Friday, July 19, 2013

ಋತುಚಕ್ರದ ಸಾಮಾನ್ಯ ಅರಿವು

ಸಾಮಾನ್ಯವಾಗಿ ಹೆಣ್ಣುಮಕ್ಕಳು ಪ್ರೌಢಾವಸ್ಥೆಗೆ ಬರುತ್ತಿರುವಾಗ ಋತುಚಕ್ರದ ಬಗ್ಗೆ ಕುತೂಹಲ ಇರುತ್ತದೆ. ಹೆಣ್ಣುಮಕ್ಕಳು ಯಾವಾಗ ಋತುಮತಿಯಾಗುತ್ತಾರೆ, ಹೇಗೆ ಸ್ವಚ್ಛತೆ ಕಾಪಾಡಬೇಕು ಎಂಬ ಬಗ್ಗೆ ಇಲ್ಲಿ ವಿವರಿಸಲಾಗಿದೆ. * ಸಾಮಾನ್ಯವಾಗಿ 10-13 ವರ್ಷದಲ್ಲಿ ಋತುಮತಿಯಾಗುತ್ತಾರೆ. ಕೆಲವರು ಬೇಗನೆ 9 ವರ್ಷಕ್ಕೆ ಅಥವಾ ತಡವಾಗಿ 16 ವಯಸ್ಸಿಗೆ ಆಗುತ್ತಾರೆ. ಇದೊಂದು ನಿಸರ್ಗ ಪ್ರಕ್ರಿಯೆ ಮತ್ತು ಋತುಚಕ್ರ ಅವಧಿಯಲ್ಲಿ ಯಾವುದೇ ಸಮಸ್ಯೆಯಿಲ್ಲದೆ ಜೀವನ ಸಾಗಿಸಬಹುದು. * ಸರಾಸರಿ 28 ದಿನಗಳಿಗೊಮ್ಮೆ ಮುಟ್ಟು ಆಗುತ್ತದೆ. ಅದರಲ್ಲಿ ಐದು ದಿನ ಆಚೀಚೆ ಆಗಬಹುದು. * ಈ ಅವಧಿ 2-7ದಿನ ಇರುತ್ತದೆ. ಸರಾಸರಿ ಐದು ದಿನ. * ಒಂದು ಋತುಚಕ್ರಕ್ಕೆ 1/2 ಕಪ್ ರಕ್ತ (25-80 ಎಂಎಲ್) ಹೋಗುತ್ತದೆ. * ಒಂದಷ್ಟು ಕಿರಿಕಿರಿ ಹಾಗೂ ಮುಟ್ಟಿಗೆ ಮೊದಲು ಒತ್ತಡ ಕಂಡುಬರಬಹುದು. * ಮಹಿಳೆ ಗರ್ಭ ಧರಿಸಿಲ್ಲ ಎಂಬುದಕ್ಕೆ ಮುಟ್ಟು ಒಂದು ಸೂಚನೆ. ಹೇಗೆ ಸ್ವಚ್ಛತೆ ಕಾಪಾಡುವುದು? * ಪ್ರತಿನಿತ್ಯ ಸ್ನಾನ ಮಾಡಬೇಕು. * ರಕ್ತವು ದುರ್ವಾಸನೆಯಿಂದ ಕೂಡಿರುವುದರಿಂದ ಜನನೇಂದ್ರಿಯವನ್ನು ನಿಯಮಿತವಾಗಿ ತೊಳೆಯಬೇಕು. * ಸಾನಿಟರಿ ಪ್ಯಾಡ್ ಅಥವಾ ಬಟ್ಟೆಯನ್ನು ದಿನಕ್ಕೆ ಎರಡು ಸಾರಿಯಾದರೂ ಬದಲಾಯಿಸಬೇಕು. * ಮನೆಯಲ್ಲಿಯೇ ಮಾಡಿದ ಬಟ್ಟೆಯ ನ್ಯಾಪಿಕನ್ ಉಪಯೋಗಿಸುವುದಾದರೆ ಅದನ್ನು ಸೋಪು ಮತ್ತು ನೀರು ಹಾಕಿ ಚೆನ್ನಾಗಿ ತೊಳೆದು ಬಿಸಿಲು, ಗಾಳಿಯಲ್ಲಿ ಒಣಗಿಸಬೇಕು. * ಸಾನಿಟರಿ ಪ್ಯಾಡ್ ಅನ್ನು ಬೇರೆ ಪೇಪರ್‌ನಲ್ಲಿ ಸುತ್ತಿ ಮುಚ್ಚಳವಿರುವ ಕಸದಬುಟ್ಟಿಗೆ ಹಾಕಬೇಕು ಮತ್ತು ಶೌಚಾಲಯದೊಳಗೆ ಹಾಕಿ ನೀರು ಹಾಕುವುದು ಸರಿಯಲ್ಲ.

No comments: