Tuesday, July 3, 2012
ದುಷ್ಟಗ್ರಹ ದೋಷ,ನಷ್ಟ,ತೊಂದರೆ,ನವಗ್ರಹದೋಷ ಪರಿಹಾರಕ್ಕಾಗಿ
ದುಷ್ಟಗ್ರಹ ದೋಷ,ನಷ್ಟ,ತೊಂದರೆ,ನವಗ್ರಹದೋಷ,ಮಾಟ ಇತ್ಯಾದಿ ಸಕಲ ರೀತಿಯ ಸಮಸ್ಯೆಗಳ ಪರಿಹಾರಕ್ಕಾಗಿ
ಈ ಕೆಳಗಿನ ಸಾಮಾನುಗಳನ್ನು ತಂದು ಒಂದು ಶನಿವಾರ ಸಾಯಂಕಾಲ ಗಡಿಗೆ ಅಥವ ಮಡಿಕೆಯಲ್ಲಿ ಹಾಕಿ "ಓಂ ನಮೋ ಭಾಸ್ಕರಾಯ ಮಮ ಸರ್ವ ಗ್ರಹಪೀಡಾ ನಿವಾರಣಂ ಕುರುಕುರು ಸ್ವಾಹಾ"ಈ ಸೂರ್ಯ ಮಂತ್ರವನ್ನು ೧೦೮ ಸಲ ಜಪಿಸಿ ನಂತರ ಮುಚ್ಚಳ ಹಾಕಿ ಅದನ್ನು ತಗೆದುಕೊಂಡು ಹೋಗಿ ಅರಳೀ ಮರದ ಬುಡದಲ್ಲಿ ಇಟ್ಟು ಬರುವುದು
ಎಕ್ಕದಬೇರು
ಉಮ್ಮತ್ತಿಬೇರು
ದರ್ಬೆ ಬೇರು ಮತ್ತು ಕಡ್ಡಿ
ಉತ್ತರಾಣಿಬೇರು
ರಾಗಿ ಬೇರು
ಜುಮ್ಮನೇರಳೆ ಬೇರು ಮತ್ತು ಎಲೆ
ಅತ್ತಿ ಎಲೆ
ಮಾವಿನ ಎಲೆ
ಅಕ್ಕಿ
ಕಡಲೆ
ಗೋದಿ
ಹೆಸರು
ಎಳ್ಳು
ಬಿಳಿ ಸಾಸಿವೆ
ಚಂದನ
ಗೋಮೂತ್ರ(ಗಂಜಲ)
ಹಾಲು
ತುಪ್ಪ
ಜೇನು
ಈ ರೀತಿ ಮಾಡಿದ ನಂತರ ಮನೆಯಲ್ಲಿ ೨೧ ದಿನಗಳವರೆಗೆ ಮಾಂಸಾಹಾರ ಮಾಡಬಾರದು ೨೧ನೇ ದಿವಸ ಪಾಯಸ ಮಾಡಿ ನಾಲ್ಕೈದು ಜನರಿಗೆ ಉಣಬಡಿಸ ಬೇಕು.
ಈ ೨೧ ದಿನಗಳು ಮನೆಯಲ್ಲಿ ನಿತ್ಯವೂ ಈ ಕೆಳಗಿನ ವಸ್ತುಗಳಿಂದ ಧೂಪ ಹಾಬೇಕು ಮತ್ತು ಮನೆ ದೇವರುಗಳಿಗೆ ಈ ಸಮಯದಲ್ಲಿ ಪಂಚಾಮೃತಾಭಿಷೇಕ ಮಾಡಿಸುವುದು ಸೂಕ್ತ.
ಗರಿಕೆ
ದರ್ಭೆ
ಬಿಳಿಸಾಸಿವೆ
ಪಚ್ಚ ಕರ್ಪೂರ
ದಶಾಂಗ ಧೂಪ
ಹಿಪ್ಪೆಬೀಜ
ಇವುಗಳನ್ನು ಒಂದು ತಾಮ್ರದ ಬಟ್ಟಲಲ್ಲಿ ಹಾಕಿಕೊಂಡು ಮನೆಯಲಿ ದಿನವೂ ಮುಸ್ಸಂಜೆಯಲ್ಲಿ ಹಾಕುವುದು. ೨೧ದಿನಗಳ ನಂತರ ಪ್ರತಿ ಅಮಾವಾಸೆ ಮತ್ತು ಹುಣ್ಣಿಮೆಯಂದು ಸಾಯಂಕಾಲ ಹಾಕಿದರೆ ಸಾಕು
Subscribe to:
Post Comments (Atom)
No comments:
Post a Comment