Monday, July 2, 2012
ಕಾಯಿಲೆ ನಿವಾರಣೆ ಕರುಳಿಗೆ ನೀರು
ಕಾಯಿಲೆ ನಿವಾರಣೆ ಕರುಳಿಗೆ ನೀರು ಡಾ. ಗಂಗಾಧರ ವರ್ಮ ಬಿ.ಆರ್
ತೀರ ಸುಸ್ತಾಗಿದೆ ಎಂದುಕೊಳ್ಳಿ. ಒಮ್ಮೆ ಸ್ನಾನ ಮಾಡಿದರೆ ಫುಲ್ ಫ್ರೆಶ್. ಅಂಥ ಚಿಕಿತ್ಸಕ ಶಕ್ತಿ ನೀರಿಗಿದೆ. ಇಂಥ ಜೀವಜಲ
ನೀರಿಗೆ ಪ್ರಕೃತಿ ಚಿಕಿತ್ಸೆಯಲ್ಲಿ ಲ್ಲಿಲ್ಲದ ಮಹತ್ವ.
ಹಸ್ತ-ಪಾದ ಸ್ನಾನ
ಬೆಚ್ಚನೆ ನೀರಿನಲ್ಲಿ ಕೈಯನ್ನು ಮೊಣಕೈ ವರೆಗೂ ಹಾಗೂ ಪಾದವನ್ನು ಇಟ್ಟುಕೊಳ್ಳಬೇಕು. ನೀರಿನ ಉಷ್ಣಾಂಶ 30ರಿಂದ 40 ಡಿಗ್ರಿ ಸೆಲ್ಸಿಯಸ್ ಇರಲಿ.
ಉಪಯೋಗಗಳು:
ತಲೆನೋವು, ಮೈಗ್ರೇನ್, ಆಥ್ರೈಟಿಸ್, ಕ್ಯಾಲ್ಕೇನಿಯಲ್ ಸ್ಪರ್, ನಿದ್ರಾಹೀನತೆ, ಒತ್ತಡ ದೂರಾಗುತ್ತವೆ.
ಎನಿಮಾ
ನೀರನ್ನು ನಿಧಾನವಾಗಿ ಕರುಳಿಗೆ ಸೇರಿಸಿ, ಕರುಳಿನ ಕದಲಿಕೆಯನ್ನು ಆರಂಭಿಸಿ, ಮಲವನ್ನು ಹೊರಹಾಕುವ ಸರಳ ಕ್ರಮ.
ಬೇಕಾಗುವ ಸಾಮಗ್ರಿಗಳು: ಎನಿಮಾ ಕ್ಯಾನ್, ಎನಿಮಾ ಟ್ಯೂಬ್, ನಾಜಲ್.
ಮೂರು ವಿಧಗಳಲ್ಲಿ ಎನಿಮಾ ತೆಗೆದುಕೊಳ್ಳಬಹುದು.
1. ಬಗ್ಗಿ ತೆಗೆದುಕೊಳ್ಳುವ ಎನಿಮಾ: ಸಮಸ್ಥಿತಿಯಲ್ಲಿ ನಿಂತು ಕಾಲುಗಳನ್ನು ಸ್ವಲ್ಪ ಅಗಲಿಸಿ ನಿಧಾನವಾಗಿ ಮುಂದಕ್ಕೆ ಬಗ್ಗಿ ಎನಿಮಾವನ್ನು ತೆಗೆದುಕೊಳ್ಳುವುದು.
2. ಬೆನ್ನ ಮೇಲೆ ಮಲಗಿ ತೆಗೆದುಕೊಳ್ಳುವ ಎನಿಮಾ: ನಿಧಾನವಾಗಿ ಬೆನ್ನಿನ ಮೇಲೆ ಮಲಗಿ, ಕಾಲುಗಳನ್ನು ಮಂಡಿಯಲ್ಲಿ ಮಡಚಿ ಪಾದಗಳನ್ನು ನೆಲಕ್ಕಿರಿಸಿ ತೊಡೆಗಳನ್ನು ಸ್ವಲ್ಪ ಅಗಲಿಸಿ ಎನಿಮಾ ತೆಗೆದುಕೊಳ್ಳುವುದು.
3. ಮಂಡಿ-ಎದೆಯ ಮೇಲೆ ಮಲಗಿ ತೆಗೆದುಕೊಳ್ಳುವ ಎನಿಮಾ: ನಿಧಾನವಾಗಿ ಹೊಟ್ಟೆಯ ಭಾಗದ ಮೇಲೆ ಮಲಗಿ ಅಲ್ಲಿಂದ ದೇಹದ ಭಾರವನ್ನು ಮಂಡಿ ಹಾಗೂ ಮೊಣಕೈಗಳ ಮೇಲೆ ತರುವುದು. ಮಂಡಿಯನ್ನು ನೆಲಕ್ಕೂರಿ, ಎದೆಯ ಭಾಗವನ್ನು ನೆಲಕ್ಕೆ ತಾಗಿಸುವುದು. ಇದು ಎಲ್ಲ ರೀತಿಯಿಂದಲೂ ಸುಲಭದ ಎನಿಮಾ.
ಮೊದಲನೆಯದಾಗಿ ಎನಿಮಾ ನಾಜಲ್ಗೆ ಯಾವುದಾದರೂ ಎಣ್ಣೆ ಹಚ್ಚಿ, ಎನಿಮಾ ಕ್ಯಾನನ್ನು ನೆಲದಿಂದ ಐದು ಅಡಿ ಎತ್ತರದಲ್ಲಿ ನೇತು ಹಾಕಬೇಕು. ನಂತರ ಕ್ಯಾನ್ನಲ್ಲಿ ನೀರು ತುಂಬಿಸಿ ನಾಜಲ್ನ ತುದಿಯಿಂದ ಗಾಳಿಯ ಗುಳ್ಳೆಗಳು ಹೊರಕ್ಕೆ ಹೋಗುವವರೆಗೂ ಗಮನಿಸಿ. ತಕ್ಷಣ ಕೈ ಬೆರಳಿನಿಂದ ಅದನ್ನು ಮುಚ್ಚುವುದು. ಮೇಲೆ ತಿಳಿಸಿದಂತಹ ಯಾವುದಾದರೂ ಭಂಗಿಯಲ್ಲಿ ನಾಜಲ್ಅನ್ನು ಎರಡು ಇಂಚಿನಷ್ಟು ಗುದದ್ವಾರದ ಒಳಕ್ಕೆ ಸೇರಿಸುವುದು. ಈಗ 4ರಿಂದ 5 ನಿಮಿಷಗಳಲ್ಲಿ ನೀರೆಲ್ಲವೂ ಕರುಳಿಗೆ ಸೇರಲು ಆರಂಭಿಸುತ್ತದೆ. ಈ ನೀರು ದೊಡ್ಡ ಕರುಳಿನ ಕೊನೆ ಭಾಗವನ್ನು ಹಿಗಗಿಸುವುದರಿಂದ ಕರುಳಿನ ಕನವರಿಕೆಗೆ ಉಪಯುಕ್ತವಾಗುತ್ತದೆ.
*ತಣ್ಣೀರಿನ ಎನಿಮಾ ಮಲಬದ್ಧತೆ ನಿವಾರಣೆಗೆ ಬಹಳ ಉಪಯುಕ್ತ.
*ಬೆಚ್ಚನೆ ನೀರಿನ ಎನಿಮಾವನ್ನು ಮಲ ಗಟ್ಟಿಯಾಗಿದ್ದಾಗ, ಹೊಟ್ಟೆನೋವು, ಗುದದ್ವಾರದ ನೋವಿನ ಸಂದರ್ಭದಲ್ಲಿ ಮಾಡಿಕೊಳ್ಳಬಹುದು.
*ಅತಿ ತಣ್ಣನೆಯ ನೀರಿನ ಎನಿಮಾನ್ನು ಭೇದಿ, ಆಮಶಂಕೆ, ಇರಿಟೆಬಲ್ ಬವೆಲ್ ಸಿಂಡ್ರೋಮ್, ಅತಿಸಾರ ಮುಂತಾದ ತೊಂದರೆಗಳಲ್ಲಿ ನೀಡಲಾಗುತ್ತದೆ.
ಕೋಲನ್ ಹೈಡ್ರೋಥೆರಪಿ
ಇದನ್ನು ಎನಿಮಾದ ಮುಂದುವರೆದ ಭಾಗವೆನ್ನಬಹುದು. ಈ ಚಿಕಿತ್ಸೆ ಪಡೆಯುವವರನ್ನು ಚಿಕಿತ್ಸಾ ಟೇಬಲ್ನ ಮೇಲೆ ಆರಾಮವಾಗಿ ಮಲಗಿಸಿ ಕಾಲುಗಳನ್ನು ಮೊಣಕಾಲಿನಲ್ಲಿ ಮಡಚಿ ಪಾದಗಳನ್ನು ಟೇಬಲ್ನ ಮೇಲಿಡುವುದು. ಒಂದು ಬಾರಿ ಉಪಯೋಗಿಸಿ ಬಿಸಾಡುವಂತಹ ಸಾಧನಕ್ಕೆ ಎಣ್ಣೆಯನ್ನು ಹಚ್ಚಿ ನಿಧಾನವಾಗಿ ಗುದದ್ವಾರದ ಒಳಗೆ ಸೇರಿಸುವುದು. ನಂತರ ಕೊಳವೆಯ ಹಿಂಬದಿಯ ಎರಡು ರಂಧ್ರಗಳ ಮೂಲಕ ಎರಡು ಪೈಪ್ಗಳನ್ನು ಒಳ ಕಳುಹಿಸಲಾಗುವುದು. ಒಂದರಲ್ಲಿ ಸ್ವಚ್ಛಗೊಳಿಸಿದ ಹದವಾದ ನೀರನ್ನು ವ್ಯಕ್ತಿಯನ ದೊಡ್ಡ ಕರುಳಿನ ಭಾಗಕ್ಕೆ ಹೋಗುವಂತೆ ನೋಡಿಕೊಳ್ಳಲಾಗುತ್ತದೆ. ಈ ಹಂತದಲ್ಲಿ ನೀರಿನ ಒತ್ತಡ ಮತ್ತು ಉಷ್ಣಾಂಶದ ತೀವ್ರತೆಯನ್ನು ಹತೋಟಿಯಲ್ಲಿಡಲಾಗುತ್ತದೆ. ನಂತರ ಇನ್ನೊಂದು ಕೊಳವೆಯ ಮೂಲಕ ಮಲವು ನೀರಿನ ಜತೆಯಲ್ಲಿ ಟ್ಯೂಬ್ ಮೂಲಕ ಹೊರಬರುತ್ತದೆ.
ಉಪಯೋಗಗಳು: ಜೀರ್ಣಾಂಗ ವ್ಯೆಹದ ತೊಂದರೆಗಳು, ಗ್ಯಾಸ್ಟ್ರೈಟಿಸ್, ಹೊಟ್ಟೆನೋವು, ಮಲಬದ್ಧತೆ, ಜಂತುಹುಳಗಳ ತೊಂದರೆಗಳು. ಮೊಡವೆಗಳು, ಸೊರಿಯಾಸಿಸ್ ಎಲ್ಲ ರೀತಿಯ ಚರ್ಮದ ವ್ಯಾಗಳಿಗೆ ಬಹಳ ಉಪಯುಕ್ತ. ದೇಹವು ಮದ್ಯಪಾನದಿಂದ, ತಂಬಾಕಿನಿಂದ ಕಲುಷಿತಗೊಂಡಲ್ಲಿ ಇದು ಉಪಯುಕ್ತ.
ಅತಿ ಸುಲಭವಾಗಿ ದೊರೆಯುವಂತಹ ಈ ಜಲ ಚಿಕಿತ್ಸೆಯು ವೈಜ್ಞಾನಿಕ ಆಧಾರಗಳನ್ನು ಒಳಗೊಂಡ ಒಂದು ಉತ್ತಮ ಚಿಕಿತ್ಸಾ ಪದ್ಧತಿಯಾಗಿರುವುದಲ್ಲದೆ, ಹಿಂದಿನಿಂದ ದೇಹದ ಆರೋಗ್ಯಕ್ಕೆ ಹಾಗೂ ಅನಾರೋಗ್ಯ ನಿವಾರಣೆಗೆ ಮತ್ತು ನಾವೆಲ್ಲ ಜೀವಿಸಲು ಅತಿ ಮುಖ್ಯವಾದ ಸಾಧನವಾಗಿದೆ. ಈ ಜಲ ಚಿಕಿತ್ಸೆಯಿಂದ ಯಾವುದೇ ತರಹದ ಅಡ್ಡ ಅಥವಾ ಪಾರ್ಶ್ವ ಪರಿಣಾಮಗಳಿರುವುದಿಲ್ಲ. ಇಂದಿನ ಬದಲಾದ ಜೀವನ ಶೈಲಿಯಿಂದ ಹೆಚ್ಚುತ್ತಿರುವ ಎಲ್ಲ ಆಧುನಿಕ ಕಾಯಿಲೆಗಳನ್ನು ತಡೆಯಲು ಹಾಗೂ ನಿವಾರಿಸಲು ಮರಳಿ ಪ್ರಕೃತಿಗೆ' ಎನ್ನುವ ರೀತಿ ನಾವು ನಮ್ಮ ಹಿರಿಯರ ಜೀವನಶೈಲಿಯನ್ನು ಅನುಸರಿಸಬೇಕು. ಇದರ ಜತೆಯಲ್ಲಿ ಪಂಚಭೂತಗಳಿಂದಾದ ಈ ದೇಹಕ್ಕೆ ಪಂಚಭೂತಗಳ ಚಿಕಿತ್ಸೆಯೇ ಅತ್ಯುತ್ತಮ.
ಸ್ತನ ಕ್ಯಾನ್ಸರ್ : ಇದು ಹತ್ತು ಕಾಯಿಲೆಗಳ ಸಂಗಮ
ಲಂಡನ್: ಸ್ತನ ಕ್ಯಾನ್ಸರ್ ಎಂಬುದು ಕೇವಲ ಒಂದು ಕಾಯಿಲೆ ಅಲ್ಲ, ಇದು ಹತ್ತು ವಿಭಿನ್ನ ಕಾಯಿಲೆಗಳ ಸಮಾಗಮ ಎಂದು ಹೊಸ ಮಹತ್ವಪೂರ್ಣ ಸಂಶೋಧನೆಯೊಂದು ಸಾಬೀತುಪಡಿಸಿದೆ. ಈ ಸಂಶೋಧನೆ ಈ ಮಾರಕ ರೋಗ ಚಿಕಿತ್ಸೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಬಲ್ಲದು ಎಂದು ಆಶಿಸಲಾಗಿದೆ.
ಸುಮಾರು 2,000ಕ್ಕೂ ಹೆಚ್ಚು ಸ್ತನ ಕ್ಯಾನ್ಸರ್ ರೋಗಿಗಳನ್ನು ಅಧ್ಯಯನ ಮಾಡಿರುವ ಅಂತಾರಾಷ್ಟ್ರೀಯ ಸಂಶೋಧಕರ ತಂಡ ಈ ಮಹತ್ವಪೂರ್ಣ ವಿಷಯವನ್ನು ಹೊರಹಾಕಿದೆ. ರೋಗಿ ಯಾವ ಬಗೆಯ ಸ್ತನ ಕ್ಯಾನ್ಸರ್ನ ಬಾಧೆಗೆ ಒಳಗಾಗಿದ್ದಾರೆ ಎಂಬುದನ್ನು ವರ್ಗೀಕರಣ ಮಾಡುವ ಮೂಲಕ ಆತನಿಗೆ ಸರಿಯಾಗಿ ಒಪ್ಪುವ ಔಷಧ/ ಚಿಕಿತ್ಸೆಯನ್ನು ನಿಗದಿ ಮಾಡಬಹುದು ಎಂದು ಇವರು ಹೇಳುತ್ತಾರೆ. ಜತೆಗೆ ರೋಗಿ ಈ ರೋಗದಿಂದ ಮುಕ್ತರಾಗುವರೇ ಎಂಬುದನ್ನು ಸಹ ಕರಾರುವಾಕ್ ಆಗಿ ಳಬಹುದಾಗಿದೆ ಎಂದು ಇವರು ತಿಳಿಸಿದ್ದಾರೆ. ಈ ಸಂಶೋಧನೆಯ ಫಲಿತಾಂಶಗಳನ್ನು ಆಸ್ಪತ್ರೆಯಲ್ಲಿ ಪ್ರಯೋಗಿಸಲು(ರೋಗಿಗಳಿಗೆ ಇದರ ಲಾಭ ದೊರೆಯುವಂತಾಗಲು) ಕನಿಷ್ಠ ಮೂರು ವರ್ಷ ಬೇಕಾಗಲಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ನೇಚರ್ ನಿಯತಕಾಲಿಕೆಯಲ್ಲಿ ಸಂಶೋಧನೆಯ ವಿವರಗಳು ಪ್ರಕಟವಾಗಿವೆ. ಬ್ರಿಟನ್ ಮತ್ತು ಕೆನಡಾದ 2,000ಕ್ಕೂ ಹೆಚ್ಚು ರೋಗಿಗಳ ಘನೀಕೃತ ಮಾದರಿಗಳನ್ನು ವಿಶ್ಲೇಷಣೆಗೆ ಬಳಸಲಾಗಿತ್ತು. ಕ್ಯಾನ್ಸರ್ ಕೋಶಗಳ ವಂಶವಾಹಿಗಳ ಬಗ್ಗೆ ವಿಜ್ಞಾನಿಗಳು ಗಮನ ಹರಿಸಿದ್ದಾರೆ. ಯಾವ ವಂಶವಾಹಿ ವಿಕೃತಗೊಂಡಿದೆ, ಯಾವುದು ಅತಿಯಾಗಿ ಶ್ರಮಿಸುತ್ತಿದೆ ಮತ್ತು ಯಾವುದು ಕೆಲಸ ಸ್ಥಗಿತಗೊಳಿಸಿದೆ ಎಂಬುದನ್ನು ಪರಿಶೀಲಿಸಲಾಯಿತು. ಕ್ಯಾನ್ಸರ್ ಸೋಂಕಿನ ನಂತರ ಈ ಕೋಶಗಳು ವಿಭಿನ್ನ ಪ್ರಕಾರಗಳಲ್ಲಿ ಬದಲಾಗಿವೆ ಎಂಬುದನ್ನು ಕಂಡುಕೊಂಡ ವಿಜ್ಞಾನಿಗಳು ಇವನ್ನು 10 ವಿಭಾಗಗಳಲ್ಲಿ ವರ್ಗೀಕರಣ ಮಾಡಿದರು. ಪ್ರತ್ಯೇಕ ಗಡ್ಡೆಯ ವಂಶವಾಹಿ ಒಂದೇ ಗುಂಪಿಗೆ ಸೇರಿದ್ದು ಇದೇ ಮಾದರಿಯ ವಂಶವಾಹಿಯನ್ನು ಹೊಂದಿದ್ದ ಮಹಿಳೆಯರಲ್ಲಿ ಇದೇ ಮಾದರಿಯ ರೋಗಪ್ರತಿರೋಧಕ ಗುಣವನ್ನು ಹೊಂದಿದ್ದವು. ಸ್ತನ ಕ್ಯಾನ್ಸರ್ ಎಂಬುದು ಕೇವಲ ಒಂದು ರೋಗ ಅಲ್ಲ. ಬದಲಿಗೆ ಅವು ಹತ್ತು ವಿಭಿನ್ನ ರೋಗಗಳಾಗಿವೆ ಎಂದು ಮುಖ್ಯ ಸಂಶೋಧಕ ಪ್ರೊ. ಕಾರ್ಲೊಸ್ ಕ್ಯಾಲ್ಡಾಸ್ ಹೇಳಿದ್ದಾರೆ. ನಮ್ಮ ಈ ಸಂಶೋಧನೆ ನಂತರ ಭವಿಷ್ಯದಲ್ಲಿ ವೈದ್ಯರು, ಮಹಿಳೆ ಯಾವ ಬಗೆಯ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿದ್ದಾಳೆ ಎಂಬುದನ್ನು ನಿರ್ಧರಿಸಿ, ಯಾವ ಬಗೆಯ ನಿರ್ದಿಷ್ಟ ಔಷಧ ಬಳಸಬೇಕು ಎಂಬ ತೀರ್ಮಾನಕ್ಕೆ ಬರುವುದು ಸುಲಭವಾಗುತ್ತದೆ. ಸದ್ಯ ಚಾಲ್ತಿಯಲ್ಲಿರುವ ವ್ಯವಸ್ಥೆಗಿಂತಲೂ ಇದು ಹೆಚ್ಚು ಪರಿಣಾಮಕಾರಿಯಾಗಿರಲಿದೆ ಎಂದು ಅವರು ಹೇಳುತ್ತಾರೆ.
ಗರ್ಭಾವಸ್ಥೆ - ತಿನ್ನಲು ಗಡಿಬಿಡಿ ಬೇಡ
ತಿಂದಷ್ಟು ಹೊಟ್ಟೆ ತುಂಬುವುದೇ ಇ ಲ್ಲ. ಅಂದೆನಿಸುವ ಹೊತ್ತು. ಕಂಡಕಂಡಿದ್ದು ತಿಂದು ವಾಂತಿಯಾದರೂ ಅದೊಂಥರ ಸಂಭ್ರಮ.ಏಕೆಂದರೆ ಅದು ಬಸಿರಿನ ಆರಂಭದ ದಿನಗಳು. ಯಾವತ್ತೂ ಇಲ್ಲದ ಆಸೆಗಳು ರಾಶಿರಾಶಿಯಾಗಿ ಕಾಡುವುದು ಕೂಡ ಇದೇ ಸಮಯದಲ್ಲಿ. ತಿನ್ನುವ ವಿಷ್ಯದಲ್ಲಂತೂ ಮಣ್ಣಿನಿಂದ ಹಿಡಿದು ದಾರಿ ಬದಿಯಲ್ಲಿ ಮಾರಾಟವಾಗುವ ತಿನಿಸುಗಳನ್ನು ಬಿಡಬೇಕು ಅಂದೆನಿಸುವುದಿಲ್ಲ. ಗರ್ಭಾವಸ್ಥೆಯಲ್ಲಿ ದೇಹಕ್ಕೆ ಹೆಚ್ಚು ಆಹಾರ ಅತ್ಯಗತ್ಯ. ಹಾಗಂತ ಕಂಡಕಂಡಿದ್ದು ತಿಂದು ಹೊಟ್ಟೆ ತುಂಬಿಸಿಕೊಳ್ಳಬೇಕು ಅಂತಲ್ಲ, ಸಮತೋಲಿತ ಆಹಾರ ಪದ್ಧತಿ ಈ ಸಂದರ್ಭದಲ್ಲೂ ಅತ್ಯವಶ್ಯ. ಪೋಷಕಾಂಶ, ಜೀವಸತ್ವ ಮತ್ತು ಖನಿಜಾಂಶಗಳನ್ನು ಆಹಾರ ಪದಾರ್ಥಗಳ ಮೂಲಕಅಗತ್ಯವಾಗಿತೆಗೆದುಕೊಳ್ಳಲೇಬೇಕು.
ತಿನ್ನಬಾರದ್ದು
ಗರ್ಭಾವಸ್ಥೆಯಲ್ಲಿ ಕೆಲವು ತಿನ್ನಬಾರದ ಆಹಾರ ಪದಾರ್ಥಗಳಿವೆ. ಪಪ್ಪಾಯ, ಅನಾನಸ್, ಬಾಳೆ, ಮಾವು, ಮೀನು, ಮೊಟ್ಟೆ, ಶೇಂಗಾ, ಕಡಲೆ, ರಾಗಿ, ಬದನೆಕಾಯಿಗಳನ್ನು ತಿನ್ನಲೇಬಾರದು ಅಂತಾರೆ. ಇವುಗಳನ್ನು ತಿಂದರೆ ಗರ್ಭಪಾತ ಉಂಟಾಗಬಹುದು ಅನ್ನುವ ನಂಬಿಕೆ.ಹಿಂದಿನ ಕಾಲದಲ್ಲಿ ಗರ್ಭಪಾತ ಮಾಡಲಿಕ್ಕಾಗಿಯೇ ಕೆಲವು ಬೀಜಗಳನ್ನು ಬಳಸಲಾಗುತ್ತಿತ್ತು. ಆದ್ದರಿಂದ ಅಂಥದ್ದೊಂದು ನಂಬಿಕೆ ಉಳಿದು ಹೋಗಿದೆ. ಆದ್ರೂ ಎಳ್ಳು, ಶೇಂಗಾಗಳಂಥ ಬೀಜ ಹಾಗೂ ಒಣ ಹಣ್ಣುಗಳ ಸೇವನೆಗೆ ಹೆಚ್ಚು ಪ್ರಾಮುಖ್ಯ ನೀಡುವುದಿಲ್ಲ. ಏಕೆಂದರೆ ಇವು ಹೆಚ್ಚು ಉಷ್ಣ ಮಾಡುತ್ತವೆ. ಹಾಗಂತ ತಿನ್ನಲೇಬಾರದು ಅಂತೇನೂ ಅಲ್ಲ. ಆದ್ರೆ ಮೊದಲ ಮೂರು ತಿಂಗಳು ಉಷ್ಣ ಉಂಟು ಮಾಡುವಂಥ ಆಹಾರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಒಳ್ಳೆಯದಲ್ಲ ಅಂತಾರೆ ವೈದ್ಯರು. ಸಮೀಕ್ಷೆಯೊಂದರ ಪ್ರಕಾರ, ಕೆಫೀನ್ ಅಂಶವಿರುವ ಪಾನೀಯಗಳನ್ನು ನಿತ್ಯ ಸೇವಿಸುವುದರಿಂದ ಹುಟ್ಟುವ ಮಗು ತೂಕ ಕಡಿಮೆಯಾಗಬಹುದು ಅಥವಾ ಜನನ ಸಂಬಂಧ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಹೀಗೆ ಮಾಡಿ..
* ಬೇಯಿಸದ ಅಥವಾ ಸರಿಯಾಗಿ ಬೇಯಿಸದ ಮಾಂಸ ತಿನ್ನಬೇಡಿ. ಸ್ವಚ್ಛವಿಲ್ಲದ ಅಂಗಡಿಗಳಿಂದ ಕೂಡ ಖರೀದಿಸಬೇಡಿ. ಅದು ಗರ್ಭಿಣಿಯ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರಬಹುದು. ಅದಲ್ಲದೆ ಗರ್ಭಪಾತದ ಅಪಾಯ ಕೂಡ ಎದುರಾಗಬಹುದು.* ಮಲಿನಗೊಂಡ ನೀರಿನಿಂದ ಮೀನು, ಏಡಿಗಳನ್ನು ಹಿಡಿದು ತಂದು ತಿನ್ನಬೇಡಿ. ನೀರಿನೊಳಗಿನ ರಾಸಾಯನಿಕ ಆಹಾರದ ಮೂಲಕ ನಿಮ್ಮ ದೇಹ ಸೇರಬಹುದು.* ಅಂಗಡಿಯಿಂದ ಖರೀದಿಸಿದ ಬೆಣ್ಣೆ ಅಥವಾ ಗಿಣ್ಣು ತಿನ್ನುವಾಗ ಎಚ್ಚರವಹಿಸಿ. ಇದರಲ್ಲಿರುವ ಲಿಸ್ಟೀರಿಯಾ ಎಂಬ ಬ್ಯಾಕ್ಟೀರಿಯಾ ಗರ್ಭಪಾತಕ್ಕೆ ಕಾರಣವಾಗಬಹುದು ಅಥವಾ ಸೋಂಕು ಉಂಟು ಮಾಡಬಹುದು. ಹೆಚ್ಚು ಸಮಯ ಪ್ರಿಜ್ನಲ್ಲಿಟ್ಟ ಮಾಂಸದಲ್ಲಿ ಕೂಡ ಲಿಸ್ಟೀರಿಯಾ ಇರುತ್ತದೆ. ಹೀಗಾಗಿ ಇದು ಕೂಡ ಗರ್ಭಾವಸ್ಥೆಯಲ್ಲಿ ಒಳ್ಳೆಯದಲ್ಲ. * ಕೆಫೀನ್ ಅಂಶವಿರುವ ಪದಾರ್ಥಗಳ ಸೇವನೆ ತಪ್ಪಿಸಿ.
* ಧೂಮಪಾನ, ಮದ್ಯಪಾನದಿಂದ ದೂರ ಇರುವುದೇ ಒಳ್ಳೆಯದು. * ಸರಿಯಾಗಿ ತೊಳೆಯದ ಹಣ್ಣು, ತರಕಾರಿಗಳ ಸೇವನೆ ಬೇಡ.* ಹೆಚ್ಚು ಖಾರವಾದ ಪದಾರ್ಥಗಳ ಸೇವನೆ ಒಳ್ಳೆಯದಲ್ಲ. * ಸಾಧ್ಯವಾದಷ್ಟು ಮನೆಯಲ್ಲೇ ಶುದ್ಧ ವಾತಾವರಣದಲ್ಲಿ ತಯಾರಿಸಿದ ಆಹಾರ ಪದಾರ್ಥ ಸೇವಿಸಿ.
* ಮೈದಾದಿಂದ ತಯಾರಿಸಿದ ಹಾಗೂ ಹೆಚ್ಚು ಸಕ್ಕರೆ ಅಂಶವಿರುವ ಪದಾರ್ಥ ಕೂಡ ಒಳ್ಳೆಯದಲ್ಲ.
ಸೌಂದರ್ಯ ವರ್ಧನೆಗೆ ಉಷ್ಟ್ರಾಸನ* ನಂದಿನಿ ಪ್ರಸಾದ್
ಮಹಿಳೆಯರ ಆಸನಗಳಲ್ಲಿ ಅತ್ಯಂತ ಪ್ರಮುಖ, ಪ್ರತಿದಿನ ಮಾಡಲೇಬೇಕಾದ ಆಸನವೆಂದರೆ 'ಉಷ್ಟ್ರಾಸನ ' ಅಥವಾ 'ಸೌಂದರ್ಯ' ಆಸನ. ಇದು ಅತ್ಯಂತ ಸರಳವಾದುದು. ಈ ಆಸನ ಆಚರಿಸುವಾಗ ಶರೀರದ ಭಂಗಿಯು ಒಂಟೆಯಂತೆ, ಉಷ್ಟ್ರ ಪಕ್ಷಿಯಂತೆ ಕಾಣಿಸುತ್ತದೆ. ಆದ್ದರಿಂದ ಉಷ್ಟ್ರಾಸನ ಎಂದೂ ಇದನ್ನು ಕರೆಯುವರು. ಇದರಿಂದ ಮಹಿಳೆಯರ ಸೌಂದರ್ಯ ಹೆಚ್ಚುತ್ತದೆ. ಆದುದರಿಂದ 'ಸೌಂದರ್ಯ' ಆಸನವೆಂತಲೂ ಇದನ್ನು ಕರೆಯುತ್ತಾರೆ.
ಮಾಡುವ ವಿಧಾನ
ನೆಲದ ಮೇಲೆ ಹಾಸಿರುವ ದಪ್ಪ ವಸ್ತ್ರದ ಮೇಲೆ ಕಾಲುಗಳನ್ನು ಮಡಚಿಕೊಂಡು ಮೊಣಕಾಲುಗಳ ಮೇಲೆ ನಿಂತುಕೊಂಡು ಮೆಲ್ಲಗೆ ಹಿಂದಕ್ಕೆ ಬಗ್ಗಿ ಕಾಲಿನ ಬೆರಳುಗಳನ್ನು ಕೈಬೆರಳುಗಳಿಂದ ಹಿಡಿದುಕೊಳ್ಳಿ. ಕಾಲು ಹಿಡಿದುಕೊಂಡರೆ ಉಷ್ಟ್ರಸನವಾಗುತ್ತದೆ. ಇಲ್ಲವಾದರೆ ಅರ್ಧ ಉಷ್ಟ್ರಸನವಾಗುತ್ತದೆ. ತಲೆ ಮೇಲ್ಮುಖವಾಗಿರಲಿ, ಇದೇ ಭಂಗಿಯಲ್ಲಿ 5-6 ಸೆಕೆಂಡ್ಗಳವರೆಗೆ ಇರಬೇಕು.
ಉಷ್ಟ್ರಾಸನ ಪ್ರಯೋಜನೆಗಳು
* ಹೊಟ್ಟೆ ಮತ್ತು ಸೊಂಟದ ಕೊಬ್ಬು ಕರಗುತ್ತದೆ. ವಾಯು ಬಾಧೆ ಸಮಸ್ಯೆ, ಮಲಬದ್ಧತೆ, ಎದೆನೋವು ಇಲ್ಲವಾಗುತ್ತದೆ.
* ಮುಖದ ಕಾಂತಿ ಹೆಚ್ಚುತ್ತದೆ. ಶರೀರದ ಆಕಾರ ಸುಂದರವಾಗುತ್ತದೆ. * ಎದೆಯ ಭಾಗ ಹಿಗ್ಗುವುದರಿಂದ ಹೃದಯ ಬಡಿತ ಸರಿಯಾಗುವುದು. ಹೃದಯ ಬಲಿಶಾಲಿಯಾಗುವುದು, ಉಸಿರಾಟ ಸರಾಗವಾಗುವುದು. ಉಸಿರಾಟ ಮತ್ತು ಆಸ್ತಮ ಸಮಸ್ಯೆ ಇರುವವರಿಗೆ ಇದು ವರಪ್ರಸಾದವಾಗಿದೆ.
* ಪ್ರಸವದ ನಂತರ ಅರ್ಧ ಉಷ್ಟ್ರಸನ ಮಾಡಿದರೆ ಹಾಲಿನ ಉತ್ಪತ್ತಿ ಹೆಚ್ಚಾಗುವುದು. ಕ್ಷೀರ ಗ್ರಂಥಿಗಳು ಬಲಗೊಳ್ಳುತ್ತದೆ.
* ತೊಡೆ, ಕೈ, ಕುತ್ತಿಗೆ, ಬೆನ್ನು ಗಟ್ಟಿಯಾಗುವುವು. ಗಂಟಲು ನೋವು, ಗಡಸು ಧ್ವನಿ, ತಲೆನೋವು, ಅಜೀರ್ಣ ಮುಂತಾದವು ಣಮುಖವಾಗುತ್ತದೆ.
* ಮೂತ್ರಪಿಂಡ, ಯಕೃತ್, ಜಠರ, ಸ್ತ್ರೀಯರ ಗರ್ಭಧಾರಣ ಗ್ರಂಥಿ, ಗರ್ಭಾಶಯ ಪುರುಷರಲ್ಲಿ ಪ್ರೋಸ್ಟೇಟ್ ಇನ್ನೂ ಮುಂತಾದ ಅಂಗಾಗಳು ಚೈತನ್ಯಗೊಳ್ಳುತ್ತವೆ.
‘ನಿರ್ವೀರ್ಯ’ರಾಗುತ್ತಿದ್ದಾರೆ ಪುರುಷರು! ಯಾಕೆ ಗೊತ್ತೆ?
ಮುಂಬಯಿ : ಬದುಕಿನಲ್ಲಿ ಒತ್ತಡ ದಿನೇ ದಿನೇ ಹೆಚ್ಚಾಗುತ್ತಲೇ ಸಾಗಿದೆ. ವಾತಾವರಣವಂತೂ ವಿಷಮಯವಾಗುತ್ತಿದೆ. ನಾವು ಸೇವಿಸುತ್ತಿರುವ ಇಂದಿನ 'ಹೈಬ್ರೀಡ್' ಆಹಾರ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತಿಲ್ಲ. ಆದರೆ 'ಮೈ ತೂಕ'ವನ್ನು ಮಾತ್ರ ಹೆಚ್ಚಿಸುತ್ತಿದೆ. ಈ ಎಲ್ಲಾ ಕಾರಣಗಳಿಂದ ಪುರುಷರ ವೀರ್ಯದಲ್ಲಿ ವೀಯಾರ್ಣುಗಳ ಸಂಖ್ಯೆ ಕುಸಿಯುತ್ತಿದೆ. ಕೇವಲ 50 ವರ್ಷಗಳಲ್ಲಿ ಶೇ.50ರಷ್ಟು ವೀರ್ಯಾಣುಗಳ ಸಂಖ್ಯೆ ಕುಗ್ಗಿದೆ. ಮುಂದಿನ 50 ವರ್ಷಗಳಲ್ಲಿ ಗಂಡಸರ ವೀರ್ಯದಲ್ಲಿ ಗರ್ಭಕ್ಕೆ ಕಾರಣವಾಗುವಂತಹ ವೀರ್ಯಾಣುಗಳು ಇಲ್ಲವಾಗುತ್ತವೆ ಎಂದು ತಿಳಿದು ಬಂದಿದೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಕಳವಳ ವ್ಯಕ್ತವಾಗಿದೆ.
'ಕಳೆದ ಶತಮಾನದ 90ರ ದಶಕದಲ್ಲಿ ಪಶ್ಚಿಮ ದೇಶಗಳ ಗಂಡಸರಲ್ಲಿನ ವೀರ್ಯಾಣುಗಳು ಸಂಖ್ಯೆ ಕುಗ್ಗುತ್ತಿರುವುದನ್ನು ಮೊದಲ ಬಾರಿಗೆ ಪತ್ತೆ ಹಚ್ಚಲಾಯಿತು. ಭಾರತೀಯ ಪುರುಷರಲ್ಲೂ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದೊಂದು ಜಾಗತಿಕ ಸಮಸ್ಯೆಯಾಗಿದೆ. ಒಂದು ಅಧ್ಯಯನದ ಪ್ರಕಾರ ಪ್ರತಿ ವರ್ಷ ಶೇ.2ರಷ್ಟು ವೀರ್ಯಾಣುಗಳ ಪ್ರಮಾಣ ಕಡಿಮೆಯಾಗುತ್ತಿದೆ. ಈ ಪ್ರಮಾಣ ಹೀಗೆಯೇ ಮುಂದುವರಿದರೆ ಮುಂದಿನ 50 ವರ್ಷಗಳಲ್ಲಿ ಸಂತಾನೋತ್ಪತ್ತಿ ಮಾಡಬಲ್ಲ ಪುರುಷರ ಸಂಖ್ಯೆ ಶೂನ್ಯ ಮುಟ್ಟುತ್ತದೆ' ಎಂದು ಡಾ.ಪಿ.ಎಂ.ಭಾರ್ಗವ ಹೇಳುತ್ತಾರೆ. ಶೀಘ್ರದಲ್ಲೇ ಸಂವಿಧಾನದ ಅನುಮೋದನೆ ಪಡೆಯಲಿರುವ 'ಸಂತಾನೋತ್ಪತ್ತಿ ವಿಧಾನಗಳು' ಯೋಜನೆಯಲ್ಲಿ ಡಾ.ಭಾರ್ಗವ ಅವರು ಕಾರ್ಯ ನಿರ್ವಹಿಸಿದ್ದರು. ಸ್ಕಾಟ್ಲೆಂಡ್ನ ಅಬರ್ದೀನ್ ಸಂತಾನೋತ್ಪತ್ತಿ ಕೇಂದ್ರಕ್ಕೆ 1989 ಹಾಗೂ 2002ರ ನಡುವೆ ಭೇಟಿ ನೀಡಿದ್ದ ಪುರುಷರ ವೀರ್ಯ ಪರೀಕ್ಷೆಯ ದಾಖಲಾತಿಗಳನ್ನು ಕೆಲವು ವರ್ಷಗಳ ಹಿಂದೆ ಅಧ್ಯಯನಕ್ಕೆ ಒಳಪಡಿಸಲಾಯಿತು. ವೀರ್ಯಾಣುಗಳ ಸಂಖ್ಯೆಯಲ್ಲಿ ಸರಾಸರಿ ಶೇ.30ರಷ್ಟು ಕುಸಿತ ಕಂಡು ಬಂದಿರುವುದು ಈ ಅಧ್ಯಯನದಿಂದ ಬೆಳಕಿಗೆ ಬಂದಿದೆ. ಬೊಜ್ಜು, ಮದ್ಯಪಾನ, ಧೂಮಪಾನ, ಒತ್ತಡದ ಜೀವನ ಶೈಲಿ ಮುಂತಾದ ಅನೇಕ ಕಾರಣಗಳು ವೀರ್ಯಾಣು ಸಂಖ್ಯೆ ಕುಸಿತಕ್ಕೆ ಮೂಲವಾಗುತ್ತಿವೆ ಎಂದು ಡಾ.ಭಾರ್ಗವ ಹೇಳುತ್ತಾರೆ. ಆದರೆ, ತಡವಾಗಿ ಮದುವೆಯಾಗುವುದು ಬಂಜೆತನಕ್ಕೆ ಮೂಲ ಕಾರಣ. ಈ ಸಮಸ್ಯೆ ಪುರುಷ ಹಾಗೂ ಮಹಿಳೆ ಇಬ್ಬರಿಗೂ ಸಂಬಂಧ ಪಟ್ಟಿರುವಂತಹುದು ಎಂದು ಬಂಜೆತನ ತಜ್ಞ ಡಾ. ಅನಿರುದ್ಧ ಮಲ್ಪಾಣಿ ತಿಳಿಸುತ್ತಾರೆ.
ಒಂದು ಮಿಲಿ ಲೀಟರ್ ವೀರ್ಯದಲ್ಲಿ 11.3 ಕೋಟಿ ವೀರ್ಯಾಣುಗಳಿದ್ದರೆ ಒಳಿತು ಎಂದು ವಿಶ್ವ ಆರೋಗ್ಯಸಂಸ್ಥೆ(ಡಬ್ಲ್ಯುಎಚ್ಒ) 1950ರಲ್ಲಿ ಹೇಳಿತ್ತು. ಅದೇ ಸಂಸ್ಥೆ ಒಂದು ಮಿಲಿ ಲೀಟರ್ನಲ್ಲಿ 2 ಕೋಟಿ ವೀಯಾರ್ಣುಗಳಿದ್ದರೆ ಸಾಕು ಎಂದು ತನ್ನ ಅಂಕಿ ಸಂಖ್ಯೆಗಳನ್ನು 2009ರಲ್ಲಿ ಬದಲು ಮಾಡಿಕೊಂಡಿದೆ! ಅಷ್ಟರ ಪ್ರಮಾಣದಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಡಾ.ಅಂಜಲಿ ಮಲ್ಪಾಣಿ ಹೇಳುತ್ತಾರೆ. '20 ವರ್ಷಗಳ ಹಿಂದೆ ಮುಂಬಯಿಯಲ್ಲಿ ವೀರ್ಯ ಬ್ಯಾಂಕ್ ಸ್ಥಾಪನೆ ಮಾಡಿದಾಗ ಎಲ್ಲರೂ ಮುಸಿ ಮುಸಿ ನಕ್ಕರು. ಮಡಿವಂತರಂತೂ ಬ್ಯಾಂಕಿನ ಕಡೆ ತಲೆಯಿಟ್ಟೂ ಮಲಗಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಪ್ರತಿದಿನ ಆರೇಳು ಜನ ಪುರುಷರು ವೀರ್ಯ ದಾನ ಮಾಡುತ್ತಿದ್ದಾರೆ. ಆದರೆ, ವೀರ್ಯ ನೀಡಲು ಬರುವ ಶೇ.70ರಷ್ಟು ಪುರುಷರ ವೀರ್ಯವನ್ನು ನಿರಾಕರಿಸಲಾಗುತ್ತಿದೆ. ಏಕೆಂದರೆ ಅವರ ವೀರ್ಯದಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಿರುತ್ತದೆ' ಎಂದು ಡಾ.ಅಂಜಲಿ ಹೇಳುತ್ತಾರೆ. ವೀರ್ಯ ಬ್ಯಾಂಕಿನಲ್ಲಿ ವೀರ್ಯ ದಾನ ಮಾಡಲು ಬರುವವರಲ್ಲಿ ಕಾಲೇಜು ವಿದ್ಯಾರ್ಥಿಗಳೇ ಅಧಿಕ. ಅವರ ಖರ್ಚಿಗೆ 'ಪಾಕೆಟ್ ಮನಿ' ಗಿಟ್ಟಿಸಿಕೊಳ್ಳಲು ತಮ್ಮ ವೀರ್ಯವನ್ನು ಮಾರುತ್ತಾರೆ! ಆದರೆ ಅನೇಕ ವಿದ್ಯಾರ್ಥಿಗಳ ವೀರ್ಯದಲ್ಲಿ ವೀರ್ಯಾಣುಗಳ ಸಂಖ್ಯೆ ಸಂತಾನೋತ್ಪತ್ತಿಗೆ ಸಾಕಾಗುವಷ್ಟು ಇರುವುದಿಲ್ಲ. ಅಂತೂ, ದಿನೇ, ದಿನೇ ಪುರುಷರು ಬಂಜೆತನದ ಅಂಚಿಗೆ ತಲುಪುತ್ತಿರುವುದು ಸುಳ್ಳಲ್ಲಾ.
ಆರೋಗ್ಯ ಚಿಕಿತ್ಸೆ ನೀರಿನ ನಿಯಮ
ಅತಿ ಕಡಿಮೆ ಬೆಲೆಗೆ ದೊರೆಯುವಂತಹ ಔಷಧಿ ನೀರೇ. ನಿದ್ರಾಜನಕ, ಜ್ವರಹಾರಿ, ನೋವು ಶಾಮಕ, ಸೆಳವು ನಿರೋಧಕ, ಅರಿವಳಿಕೆ ಮುಂತಾದವು ಇದರ ಪ್ರಮುಖ ಚಿಕಿತ್ಸಕ ಗುಣಗಳು. ನೀರಿನ ಉಷ್ಣತೆ ಮತ್ತು ಚಿಕಿತ್ಸೆ ಅವಧಿಯ ಮೇಲೆ ಇದರ ಪರಿಣಾಮಗಳು ಮತ್ತು ಉಪಯುಕ್ತತೆ ಅವಲಂಬಿಸಿದೆ.
ರನ್ನು ಚಿಕಿತ್ಸೆ ರೂಪದಲ್ಲಿ ಉಪಯೋಗಿಸಲು ಮೂರು ಮುಖ್ಯ ಅಂಶಗಳಿವೆ:
* ಶಾಖ ಹೀರಿಕೊಂಡು ಸಂವಹನ ನೀಡುವುದು ಇದರ ಮಹಾನ್ ಶಕ್ತಿ. *ನೀರಿನ ದ್ರಾವಕ ಲಕ್ಷಣ. *ದ್ರವ, ಘನ, ಅನಿಲ ಯಾವುದೇ ರೂಪಕ್ಕೆ ಸುಲಭವಾಗಿ ಮಾರ್ಪಡಿಸಬಹುದಾದ ಅದರ ಗುಣ. ಜಲ ಚಿಕಿತ್ಸೆ: ಗಮನದಲ್ಲಿರಲಿ *ಜಲ ಚಿಕಿತ್ಸೆಗೆ ಶುದ್ಧ ನೀರನ್ನೇ ಉಪಯೋಗಿಸಬೇಕು.
*ಒಂದು ಬಾರಿ ಚಿಕಿತ್ಸೆಗೆ ಬಳಸಿದ ನೀರನ್ನು ಮತ್ತೆ ಉಪಯೋಗಿಸಬಾರದು. *ನೀರಿನ ಉಷ್ಣಾಂಶ ಹಾಗೂ ಚಿಕಿತ್ಸೆ ಸಮಯವನ್ನು ಸರಿಯಾಗಿ ಗಮನಿಸಬೇಕು.
*ಊಟದ ಒಂದು ಗಂಟೆ ಮುಂಚೆ ಅಥವಾ ಮೂರು ಗಂಟೆ ನಂತರದ ಸಮಯ ಚಿಕಿತ್ಸೆಗೆ ಸೂಕ್ತ.
*ಅಶಕ್ತರು, ಏರು ರಕ್ತದೊತ್ತಡದವರು ಹಾಗೂ ಹೃದಯ ತೊಂದರೆ ಇರುವವರು ಅತಿ ಬಿಸಿ ಮತ್ತು ಅತಿ ತಣ್ಣನೆ ಚಿಕಿತ್ಸೆ ತೆಗೆದುಕೊಳ್ಳಬಾರದು.
*ತಣ್ಣೀರು ಚಿಕಿತ್ಸೆಗಳ ನಂತರ ಕನಿಷ್ಟ 30 ನಿಮಿಷಗಳ ನಂತರವೇ ಸ್ನಾನ ಮಾಡಬೇಕು.
*ಬಿಸಿ ನೀರಿನ ಚಿಕಿತ್ಸೆ ತೆಗೆದುಕೊಳ್ಳುವ ಮುಂಚೆ ಒಂದು ಆಥವಾ ಎರಡು ಗ್ಲಾಸ್ ತಣ್ಣೀರು ಕುಡಿಯಬೇಕು.
*ತಣ್ಣೀರ ಚಿಕಿತ್ಸೆಗಳ ನಂತರ ಮೈ ಒರೆಸಿಕೊಂಡು ಸಾಧಾರಣ ವ್ಯಾಯಾಮ ಮಾಡುವುದು ಒಳ್ಳೆಯದು.
*ಚಿಕಿತ್ಸಾ ಕೋಣೆಗಳು ಸರಿಯಾದ ಬೆಳಕು ಮತ್ತು ಶುಚಿತ್ವದಿಂದ ಕೂಡಿರಬೇಕು.
*ಚಿಕಿತ್ಸಾ ಸಮಯದಲ್ಲಿ ಯಾವುದಾದರೂ ಪ್ರತಿಕೂಲ ಪರಿಣಾಮಗಳು ಕಂಡುಬಂದಲ್ಲಿ ಚಿಕಿತ್ಸೆ ನಿಲ್ಲಿಸಬೇಕು.
ಪ್ರತಿಕೂಲ ಪರಿಣಾಮ ಜಲ ಚಿಕಿತ್ಸೆ ಸಂದರ್ಭದಲ್ಲಿ ಉಂಟಾಗುವ ಪ್ರತಿಕೂಲ ಪರಿಣಾಮಗಳು:
*ಉಸಿರುಗಟ್ಟುವುದು * ರಕ್ತಸ್ರಾವ * ಹೆಪೊನಾಟ್ರೇಮಿಯಾ *ಸುಟ್ಟ ಗಾಯ * ಸೋಂಕು * ವಾಂತಿ *ಮೂರ್ಛೆ * ಎಡಿಯಾ * ತಲೆ ಸುತ್ತುವುದು
*ಜ್ವರ * ನಡುಕ * ಉಬ್ಬಸ * ಡಾ. ಗಂಗಾಧರ ವರ್ಮ ಬಿ.ಆರ್.
ಕಡು ಬೇಸಿಗೆ ಕಳೆಯುವುದು ಹೇಗೆ?*ಸರೋಜಾ ಆರ್.ವೈ.
ಅಬ್ಬಾ ... ಬಿಸಿಲೆಂದರೆ ಗುಲ್ಬರ್ಗ, ವಿಜಾಪುರ, ರಾಯಚೂರಿಗೆ ಬಂದೇ ಅನುಭವಿಸಬೇಕು. ಮನೆ ಕಾದು ಕೆಂಡವಾಗಿರುತ್ತದೆ. ಮನೆಯೊಳಗಿನ ಪ್ರತಿ ಸಾಮಾನು ಚುರುಗುಡುತ್ತವೆ. ಮಹಡಿ ಮನೆಯಲ್ಲಿದ್ದವರ ಪಾಡು ದೇವರೇ ಬಲ್ಲ. ರಸ್ತೆಗಿಳಿದರೆ ಮೈಯೆಲ್ಲ ಉರಿ. ಕೆಲವರು ಸುಡುವ ಬಿಸಿಲಲ್ಲೂ ಬಿಸಿಲ್ಗುದುರೆ ನೋಡುತ್ತ ಟೋಪಿ, ಕೊಡೆ ಹಿಡಿಯದೇ ಓಡಾಡುತ್ತಾರೆ. ಮಕ್ಕಳಿಗೆ ರಜೆಯ ಮೋಜು. ಬಿಸಿಲಲ್ಲೇ ಆಡುತ್ತಾರೆ. ಕಲ್ಲು ಗಣಿ, ಕಟ್ಟಡ ಬಿಸಿಲಿನಲ್ಲಿ ಕೆಲಸ ಮಾಡುವವರ ಸ್ಥಿತಿ ಕೇಳವಂತಿಲ್ಲ. ಈಗಂತೂ ಉಷ್ಣತೆಯ ಹೆಚ್ಚಳದಿಂದ ಎಲ್ಲ ಕಡೆಗೂ ಬಿಸಿಲಿನ ತಾಪ ಜೋರು. ಹಾಗಾದರೆ ಇಂಥ ಕಡು ಬಿಸಿಲಿನಿಂದ ರಕ್ಷಣೆ ಪಡೆಯುವುದು ಹೇಗೆ? ಕೆಲವು ಉಪಾಯಗಳನ್ನು ಅನುಸರಿಸಿ ನೋಡಿ. *ಪ್ರಖರ ಬಿಸಿಲಿನಲ್ಲಿ ಅಂದರೆ ಮಧ್ಯಾಹ್ನ 12ರಿಂದ ಸಂಜೆ 4ರ ನಡುವೆ ಸಾಧ್ಯವಾದಷ್ಟೂ ಹೊರಗಡೆ ಓಡಾಡಬಾರದು. ಹೊರ ಹೋಗಲೇಬೇಕಾದರೆ ಛತ್ರಿ ಆಶ್ರಯ ಪಡೆದುಕೊಳ್ಳಿ, ಮುಖಕ್ಕೆ ಸ್ಕಾರ್ಪ್ ಧರಿಸಿ.
* ರೈತಾಪಿ ಜನ ಹಾಗೂ ಕೂಲಿ ಕಾರ್ಮಿಕರು ತೀರ ಬಿಸಿಲಲ್ಲಿ ತಮ್ಮ ಕೆಲಸಕ್ಕೆ ವಿರಾಮ ಕೊಡಬೇಕು. ಇಲ್ಲವಾದರೆ ಸನ್ಸ್ಟ್ರೋಕ್ ಆಗಬಹುದು. ತಲೆ-ಮೈ-ಕೈಗಳಿಗೆ ರಕ್ಷಣೆ ಇರಬೇಕು. *ಆಗಾಗ ಮರದ ನೆರಳಿನಲ್ಲಿ ವಿಶ್ರಮಿಸಬೇಕು. ಮೇಲಿಂದ ಮೇಲೆ ಸಾಕಷ್ಟು ನೀರು ಕುಡಿಯಬೇಕು. * ತೀವ್ರ ಹಸಿದು ಲಸ ಮಾಡಬಾರದು. * ಇಟ್ಟಂಗಿ ಭಟ್ಟಿ, ಕಬ್ಬಿನ ಗಾಣ ಹೀಗೆ ಬೆಂಕಿ ಸಮೀಪ ಕೆಲಸ ಮಾಡುವವರು ವೈಯಕ್ತಿಕ ರಕ್ಷಣೆ ಬಗ್ಗೆ ಜಾಗೃತಿ ವಹಿಸಬೇಕು.
*ಉರಿ ಮೂತ್ರವಿದ್ದರೆ ಬೆಲ್ಲದ ಪಾನಕ ಅತ್ಯುತ್ತಮ. ಹಣ್ಣಿನ ರಸ, ಲಿಂಬೆ ಪಾನಕ, ಸಾಕಷ್ಟು ನೀರು ಸೇವನೆ ಕಡ್ಡಾಯ.
* ಶುದ್ಧ , ತಂಪು ನೀರು ಸೇವನೆ ಅಗತ್ಯ. ಅತೀ ತಂಪು ನೀರು ಬೇಡ. ಹೊರಗಡೆ ಸಿಕ್ಕ ಕಡೆ, ಅಪರಿಚಿತ ಜಾಗದಲ್ಲಿದ್ದ ನೀರು ಕುಡಿಯುವಾಗ ಚಿಸಿ.
* ಕಚೇರಿ, ಪ್ರವಾಸ, ಮಾರ್ಕೆಟ್ ಎಲ್ಲೇ ಹೋದರೂ ನೀರಿನ ಬಾಟಲ್ಗಿಂತ ತತ್ರಾಣಿ ಇಲ್ಲವೆ ಕ್ಯಾನ್ ಜತೆಗೆ ಒಯ್ಯಲೇಬೇಕು.
* ವೃದ್ಧರು, ಮಕ್ಕಳು, ಗರ್ಭೀಣಿಯರು ಹಾಗೂ ರೋಗಿಗಳು ಮಧ್ಯಾಹ್ನ ಹೊರಗೆ ಓಡಾಡಬಾರದು.
*ಬಿಸಿಲಲ್ಲಿ ಮಕ್ಕಳು ಆಟವಾಡದಂತೆ ಎಚ್ಚರ ವಹಿಸಬೇಕು. * ಹೆಚ್ಚು ಹಣ್ಣು , ತರಕಾರಿ ಒಳಗೊಂಡ ಸರಳ ಸಸ್ಯಹಾರ ಉತ್ತಮ.
*ಅತಿ ಸಣ್ಣ ಮಕ್ಕಳಿಗೆ ಬೆವರಸಾಲೆ ತಡೆಗೆ ತಣ್ಣೀರು ಸ್ನಾನ, ತೆಳುವಾದ ಕಾಟನ್ ಬಟ್ಟೆ ಹಾಕಿ. ಸ್ವಚ್ಛತೆ ಕಾಪಾಡಿ.
* ಅತಿ ಹುಳಿ, ಮಸಾಲೆಯುಕ್ತ, ಖಾರ, ಉಪ್ಪಿನ, ಕರಿದ ಪದಾರ್ಥ, ಸಿಹಿ ಹಾಗೂ ಜಿಡ್ಡಿನ ಪದಾರ್ಥಗಳನ್ನು ಹೆಚ್ಚು ಸೇವಿಸಬಾರದು.
* ಸಿಹಿ ಬೇಕೆಂದರೆ ಹೆಸರು ಬೇಳೆಯ ಪಾಯಸ ಆರೋಗ್ಯಕರ. ಎಳನೀರು ಸೇವೆನೆ ಹಿತ. ಅತಿ ಚಹಾ, ಕಾಫಿ ಒಳ್ಳೆಯದಲ್ಲ.
*ಹೊಟ್ಟೆ ಬಿರಿಯುವಂತೆ ತಿನ್ನಬಾರದು. ರಾತ್ರಿ ಊಟ ಸರಳವಾಗಿರಬೇಕು. ಪೌಷ್ಟಿಕ ಆಹಾರದಿಂದ ಕೂಡಿರಬೇಕು. ಮಾಂಸಾಹಾರ ಸೇವೆನೆಯಲ್ಲಿ ಮಿತಿ ಇರಲಿ.
* ಊಟದಲ್ಲಿ ಅಂಬಲಿಯಂಥ ದ್ರವ ಪದಾರ್ಥ ಸಾಕಷ್ಟು ಇರಬೇಕು. ಬೆಣ್ಣೆ-ತುಪ್ಪಕ್ಕಿಂತ ಹಾಲು-ಮೊಸರು-ಮಜ್ಜಿಗೆ ಹಿತ.
* ತಾಜಾ-ತಿಳಿ ಮಜ್ಜಿಗೆ ಸಾಕಷ್ಟು ಸೇವಿಸುವುದು ಒಳ್ಳೆಯದು. * ಬಿಸಿಲಿನ ಬೇಗೆ ನೀಗುವ ನೆಪದಲ್ಲಿ ಕೋಲಾದಂತಹ ಸಾಫ್ಟ್ ಡ್ರಿಂಕ್ಸ್ ಸೇವನೆ ಬೇಡ.
* ದಿನಕ್ಕೆ ಒಮ್ಮೆಯಾದರೂ ಉಪ್ಪು ಮಿಶ್ರಿತ ಲಿಂಬೆ ಹಣ್ಣಿನ ಪಾನಕ ಸೇವಿಸುವುದು ಆರೋಗ್ಯಕರ. ಐಸ್ಕ್ರಿಂ ಸೇವೆನೆಯಲ್ಲಿ ಮಿತಿ ಇರಲಿ.
* ಬೀರ್ ದೇಹವನ್ನು ತಂಪಾಗಿಸುತ್ತದೆ, ದಣಿವಾರಿಸುತ್ತದೆ ಎಂಬುದು ಭ್ರಮೆ. ಧೂಮಪಾನ, ಮದ್ಯಪಾನ ಸೇವನೆಯನ್ನು ಬಿಡಲೇಬೇಕು.
* ಹತ್ತಿ ನೂಲಿನಿಂದ ತಯಾರಿಸಿದ ತೆಳು, ಸಡಿಲ ಬಟ್ಟೆ ಧರಿಸಬೇಕು. ಉಲ್ಲನ್, ಟೆರಿಲಿನ್, ಟೆರಿಕಾಟ್ನಂಥ ಸಿಂಥೆಟಿಕ್ ಬಟ್ಟೆಗಳು ಹಾಗೂ ಕಡುಗಪ್ಪಿನ ಬಟ್ಟೆ ಬೇಡ. *ಪಾದಗಳ ಉರಿತವಿದ್ದರೆ 20 ನಿಮಿಷವರೆಗೆ ನೀರಿನ ಬಕೆಟ್ನಲ್ಲಿ ಕಾಲಿರಿಸಿ ಕುಳಿತುಕೊಳ್ಳಬೇಕು. ತಲೆ ಮತ್ತು ಪಾದಕ್ಕೆ ತೆಂಗಿನೆಣ್ಣೆ ಇಲ್ಲವೆ ಹರಳೆಣ್ಣಿ ಉಚ್ಚಬೇಕು. * ನಿದ್ರೆ ಬಾರದಿದ್ದರೆ ಎಣ್ಣೆ ಮಸಾಜ್ ಹಾಗೂ ಸ್ನಾನ ಉತ್ತಮ. * ಚರ್ಮದ ಪಾದರಕ್ಷೆ ಹಾಗೂ ತಂಪು ಕನ್ನಡಕ ಬಳಸುವುದು ಹಿತ.
*ತಣ್ಣೀರು ಸ್ನಾನ ಒಳ್ಳೆಯದು. ಆಗಾಗ್ಗೆ ಕೈ-ಕಾಲು-ಮುಖ ತೊಳೆದುಕೊಳ್ಳುತ್ತಿರಬೇಕು. ಸಾಧ್ಯವಾದರೆ ಎರಡು ಹೊತ್ತು ಸ್ನಾನ ಮಾಡುವುದು ಒಳಿತು.
* ಮನೆಯನ್ನು ಚೊಕ್ಕಟವಾಗಿಟ್ಟುಕೊಳ್ಳಬೇಕು. ಪ್ರಖರ ಬಿಸಿಲು ಒಳಬಾರದಂತೆ ತಂಪಾಗಿರಿಸಿಕೊಳ್ಳಬೇಕು.
* ಮನೆಯಲ್ಲಿ ಯಾರಿಗಾದರೂ ವಾಂತಿ-ಭೇದಿ ಉಂಟಾದರೆ ತಕ್ಷಣವೇ ಜೀವ ಜಲ ಉಪಚಾರ ಪ್ರಾರಂಭಿಸಿ, ವೈದ್ಯರನ್ನು ಕಾಣಿ.
* ಸೂರ್ಯನ ಪ್ರಖರ ಬಿಸಿಲಿಗೆ 15 ನಿಮಿಷಗಳಿಗಿಂತಲೂ ಹೆಚ್ಚು ನಿರಂತರವಾಗಿ ಮುಖ ಅಥವಾ ಮೈಯೊಡ್ಡಿದರೆ ಚರ್ಮ ಸುಡುವ ಅಥವಾ ಕಪ್ಪಾಗುವ ಸಾಧ್ಯತೆ ಇರುತ್ತದೆ. ತ್ವಚೆ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. *ವ್ಯಾಯಾಮ, ವಾಕ್ಗಳನ್ನು ಬೆಳಗ್ಗೆ 6 ಗಂಟೆಯೊಳಗೆ ಮುಗಿಸಿರಬೇಕು.
ಮೂತ್ರಪಿಂಡ ಸಮಸ್ಯೆ: ಸೈಲೆಂಟ್ ಕಿಲ್ಲರ್
ಹೌದು, ಅದು ಸೈಲೆಂಟ್ ಕಿಲ್ಲರ್. ಈ ಹೆಸರು ಅದಕ್ಕೆ ತುಂಬ ಮ್ಯಾಚ್ ಆಗುತ್ತದೆ. ಯಾವುದೇ ಮುನ್ಸೂಚನೆ ಕೊಡದೇ ಅದು ಪ್ರಾಣಕ್ಕೆ ಎರವಾಗಬಲ್ಲದು. ಇನ್ನೂ ಆತಂಕವೆಂದರೆ, ಅದನ್ನು ಸಾಮಾನ್ಯರಿಂದ ಬಗೆಹರಿಸಿಕೊಳ್ಳಲು ಸಾಧ್ಯವೇ ಇಲ್ಲ ಮತ್ತು ಬಗೆಹರಿಸಿಕೊಳ್ಳುವುದು ಸುಲಭವೂ ಅಲ್ಲ. ಅರೆ, ಇದ್ಯಾವ ಕಿಲ್ಲರ್ ಎಂದು ಚಿಂತಿಸುತ್ತಿದ್ದೀರಾ? ಅದರ ಹೆಸರು ಕ್ರೋನಿಕ್ ಕಿಡ್ನಿ ಡಿಸೀಸ್(ಸಿಕೆಡಿ).
ಕ್ಯಾನ್ಸರ್ನಂತಹ ಕ್ಯಾನ್ಸರ್ ಅನ್ನು ಸಹ ಆರಂಭದ ಹಂತದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಿದರೆ ಗುರುತಿಸಲು ಸಾಧ್ಯ. ಆದರೆ, ಈ ತೊಂದರೆಯನ್ನು ಆರಂಭದ ಹಂತದಲ್ಲಿ ನಾವೇ ಗುರುತಿಸಿಕೊಳ್ಳುವುದು ಸಾಧ್ಯವಿಲ್ಲ. ಹೃದ್ರೋಗ, ಮಧುಮೇಹದಂತಹ ಬೇರೆ ಯಾವುದೋ ತೊಂದರೆ ಇದ್ದರೆ ಇದೂ ಕಾಣಿಸಿಕೊಳ್ಳಬಹುದು ಎಂದು ಅಂದಾಜು ಮಾಡಬಹುದಷ್ಟೇ. ಯಾವಾಗಲೂ ಕೊನೆಯ ಹಂತದಲ್ಲಿ ಮಾತ್ರ ಈ ಕಿಡ್ನಿ ತೊಂದರೆ ಪತ್ತೆಯಾಗುತ್ತದೆ. ಆಗ ಯಾವ ವೈದ್ಯರು, ಯಾವ ಔಷಧಿಯೂ ಏನು ಮಾಡಲೂ ಸಾಧ್ಯವಿರುವುದಿಲ್ಲ. ಹೀಗಾಗಿ, ಎಷ್ಟು ಮುನ್ನೆಚ್ಚರಿಕೆ ವಹಿಸಿದರೂ ಸಾಲದು.
ನೀವು ಮಧುಮೇಹಿಗಳಾಗಿದ್ದರೆ, ಅಧಿಕ ರಕ್ತದೊತ್ತಡ ಹೊಂದಿದ್ದರೆ, ಕುಟುಂಬದಲ್ಲಿ ಯಾರಿಗಾದರೂ ಕ್ರೋನಿಕ್ ಕಿಡ್ನಿ ಡಿಸೀಸ್ ಹಿನ್ನೆಲೆಯಿದ್ದರೆ, 60 ವರ್ಷ ಮೇಲ್ಪಟ್ಟಿದ್ದರೆ, ಏಷ್ಯಾ ಮೂಲದವರಾಗಿದ್ದರೆ ತಕ್ಷಣ ಎಚ್ಚೆತ್ತುಕೊಳ್ಳುವುದು ಒಳಿತು ಎಂದು ರಾಷ್ಟ್ರೀಯ ಕಿಡ್ನಿ ಫೌಂಡೇಷನ್ ಎಚ್ಚರಿಸುತ್ತದೆ. ಏಕೆಂದರೆ, ಈ ಮೇಲಿನ ಕೆಟಗರಿಗೆ ಸೇರಿದವರಲ್ಲಿ ಸಿಕೆಡಿ ಕಾಣಿಸಿಕೊಳ್ಳುವ ಸಾಧ್ಯತೆ ಅಧಿಕ. ಒಂದು ಮೂಲದ ಪ್ರಕಾರ, ಅಮೆರಿಕದಲ್ಲಿ 29 ದಶಲಕ್ಷ ಕಿಡ್ನಿ ತೊಂದರೆ ಉಳ್ಳವರಾಗಿದ್ದಾರೆ, ದುರಂತವೆಂದರೆ, ಈ ಬಗ್ಗೆ ಅವರಿಗೆ ಅರಿವಿಲ್ಲ.
ಭಾರತದಲ್ಲಿಯೂ ಈ ಪ್ರಮಾಣ ಕಡಿಮೆಯೇನಿಲ್ಲ. ಲಕ್ಷಾಂತರ ಮಂದಿ ಪ್ರತಿನಿತ್ಯ ತುತ್ತಾಗುತ್ತಿದ್ದಾರೆ. ಆಗುತ್ತಾರೆ. ಇನ್ನೂ ವಿಶೇಷವೆಂದರೆ, ಅಮೆರಿಕ, ಆಫ್ರಿಕಾ, ಏಷ್ಯಾ ಹಾಗೂ ಫೆಸಿಪಿಕ್ ಪ್ರದೇಶದಲ್ಲಿ ವಾಸಿಸುವವರಿಗೆ ಇದರ ಪ್ರಮಾಣ ಹೆಚ್ಚು. ಏಕೆಂದರೆ, ಇವರಲ್ಲಿ ಮಧುಮೇಹವೂ ಅಧಿಕ.
ಮಧುಮೇಹಕ್ಕೆ ಜತೆ
'ಸಿಕೆಡಿ'ಗೆ ಮುಖ್ಯ ಕಾರಣವೆಂದರೆ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ. ಮಧುಮೇಹ ಕಿಡ್ನಿಯಲ್ಲಿರುವ ಫಿಲ್ಟರ್ ಮೇಲೆ ಹೆಚ್ಚು ಒತ್ತಡ ಹಾಕುತ್ತದೆ. ಕೆಲ ಕಾಲದ ಬಳಿಕ ಈ ಒತ್ತಡ ಕಿಡ್ನಿಯ ಕಾರ್ಯಕ್ಷಮತೆಯನ್ನು ವೀಕ್ ಮಾಡಬಲ್ಲದು, ಇದರಿಂದ ಕಿಡ್ನಿಯ ಫಿಲ್ಟರ್ಗೆ ತೊಂದರೆಯಾಗುತ್ತದೆ. ಆಗ ದೇಹದಲ್ಲಿನ ಪ್ರೊಟೀನ್ ಅಂಶ ಮೂತ್ರದಲ್ಲಿ ಸೋರಿಕೆಯಾಗಿಬಿಡುತ್ತದೆ. ಇದು ಒಂದು ಕಾರಣ.
ಇನ್ನು ಅಧಿಕ ರಕ್ತದೊತ್ತಡದಿಂದ ಸಹಜವಾಗಿ ಕಿಡ್ನಿಯ ಮೇಲೆ ಪರಿಣಾಮವುಂಟಾಗುತ್ತದೆ. ಇಡೀ ದೇಹದ ರಕ್ತನಾಳಗಳ ಮೇಲೆ ಹೈಪರ್ಟೆನ್ಷನ್ ಪರಿಣಾಮ ಬೀರುವಾಗ ಕಿಡ್ನಿ ಒಂದು ಇದರಿಂದ ಹೊರತಾಗಲು ಸಾಧ್ಯವೇ ಇಲ್ಲ. ಸರಿಯಾದ ಸಮಯಕ್ಕೆ ಸೂಕ್ತ ಔಷಧ ದೊರೆತರೆ ಮಾತ್ರ ಸ್ವಲ್ಪ ಪರವಾಗಿಲ್ಲ.
ಸಾಮಾನ್ಯ ಲಕ್ಷಣಗಳು
ಕ್ರಾನಿಕ್ ಕಿಡ್ನಿ ಡಿಸೀಸ್ ಸೈಲೆಂಟ್ ಕಿಲ್ಲರ್ ಎಂದು ಕುಖ್ಯಾತಿ ಪಡೆದಿದ್ದರೂ ಕೆಲವು ಸಾಮಾನ್ಯ ಲಕ್ಷಣಗಳನ್ನು ತೋರಿಸುತ್ತದೆ. ಕಾರ್ಡಿಯೋವಾಸ್ಕ್ಯುಲರ್ ತೊಂದರೆ ಅಥವಾ ಬೇರ್ಯಾವುದೋ ಸಮಸ್ಯೆಯನ್ನು ತಂದೊಡ್ಡುವ ಜತೆಗೆ ಕಿಡ್ನಿ ಫೇಲ್ ಕೂಡ ಇದರಿಂದ ಆಗಬಹುದು. ಇಂತಹ ಯಾವುದೇ ತೊಂದರೆಗಳು ಕಂಡುಬಂದಲ್ಲಿ ನಿರ್ಲಕ್ಷಿಸಬೇಡಿ ಎನ್ನುತ್ತಾರೆ ವೈದ್ಯರು.
* ನಿತ್ರಾಣ, ಸ್ಮರಣ ಶಕ್ತಿಯ ನಾಶ * ಯಾವ ಕೆಲಸಕ್ಕೂ ಉತ್ಸಾಹವಿಲ್ಲದಿರುವುದು * ನಿದ್ದೆ ಮಾಡಲು ಕಷ್ಟಪಡುವುದು * ಒಣಗಿದ ಚರ್ಮ
* ಪಾದಗಳು ಬಾಯುವುದು * ಕಣ್ಣುಗಳ ಸುತ್ತ ಊದಿಕೊಂಡಿರುವುದು, ಅದೂ ಸಹ ಮುಂಜಾನೆಯ ವೇಳೆಯಲ್ಲಿ
* ರಾತ್ರಿಯ ವೇಳೆ ಪದೇ ಪದೇ ಮೂತ್ರಕ್ಕೆ ಹೋಗಬೇಕೆಂದು ಅನಿಸುವುದು * ತೂಕ ಹೆಚ್ಚುವುದು ಅಥವಾ ಕಡಿಮೆಯಾಗುವುದು
ವಾಕರಿಕೆ ಅದು ಬರಿ ಕನವರಿಕೆ-ಇದು ಫಾಲ್ಸ್ ಪ್ರೆಗ್ನೆನ್ಸಿ * ಶುಭಾ ವಿಕಾಸ್
ತಿಂಗಳು ಕಳೆದರೂ ಮುಟ್ಟು ಸಮೀಪಿಸಲಿಲ್ಲ. ಹಾಗಂತ ಕಿಂಚಿತ್ತೂ ಚಿಂತೆಯ ಗೆರೆ ಅವಳ ಹಣೆಯ ಮೇಲೆ ಕಾಣಿಸುವುದಿಲ್ಲ.
ಸೋತು ಹೋಗಿದ್ದ ಮುಖದಲ್ಲಿ ಹೊಸ ಕಳೆ, ಮಾತಿನಲ್ಲಿ ಮುಗಿಯದ ಕನಸು. ಬಹುಶಃ ಅದೇ ಇರಬೇಕು ಅಂದುಕೊಂಡಿದ್ದಾಳೆ ಅವಳು.
ಬಯಸಿ ಬಯಸಿ ಪಡೆದ ಬಸಿರು ಇದು. ಇನ್ನೇನಿದ್ದರೂ ಒಡಲೊಳಗಿರುವ ಮಗುವನ್ನು ಜೋಪಾನ ಮಾಡುವ ಕೆಲಸ ಅಂದುಕೊಳ್ಳುತ್ತಾಳೆ. ಮುಟ್ಟು ನಿಂತು ಹದಿನೈದು ದಿನ ಕಳೆದಿಲ್ಲ. ಇವಳಿಗೆ ವಾಕರಿಕೆ. ಕಂಡಕಂಡಿದ್ದು ತಿನ್ನುವ ಬಯಕೆ. ವಿಪರೀತ ಸುಸ್ತು. ಬಸಿರು ಅಂದರೆ ಹೀಗೆ ಇರಬೇಕು ಅಂತೆಲ್ಲ ಸಂಭ್ರಮಿಸಿ ಬಿಡುತ್ತಾಳೆ.
ಒಂದೆರಡು ತಿಂಗಳು ಹಾಗೆ ಕಳೆದು ಬಿಡುತ್ತಾಳೆ. ಅನಂತರ ಆಸ್ಪತ್ರೆಗೆ ಹೋದವಳಿಗೆ ತಪಾಸಣೆ ನಡೆಸಿದ ವೈದ್ಯರ ಮಾತಿನ ಮೇಲೆ ನಂಬಿಕೆ ಇಲ್ಲ. ಮುಟ್ಟು ಬರುವ ಮಾತ್ರೆ ಕೊಟ್ಟು ಕಳುಹಿಸುವ ವೈದ್ಯರ ಬಗ್ಗೆ ಅನುಮಾನ.
ಫಾಲ್ಸ್ ಪ್ರೆಗ್ನೆನ್ಸಿ
ಗರ್ಭ ಧರಿಸದಿದ್ದರೂ ಕೆಲವೊಮ್ಮೆ ಅಂಥ ಅನುಭವವಾಗುತ್ತದೆ. ಮಾನಸಿಕ ಹಾಗೂ ದೈಹಿಕವಾಗಿ ಅವಳಲ್ಲಿ ಬದಲಾವಣೆಗಳಾಗುತ್ತವೆ. ಬಸಿರಿನ ಎಲ್ಲ ಭಾವನೆಗಳೂ ಅವಳನ್ನು ತುಂಬಿಕೊಳ್ಳುತ್ತವೆ. ವಿಪರೀತ ಸುಸ್ತು ಅಂದೆನಿಸುವ ವಾಂತಿ ಬಸಿರಿನ ಖುಷಿ ನೀಡಬಹುದು. ಹೊಟ್ಟೆಯಲ್ಲಿ ಭ್ರೂಣ ಚಲಿಸಿದಂತಾಗಿ ಕರುಳಿನ ಕುಡಿಯ ಮೇಲೆ ಹಿಂದೆಂದೂ ಕಂಡುಕೇಳರಿಯದ ಮಮಕಾರ ಹುಟ್ಟಬಹುದು.
ಗರ್ಭ ಧರಿಸಿಲ್ಲ ಅಂದರೆ ವಾಂತಿ ಆಗಿದ್ದೇಕೆ? ಭ್ರೂಣ ಚಲಿಸಿದಂಥ ಅನುಭವವಾಗಿದ್ದು, ವಿಪರೀತ ಸುಸ್ತು....ಇದೆಲ್ಲದ್ದಕ್ಕೂ ಒಂದೇ ಉತ್ತರ ಅದು ಫಾಲ್ಸ್ ಪ್ರೆಗ್ನೆನ್ಸಿ ಅಥವಾ ಸುಳ್ಳು ಬಸಿರು. ಅಪರೂಪಕ್ಕೆ ಮಹಿಳೆಯರಲ್ಲಿ ಇಂಥದ್ದೊಂದು ಭಾವನೆ ಕಾಡುವುದುಂಟು. ತುಂಬ ವರ್ಷದಿಂದ ಮಗುವಿನ ನಿರೀಕ್ಷೆಯಲ್ಲಿರುವವರಲ್ಲಿ, ಪದೇಪದೆ ಗರ್ಭಪಾತ, ಅನಿಯಮಿತ ಮುಟ್ಟಿನ ಸಮಸ್ಯೆ ಇರುವವರಲ್ಲಿ ಸುಳ್ಳು ಬಸಿರು ಕಂಡು ಬರುವ ಸಾಧ್ಯತೆ ಇರುತ್ತದೆ. ಪ್ರತಿ 22 ಸಾವಿರ ಗರ್ಭಿಣಿಯರಲ್ಲಿ 1ರಿಂದ 6 ಸುಳ್ಳು ಗರ್ಭಧಾರಣೆ ಪ್ರಕರಣ ಪತ್ತೆ ಹಚ್ಚಬಹುದು. ತೀರ ಸಣ್ಣ ವಯಸ್ಸಿನಲ್ಲಿ ಕಂಡು ಬರುವುದು ಕಮ್ಮಿಯೇ. ಸಾಮಾನ್ಯವಾಗಿ 30ರ ಆಸುಪಾಸಿನಲ್ಲಿ , ಮುಟ್ಟು ನಿಲ್ಲುವ ಅವಧಿಯಲ್ಲೂ ಇಂಥ ಭಾವನೆ ಕಾಡುವುದಿದೆ ಅಂತಾರೆ ತಜ್ಞರು.
ಲಕ್ಷಣ
ಸುಳ್ಳು ಅಂತ ನಂಬಲಿಕ್ಕೇ ಆಗುವುದಿಲ್ಲ. ಅಂಥ ಲಕ್ಷಣಗಳು ಮಹಿಳೆಯರನ್ನು ಕಾಡುತ್ತವೆ. ಮುಟ್ಟು ನಿಲ್ಲುತ್ತದೆ. ಹೊಟ್ಟೆ ಊದಿಕೊಳ್ಳುವುದು, ಸ್ತನದ ಗಾತ್ರದಲ್ಲಿ ಬದಲಾವಣೆ, ಭ್ರೂಣ ಚಲಿಸಿದಂಥ ಭಾವ, ವಾಕರಿಕೆ ಮತ್ತು ವಾಂತಿ, ತೂಕ ಹೆಚ್ಚಳವಾಗುತ್ತದೆ. ಈ ಲಕ್ಷಣ ಕೆಲವು ವಾರ ಅಥವಾ ಹಲವು ತಿಂಗಳು, ವರ್ಷಗಳವರೆಗೂ ಕಂಡು ಬರಬಹುದು. ವೈದ್ಯರ ಬಳಿ ಹೋದಾಗ ಮೂತ್ರ ಪರೀಕ್ಷೆ ಅಥವಾ ಸ್ಕ್ಯಾನಿಂಗ್ನಲ್ಲಿ ವಾಸ್ತವ ಗೊತ್ತಾಗುತ್ತದೆ. ಇತ್ತೀಚೆಗೆ ಇಂತಹ ಪ್ರಕರಣಗಳು ಕಮ್ಮಿಯೇ. ಮುಟ್ಟು ನಿಂತ ಮೂರು ತಿಂಗಳೊಳಗೆ ಬಸಿರಿರಬಹುದು ಅನ್ನುವ ಕಾರಣ ಇಟ್ಟುಕೊಂಡು ವೈದ್ಯರನ್ನು ಸಂಪರ್ಕಿಸುವುದು ಮಾತ್ರ ಇವತ್ತಿಗೂ ಇದೆ. ಆದರೆ ಅದಕ್ಕಿಂತ ಹೆಚ್ಚು ಅಂದರೆ ಒಂಬತ್ತು ತಿಂಗಳವರೆಗೆ ಅದನ್ನೇ ನಂಬಿಕೊಳ್ಳುವ ಪ್ರಕರಣಗಳು ದಾಖಲಾಗುವುದಿಲ್ಲ. ಕೆಲವರಿಗೆ ಮಾತ್ರ ಇಂತಹ ಅನುಭವವಾಗುತ್ತದೆ ಅಂದಾಕ್ಷಣ ನಿರ್ಲಕ್ಷಿಸುವ ಸಂಗತಿ ಅಲ್ಲ. ಮುಟ್ಟು ನಿಂತಾಕ್ಷಣ ಅದು ಗರ್ಭಧಾರಣೆ ಅಲ್ಲ. ಇದರ ಹಿಂದೆ ಇನ್ಯಾವುದೋ ರೋಗ ಅಡಗಿರಬಹುದು. ಬಸಿರಿರಬೇಕು ಅಂತೆಲ್ಲ ಅನುಮಾನ ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿದರೆ ನಿಮ್ಮೊಳಗಿನ ಗೊಂದಲಕ್ಕೆ ತಕ್ಷಣ ಪರಿಹಾರ ಸಿಗುತ್ತದೆ. ಯಾವುದೇ ಕಾರಣಕ್ಕೂ ನಿಮ್ಮೊಳಗೆ ಏನೇನೊ ಕಲ್ಪಿಸಿಕೊಂಡು ಅನಂತರ ನಿರಾಸೆಗೊಳ್ಳಬೇಡಿ. ಸುಳ್ಳು ಬಸಿರಿನ ಅನುಭವವನ್ನು ಸಿಡೊಸೈಸೀಸ್(ಛ್ಠಿಟ್ಚಛಿಜಿ)ಅಂತಾರೆ. ಇದು ಸಂಪೂರ್ಣ ಮನಸ್ಸಿಗೆ ಸಂಬಂಧಪಟ್ಟ ಸಮಸ್ಯೆ. ಮಗುವಿನ ಅತಿಯಾದ ನಿರೀಕ್ಷೆ ಸುಳ್ಳೆಸುಳ್ಳು ಬಸಿರು ಅಂತ ಮನಸ್ಸನ್ನು ನಂಬಿಸುತ್ತದೆ. ಅದು ಮೆದುಳಿನ ಮೇಲೆ ಪ್ರಭಾವ ಬಿರುತ್ತದೆ. ಪರಿಣಾಮ ಹಾರ್ಮೋನ್ಗಳಲ್ಲಿ ಬದಲಾವಣೆ ಉಂಟಾಗುತ್ತವೆ. ದೈಹಿಕವಾಗಿಯೂ ಏರುಪೇರು ಉಂಟಾಗುತ್ತದೆ. ತಪಾಸಣೆ ಬಳಿಕವೂ ವೈದ್ಯರ ಮಾತಿನಲ್ಲಿ ನಂಬಿಕೆ ಬರದಿದ್ದರೆ ಅಂಥ ಸಂದರ್ಭಗಳಲ್ಲಿ ಕೌನ್ಸಲಿಂಗ್ ಸಾಕು, ಪರಿಣಾಮಕಾರಿಯಾಗದಿದ್ದಾಗ ಚಿಕಿತ್ಸೆ ನೀಡಬೇಕಾಗುತ್ತದೆ. -ಡಾ. ಪ್ರಭಾ, ಮನಃಶಾಸ್ತ್ರಜ್ಞೆ, ನಿಮ್ಹಾನ್ಸ್ ಆಸ್ಪತ್ರೆ
ಹಾರ್ಮೋನ್ ಬದಲಾವಣೆಯಿಂದಾಗಿ ದೈಹಿಕವಾಗಿ ಕೆಲವು ಲಕ್ಷಣಗಳು ಕಾಣಿಸುತ್ತವೆ. ಮುಟ್ಟು ನಿಲ್ಲುತ್ತದೆ. ಕೊಬ್ಬು ಸಂಗ್ರಹವಾಗಿ ಹೊಟ್ಟೆ ದಪ್ಪಗಾಗಬಹುದು. ಆ್ಯಸಿಡಿಟಿ ಸಮಸ್ಯೆ ಇರುವವರಲ್ಲಿ ಭ್ರೂಣ ಚಲಿಸಿದಂತಾಗುತ್ತದೆ. ವಾಂತಿ, ಊಟ ಸೇರದಿರುವ ಅನುಭವ ಕೂಡ ಆಗುತ್ತದೆ. ಆದರೆ ಗರ್ಭಕೋಶ ಹಿಗ್ಗುವುದಿಲ್ಲ. ವೈದ್ಯ ತಪಾಸಣೆ ನಂತರ ಅದು ಬಸಿರಲ್ಲ ಎಂದು ರೋಗಿಗೆ ಮನವರಿಕೆ ಆದಾಗ ಸಮಸ್ಯೆ ತಾನಾಗಿಯೇ ದೂರವಾಗುತ್ತದೆ. - ಡಾ. ಶಕುಂತಲಾ, ಸ್ತ್ರೀರೋಗ ತಜ್ಞೆ, ವಾಣಿವಿಲಾಸ ಆಸ್ಪತ್ರೆ
ನೀರು ಕುಡಿಯಿರಿ ನಿರಾಳರಾಗಿ ಡಾ. ಗಂಗಾಧರ ವರ್ಮ ಬಿ.ಆರ್.
ಪ್ರಕೃತಿ ಚಿಕಿತ್ಸೆಯಲ್ಲಿ ನೀರಿಗೆ ಇಷ್ಟೊಂದು ಪ್ರಾತಿನಿದ್ಯ ನೀಡಲು ಬಹಳಷ್ಟು ಕಾರಣಗಳಿವೆ. ಪ್ರಕೃತಿ ಚಿಕಿತ್ಸೆ ಸಿದ್ಧಾಂತದ ಪ್ರಕಾರ ಕ್ರಿಮಿಗಳಿಂದ ರೋಗ ಬರುವುದಿಲ್ಲ. ಸರಿಯಾಗಿ ವಿಸರ್ಜನೆಯಾಗದೆ ದೇಹದಲ್ಲಿ ಶೇಖರಗೊಳ್ಳುವ ತ್ಯಾಜ್ಯ ವಿಷ ವಸ್ತುಗಳು ದೇಹದ ಶಕ್ತಿಯನ್ನು ಕುಂಠಿತಗೊಳಿಸುತ್ತವೆ. ಇಂತಹ ಜಾಗದಲ್ಲಿ ಕ್ರಿಮಿಗಳು ಬೆಳೆದು ರೋಗವನ್ನು ಹರಡುತ್ತವೆ. ಹಾಗಾಗಿ ಶರೀರದಲ್ಲಿ ಮಲ ವಸ್ತುಗಳ ಸಂಗ್ರಹಣೆಯೇ ರೋಗ. ಇದನ್ನು ಹೊರಹಾಕುವುದೇ ಆರೋಗ್ಯ.
ವಿಷ ವಸ್ತುಗಳನ್ನು ದೇಹದಿಂದ ಹೊರಹಾಕುವಲ್ಲಿ ನೀರು ಅತಿ ಮುಖ್ಯ ಪಾತ್ರ ವಹಿಸುತ್ತದೆ. ದೇಹದಲ್ಲಿ ಉತ್ಪತ್ತಿಯಾಗುವ ಕಶ್ಮಲಗಳನ್ನು ನೀರು ನಾಲ್ಕು ಮಾರ್ಗಗಳಿಂದ ಹೊರಹಾಕಲು ಸಹಾಯ ಮಾಡುತ್ತದೆ. ಅವುಗಳೆಂದರೆ - ಚರ್ಮ - ಬೆವರಿನ ರೂಪದಲ್ಲಿ ,ಕಿಡ್ನಿಗಳು - ಮೂತ್ರದ ರೂಪದಲ್ಲಿ
ಕರಳುಗಳು - ಮಲದ ರೂಪದಲ್ಲಿ , ಶ್ವಾಸಕೋಶಗಳು - ಉಸಿರಾಟದ ರೂಪದಲ್ಲಿ
ದೇಹದಲ್ಲಿ ನೀರಿನ ಪಾತ್ರ
ನಮ್ಮ ದೇಹವು ಶೇ. 70ರಷ್ಟು ನೀರಿನಿಂದಲೂ, ಉಳಿದ 30 ಭಾಗ ಘನ ಪದಾರ್ಥಗಳಾದ ಮಾಂಸಖಂಡಗಳು, ನರಗಳು, ಮೂಳೆಗಳು, ಅವಯವಗಳು ಮುಂತಾದವುಗಳಿಂದ ಕೂಡಿದೆ. *ನೀರು ದೇಹದ ಮುಖ್ಯ ಜೀವಪದಾರ್ಥ. *ದೇಹದಲ್ಲಿನ ಶಕ್ತಿ ಉತ್ಪತ್ತಿಗೆ ನೀರು ಸಹಾಯಕಾರಿ. *ಆಹಾರದ ಪಚನಕ್ರಿಯೆಯಲ್ಲಿ ಸಹಕರಿಸುತ್ತದೆ.
*ದೇಹದ ಉಷ್ಣತೆಯನ್ನು ಹತೋಟಿಯಲ್ಲಿಡುತ್ತದೆ. *ದೇಹಕ್ಕೆ ರಕ್ಷಣೆ ನೀಡುವ ಚರ್ಮವನ್ನು ತೇವದಿಂದಿಡುತ್ತದೆ.
ಕಡಿಮೆ ನೀರು ಕುಡಿಯುವವರ ಲಕ್ಷಣಗಳು
*ಶರೀರದ ಉಷ್ಣತೆ ಹೆಚ್ಚಿರುವುದು. *ಬಾಯಿ, ಚರ್ಮ ಮತ್ತು ತುಟಿಗಳು ಒಣಗಿದಂತಿರುವುದು. *ಮೂತ್ರವು ಮಂದವಾಗಿ ಹಾಗೂ ಹಳದಿ ಬಣ್ಣದಿಂದ ಹೊರಹೋಗುವುದು. *ಮೂತ್ರ ವಿಸರ್ಜನೆಯ ವೇಳೆ ಉರಿ ಅನುಭವ. *ಬೆವರು ಮತ್ತು ಮೂತ್ರ ವಾಸನೆಯಿಂದ ಕೂಡಿರುವುದು.
*ಬಿಸಿಲಿಗೆ ಚರ್ಮ ಸುಡುವಂತಾಗುವುದು ಮತ್ತು ತಲೆನೋವು ಬರುವುದು.
ನೀರಿನ ಆಂತರಿಕ ಉಪಯೋಗ
ಬೇಡದ ಪದಾರ್ಥಗಳನ್ನು ವಿಸರ್ಜನಾಂಗಗಳ ಮೂಲಕ ಹೊರಹಾಕಲು ದೇಹಕ್ಕೆ ಎರಡರಿಂದ ಮೂರು ಲೀಟರ್ ನೀರು ಬೇಕು. ಹಾಗಾಗಿ ದಿನಕ್ಕೆ ನಾವು ಕನಿಷ್ಟ ಅಷ್ಟು ಪ್ರಮಾದಣದ ನೀರನ್ನಾದರೂ ಕುಡಿಯಬೇಕು.
ನೀರು ಸೇವಿಸುವ ಕ್ರಮ
ಬೆಳಗ್ಗೆ ಸೂರ್ಯೋದಯಕ್ಕೆ ಮುಂಚೆ ಎದ್ದು ನೀರು ಸೇವಿಸಿಯೇ ಮಲ-ಮೂತ್ರ ವಿಸರ್ಜಿಸಬೇಕು. ಬಳಿಕ ಹಲ್ಲುಗಳನ್ನು ಉಜ್ಜಿ, ನಂತರ ಎಣ್ಣೆಯನ್ನು ದೇಹಕ್ಕೆ ಹಚ್ಚಿ, ತಲೆಸ್ನಾನ ಮಾಡಬೇಕು.
ಉಷಾಪಾನಂ
ಬೆಳಗ್ಗೆ ಎದ್ದೊಡನೆ 2ರಿಂದ 4 ಲೋಟ ನೀರು ಸೇವಿಸಬೇಕು. ಇದು ಕಷ್ಟವಾದರೆ ಹಲ್ಲು ಉಜ್ಜಿದ ನಂತರವಾದರೂ ನೀರು ಕುಡಿಯಬಹುದು. ಈ ಉಷಾಪಾನವು ದೇಹದ ಶುದ್ಧತೆಗೆ ಉಪಯುಕ್ತ. ನಾವು ರಾತ್ರಿ ಮಲಗುವ ಉದ್ದೇಶ ವಿಶ್ರಾಂತಿ ಎಂದಾದರೂ ಕೂಡ, ದೇಹವು ತ್ಯಾಜ್ಯಗಳನ್ನು ಆಯಾ ವಿಸರ್ಜನಾಂಗಗಳಿಗೆ ಕಳುಹಿಸುವ ಸಮಯ ಇದು. ನಾವು ತೆಗೆದುಕೊಳ್ಳುವ ನೀರು ವಿಸರ್ಜನಾಂಗಗಳ ಮೂಲಕ ಮಲವನ್ನು ಹೊರಹಾಕಲು ಸಹಕರಿಸುತ್ತದೆ. ಇದಾದ ನಂತರದಿಂದ ಉಪಹಾರ ತೆಗೆದುಕೊಳ್ಳುವ ಸಮಯದ ಒಳಗೆ ಎರಡು ಲೋಟ ನೀರು ತೆಗೆದುಕೊಳ್ಳುಬೇಕು.ಆರಂಭದಲ್ಲಿ ಕೆಲವರಿಗೆ ಉಷಾಪಾನ ಕಿರಿಕಿರಿ ಎನಿಸಬಹುದು. ತಲೆನೋವು, ವಾಂತಿ ಕಾಡಬಹುದು. ಇಂಥ ತೊಂದರೆ ಕಂಡುಬಂದರೆ ನೀರಿನ ಪ್ರಮಾಣ ಕಡಿಮೆ ಮಾಡಿ.*ಮಲಬದ್ಧತೆ ತೊಂದರೆಯಿರುವವರು ನೀರನ್ನು ತೆಗೆದುಕೊಂಡ ನಂತರ ಸಂಪೂರ್ಣವಾಗಿ ಗಮನವನ್ನು ಹೊಟ್ಟೆ ಭಾಗದ ಮೇಲಿರಿಸಿ. 5ರಿಂದ 10 ನಿಮಿಷ ನಡೆದಾಡಿ. ಇದರಿಂದ ಕರುಳುಗಳು ರಿಲ್ಯಾಕ್ಸ್ ಆಗಿ ಮಲ ಹೊರಹಾಕಲು ಸಹಾಯ ಮಾಡುತ್ತದೆ.*ಗ್ಯಾಸ್ಟ್ರೈಟಿಸ್, ಆಸ್ತಮಾ, ಕೆಮ್ಮು, ಅಲ್ಸರ್, ದಮ್ಮು, ಶೀತ ಮೊದಲಾದ ತೊಂದರೆ ಇರುವವರು ಕಾದಾರಿದ ನೀರನ್ನು ತೆಗೆದುಕೊಳ್ಳುವುದು ಸೂಕ್ತ.*ಬೆಳಗ್ಗೆ ಕುಡಿದಂತಹ ನೀರು ಸರಿಸುಮಾರು 10 ಗಂಟೆಯವರೆಗೆ ಶರೀರ ಕಾರ್ಯಗಳಿಗೆ ಉಪಯೋಗವಾಗುತ್ತದೆ. ಈ ಸಮಯದ ನಂತರ ದೇಹಕ್ಕೆ ಮತ್ತೆ ನೀರನ್ನು ಆಗಾಗ ಒಂದೊಂದು ಗ್ಲಾಸ್ನಂತೆ ಮಧ್ಯಾಹ್ನ ಊಟಕ್ಕೆ 30 ನಿಮಿಷ ಇರುವವರೆಗೆ ತೆಗೆದುಕೊಳ್ಳಬೇಕು.*ಈ ಸಮಯದಲ್ಲಿ ಕುಡಿದಂತಹ ನೀರು ದೇಹವನ್ನು ಶುದ್ಧಗೊಳಿಸುವುದಕ್ಕಿಂತ ಶರೀರದ ಉಷ್ಣತೆ ಕಾಪಾಡಲು, ಕೆಲಸ ಮಾಡುವಾಗ ಸಖಂಡಗಳಿಂದ ಉತ್ಪತ್ತಿಯಾಗುವ ಉಷ್ಣತೆ ನಿಯಂತ್ರಿಸಲು, ಜೀರ್ಣರಸಗಳನ್ನು ಉತ್ಪತ್ತಿ ಮಾಡಲು ಸಹಕರಿಸುತ್ತದೆ.
*ಮಧ್ಯಾಹ್ನ ಊಟವಾದ ಎರಡು ಗಂಟೆಗಳ ನಂತರ ರಾತ್ರಿ ಊಟದ ಒಳಗೆ 3 ರಿಂದ 4 ಲೋಟಗಳಷ್ಟಾದರೂ ನೀರು ತೆಗೆದುಕೊಳ್ಳಬೇಕು.
*ರಾತ್ರಿ ಊಟವಾದ ಎರಡು ಗಂಟೆ ನಂತರ ಸ್ವಲ್ಪ ನೀರು ತೆಗೆದುಕೊಳ್ಳಬಹುದು. 55 ವರ್ಷ ಮೇಲ್ಪಟ್ಟ ವಯಸ್ಸಿನವರು ಪದೇಪದೆ ರಾತ್ರಿ ಮೂತ್ರಕ್ಕೆ ಹೋಗಲು ತೊಂದರೆಯಾಗುತ್ತದೆ. ಅಮಥವರು ರಾತ್ರಿ ಊಟದ ನಂತರ ಕಡಿಮೆ ನೀರು ತೆಗೆದುಕೊಳ್ಳುವುದು ಅಥವಾ ನೀರು ಕುಡಿಯದಿರುವುದು ಸೂಕ್ತ.
ಊಟದ ಸಮಯದಲ್ಲಿ
ಕೆಲವರು ಊಟಕ್ಕೆ ಮುಂಚೆ, ಊಟದ ಸಮಯದಲ್ಲಿ ಹಾಗೂ ಊಟವಾದ ತಕ್ಷಣ ಸಾಕಷ್ಟು ನೀರು ತೆಗೆದುಕೊಳ್ಳುವರು. ಇದು ಒಳ್ಳೆಯ ಅಭ್ಯಾಸವಲ್ಲ. ನಾವು ತೆಗೆದುಕೊಳ್ಳುವ ಆಹಾರವನ್ನು ಜೀರ್ಣಿಸಲು ಜೀರ್ಣರಸಗಳು ಉತ್ಪತ್ತಿಯಾಗುತ್ತವೆ. ಈ ಜೀರ್ಣರಸಗಳಿಂದ ಪಚನಕ್ರಿಯೆ ನಡೆಯುತ್ತದೆ. ಈ ಸಮಯದಲ್ಲಿ ನೀರು ತೆಗೆದುಕೊಳ್ಳುವುದರಿಂದ ಅದು ಜೀರ್ಣರಸದೊಂದಿಗೆ ಬೆರೆತು, ಅದರ ಶಕ್ತಿ ಕಡಿಮೆಯಾಗುತ್ತದೆ. ಹಾಗಾಗಿ ಜೀರ್ಣಕ್ರಿಯೆ ಸರಿಯಾದ ರೀತಿಯಲ್ಲಿ ನಡೆಯುವುದಿಲ್ಲ.
Subscribe to:
Post Comments (Atom)
No comments:
Post a Comment