Tuesday, July 3, 2012
ನಕ್ಷತ್ರದ ಅಧಿದೇವತೆ
ಅಶ್ವಿನಿ ನಕ್ಷತ್ರದ ಅಧಿದೇವತೆ, ಅಶ್ವಿನಿ ಕುಮಾರರಾಗಿದ್ದು, ಅಶ್ವಿನಿ ನಕ್ಷತ್ರದ ದಿವಸ ಅಶ್ವಿನಿ ಕುಮಾರರನ್ನು ಪೂಜಿಸಿದರೆ, ಆರೋಗ್ಯ ವೃದ್ದಿಸುತ್ತದೆ. ದೀರ್ಘಾಯಸ್ಸು ಉಂಟಾಗುತ್ತದೆ.
ಭರಣಿ ನಕ್ಷತ್ರದ ಅಧಿದೇವತೆ ಯಮನಾಗಿದ್ದು, ಭರಣಿ ನಕ್ಷತ್ರದ ದಿವಸ ಯಮನನ್ನು ನೀಲಿ ಬಣ್ಣದ ಹೂವುಗಳಿಂದ ಪೂಜಿಸಿದರೆ, ಅಕಾಲಿಕ ಮೃತ್ಯುವಿನಿಂದ ಪಾರಾಗಬಹುದು.
ಕೃತಿಕೆ ನಕ್ಷತ್ರದ ಅಧಿದೇವತೆ ಅಗ್ನಿಯಾಗಿದ್ದು, ಕೃತಿಕ ನಕ್ಷತ್ರದ ದಿವಸ ಅಗ್ನಿ ದೇವತೆಯನ್ನು ಕೆಂಪು ಹೂವುಗಳಿಂದ ಪೂಜಿಸಿದರೆ, ಅಪೇಕ್ಷಿಸಿದ ಕಾರ್ಯಗಳು ಫಲಿಸುತ್ತದೆ.
ರೋಹಿಣಿ ನಕ್ಷತ್ರದ ಅಧಿದೇವತೆ ಬ್ರಹ್ಮನಾಗಿದ್ದು, ರೋಹಿಣಿ ನಕ್ಷತ್ರದ ದಿವಸ ಬ್ರಹ್ಮನನ್ನು ಪೂಜಿಸಿದರೆ, ಕೆಲಸ ಕಾರ್ಯಗಳು ಸುಗಮವಾಗಿ ಅಭಿವೃದ್ದಿ ಹೊಂದುತ್ತದೆ.
ಮೃಗಶಿರ ನಕ್ಷತ್ರದ ಅಧಿದೇವತೆ ಚಂದ್ರನಾಗಿದ್ದು, ಮೃಗಶಿರ ನಕ್ಷತ್ರದ ದಿವಸ ಚಂದ್ರನನ್ನು ಪೂಜಿಸಿದರೆ, ಜ್ಞಾನ ಮತ್ತು ಆರೋಗ್ಯ ವೃದ್ದಿಯಾಗುತ್ತದೆ.
ಆರಿದ್ರ ನಕ್ಷತ್ರದ ಅಧಿದೇವತೆ ಶಿವನಾಗಿದ್ದು, ಆರಿದ್ರಾ ನಕ್ಷತ್ರದ ದಿವಸ ಶಿವನನ್ನು ತಾವರೆ ಹೂವುಗಳಿಂದ ಪೂಜಿಸಿದರೆ, ಸ್ಪರ್ಧೆಗಳಲ್ಲಿ ಜಯ ಉಂಟಾಗುತ್ತದೆ.
ಪುನರ್ವಸು ನಕ್ಷತ್ರದ ಅಧಿದೇವತೆ ಅದಿತಿ (ಕಾಷ್ಯಪ ಮಹರ್ಷಿಯ ಪತ್ನಿ - ದೇವತೆ ತಾಯಿ) ಯಾಗಿದ್ದು, ಪುನರ್ವಸು ನಕ್ಷತ್ರದ ದಿವಸ ಅದಿತಿಯನ್ನು ಪೂಜಿಸಿದರೆ, ತಾಯಿಯ ಮತ್ತು ಹಸು ಕರುಗಳ ರಕ್ಷಣೆ ಉಂಟಾಗುತ್ತದೆ ಸಂತಾನಾಪೇಕ್ಷಿಗಳು ಸಹಾ ಪೂಜೆ ಮಾಡಿದರೆ ಸಂತಾನ ಪ್ರಾಪ್ತಿಯಾಗುತ್ತದೆ.
ವಿಶಾಖ ನಕ್ಷತ್ರದ ಅಧಿದೇವತೆ ಇಂದ್ರಾಗ್ನಿಯಾಗಿದ್ದು, ವಿಶಾಖನಕ್ಷತ್ರದ ದಿವಸ ಇಂದ್ರಾಗ್ನಿಯನ್ನು ಕೆಂಪು ಹೂವುಗಳಿಂದಪೂಜಿಸಿದರೆ ಧನ ಮತ್ತು ಇಷ್ಟಾರ್ಥಗಳು ಈಡೇರುತ್ತವೆ.
ಅನುರಾಧ ನಕ್ಷತ್ರ ಅಧಿದೇವತೆ ಮಿತ್ರದೇವನಾಗಿದ್ದು, ಅನುರಾಧ ನಕ್ಷತ್ರ ದಿವಸ ಮಿತ್ರದೇವನನ್ನು ಪೂಜಿಸಿದರೆ, ಲಕ್ಷ್ಮಿ ಒಲಿಯುತ್ತಾಳೆ, ಧೀರ್ಘಾಯುವಾಗುತ್ತಾರೆ.
ಜೇಷ್ಟ ನಕ್ಷತ್ರದ ಅಧಿದೇವತೆ ಇಂದ್ರನಾಗಿದ್ದು, ಜೇಷ್ಟ ನಕ್ಷತ್ರದ ದಿವಸ ಇಂದ್ರನನ್ನು ಪೂಜಿಸಿದರೆ ಪೌರುಷವಂತ, ಧನವಂತ, ಧಾರ್ಮಿಕ ಸ್ವಭಾವ ಉಂಟಾಗುತ್ತದೆ.
ಮೂಲ ನಕ್ಷತ್ರದ ಅಧಿದೇವತೆ ಶಿನಿರುತಿಷಿ ದೇವತೆಯಾಗಿದ್ದು, ಮೂಲ ನಕ್ಷತ್ರದ ದಿವಸ ನಿರುತಿ ದೇವತೆಯನ್ನು ಪೂಜಿಸಿದರೆ, ನರಕಯಾತನೆಯಿಂದ ಮುಕ್ತನಾಗುತ್ತಾನೆ. ದೋಷಗಳು ಪರಿಹಾರವಾಗುತ್ತದೆ.
ಪೂರ್ವಾಷಾಡ ನಕ್ಷತ್ರದ ಅಧಿದೇವತೆ ಜಲದೇವತೆಯಾಗಿದ್ದು, ಪೂರ್ವಾಷಾಡ ನಕ್ಷತ್ರದ ದಿವಸ ಜಲದೇವತೆ ಅಥವಾ ಗಂಗಾ ಮಾತೆಯನ್ನು ಪೂಜಿಸಿದರೆ, ಮಾನಸಿಕ ಹಾಗೂ ದೈಹಿಕ ಒತ್ತಡಗಳು ನಿವಾರಣೆಯಾಗುತ್ತದೆ.
ಉತ್ತರಾಷಾಡ ನಕ್ಷತ್ರದ ಅಧಿದೇವತೆ ವಿಶ್ವದೇವನಾಗಿದ್ದು, ಉತ್ತರಾಷಾಡ ನಕ್ಷತ್ರದ ದಿವಸ ವಿಶ್ವ ದೇವನನ್ನು ಹೂವುಗಳಿಂದ ಪೂಜಿಸಿದರೆ ಎಲ್ಲಾ ಕೆಲಸ ಕಾರ್ಯಗಳು ಕೈಗೂಡುತ್ತದೆ.
ಶ್ರವಣ ನಕ್ಷತ್ರದ ಅಧಿದೇವತೆ ವಿಷ್ಣುವಾಗಿದ್ದು, ಶ್ರವಣ ನಕ್ಷತ್ರದ ದಿವಸ ವಿಷ್ಣುವನ್ನು ಹಳದಿ ಮತ್ತು ನೀಲಿ ಹೂವುಗಳಿಂದ ಪೂಜಿಸಿದರೆ, ಧನ ವೃದ್ದಿ, ಸ್ಪರ್ಧೆಗಳಲ್ಲಿ ಜಯಶಾಲಿಗಳಾಗುತ್ತಾರೆ.
ಧನಿಷ್ಟ ನಕ್ಷತ್ರದ ಅಧಿದೇವತೆ ವಸುದೇವತೆಯಾಗಿದ್ದು, ಧನಿಷ್ಟ ನಕ್ಷತ್ರದ ದಿವಸ ವಸುದೇವತೆಯನ್ನು ಗಂಧ, ಪುಪ್ಪಗಳಿಂದ ಪೂಜಿಸಿದರೆ, ಎಲ್ಲಾ ರೀತಿಯ ಭಯ ನಿವಾರಣೆಯಾಗುತ್ತದೆ.
ಶತಭೀಷ ನಕ್ಷತ್ರದ ಅಧಿದೇವತೆ ವರುಣ ದೇವತೆಯಾಗಿದ್ದು, ಶತಬೀಷ್ ನಕ್ಷತ್ರದಿವಸ ವರುಣ ದೇವತೆಯನ್ನು ಪೂಜಿಸಿದರೆ, ಎಲ್ಲಾ ರೀತಿಯ ತೊಂದರೆಗಳು ನಿವಾರಣೆಯಾಗಿ ಶಕ್ತಿ, ಧನ, ವೃದ್ದಿಯಾಗುತ್ತದೆ.
ಪೂರ್ವಾಬಾದ್ರ ನಕ್ಷತ್ರದ ಅಧಿದೇವತೆ ಅಜನ್ಮ (ರುದ್ರನ ಇನ್ನೊಂದು ಹೆಸರು) ನಾಗಿದ್ದು, ಪೂರ್ವಾಬಾದ್ರ ನಕ್ಷತ್ರದ ದಿವಸ ಅಜನ್ಮನನ್ನು ಪೂಜಿಸಿದರೆ, ಶ್ರದ್ದಾವಂತ, ಧರ್ಮನಿಷ್ಟನಾಗುತ್ತಾನೆ.
ಉತ್ತರಾಬಾದ್ರ ನಕ್ಷತ್ರದ ಅಧಿದೇವತೆ ಅಹಿರ್ಬುದ್ನ (ರುದ್ರ ನ ಮತ್ತೊಂದು ಹೆಸರು) ನಾಗಿದ್ದು, ಉತ್ತರಾಬಾದ್ರ ನಕ್ಷತ್ರದಿವಸ ಅಹಿರ್ಬುದ್ನ ದೇವತೆಯನ್ನು ಪೂಜಿಸಿದರೆ, ದೇವತಾಶಾಸ್ತ್ತ್ರ ನಿಪುಣನಾಗುತ್ತಾನೆ.
ರೇವತಿ ನಕ್ಷತ್ರದ ಅಧಿದೇವತೆ ಪೂಷ ದೇವತೆ (ಸೂರ್ಯನ ಇನ್ನೊಂದು ಹೆಸರು) ಯಾಗಿದ್ದು, ರೇವತಿ ನಕ್ಷತ್ರದ ದಿವಸ ಪೂಷ ದೇವತೆಯನ್ನು, ಬಿಳಿ ಹೂವುಗಳಿಂದ ಪೂಜಿಸಿದರೆ, ಶುಭ ಉಂಟಾಗುತ್ತದೆ. ಸಾಹಸವಂತರಾಗುತ್ತಾರೆ. ದೋಷಗಳು ನಿವಾರಣೆಯಾಗುತ್ತದೆ. ಶುಭ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತವೆ.
ಮಿಥುನ ರಾಶಿಯಲ್ಲಿ ಜನಿಸಿದವರ ಮೂಲ ಸ್ವಭಾವ ಹೆಚ್ಚು ಕಡಿಮೆ ರಾಶಿಯ ಗುಣಸ್ವಭಾವಕ್ಕೆ ಹೊಂದಿಕೊಂಡಿರುತ್ತದೆ. ಕಾಲಕ್ರಮೇಣ ಪರಿಸರಕ್ಕೆ ತಕ್ಕಂತೆ ಈ ರಾಶಿಯವರು ಬದಲಾದರೂ, ಮೂಲಸ್ವಭಾವ ಎಲ್ಲೋ ಹುದುಗಿಕೊಂಡ ಸ್ಥಿತಿಯಲ್ಲಿ ಇದ್ದೇ ಇರುತ್ತದೆ.
ಪುರುಷ- ಯಾವಾಗಲೂ ಪ್ರೀತಿಯ ಮಳೆ ಸುರಿಸುತ್ತಲೇ ತನ್ನ ಜತೆಗೇ ಇರಬೇಕೆಂದು ಹಪಹಪಿಸುವ ಹುಡುಗಿಯರು ಮಿಥುನ ರಾಶಿಯ ಹುಡುಗರ ಕಡೆಗೆ ವಾಲದಿರುವುದೇ ಉತ್ತಮ. ಕಾರಣ ಮಿಥುನ ರಾಶಿಯ ಪುರುಷರು ಸ್ವಲ್ಪ ಕಾಲ ಪ್ರೀತಿಯ ಮಳೆ ಸುರಿಸಿದರೂ ಕೆಲವು ಕಾಲ ಮಳೆಯೇ ಇಲ್ಲದೆ ಬೆಂಗಾಡಾಗಬಲ್ಲರು. ಇವರಿಗೆ ಸ್ವಲ್ಪ ಸಹನೆ ಕಡಿಮೆಯೇ. ಅತಿ ಬೇಗನೆ ಕೋಪ ನೆತ್ತಿಗೇರುವ, ಉದ್ರಿಕ್ತರಾಗುವ ಸ್ವಭಾವ ಇವರದ್ದು. ಸ್ವಲ್ಪ ಸಂದೇಹವೂ ಹೆಚ್ಚು.
ಮಿಥುನ ರಾಶಿಯ ಒಬ್ಬ ಪುರುಷನೊಂದಿಗೆ ಇರುವುದೆಂದರೆ ಮೂರು ನಾಲ್ಕು ಪುರುಷರೊಂದಿಗೆ ಇದ್ದಂತೆ. ಅರ್ಥಾತ್ ಇವರದು ಬದಲಾಗುತ್ತಿರುವ ಸ್ವಭಾವ. ಇಂಥಹ ಪುರುಷರು ಮೂರು ನಾಲ್ಕು ವ್ಯಕ್ತಿತ್ವಗಳ್ನನು ಹೊಂದಿರುವವರು. ತುಂಬ ಗೆಳೆತನದ ಸ್ವಭಾವ, ಬೇಗ ಹಚ್ಚಿಕೊಂಡುಬಿಡುವ, ಜನರನ್ನು ಬಹುಬೇಗನೆ ನಂಬುವ, ಪ್ರೀತಿಸುವ, ಯಾರ ಜತೆಗಾದರೂ ಏಗಿಬಿಡುವ ಜಾಯಮಾನ ಇವರದ್ದು. ಮಿಥುನ ರಾಶಿಯವರಿಂಗೆ ಇಂಥವರೇ ಗೆಳೆಯರಾಗಬೇಕೆಂದಿಲ್ಲ. ಯಾರಾದರೂ ಆಗುತ್ತದೆ. ಜತೆಗೆ ಮಿಥುನ ರಾಶಿಯ ಪುರುಷರು ಯಾವ ವಿಚಾರವಾದರೂ ಮಾತನಾಡಬಲ್ಲ ವಾಚಾಳಿ. ಜತೆಗೆ ಸ್ವಲ್ಪ ತಮಾಷೆಯ ಸ್ವಭಾವ ಕೂಡಾ ಇವರಿಗಿರುತ್ತದೆ. ಇವರಿಗೆ ಜಾಲಿಯಾಗಿ ಪಾರ್ಟಿ ಮಾಡೋದೂ ಇಷ್ಟ. ಪಾರ್ಟಿಯಲ್ಲೇ ಹುಡುಗಿಯೊಬ್ಬಳಿಗೆ ಮಿಥುನ ರಾಶಿಯ ಪುರುಷ ಇಷ್ಟವಾದರೆ ಧಾರಳವಾಗಿ ಸಂಗಾತಿಯಾಗಿಸಿಕೊಳ್ಳಬಹುದು. ಯಾಕೆಂದರೆ ಅವರ ನಿಜ ಸ್ವಭಾವ ಪಾರ್ಟಿಯಲ್ಲಿ ಕಾಣಬಹುದು.
ಮಹಿಳೆ- ಒಬ್ಬ ಮಿಥುನ ರಾಶಿಯ ಹುಡುಗಿಯನ್ನು ಮದುವೆಯಾಗೋದೆಂದರೆ ಇಬ್ಬರು ಹೆಂಡಿರ ಜತೆಗೆ ಜೀವಿಸಿದಂತೆ. ಅರ್ಥಾತ್ ಎರಡೆರಡು ವ್ಯಕ್ತಿತ್ವವನ್ನು ಮಿಥುನ ರಾಶಿಯ ಮಹಿಳೆಯರೂ ಹೊಂದಿರುತ್ತಾರೆ. ಒಬ್ಬರೊಂದಿಗೆ ತುಂಬ ಹಚ್ಚಿಕೊಂಡು ಕಚ್ಚಿಕೊಂಡು ಇರೋದಕ್ಕೆ ಮಿಥುನ ರಾಶಿಯ ಸ್ತ್ರೀಯರಿಗೆ ಸಾಧ್ಯವಾಗೋದಿಲ್ಲ. ಹಾಗೆಯೇ ಒಂದು ಸ್ಥಳಕ್ಕೂ ಅಂಟಿಕೊಂಡು ಬಿಡುವ ಜಾಯಮಾನ ಇವರದಲ್ಲ. ಬದಲಾವಣೆಯೇ ಜಗದ ನಿಯಮ ಅಂದುಕೊಂಡು ತಿರುಗಾಡುವ ವ್ಯಕ್ತಿತ್ವ ಇವರದು. ಮಿಥುನ ರಾಶಿಯ ಸ್ತ್ರೀಯರನ್ನು ಯೌವನದಲ್ಲಿ ಕಟ್ಟಿಹಾಕಲು ಸಾಧ್ಯವಿಲ್ಲ. ಅವರಿಗೆ ತುಂಬ ಪ್ರೀತಿ, ನಂಬಿಕೆ, ಕಕ್ಕುಲತೆಯನ್ನು ತೋರಿದಲ್ಲಿ ಮಾತ್ರ ಅವರು ಅಂಥವರಿಗೆ ಅಂಟಿಕೊಂಡು ಬಿಡಬಹುದು. ಇಲ್ಲವಾದರೆ ಪ್ರೀತಿಯನ್ನು ಬೇರೆಲ್ಲಿಯೋ ಅರಸುತ್ತಾರೆ. ಅಷ್ಟೇ ಅಲ್ಲ, ತನ್ನ ಸಂಗಾತಿಯ ತುಂಬ ಕೆಟ್ಟ ಅಭ್ಯಾಸವನ್ನೂ ಈಗ ಸಹಿಸಿಕೊಂಡ ಮಿಥುನ ರಾಶಿಯ ಸ್ತ್ರೀ, ಇನ್ನೊಂದೆರಡೇ ಗಂಟೆಗಳಲ್ಲಿ ಸಂಗಾತಿಯ ಬದಲಾದ ಹೇರ್‌ಸ್ಟೈಲ್‌ಗೂ ತಗಾದೆ, ಚಿರಿಪಿರಿ ತೆಗೆಯುವ ವ್ಯಕ್ತಿತ್ವ ಹೊಂದಿರುತ್ತಾಳೆ!
ಮಿಥುನ ರಾಶಿಯ ಸ್ತ್ರೀಯರು ರೊಮ್ಯಾಂಟಿಕ್ ಅಲ್ಲ. ಆದರೆ ರೊಮ್ಯಾನ್ಸ್ ಮಾಡಲು ಬರೋದಿಲ್ಲ ಅಂತೇನೂ ಇಲ್ಲ. ಅವರಿಗೆ ರೊಮ್ಯಾನ್ಸ್ ಅನ್ನೋದು ಕೇವಲ ಸಂವಹನ ಅಷ್ಟೆ. ಜತೆಗೆ ಇಂತಹ ಸ್ತ್ರೀ ತನ್ನ ಪುರುಷನ ಎಲ್ಲ ಗುಣಗಳನ್ನೂ ಎದೆಗವಚಿಕೊಂಡು ಪ್ರೀತಿಸುವ ಜಾಯಮಾನದವಳಲ್ಲ. ತನ್ನ ಪುರುಷನ ಬುದ್ಧಿಮತ್ತೆಯನ್ನು ಪ್ರೀತಿಸುವ ಆಕೆ, ಅದೇ ಪುರುಷ ಕ್ರಿಯೇಟಿವ್ ಅಲ್ಲ ಎಂದು ತೆಗಳಲೂ ರೆಡಿ.
ಹಾಗಿದ್ದರೂ ಮಿಥುನ ಸ್ತ್ರೀ ತನ್ನ ಪುರುಷನಿಗೆ ಆಗಾಗಾ ತನ್ನ ಪ್ರೀತಿಯ ಪ್ರದರ್ಶನ ಬೇರೆ ಬೇರೆ ರೀತಿಯಲ್ಲೇ ಮಾಡುತ್ತಿರುತ್ತಾಳೆ. ಜೀವನದಲ್ಲಿ ಬೊಗಸೆ ತುಂಬ ಪ್ರೀತಿ ಸುರಿಸುವ ಅದ್ಭುತ ಕಲೆಯೂ ಆಕೆಗೆ ಗೊತ್ತು. ಕೆಲವೊಮ್ಮೆ ನಾರಿಯ ಸಹಜ ಮನೋಸ್ಥಿತಿಯಲ್ಲಿ ಆಕೆಯಿದ್ದರೆ ಮತ್ತೊಮ್ಮೆ ಬೇರೆಯೇ ಆಗಬಹುದು. ಹಾಗಾಗಿ ಮಿಥುನ ರಾಶಿಯ ಸ್ತ್ರೀಯರು ಎಂದಿಗೂ ತಮ್ಮ ಪತಿಯನ್ನು ಬೋರ್ ಹೊಡೆಸುವುದಿಲ್ಲ. ಏನಾದರೊಂದು ಹೊಸತನ ಅವರಲ್ಲಿರುತ್ತದೆ.
ಪುರುಷನಲ್ಲೂ ಏನಾದರೊಂದು ಅದ್ಭುತ ಗುಣಗಳನ್ನು ಕಂಡುಹಿಡಿಯುತ್ತಾರೆ. ಆದರೆ, ಅವರಲ್ಲೇ ಕೆಟ್ಟದನ್ನೂ ಅಷ್ಟೇ ಸುಲಭವಾಗಿ ಪತ್ತೆ ಹಚ್ಚುತ್ತಾರೆ. ಹಾಗಾಗಿ ಮಿಥುನ ರಾಶಿಯ ಸ್ತ್ರೀಯರು ತಮ್ಮ ಸಂಗಾತಿಯ ಆಯ್ಕೆಯಲ್ಲಿ ತುಂಬ ಚ್ಯೂಸಿ. ಸಂಗಾತಿಯನ್ನು ತುಂಬ ಪ್ರೀತಿಸುತ್ತಿದ್ದರೂ, ಬೇಗನೆ ಇತರರಿಂದ ಆಕರ್ಷಿತರಾಗುವ ಸಂಭವವೂ ಇವರಲ್ಲಿ ಹೆಚ್ಚು.
ಮಿಥುನ ಸ್ತ್ರೀ ಯಾವತ್ತೂ ತಮ್ಮ ಸಂಗಾತಿಯನ್ನು ಸಂದೇಹದಿಂದ ನೋಡೋದಿಲ್ಲ. ಮಧ್ಯರಾತ್ರಿ ತಡವಾಗಿ ಬಂದರೂ ಪೊರಕೆಯೋ, ಲಟ್ಟಣಿಗೆಯನ್ನೋ ಕೈಯಲ್ಲಿ ಹಿಡಿದು ಕೆಂಪನೆ ಕಣ್ಣುಗಳಿಂದ ಸಂಗಾತಿಯನ್ನು ಬರಮಾಡಿಕೊಳ್ಳುವ ಅಭ್ಯಾಸ ಇವರದಲ್ಲ. ಸಂಗಾತಿ ಬೇಗ ಮನೆಗೆ ಬಂದಾಗಿನ ಪ್ರೀತಿಯೇ ತಡವಾಗಿ ಬಂದಾಗಲೂ ಇವರು ತೋರಿಸುತ್ತಾರೆ. ತುಂಬ ಚೆನ್ನಾಗಿ ಅಡುಗೆ ಮಾಡೋದು ಕೂಡಾ ಇವರಿಗೆ ಕರಗತ. ಮಿಥುನ ರಾಶಿಯ ಪತ್ನಿ ಹೊಂದಿರುವ ಪುರುಷರಿಗೆ ಖಂಡಿತ ತನ್ನ ಪತ್ನಿ ಡಿಫರೆಂಟ್ ಅನಿಸದಿರದು. ಮಿಥುನ ರಾಶಿಯ ಸ್ತ್ರೀಯರಿಗೆ ಹಾರೋದು ಹೇಗೆಂದು ತಿಳಿಯದಿದ್ದರೂ ಹಾರುವ ಕನಸು ಕಾಣುತ್ತಾರೆ. ಬದುಕಿನ ತುಂಬ ಆಶಾವಾದವನ್ನೂ ಇವರು ಹೊಂದಿರುತ್ತಾರೆ.
ಮಕ್ಕಳು- ಮಿಥುನ ರಾಶಿಯ ಮಕ್ಕಳು ತಂಟೆಕೋರರು. ಇವರು ನಡೆಯುತ್ತಾರೆ ಅಂದುಕೊಂಡರೆ ಓಡುತ್ತಿರುತ್ತಾರೆ, ಹಾಗಿರುವ ಸ್ವಭಾವ ಮಿಥುನ ರಾಶಿಯ ಮಕ್ಕಳದ್ದು! ಒಂದೇ ಜಾಗದಲ್ಲಿ ಇಂಥ ಮಕ್ಕಳು ಆಟವಾಡುತ್ತಾ ಕೂರೋದಿಲ್ಲ. ಏನಾದರೊಂದು ಹೊಸತು ಪೋಕರಿತನ ಮಾಡುತ್ತಾ, ಅನ್ವೇಷಣೆಯ ಗುಂಗಿನಲ್ಲಿರುತ್ತಾರೆ. ಇಂಥ ಮಕ್ಕಳನ್ನು ಹೊಡೆದು ಬಡಿದು ಹೆದರಿಸಿ ಸುಮ್ಮನೆ ಕೂರಲು ಹೇಳೋದು ಸರಿಯಲ್ಲ. ಇದರಿಂದ ಅವರ ಉದ್ವೇಗ ಇನ್ನಷ್ಟು ಹೆಚ್ಚುತ್ತದೆ. ಅಳುವಾಗ ಪೆಟ್ಟು ನೀಡಿ ಅಳು ನಿಲ್ಲಿಸಿ ಎಂದರೆ ಇವರು ಅಳು ನಿಲ್ಲಿಸಲ್ಲ. ಬದಲಾಗಿ ಇನ್ನೂ ಅಳು ಹೆಚ್ಚಿಸುತ್ತಾರೆ.
ಈ ಮಕ್ಕಳಿಗೆ ಸಹನೆ ಎಂಬುದೇ ಇಲ್ಲ. ಒಂದೇ ಜಾಗದಲ್ಲಿ ತುಂಬ ಹೊತ್ತು ಕೂರುವುದೇ ಇಲ್ಲ. ಎಲ್ಲರೊಂದಿಗೆ ಬೆರೆಯುವ ಗೆಳೆತನ, ಸುಲುಗೆ ಮಾಡಿಕೊಳ್ಳುವ ಈ ಮಕ್ಕಳು ತುಂಬ ಆಕ್ಟಿವ್ ಆಗಿ ಬುದ್ಧಿವಂತರಾಗಿರುತ್ತಾರೆ. ತಮಾಷೆಯಲ್ಲೂ ಈ ಮಕ್ಕಳು ಎತ್ತಿದ ಕೈ. ಸತ್ಯವನ್ನು ಸ್ವಲ್ಪ ಮಸಾಲೆ ಸೇರಿಸಿ ಹೇಳುವ ಜಾಯಮಾನವೂ ಇವರಲ್ಲಿದೆ. ಬಣ್ಣಹಚ್ಚಿ, ಕಥೆಕಟ್ಟಿ ನಂಬಿಸಿಬಿಡುತ್ತಾರೆ ಈ ಮಕ್ಕಳು. ಆದರೆ, ಯಾವುದೇ ಅಪಾಯವನ್ನು ಯಾರಿಗೂ ಮಾಡೋದಿಲ್ಲ. ಇಂಥ ಮಕ್ಕಳು ಇನ್ನೊಬ್ಬರ ಜತೆ ಮಾತನಾಡುವಾಗ, ಹರಟೆ ಹೊಡೆಯುವಾಗ ಅದನ್ನು ನಿಲ್ಲಿಸುವ ಪ್ರಯತ್ನ ಮಾಡಬೇಡಿ. ಬುದ್ಧಿ ಮಾತನ್ನು ಕೇಳೋದು ಸ್ವಲ್ಪ ಕಡಿಮ
ಮಕ್ಕಳು: ಸಿಂಹ ರಾಶಿಯ ಮಕ್ಕಳು ಯಾವಾಗಲೂ ಗುಂಪಿನಲ್ಲಿ ನಾಯಕರಾಗಿರುತ್ತಾರೆ. ಅದು ಆಟದ ಮೈದಾನದಲ್ಲಿರಬಹುದು, ಅಥವಾ ತರಗತಿಯಲ್ಲಿರಬಹುದು. ಎಲ್ಲಿದ್ದರೂ ತಂಡಕ್ಕೆ ಸಿಂಹ ರಾಶಿಯ ಮಗುವೇ ಪುಟಾಣಿ ಹೀರೋ/ ಹೀರೋಯಿನ್. ಈ ರಾಶಿಯ ಮಕ್ಕಳು ತುಂಬ ಬುದ್ಧಿವಂತರಾಗಿರುತ್ತಾರೆ. ಖುಷಿಯಿಂದಿರುತ್ತಾರೆ. ಜಗಳದಲ್ಲೂ ಅಷ್ಟೆ, ಸಿಟ್ಟಿಗೆದ್ದ ಸಿಂಹದಂತೆಯೇ ಸಿಂಹ ರಾಶಿಯ ಮಕ್ಕಳು ಕಾದಾಡುತ್ತಾರೆ. ಹಾಗಾಗಿ ಜಗಳಕ್ಕೆ ಇವರನ್ನು ಉತ್ತೇಜಿಸುವುದು ಬೇಡ.
ಈ ಮಕ್ಕಳನ್ನು ತುಂಬ ಕೀಳಾಗಿ ಕಾಣಬೇಡಿ. ಇದರಿಂದ ಅವರಿಗೆ ಮಾನಸಿಕವಾಗಿ ಆಘಾತವಾಗುತ್ತದೆ. ಮಕ್ಕಳ ಗುಂಪಿನಲ್ಲಿ ಬಾಸ್ ಆಗಿ ಬೀಗಿದರೆ ಅದು ಅವರ ಹುಟ್ಟುಗುಣ. ಅದನ್ನು ಏನು ಮಾಡಿದರೂ ಹೋಗಲಾಡಿಸಲು ಸಾಧ್ಯವಾಗೋದಿಲ್ಲ. ಅಗತ್ಯ ಬಂದರೆ, ಬೈಯ್ಯದೆ, ಹೊಡೆಯದೆ, ಹಾಗೆಲ್ಲಾ ಬಾಸ್ ಥರ ಆಡಬಾರದು ಪುಟ್ಟಾ, ಇನ್ನೊಬ್ಬರ ಮೇಲೆ ಡಾಮಿನೇಟ್ ಮಾಡಬಾರದೆಂದು ತಿಳಿಸಿ ಹೇಳಿ.
ಸ್ವಲ್ಪ ತೋರಿಕೆಯ ಸ್ವಭಾವ ಇವರಲ್ಲಿ ಜಾಸ್ತಿ. ಎಡವಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಜಾಯಮಾನ ಇವರದ್ದು. ಇನ್ನೊಬ್ಬರ ಗಮನ ಸೆಳೆಯುವುದು ಇವರಿಗಿಷ್ಟ. ಅಷ್ಟೇ ಅಲ್ಲ, ಮನೆಯಲ್ಲಿ ಶುದ್ಧ ಸೋಮಾರಿಗಳಿವರು. ಒಂದು ವಸ್ತುವನ್ನು ಕೂಡಾ ಆಚೀಚೆ ಇಡಲಾರರು. ಇಂಥ ಸಂದರ್ಭ ಅವರಿಗೆ, ಅವರವರ ಕೆಲಸ ಅವರವರೇ ಮಾಡಬೇಕೆಂಬುದನ್ನು ಸೂಚ್ಯವಾಗಿ ಹೇಳುತ್ತಾ ಬನ್ನಿ. ಗಿಡವಿರುವಾಗಲೇ ಬಗ್ಗಿಸದಿದ್ದರೆ ಮರವಾದ ಮೇಲೆ ಬಗ್ಗಿಸೋದು ಕಷ್ಟ.
ಇನ್ನು ಸಿಂಹ ರಾಶಿಯ ಮಕ್ಕಳ ಹೆತ್ತವರು ಮೊದಲು ಮಾಡಬೇಕಾದ ಕೆಲಸ ತಮ್ಮ ಮಗುವಿಗೆ ಇನ್ನೊಬ್ಬರ ಮನೋಭಾವಕ್ಕೂ ಗೌರವ ನೀಡಬೇಕೆಂಬುದನ್ನು. ಇನ್ನೊಬ್ಬರನ್ನು ಹಗುರವಾಗಿ ಕಾಣದಂತೆ ಅವರಿಗೆ ತಿಳಿ ಹೇಳಬೇಕು. ಸಿಂಹ ರಾಶಿಯ ಮಕ್ಕಳು ತುಂಬ ನಾಚಿಕೆಯ ಸ್ವಭಾವವಿರೋದು ಕಡಿಮೆ. ಹಾಗಿದ್ದರೂ, ಅವರಿಗೆ ತುಂಬ ಪ್ರೇತ್ಸಾಹ ನೀಡಿ ಮಕ್ಕಳಾಗಿದ್ದಾಗಲೇ ಅವರನ್ನು ತೆರೆದುಕೊಳ್ಳಲು ಹೇಳಿಕೊಡಿ.
ಸಿಂಹ ರಾಶಿಯ ಮಕ್ಕಳಲ್ಲಿ ಹುಡುಗರು ತುಂಬ ಗಟ್ಟಿಮುಟ್ಟಾದ ಶರೀರ ಹೊಂದಿರುತ್ತಾರೆ. ಹುಡುಗಿಯರು ಚೆಂದದ ಶರೀರ, ಮುಖ ಹೊಂದಿರುತ್ತಾರೆ. ತುಂಬ ಬೇಗ ಯಾವುದನ್ನೂ ಕಲಿತುಕೊಳ್ಳಬಲ್ಲ ಬುದ್ಧಿಮತ್ತೆ ಇವರಿಗಿರುತ್ತದೆ. ಆದರೆ ತಮಗಿಷ್ಟವಾದರೆ ಮಾತ್ರ ಕಲಿಯುತ್ತಾರೆ. ಇಲ್ಲವಾದರೆ ಒತ್ತಾಯಿಸಿದರೂ ಇವರು ಕಲಿಯುವುದಿಲ್ಲ. ಆದರೆ ಇವರು ಕಲಿತಾಗ ಇವರಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿ. ಆಗ ಅವರ ಉತ್ಸಾಹ ಇಮ್ಮಡಿಗೊಳ್ಳುತ್ತದೆ. ತಮ್ಮ ಗೆಳೆಯರಿಗೆ, ಗೆಳತಿಯರಿಗೆ ಹಣವನ್ನು ಸಾಲವಾಗಿಯೂ ಇವರು ಕೆಲವೊಮ್ಮೆ ನೀಡುತ್ತಾರೆ. ಆದರೆ, ಅದನ್ನು ವಾಪಸ್ ಪಡೆಯಲು ಮರೆತೇ ಹೋಗುತ್ತದೆ. ಪಾರ್ಟಿಗೆ ಹೋಗುವುದು, ಮಜಾ ಮಾಡೋದು ಎಲ್ಲ ಇವರಿಗಿಷ್ಟ. ಇಂಥ ಮಕ್ಕಳನ್ನು ತುಂಬ ಪ್ರೀತಿಯಿಂದ, ಸ್ವಲ್ಪ ಸ್ಟ್ರಿಕ್ಟ್ ಆಗಿ ಬೆಳೆಸಬೇಕು. ಹಾಗಾದರೆ ಇವರು ಸರಿಯಾಗಿ ಮುಂದೆ ಸಾಗಬಲ್ಲರು.
ಪುರುಷ: ಸಿಂಹ ರಾಶಿಯ ಪುರುಷ ಯಾವತ್ತೂ ಏಕಾಂಗಿಯಾಗಿ ಕೂತಿರುವುದು ಕಾಣಸಿಗುವುದಿಲ್ಲ. ಹೆಚ್ಚಿನ ಸಮಯವನ್ನೆಲ್ಲ ಗುಂಪಿನ ಜತೆಗೇ ಇರುತ್ತಾನೆ. ಅಷ್ಟೇ ಅಲ್ಲ, ಆ ಗುಂಪಿನಲ್ಲಿ ಆತ ಎದ್ದು ಕಾಣುವ ವ್ಯಕ್ತಿತ್ವ ಹೊಂದಿರುತ್ತಾನೆ. ಸಿಂಹ ರಾಶಿಯ ಪುರುಷ ಗುಂಪಿಗೆ ನಾಯಕನಂತಿರುತ್ತಾನಲ್ಲದೆ, ಆತನ ಮಾತನ್ನು ಕೇಳುವವರ ಇರುತ್ತಾರೆ. ಯಾರೇ ಆದರೂ ಸಿಂಹ ರಾಶಿಯ ಪುರುಷನನ್ನು ಗೆಳೆಯನಾಗಿ ಪಡೆದರೆ, ಆತನ ಪ್ರೇಕ್ಷಕನಾಗಿ ಬಿಡಬೇಕಾಗುತ್ತದೆ. ಅಂದರೆ ಸಿಂಹ ರಾಶಿಯ ಪುರುಷ ಹೆಚ್ಚು ಹೇಳುತ್ತಾನೆ. ಗೆಳೆಯ ಕೇಳುತ್ತಾನೆ. ಆತನನ್ನು ಸ್ವಲ್ಪ ಡಾಮಿನೇಟ್ ಮಾಡಲು ನೋಡಿದರೂ ತೊಂದರೆಗೆ ಒಳಗಾಗುವುದು ಗೆಳೆಯನೇ. ಸಿಂಹ ರಾಶಿಯ ಪುರುಷರು ಯಾವತ್ತೂ ತಮ್ಮನ್ನು ಇನ್ನೊಬ್ಬರು ಡಾಮಿನೇಟ್ ಮಾಡುವುದನ್ನು (ನಿಯಂತ್ರಿಸುವುದನ್ನು) ಸಹಿಸುವುದಿಲ್ಲ.
ಸಿಂಹ ರಾಶಿಯ ಹುಡುಗರು ಪ್ರೀತಿಯಲ್ಲಿ ಬೀಳಲು ಅವರಿಗೆ ಕಾರಣ ಬೇಕಿಲ್ಲ. ಅವರನ್ನು ತಮ್ಮ ಪ್ರೀತಿಯಲ್ಲಿ ಕೆಡವಿಕೊಳ್ಳಲು ಹುಡುಗಿಯರು ಏನೆಲ್ಲಾ ಕಸರತ್ತು ನಡೆಸಬೇಕಿಲ್ಲ. ಕೆಲವೊಂದು ಆತ್ಮೀಯ ಮಾತುಕತೆ, ಭಾವುಕ ಘಳಿಗೆ, ಜತೆಗೇ ಕೂತಾಗ ಒಂದು ಇಂಪಾದ ಸಂಗೀತ, ಹಿಡಿಯಷ್ಟು ಪ್ರೀತಿ ಇವಿಷ್ಟಿದ್ದರೆ ಸಿಂಹರಾಶಿಯ ಪುರುಷರಿಗೆ ಸ್ವರ್ಗವೇ ತೆರೆದಂತೆ. ಆದರೆ ರೊಮ್ಯಾನ್ಸ್ ವಿಷಯದಲ್ಲಿ ಸಿಂಹ ರಾಶಿಯ ಪುರುಷರು ಎತ್ತಿದ ಕೈ. ರೊಮ್ಯಾನ್ಸ್ ಇಲ್ಲದೆ ತುಂಬ ಸಮಯ ಖಾಲಿಯಾಗಿ ಕೂರಲು ಅವರಿಗೆ ಆಗುವುದೇ ಇಲ್ಲ. ಅಲ್ಲದೆ ತಮ್ಮ ಪ್ರೇಮಿಯಿಂದ ಯಾವಾಗಲೂ ಬೊಗಸೆ ತುಂಬ ಪ್ರೀತಿ ಹಾಗೂ ಕಾಳಜಿ ಬಯಸುವವರು ಇವರು.
ತಮ್ಮ ಸಂಗಾತಿಗೂ ಅಷ್ಟೆ. ಧಾರಾಳವಾಗಿ ಪ್ರೀತಿಯ ಮಳೆ ಸುರಿಸುತ್ತಾರೆ ಇವರು. ಆಗಾಗ ಹೂವು, ಗಿಫ್ಟ್‌ಗಳನ್ನು ಸರ್‌ಪ್ರೈಸ್ ಆಗಿ ಕೊಟ್ಟು ತಾವೂ ಕೂಡಾ ಖುಷಿಪಟ್ಟು ಸಂಗಾತಿಯನ್ನೂ ಖುಷಿಯಾಗಿ ಇಟ್ಟುಕೊಳ್ಳುತ್ತಾರೆ. ಆಗಾಗ ಪ್ರೇಮ ಪತ್ರ ನೀಡುವುದರಲ್ಲೂ ಇವರು ಸಿದ್ಧ ಹಸ್ತರು. ಇವರು ಯಾವಾಗಲೂ ಉತ್ತಮ ಹೊಟೇಲಿನ ಊಟವನ್ನೇ ಬಯಸುತ್ತಾರೆ. ಸಾದಾ ಕ್ಯಾಂಟೀನ್‌ಗಳು ಇವರಿಗೆ ಇಷ್ಟವಾಗುವುದಿಲ್ಲ. ಇಷ್ಟೆಲ್ಲಾ ಸರ್ವ ಗುಣ ಸಂಪನ್ನರಾಗಿರುವ ಸಿಂಹ ರಾಶಿಯ ಪುರುಷ ತನಗೆ ಸಂಗಾತಿಯಾಗಿ ಸಿಕ್ಕನಲ್ಲ ಎಂದು ಹುಡುಗಿಯರು ಖುಲ್ಲಂಖುಲ್ಲಾ ಆಗಿ ಖುಷಿಯ ಹವಾದಲ್ಲಿ ಮೀಯಬೇಡಿ. ಒಮ್ಮೆ ಇಂಥ ಪುರುಷರ ಹೃದಯಕ್ಕೆ ನೀವು ಲಗ್ಗೆಯಿಟ್ಟಿರೆಂದರೆ ಮತ್ತೆ ಎಂದೆಂದಿಗೂ ನೀವು ಅವರ ಹೃದಯೊಳಗಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಅರ್ಥಾತ್ ಸಿಕ್ಕಾಪಟ್ಟೆ ಪೊಸೆಸಿವ್ ಆಗಿರುತ್ತಾರೆ ಸಿಂಹ ರಾಶಿಯ ಪುರುಷರು. ನೀವೇ ಹೊರಹೋಗುತ್ತೇವೆಂದು ಹೊರಟರೂ, ಅವರು ಅಷ್ಟು ಸುಲಭವಾಗಿ ನಿಮ್ಮನ್ನು ಹೊರ ಹೋಗಲು ಬಿಡೋದಿಲ್ಲ.
ಸಿಂಹ ರಾಶಿಯ ಪುರುಷರಿಗೆ ಸ್ವಲ್ಪ ಅಸೂಯೆ ಜಾಸ್ತಿ. ತಮ್ಮ ಹೆಂಡತಿ ಇನ್ನೊಬ್ಬನನ್ನು ತಮಾಷೆಯಾಗಿ ನೋಡಿದರೂ ಇವರಿಗೆ ಅಸೂಯೆಯಾಗುತ್ತದೆ. ಎರಡು ಗಂಟೆಯೊಳಗೆ ಗೆಳತಿಯ ಮನೆಗೆ ಹೋಗಿ ವಾಪಸ್ ಬರುತ್ತೇನೆ ಎಂದು ಹೊರಹೋದರೆ ಒಂದು ಗಂಟೆ 59 ನಿಮಿಷದೊಳಗೆ ನೀವು ಮನೆಯೊಳಗೆ ಬಂದಿರಬೇಕು. ಇಲ್ಲವಾದರೆ ಸಿಂಹ ರಾಶಿಯ ಪುರುಷ ಗಂಡನಿಗೆ ಚಡಪಡಿಕೆ ಶುರುವಾಗುತ್ತದೆ.
ಬಹಳಷ್ಟು ಸಿಂಹ ರಾಶಿಯ ಪುರುಷರು ಮದುವೆಯ ನಂತರ ತಮ್ಮ ಹೆಂಡತಿಯರು ಕೆಲಸಕ್ಕೆ ಹೋಗೋದನ್ನು ಸಹಿಸುವುದಿಲ್ಲ. ಇದು ಯಾಕೆಂದರೆ, ಅವರಿಗೆ ಯಾವತ್ತೂ ತಮ್ಮ ಹೆಂಡತಿ ತಮ್ಮ ಬಿಡುವಿನ ವೇಳೆಯಲ್ಲಿ ತಮ್ಮ ಜತೆಗೇ ಇರಬೇಕೆಂಬ ಆಸೆ. ಹೆಂಡತಿ ಕೆಲಸಕ್ಕೆ ಹೋದರೆ ಆಕೆಯ ಗಮನ ಆಕೆಯ ಕೆಲಸದ ಮೇಲೂ ಹೋಗುವುದರಿಂದ ತಮಗೆ ಆಕೆಯ ಜತೆಗಿರಲು ಸಮಯ ಸಿಗೋದಿಲ್ಲ ಎಂಬ ಹಪಹಪಿತನವೂ ಇದು. ತಮ್ಮ ಹೆಂಡತಿ ಹೊರಜಗತ್ತಿಗೆ ಸುಂದರವಾಗಿ, ಆಕರ್ಷಿತಳಾಗಿ ಕಾಣಿಸಿಕೊಳ್ಳಬೇಕೆಂದು ಅವರು ಬಯಸುತ್ತಾರೆ. ಹಾಗಾಗಿ ಸಿಂಹ ರಾಶಿಯ ಪುರುಷನ ಕೆಲವೇ ಕೆಲವು ದೌರ್ಬಲ್ಯಗಳನ್ನು ಬಿಟ್ಟುಹಾಕಿ ನೋಡಿದರೆ ಆತನೊಬ್ಬ ಅತ್ಯಂತ ಪ್ರೀತಿಸುವ ಗಂಡನಾಗಿರುತ್ತಾನೆ ಎಂಬುದಂತೂ ಸತ್ಯ.
