*ಏಳು ಜನ್ಮದ ಗೆಳತಿ*
ಮನವ ಏಕೆ ಕಾಡುತಿರುವೆ...?
ಏಳು ಸುತ್ತಿನ ಮಲ್ಲಿಗೆ
ಹೇಳು ,ಮೆಲ್ಲಗೆ ಏಳು ಸುತ್ತಿನ ಮಲ್ಲಿಗೆ...
ಏಳು ಜನುಮದ ಏಳು ಮಲ್ಲಿಗೆ ತೂಕದ
ಈ ನನ್ನ ಮನ ಮೆಚ್ಚಿದ
ಮಧುರ ಚೆಲ್ಲಿದ ದುಂಡು ಮಲ್ಲಿಗೆ...
ನಿನ್ನ ಮನ ಜಾರಿದೆ ಅದಾರಿಗೆ.....
ನಾ ಕಾದಿರುವೆ ಇದೋ ಮಲ್ಲೆ ಮಲ್ಲಿಗೆ
ಜಾಜಿ ಸಂಪಿಗೆ ಹೂವ ಚೆಲ್ಲಿ ನಿನ್ನ
ದಾರಿಗೆ.....
ನಾಟಕವ ನಿಲ್ಲಿಸು ನಾಚಿಕೆಯ
ಅಳಿಸು....
ನಿನಗಾಗಿ ಪರಿತಪಿಸುವ
ಈ ಹೃದಯ ಉಳಿಸು...
ಒಲವ ದೀವಿಗೆ ಹಚ್ಚಿ ಪ್ರೇಮ
ಜ್ಯೋತಿಯನು ಚೆಲ್ಲು...
ನನ್ನೀ ಹೃದಯದಿ ಬಂದು ನಿಲ್ಲು....
ನನ್ನೀ ಬಾಳಿನಂಧಕಾರವ
ಕೊಲ್ಲು.....
ನಂಬಿಕೆಯ ಉಳಿಸು ಪ್ರೀತಿ
ಪೀಯೂಷವ ಉಣಿಸು......
ನೆಮ್ಮದಿಯ ಪುಷ್ಪವರಳಿಸು
ನನ್ನ ಹೃದಯವ
ಮರಳಿಸು.....
ವಿ.ಕೃಷ್ಣಮೂರ್ತಿ ಅಜ್ಜಹಳ್ಳಿ
No comments:
Post a Comment