತ ಕಡಿಮೆ ಎತ್ತರದಲ್ಲಿರಬೇಕು. ಹುಲಿಯು ಅವಿತಿಟ್ಟು ರಕ್ಷಿಸುವಂತೆ ಇದಿರುತ್ತೆ. ಫೆಂಗು ಶ್ವೇ ಘ ಕುರಿತಪ ಮಾಹಿತಿ ನೀಡುವುದು.

-ಸಂಗ್ರಹ

No comments: