Monday, July 2, 2012
ಗೃಹ ನಿರ್ಮಾಣ: ಎಲ್ಲಾ ಯೋಗಾ ಯೋಗ
ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಸ್ವಂತ ಮನೆ ಕಟ್ಟಬೇಕೆಂಬ ಆಸೆ ಇದ್ದೆ ಇರುತ್ತದೆ. ಇದು ಸಹಜ ಹಾಗೂ ಸ್ವಾಭಾವಿಕ. ಆದರೆ, ಎಲ್ಲರಿಗೂ ಸಹ ಮನೆ ಕಟ್ಟುವ ಯೋಗವಿರುವುದಿಲ್ಲ. ಎಷ್ಟೋ ಜನರು ಮನೆಯನ್ನು ಕಟ್ಟಿದರೂ ಅದರಲ್ಲೇ ವಾಸ ಮಾಡಲು ಆಗುವುದಿಲ್ಲ. ಇನ್ನು ಕೆಲವರು ಕಟ್ಟಿದ ಸ್ವಲ್ಪ ದಿನಕ್ಕೆ ಮನೆಯನ್ನು ಮಾರಿಬಿಡುತ್ತಾರೆ. ಇನ್ನು ಕೆಲವರು ಹಣವಿದ್ದರೂ ಮನೆ ಕಟ್ಟಲು ಆಗುವುದಿಲ್ಲ. ಹೀಗೆ ಒಂದಲ್ಲ ಒಂದು ತೊಂದರೆ ತಾಪತ್ರಯಗಳು ಇದ್ದೆ ಇರುತ್ತದೆ. ಆದ್ದರಿಂದ ಮನೆ ಕಟ್ಟಲು ಕೂಡಾ ಯೋಗ ಯೋಗಗಳಿದ್ದರೆ ಸಾಧ್ಯ.
ಜಾತಕದ ಕುಂಡಲಿಯಲ್ಲಿ ನಾಲ್ಕನೇ ಮನೆ. ಆಸ್ತಿ ವಿಚಾರ, ಮನೆಗೆ ಸಂಬಂಧಿಸಿದ ಸ್ಥಾನಾಧಿಪತಿ, ಅದರ ಬಲ, ಇರುವ ಸ್ಥಾನ, ಹಾಗೂ ಅಲ್ಲಿ ಇರುವ ಗ್ರಹಗಳು, ಇವೆಲ್ಲವನ್ನು ಲೆಕ್ಕಕ್ಕೆ ತೆಗೆದುಕೊಂಡು ಹಾಗೂ ಇದರ ಜತೆಗೆ ಲಗ್ನ, ಪಂಚಮ, ನವಮ, ಹಾಗೂ ಲಾಭ ಸ್ಥಾನ ಅಧಿಪತಿ ಹಾಗೂ ಅಲ್ಲಿರುವ ಗ್ರಹಗಳ ಮೇಲೆ ಮನೆ ಕಟ್ಟುವ ಯೋಗ ಇದೆಯೇ ಇಲ್ಲವೆ ಎಂದು ತಿಳಿಯಬಹುದು.
1. ಲಗ್ನಾಧಿಪತಿಯು ಉಚ್ಚನಾಗಿದ್ದು, 1,2, 4, 5, 7, 9, 11 ರಲ್ಲಿ ಗುರುವಿದ್ದರೆ ಅಥವಾ ಪೂರ್ಣ ಚಂದ್ರ ನೊಂದಿಗೆ ಇದ್ದರೆ ಒಳ್ಳೆಯ ಮನೆ ಕಟ್ಟಿ ಲಾಭ ಪಡೆಯುತ್ತಾನೆ.
2. ಚತುರ್ಥವು ಚತುರ್ಥಾಧಿಪತಿಯೊಡನೆ ಶುಭ ಸ್ಥಾನದಲ್ಲಿದ್ದರೆ ಒಳ್ಳೆಯ ಗೃಹ ಪಡೆಯುತ್ತಾನೆ.
3. ಚತುರ್ಥಾಧಿಪತಿ ಕೇಂದ್ರ ತ್ರಿಕೋಣದಲ್ಲಿ ಶುಭ ಗ್ರಹಯುಕ್ತರಾಗಿ ಶುಭ ದೃಷ್ಟಿಯಿದ್ದರೆ ಒಳ್ಳೆಯ ಮನೆ ಹಾಗೂ ಸುಖ ಸಂತೋಷ ಪಡೆಯುತ್ತಾನೆ.
4. ಗೃಹ ಸ್ಥಾನಾಧಿಪತಿ ಖರ್ಚಿನ ಸ್ಥಾನದಲ್ಲಿದ್ದು (ವ್ಯಯ) ಪಾಸಗ್ರಹ ದೃಷ್ಟಿಗೆ ಒಳಗಾಗಿ, ಯುಕ್ತನಾಗಿದ್ದರೆ, ಅಂತಹ ಮನೆ ಸರ್ವನಾಶ ಹೊಂದುತ್ತದೆ.
5. 5ರಲ್ಲಿ ಶುಕ್ರ, 2ರಲ್ಲಿ ಚಂದ್ರ ಹಾಗೂ 9 ರಲ್ಲಿ ಗುರು ಶುಭ ದೃಷ್ಠಿಗೆ ಒಳಗಾಗಿ ಪ್ರಬಲರಾಗಿದ್ದರೆ ಒಳ್ಳೆಯ ಮನೆ, ನೆಮ್ಮದಿ, ಶಾಂತಿಯಿಂದ ಜೀವನ ನಡೆಸುವರು.
6. ರಾಹು, ಶನಿ, ಕೇತು 4ರಲ್ಲಿದ್ದರೆ ಅಥವ 4ರಲ್ಲಿ ಗುರು ಶುಭ ದೃಷ್ಟಿಗೆ ಒಳಗಾಗಿದ್ದರೆ ಅಂತಹ ಮನೆಯಲ್ಲಿ ಮಾಟ, ಮಂತ್ರ ಪಿಶಾಚಿಗಳ ಕಾಟವಿರುತ್ತದೆ.
7. ಗೋಚಾರ ಫಲದಿಂದ ಗುರು 2, 5, 7, 9, 11ರಲ್ಲಿದ್ದರೆ ಮನೆ ಕಟ್ಟಲು ಆಗುತ್ತದೆ.
8. 7 ನೇ ಮನೆಯ ಅಧಿಪತಿಯಿಂದ ಕೂಡಿದ ಲಗ್ನಾಧಿಪತಿಯು ತನ್ನ ಅಥವ 4ರಲ್ಲಿದ್ದರೆ ಮನೆ ಕಟ್ಟಲು ಸ್ವಂತ ಪ್ರಯತ್ನದಿಂದ ಆಗುತ್ತದೆ.
9. ಲಗ್ನದಲ್ಲಿ ಚತುರ್ಥಾಧಿಪತಿಗಳು ನೀಚರಾಗಿದ್ದರೆ ಅದು ಸಾಮಾನ್ಯವಾಗಿ 6,8, 12, ನೇ ಮನೆಯಲ್ಲಿದ್ದು 4 ರಲ್ಲಿ ಕ್ರೂರಗ್ರಹದ ದೃಷ್ಟಿ ಇದ್ದರೆ ಸ್ವಂತ ಮನೆ ಹೊಂದುವುದು ಹಾಗೂ ಇದ್ದರೂ ಸಹ ತೊಂದರೆ ತಾಪತ್ರಯ ತಪ್ಪುವುದಿಲ್ಲ.
10. 2, 4ರ ಅಧಿಪತಿಗಳು 6,12ರಲ್ಲಿದ್ದರೆ ಕೆಟ್ಟವರಾಗಿದ್ದರೆ, ಮನೆಯಲ್ಲಿ ಸದಾ ಕಷ್ಠ, ಸಂಕಟ, ನಷ್ಟಗಳಿಂದ ತುಂಬಿರುತ್ತದೆ.
11. ಲಗ್ನಾಧಿಪತಿ ಹಾಗೂ 4ನೇ ಮನೆಯ ಅಧಿಪತಿಗಳು ಬಲಿಷ್ಠರಾಗಿದ್ದರೆ ಹಾಗೂ ಶುಭಗ್ರ ಮತ್ತು ಶುಭದೃಷ್ಠಿ ಇದ್ದರೆ ಮನೆಯನ್ನು ಕಟ್ಟಿ ಸುಖದಿಂದ ಬಾಳುತ್ತಾನೆ.
12. ಲಗ್ನ ಚತುರ್ಥ ಕೇಂದ್ರ ತ್ರಿಕೋಧಿಪತಿಗಳು ಶುಭ ಸ್ಥಾನರಾಗಿದ್ದು ಅವುಗಳ ದಶಕಾಲದಲ್ಲಿ ಮನೆ ಕಟ್ಟುತ್ತಾನೆ.
13. ಲಗ್ನ ಚತುರ್ಥಗಳು 6,8, 12 ನೇ ಸ್ಥಾನದಲ್ಲಿದ್ದು ನಿರ್ಬಲರಾಗಿದ್ದರೆ ಕ್ರೂರ ದೃಷ್ಠಿಗೆ ಒಳಗಾಗಿದ್ದರೆ, ಪಾಪಗ್ರಹಗಳಿಂದ ಕೂಡಿದ್ದರೆ. ಅಂತಹ ಮನೆಯಲ್ಲಿ ನೆಮ್ಮದಿ, ಶಾಂತಿ, ಇರುವುದಿಲ್ಲ. ಹಣಕಾಸಿನ ತೊಂದರೆ, ಜಗಳ, ಕದನ, ಕಲಹ ಹಾಗೂ ಪ್ರಾಣಭಯವಿರುತ್ತದೆ.
ಆದ್ದರಿಂದ ಮನೆ ಕಟ್ಟಬೇಕೆನ್ನುವವರು ಮೊದಲು ಕುಂಡಲಿಯನ್ನು ಪರೀಕ್ಷಿಸಿ. ಮನೆ ಕಟ್ಟುವ ಯೋಗವಿದ್ದರೆ ಒಳ್ಳೆಯ ಘಳಿಗೆ, ಗುರು, ಶುಕ್ರ ಬಲ ನೋಡಿಕೊಂಡು ಮನೆಯನ್ನು ಪ್ರಾರಂಭಿಸಿ. ಸುಖ, ಸಂತೋಷ, ನೆಮ್ಮದಿಯಿಂದ ಬಾಳಿರಿ.
ಧನಯೋಗ, ಜಾತಕ ಮತ್ತು ಹಣ ಸಂಪಾದನೆ
ಪ್ರತಿಯೊಂದು ಜಾತಕದಲ್ಲಿ ಹಣ ಸಂಪಾದನೆಯನ್ನು ಪ್ರತಿಪಾದಿಸುವ ಸ್ಥಾನಗಳು ಲಗ್ನಾತ್ 2-8-11. ದ್ವಿತೀಯ ಭಾವ, ಸ್ವಯಾರ್ಜಿತ, ಶ್ರಮದ ದುಡಿಮೆಯಿಂದ ಬರುವ ಹಣವನ್ನು ಅಷ್ಟಮ ಭಾವ, ಕಳತ್ರ (ಪತಿ, ಪತ್ನಿ) ಮೂಲದ ಹಣವನ್ನು ಹಾಗೂ ಲಾಭ ಸ್ಥಾನವೆನಿಸಿರುವ 11ನೇ ಮನೆಯು ನಿರಾಯಾಸವಾಗಿ ಉಂಟಾಗುವ ಲಾಭವನ್ನು ಸೂಚಿಸುತ್ತದೆ.
ಇದರೊಂದಿಗೆ ಆಕಸ್ಮಿಕ ಧನಾಗಮನವನ್ನು ಜಾತಕದಲ್ಲಿ ಕೂರಿಸುವ ಸ್ಥಾನಗಳು ಎಂದರೆ, ಐದು ಹಾಗೂ ಎಂಟು. ಈ ಪಂಚಮ ಅಷ್ಟಮ ಭಾವಾಧಿಪತಿಗಳು ಜತೆಗೂಡಿಯೋ ಪರಸ್ಪರ ದೃಷ್ಟಿಕರಾಗಿಯೋ ಇದ್ದಲ್ಲಿ ದಶಾಭುಕ್ತಿ ಕಾಲ ಉಂಟಾದರಂತೂ ಖಂಡಿತ ಆಕಸ್ಮಿಕ ಧನ ಯೋಗ ಉಂಟಾಗುತ್ತದೆ. ಆ ಧನಯೋಗವು ಗ್ರಹಗಳ ಬಲಾಬಲಗಳು ಹಾಗೂ ಶತ್ರು ಮಿತ್ರತ್ವವನ್ನು ಆಧರಿಸಿರುತ್ತದೆ. ಪಂಚಮ ಹಾಗೂ ಅಷ್ಟಮಾಧಿಪತಿಗಳು ಶುಭಗ್ರಹಗಳಾದಲ್ಲಿ ಸಾವಯ ರೀತಿಯ ಸಂಪಾದನೆಯೂ, ಅಶುಭರಾದಲ್ಲಿ ಅಶುಭ ರೀತಿಯಿಂದಲೂ ಉಂಟಾಗುವುದು. ಅಷ್ಟಮವೂ ಮರಣಪತ್ರ (ಉಯಿಲು), ಕೋರ್ಟು ಕಚೇರಿಗಳಿಂದ ಉಂಟಾಗುವ ಲಾಭ ಹಾಗೂ ಭೂಮ್ಯಾಂತರ್ಗತ ನಿಧಿ ಇವುಗಳಿಂದಾಗುವ ಧನಲಾಭವನ್ನು ಸೂಚಿಸುತ್ತದೆ.
ರಾಹು-ಕೇತುಗಳಂತ ಅಶುಭ ಹಾಗೂ ಭಯ ಗ್ರಹಗಳು ಲಾಭ ಸ್ಥಾನದಲ್ಲಿ ಸ್ಥಿತರಾದಲ್ಲಿ ಅನಿರೀಕ್ಷಿತ ಧನ ಪ್ರಾಪ್ತಿಯಾದರೂ, ಒಮ್ಮೆಲೆಗೆ ಅನಿಷ್ಟವು ಒದಗಿ, ಎಲ್ಲ ಹಾಳಾಗುವ ಸಂಭವವುಂಟು. ಅದರಲ್ಲಿಯೂ ರಾಹು ಗ್ರಹವು ಸಟ್ಟಾ, ಜೂಜುಗಳಿಂದ ಉಂಟಾಗುವ ನಷ್ಟಕ್ಕೆ ಕಾರಕನು.
ಮೇಷಾದಿಗಳ ಯೋಗ
ಮೇಷ: ಲಗ್ನಕ್ಕೆ ಪಂಚಮಾಧಿಪತಿ ರವಿ ಹಾಗೂ ಅಷ್ಟಮಾಧಿಪತಿ ಸ್ವಯಂ ಕುಜ. ಹಾಗಾಗಿ ಇಬ್ಬರೂ ಯೋಗಕಾರಕರೇ.
ವೃಷಭ: ಪಂಚಮಾಧಿಪತಿ ಬುಧ. ಶುಕ್ರನ ಮಿತ್ರ ಯೋಗವಿತ್ತರೆ, ಅಷ್ಟಮಾಧಿಪತಿ ಗುರು ಅವಯೋಗಿ ಶುಕ್ರನ ಶತೃ.
ಮಿಥುನ: ಪಂಚಮಾಧಿಪತಿ ಶುಕ್ರ, ಅಷ್ಟಮಾಧಿಪತಿ ಶನಿ ಇಬ್ಬರೂ ಬುಧನ ಮಿತ್ರರು, ಯೋಗಕಾರಕು.
ಕಟಕ: ಪಂಚಮಾಧಿಪತಿ ಕುಜ ದಶಮಾಧಿಪತಿ ಹಾಗೂ ಈ ಲಗ್ನ ರಾಜ ಯೋಗಕಾರಕ. ಆದರೆ ಶನಿ ಅಷ್ಟಮಾಧಿಪತ್ಯ ಹೊಂದಿದರೂ ಶತ್ರು ಗ್ರಹ.
ಸಿಂಹ: ಪಂಚಮ-ಅಷ್ಟಮಗಳೆರಡೂ ಗುರು, ರವಿಯ ಮಿತ್ರ ಯೋಗಕಾರಕ.
ಕನ್ಯಾ: ಪಂಚಮದ ಶನಿ ಬುಧನ ಮಿತ್ರ ಯೋಗವೀಯುವ ಆದರೆ ಅಷ್ಟಮಾಧಿಪತಿ ಕುಜ ಬುಧನ ಪರಮ ಶತ್ರು.
ತುಲಾ: ಶನಿಯು ಪಂಚಮವಲ್ಲದೇ ಚತುರ್ಥನೂ ಹೌದು. ಅಂತೆಯೇ ಅಷ್ಟಮಾಧಿಪತಿ ಸ್ವಯಂ ಶುಕ್ರ ಎರಡೂ ಉತ್ತಮ.
ವೃಶ್ಚಿಕ: ಪಂಚಮಾಧಿಪತಿ ಗುರು ಕುಜನ ಮಿತ್ರ ಯೋಗದಾಯಕ, ಅಷ್ಟಮಾಧಿಪತಿ ಬುಧ ಪರಮ ಶತ್ರು.
ಧನಸ್ಸು: ಗುರುವಿಗೆ ಪಂಚಮ-ಅಷ್ಟಮಾಧಿಪತಿಗಳಾದ ಕುಜ ಚಂದ್ರರಿಬ್ಬರೂ ಮಿತ್ರರು. ಇಬ್ಬರೂ ಯೋಗಕಾರಕರೇ.
ಮಕರ: ಪಂಚಮಾಧಿಪತಿ ಶುಕ್ರ ಮಿತ್ರ ಉತ್ತಮದಾಯಕ. ಆದರೆ ಅಷ್ಟಮಾಧಿಪತಿ ರವಿ ಶತ್ರುಗ್ರಹ.
ಕುಂಭ: ಪಂಚಮ ಬುಧ, ಅಷ್ಟಮನೂ ಬುಧನ ಯೋಗದಾಯಕ.
ಮೀನ: ಪಂಚಮಾಧಿಪತಿ ಚಂದ್ರ ಉತ್ತಮ. ಆದರೆ ಅಷ್ಟಮಾಧಿಪತಿ ಶುಕ್ರ, ಗುರುವಿನ ಶತ್ರು ಅವಯೋಗಿ.
ರಾಹು ಕೇತುಗಳ ಶುಭ ಫಲಗಳು *
ಜಾತಕದಲ್ಲಿ ರಾಹು ಕೇತುಗಳ ಪಾತ್ರ ಏನು? ರಾಹು ಕೇತುಗಳಿಂದ ಶುಭ ಅಶುಭ ಫಲಗಳು ಇದ್ದೇ ಇರುತ್ತವೆ. ಕೆಲವರು ರಾಹು ಕೇತುಗಳಿಗೆ ಹೆದರುತ್ತಾರೆ. ರಾಹುವನ್ನು ಕಾಲ ರುದ್ರನೆಂದೂ, ಕೇತುವನ್ನು ಕ್ರಮಕಾರಕನೆಂದೂ ಹೇಳುತ್ತಾರೆ.
ರಾಹುವಿನ ಉಚ್ಚ ಸ್ಥಾನ ಮಿಥುನ. ಸ್ವಕ್ಷೇತ್ರ ಕನ್ಯಾ. ನೀಚ ಸ್ಥಾನ ಧನು. ಚಂದ್ರ ಮತ್ತು ಮಂಗಳ ರಾಹುವಿನ ವೈರಿಗಳು. ಬುಧ, ಶುಕ್ರ ಮತ್ತು ಶನಿಗಳು ಮಿತ್ರರು. ಕುಂಡಲಿಯ 3, 6 ಮತ್ತು 12ನೇಯ ಸ್ಥಾನದಲ್ಲಿ ರಾಹು ಇದ್ದರೆ ಇಂಥವರ ಜಾತಕರಿಗೆ ಒಳ್ಳೆಯ ಫಲ ನೀಡಲು ಪೂರಕನಾಗಿರುತ್ತಾನೆ. ಅನಿಷ್ಟವನ್ನು ನಿವಾರಿಸಲು ಶಕ್ತನಾಗುತ್ತಾನೆ. ಕುಂಡಲಿಯಲ್ಲಿ 1, 2, 4, 5, 7, 8, 9 ಮತ್ತು 10ನೇಯ ಸ್ಥಾನಗಳಲ್ಲಿ ರಾಹು ಇದ್ದರೆ ಶುಭ ಫಲ ಕೊಡುವುದಿಲ್ಲ.
ಕೇತುಗೆ ಧನು ರಾಶಿ ಉಚ್ಚವಾಗಿದೆ. ಮಿಥುನ ನೀಚ ಸ್ಥಾನ. ಅದರ ಸ್ವಕ್ಷೇತ್ರ ಮೀನ ರಾಶಿ. ಕೇತುನ ಮೂಲ ತ್ರಿಕೋಣ ಸಿಂಹ. ರಾಹು ಅಥವಾ ಕೇತುವು ಕುಂಡಲಿಯ ದ್ವಿತೀಯ ಇಲ್ಲವೇ ಸಪ್ತಮ ಸ್ಥಾನದಲ್ಲಿದ್ದು, ಧನಾದಿಪತಿ ಇಲ್ಲವೇ ಸಪ್ತಮಾಧಿಪತಿಯು ಅಶುಭ ಗ್ರಹದಿಂದ ಯುಕ್ತನಾಗಿದ್ದರೆ ಆ ದೆಸೆಯಲ್ಲಿ ಯಾವುದೇ ಒಳ್ಳೆಯ ಫಲವನ್ನು ಕೊಡುವುದಿಲ್ಲ.
1, 4, 7, 10 ಕೇಂದ್ರ ಸ್ಥಾನ 5, 9 ತ್ರಿಕೋಣ ಸ್ಥಾನದೊಡನೆ ರಾಹು ಇಲ್ಲವೇ ಕೇತು ದ್ವಿಸ್ವಭಾವ ರಾಶಿಯಲ್ಲಿದ್ದರೆ ಆ ಗ್ರಹಗಳ ದೆಸೆಯಲ್ಲಿ ಅಧಿಕಾರ, ಸಂಪತ್ತು ದೊರೆಯುವುದು. ವಷಭ, ಸಿಂಹ, ವಶ್ಚಿಕ ಮತ್ತು ಮಕರ ಇದು ಸ್ಥಿರ ರಾಶಿ. ಕೇಂದ್ರ ಇಲ್ಲವೇ ತ್ರಿಕೋಣ ಅಧಿಪತಿಯೊಡನೆ ರಾಹು ಇಲ್ಲವೇ ಕೇತುವು ಕುಂಡಲಿಯಲ್ಲಿದ್ದರೆ ಇಲ್ಲವೇ ಮೇಷ, ಕರ್ಕಾಟಕ, ತುಲಾ ಮತ್ತು ಧನು ಈ ಚರ ರಾಶಿಯಲ್ಲಿ ಕೇಂದ್ರ ಇಲ್ಲವೇ ತ್ರಿಕೋಣ ಅಧಿಪತಿಗಳಿಂದ ರಾಹು ಇಲ್ಲವೇ ಕೇತು ಕೂಡಿದರೆ ಆ ಗ್ರಹಗಳ ದೆಸೆಯಲ್ಲಿ ಜಾತಕನಿಗೆ ಬಹಳ ಸಂಪತ್ತು ಬರುತ್ತದೆ. ರಾಹು ಇಲ್ಲವೇ ಕೇತು ಅಶುಭ ಮನೆಯಲ್ಲಿ ಇದ್ದರೆ ಒಳ್ಳೆಯ ಫಲವು ಸಿಗುವುದಿಲ್ಲ. ರಾಹು ಕೇತುಗಳು ಕುಂಡಲಿಯ ಅನಿಷ್ಟ ಸ್ಥಾನದಲ್ಲಿದ್ದರೆ ಈ ಸಮಯದಲ್ಲಿ ಅನಿಷ್ಟ ಫಲವನ್ನು ಕೊಡುತ್ತದೆ. ರಾಹು ಕೇತುಗಳು ಮೇಷ, ವಷಭ, ಕರ್ಕಾಟಕ, ಸಿಂಹ, ತುಲಾ, ವಶ್ಚಿಕ, ಧನು ಮತ್ತು ಮಕರ ರಾಶಿಗಳಲ್ಲಿ ಕೇಂದ್ರದ ಅಧಿಪತಿಯಿಂದಾಗಲೀ ಅಥವಾ ತ್ರಿಕೋಣಾಧಿಪತಿಯಿಂದ ಕೂಡಿದ್ದರೆ ಜಾತಕರು ಬಹಳ ಹಣವಂತರಾಗುತ್ತಾರೆ. ಸ್ತ್ರೀಯರು ಮೇಷ ಲಗ್ನದಲ್ಲಿ ಜನಿಸಿದರೆ ಲಗ್ನದಲ್ಲಿ ರಾಹು, ಶುಕ್ರನಿದ್ದರೆ ಇವರು ಒಂದಕ್ಕಿಂತಲೂ ಜಾಸ್ತಿ ಮದುವೆಯಾಗುತ್ತಾರೆ. ತತೀಯದಲ್ಲಿ ರಾಹುವು ಮಂಗಳನಿಂದ ಯುಕ್ತನಾಗಿದ್ದರೆ ಇವರ ತಾಯಿಯ ಬಲ ಕಾಲಿಗೆ ತೊಂದರೆ ಬರುತ್ತದೆ. ಲಗ್ನದಲ್ಲಿ ಶನಿ ಏಕಾದಶ ಸ್ಥಾನದಲ್ಲಿ ರಾಹು ಇದ್ದರೆ ಇಂತಹ ಜಾತಕರು ಜೀವನ ಪೂರ್ತಿ ಸಂಪತ್ತಿನಿಂದ ಕೂಡಿದವರಾಗುತ್ತಾರೆ. ಲಗ್ನದಲ್ಲಿ ರಾಹು ದ್ವಿತೀಯದಲ್ಲಿ
ಶನಿ ಇದ್ದರೆ ಜಾತಕನು ತನ್ನ ಆಯುಷ್ಯವನ್ನೆಲ್ಲಾ ಬಡಿದಾಟದಲ್ಲಿಯೇ ಕಳೆಯುತ್ತದೆ. ಲಗ್ನದಲ್ಲಿ ರಾಹು, ಮಂಗಳ ಇಲ್ಲವೇ ಗುರುನಿಂದ ಯುಕ್ತರಾಗಿದ್ದರೆ ಇಂಥವರು ಸರಕಾರದ ದಂಡಕ್ಕೆ ಗುರಿಯಾಗುತ್ತಾರೆ. ಪಂಚಮದಲ್ಲಿ ಕೇತುವು ಮಂಗಳನೊಂದಿಗೆ ಯುಕ್ತನಾಗಿದ್ದರೆ ಜಾತಕರಿಗೆ ಹದಯದ ಕಾಯಿಲೆ ಬರುತ್ತದೆ. ನವಮದಲ್ಲಿ ಚಂದ್ರನೊಡನೆ ರಾಹು ಯುಕ್ತನಾಗಿದ್ದರೆ ಇವರಿಗೆ ಶುಭ ಫಲ ಸಿಗುತ್ತದೆ. ಏಕಾದಶದ ರಾಹು ಯಾವಾಗಲೂ ಒಳ್ಳೆಯ ಫಲ ಕೊಡುತ್ತದೆ.
ಶನಿ: ಕಾಡಿಸುವ ಗ್ರಹವಲ್ಲ * ತ್ರಿವೇಣಿ.ಸಿ. ಮೈಸೂರು
ಜ್ಯೋತಿಷ್ಯಶಾಸ್ತ್ರದಲ್ಲಿ ಶನಿಗ್ರಹಕ್ಕೆ ಬಹು ಮುಖ್ಯ ಸ್ಥಾನ ಇದೆ. ಸಾಮಾನ್ಯರ ತಿಳಿವಳಿಕೆಯಲ್ಲಿ ಶನಿಗ್ರಹ ಕೇವಲ ಮನುಷ್ಯನಿಗೆ ದುಃಖ ಕೊಡುವ, ಕಾಡಿಸುವ, ಕೋಪಿಷ್ಠ ಗ್ರಹ ಎನ್ನಲಾಗುತ್ತದೆ. ಆದರೆ, ಇದು ತಪ್ಪು ಗ್ರಹಿಕೆ.
ಈ ಗ್ರಹ ಅತಿ ಸೂಕ್ಷ್ಮವಾದ, ಲೌಕಿಕ ಜ್ಞಾನಕ್ಕೆ ನಿಲುಕದ, ನಾನಾ ವಿಧದ ಪಾಠಗಳಿಂದ ಮನುಷ್ಯನನ್ನು ಶ್ರೇಷ್ಠತಮ ಬಾಳ್ವಿಕೆಯ ಸಜ್ಜುಗೊಳಿಸುವ ನಿಷ್ಠುರದ ಗುರುವಾಗಿದೆ.
ಮನುಷ್ಯನ ಪೂರ್ವ ಕರ್ಮಫಲಗಳಿಗೆ ಅನುಗುಣವಾಗಿ ಎಚ್ಚರಿಕೆಯನ್ನು, ವಿವೇಕಾದರ್ಶಗಳನ್ನು, ಜ್ಞಾನ ಔನ್ನತ್ಯವನ್ನು ಕೊಡುವ ಮಹಾನುಭಾವ ಈ ಶನಿಗ್ರಹ. ತಪ್ಪು ತಿದ್ದಿಕೊಂಡು ನಡೆಯುವವರಿಗೆ ಈ ಗ್ರಹ ಪ್ರಸನ್ನವಾಗುತ್ತದೆಯೇ ಹೊರತು ಭಕ್ತಿಭಾವಗಳಿಗೆ ಪರವಶವಾಗುವ ದೈವ-ಮಾತ್ರವಲ್ಲ.
ದಾನ-ಧರ್ಮ ಕಾರ್ಯಗಳಿಂದ ಶನಿಗ್ರಹವನ್ನು ಆದರಿಸಬಹುದಾದರೂ, ಅದನ್ನು ಒಲಿಸಿಕೊಳ್ಳಲು ಇರುವುದು ಕೇವಲ ಒಂದೇ ದಾರಿ, ಅದೆಂದರೆ ಕರ್ಮಯೋಗ. ಜೀವನದಲ್ಲಿ ನೀತಿ, ನಿಯಮ, ನಿಷ್ಠೆ, ಸಂಪೂರ್ಣತೆಯನ್ನು ಅಳವಡಿಸಿಕೊಳ್ಳುವುದೆ ಕರ್ಮಯೋಗ. ದ್ವಾದಶ ರಾಶಿಗಳಲ್ಲಿ ಶನಿಗ್ರಹ ಸಂಚರಿಸುವಾಗ, ತರುವ ಫಲಾಫಲಗಳು ಹೀಗಿವೆ.
ಮೇಷ: ಜಿದ್ದು, ಕೋಪ, ಜಗಳ, ವಿವಾದ, ನಷ್ಟ. ವೃಷಭ: ವಿರೋಧ, ಅಸಹನೆ, ದಾಸ್ಯ, ಅನಾರೊಗ್ಯ, ಅಸೂಯೆ.
ಮಿಥುನ: ಜನಪ್ರಿಯತೆ, ವಿದ್ಯಾಸಕ್ತಿ, ಯಾತ್ರೆ, ಖರ್ಚು, ಸಾಲ. ಕರ್ಕಾಟಕ: ಉದ್ಯೋಗದಲ್ಲಿ ಬದಲಾವಣೆ, ಉದರ ಸಂಬಂಧ ಖಾಯಿಲೆ, ದುಃಖ, ಬಹುಪತ್ನಿತ್ವ. ಸಿಂಹ: ವಾಚಾಳಿ, ಸಹಾಯ, ಸನ್ಮಾನ, ವಿದ್ಯಾರ್ಜನೆ, ಕುಶಲತೆ. ಕನ್ಯಾ: ನೀಚರ ಸಹವಾಸ, ಕುಟಿಲತೆ, ಕ್ಷೇತ್ರ ದರ್ಶನ, ಶತ್ರುತ್ವ, ಶ್ರೀಮಂತಿಕೆ. ತುಲಾ: ವಿಖ್ಯಾತಿ, ಸಂಪತ್ತು, ವೈಭವ, ದಾನ ಸಂಪನ್ನತೆ, ಯಶಸ್ಸು. ವೃಶ್ಚಿಕ: ಕ್ರೂರತ್ವ, ಚಪಲತೆ, ಕಳ್ಳತನ, ಲೋಭ, ನಿರ್ದಯತೆ. ಧನಸ್ಸು: ಕೀರ್ತಿ, ಜಾಣ್ಮೆ, ಶ್ರೀಮಂತಿಕೆ, ಪರೋಪಕಾರ, ಸಂತೋಷ. ಮಕರ: ನೀತಿ, ಐಶ್ವರ್ಯ ಲಾಭ, ವಿಲಾಸ ಜೀವನ, ರಾಜೋಪಚಾರ, ಕಲಾವಂತಿಕೆ. ಕುಂಭ: ದಯೆ, ಪ್ರಗತಿ, ಧರ್ಮಾಸಕ್ತಿ, ಸುಖಜೀವನ, ನಿಷ್ಟುರವಾದಿ. ಮೀನ: ಶಾಂತಿಪ್ರಿಯತೆ, ವಿನಮ್ರಭಾವ, ಧರ್ಮಕಾರ್ಯಸಕ್ತಿ, ವಿಶ್ವಾಸಗಳಿಕೆ, ಧನಲಾಭ.
ಅನಿಯಮಿತ ಮುಟ್ಟು ಬೇಡ ಗುಟ್ಟು
ಪ್ರತಿಬಾರಿ ಟೆನ್ಷನ್ ನೀಡೋದು ಅದೊಂದೇ ಸಂಗತಿ. ಒಂದೆರಡು ತಿಂಗಳು ಕಾದರೂ ಬಂದಿಲ್ಲ ಅಂದರೆ ಏನೋ ಆಗಿದೆ ಅನ್ನುವ ಪುಟ್ಟ ಅನುಮಾನ. ಕಾಲೇಜು ಹುಡುಗಿಗೆ ಯಾವುದೋ ರೋಗದ ಭಯ. ಗೃಹಿಣಿಗೆ ಗರ್ಭಧಾರಣೆಯ ಆತಂಕ. ಈ ಅನಿಯಮಿತ ಮುಟ್ಟು ಅನ್ನೋದು ಹೀಗೆ. ಇಲ್ಲಸಲ್ಲದ ಭಯ ಹುಟ್ಟಿಸಿ ಬಿಡುತ್ತದೆ.ಅನಿಯಮಿತ ಮುಟ್ಟು ತೀರ ಸಾಮಾನ್ಯ. ಮಾನಸಿಕ ಒತ್ತಡ, ಹಾರ್ಮೋನ್ ಬದಲಾವಣೆಯೇ ಇದಕ್ಕೆ ಕಾರಣವಿರಬಹುದು. ಅನಗತ್ಯವಾಗಿ ಏನೇನೋ ನಿಮ್ಮೊಳಗೆ ಕಲ್ಪಿಸಿಕೊಂಡು ಚಿಂತೆ ಮಾಡಿದರೆ ಇನ್ನಷ್ಟು ದಿನ ಮುಂದೆ ಹೋಗಬಹುದು. ಹಾಗಂತ ಪದೇಪದೆ ಅದರಲ್ಲೂ ಎರಡು ತಿಂಗಳಿಗೂ ಮೀರಿ ಮುಟ್ಟು ಮುಂದೆ ಹೋಗುತ್ತಿದ್ದರೆ ಖಂಡಿತ ತಜ್ಞರನ್ನು ಭೇಟಿ ಮಾಡಿ. ಏಕೆಂದರೆ ಅದು ಕೂಡ ತೀರ ನಿರ್ಲಕ್ಷ್ಯ ಮಾಡುವ ಸಂಗತಿ ಅಲ್ಲ. ಯಾವುದೋ ಕಾಯಿಲೆ ಲಕ್ಷಣವೂ ಇರಬಹುದು. ಹಾಗಂತ ಒಂದೆರಡು ವಾರ ಮುಂದೆ ಹೋಗುವುದಕ್ಕೆಲ್ಲ ಹೆದರಿಕೊಳ್ಳುವ ಅಗತ್ಯವಿಲ್ಲ. ಮನೆಮದ್ದು ಮಾಡಿದ್ರೆ ಸಾಕು.
*ಜೇನಿನ ಜತೆ ಎಳ್ಳು ಹಾಗೂ ಜೀರಿಗೆ ಸೇರಿಸಿ ಮಿಶ್ರಣ ಮಾಡಿಕೊಂಡು ಸೇವಿಸಿ.
*ಪಪ್ಪಾಯ ಹಣ್ಣನ್ನು ಹೆಚ್ಚೆಚ್ಚು ಸೇವಿಸಿ. *ಕರಿಎಳ್ಳು ಉಂಡೆಯನ್ನು ತಿನ್ನಿ.
* ನಿಯಮಿತವಾಗಿ ದ್ರಾಕ್ಷಿಹಣ್ಣಿನ ರಸ ಕುಡಿಯಿರಿ. *ಕ್ಯಾರೆಟ್ ಜ್ಯೂಸ್ ಸೇವನೆಯಿಂದ ಮುಟ್ಟು ನಿಯಮಿತವಾಗುತ್ತದೆ.
*ಕೊತ್ತಂಬರಿ ಎಲೆ ಅಥವಾ ಬೀಜದ ಕಷಾಯ ಪರಿಣಾಮಕಾರಿ.
Subscribe to:
Post Comments (Atom)
No comments:
Post a Comment