ಹೆಂಡತಿ ತನಗೆ ಗೌರವ ಕೊಡಬೇಕೆಂದು ಬಯಸುವ ಸಿಂಹ ರಾಶಿಯ ಪುರುಷರು, ಹೆಂಡತಿಗೆ ಪ್ರೀತಿ, ಕಾಳಜಿ, ಹಣ, ಸಂಪತ್ತು ಅಥವಾ ಕೇಳಿದ್ದೆಲ್ಲವನ್ನೂ ಕೊಡುತ್ತಾರೆ. ಮದುವೆಯಾಗಿ ಒಂದು ವರ್ಷದವರೆಗೆ ಮಾತ್ರ ಪ್ರೀತಿ ತೋರಿ ಆಮೇಲೆ ನಿರ್ಲಕ್ಷ್ಯ ತಾಳುವ ಸಾಲಿನ ಗಂಡಸರಂತಲ್ಲ ಇವರು. ಪ್ರತಿ ವರ್ಷದ ಮದುವೆಯಾಗುವ ದಿನ ಬಂದರೂ ರೊಮ್ಯಾಂಟಿಕ್ ಆಗಿ ಐ ಲವ್ ಯೂ ಎಂದು ಹೇಳುವ ಉತ್ಸಾಹ ಹೊಂದಿರುತ್ತಾರೆ. ಜತೆಗೆ ಎಂದೆಂದಿಗೂ ಪ್ರೀತಿ, ಕಾಳಜಿಯ ಮಳೆ ಸುರಿಸುತ್ತಾರೆ. ಹಾದಿಯಲ್ಲಿ ಚಂದದ ಹುಡುಗಿಯರನ್ನು ಕಂಡರೆ ಸುಮ್ಮನೆ ಕಣ್ಣು ಹಾಯಿಸುವ ತುಂಟರು ಇವರಾದರೂ ತಮ್ಮ ಹುಡುಗಿಗೆ/ ಹೆಂಡತಿಗೆ ನಿಷ್ಟರಾಗಿರುತ್ತಾರೆ. ಸಿಂಹ ರಾಶಿಯ ಪುರುಷರನ್ನು ಪ್ರೀತಿಸಿ ಕೈಕೊಡುವುದು ಸುಲಭವಲ್ಲ. ಇದರಿಂದ ಅವರು ತುಂಬ ವೇದನೆಗೆ ಒಳಗಾಗುತ್ತಾರೆ. ಅಷ್ಟೇ ಅಲ್ಲ, ಮತ್ತೆ ತಮ್ಮ ಹುಡುಗಿಯನ್ನು ಪಡೆಯಲು ಏನು ಮಾಡಲೂ ಸಿದ್ಧರಾಗುತ್ತಾರೆ.
ಸಿಂಹ ರಾಶಿಯ ಪುರುಷರಲ್ಲಿ ಕೆಟ್ಟ ಸಿಟ್ಟೂ ಇದೆ. ತಮ್ಮನ್ನು ತಮ್ಮ ಹೆಂಡತಿ ಗೌರವಿಸಲ್ಲ ಎಂದು ತಿಳಿದರೆ ಇವರಿಗೆ ಸಿಕ್ಕಾಪಟ್ಟೆ ಸಿಟ್ಟು ಬರುತ್ತದೆ. ಇಲ್ಲವಾದರೆ ಕೂಲ್ ಆಗಿರುವ ಇವರು, ತಮ್ಮ ಮಕ್ಕಳಿಗೆ ಉತ್ತಮ ಅಪ್ಪನೂ ಆಗಿರುತ್ತಾರೆ. ಇಲ್ಲಿಯೂ ಸಹ ಮಕ್ಕಳಿಂದ ಗೌರವವನ್ನು ಬಯಸುತ್ತಾರೆ. ಅಷ್ಟೇ ಅಲ್ಲ, ಮನಸ್ಸಿನೊಳಗೆ ಸಿಂಹ ರಾಶಿಯ ಪುರುಷರು ಯಾವತ್ತೂ ತಮ್ಮ ಘನತೆಗೆ, ಗೌರವಕ್ಕೆ ಎಲ್ಲಿ ಕುಂದು ಬರುತ್ತೋ ಎಂಬ ಭಯವನ್ನು ಹೊಂದಿರುತ್ತಾರೆ. ಹಾಗಾಗ ಸಂಗಾತಿ ಸಿಂಹ ರಾಶಿಯ ಪುರುಷರಿಗೆ ಸಾಕಷ್ಟು ಪ್ರೀತಿ, ಕಾಳಜಿ ಗೌರವ ನೀಡುತ್ತಾ ಬಂದರೆ ಸಂತಸದಿಂದಿರುತ್ತಾರೆ.
ಮಹಿಳೆ: ಸಿಂಹ ರಾಶಿಯ ಮಹಿಳೆ/ ಹುಡುಗಿಯರನ್ನು ಬುಟ್ಟಿಗೆ ಹಾಕುವುದು ಸುಲಭದ ವಿಚಾರವಲ್ಲ. ಅದೊಂದು ಸಾಹಸವೇ ಸರಿ. ಪುರುಷನೊಬ್ಬ ತಮ್ಮ ಮೇಲೆ ದೃಷ್ಟಿ ನೆಟ್ಟಿದ್ದಾನೆಂದು ತಿಳಿದರೆ, ಸಿಂಹ ರಾಶಿಯ ಮಹಿಳೆ ಸ್ಪರ್ಧೆಗೆ ಬೀಳುತ್ತಾಳೆ. ಯಾವಾಗಲೂ ಗುಂಪಿನಲ್ಲಿ ಎದ್ದು ಕಾಣುವ ವ್ಯಕ್ತಿತ್ವ ಹೊಂದಿರುವ ಇವರು ಗುಂಪಿನಲ್ಲಿ ನಾಯಕತ್ವವನ್ನೂ ಹೊಂದಿರುವವರಾಗಿರುತ್ತಾರೆ. ಪ್ರೀತಿ, ಕಾಳಜಿಯನ್ನೇ ತಮ್ಮ ಸಂಗಾತಿಗಳಿಗೆ ನೀಡಿದರೂ, ಗಂಡನನ್ನು ದೇವರೆಂದು ಇವರು ಪೂಜಿಸಲಾರರು.
ಇವರು ತಮ್ಮ ಸಂಗಾತಿಯನ್ನು ಡಾಮಿನೇಟ್ ಮಾಡುವುದಿಲ್ಲ. ಸಂಪೂರ್ಣ ಸ್ತ್ರೀತ್ವ ತುಂಬಿದವಳಾಗಿರುವ ಸಿಂಹ ರಾಶಿಯ ಮಹಿಳೆ ನಿರುಪದ್ರವಿ. ಆದರೆ ಇನ್ನೊಬ್ಬರಿಂದ ಬೇಗನೆ ಮೂರ್ಖಳೂ ಆಗಲಾರಳು. ಸರಿಯಾಗಿ ಡ್ರೆಸ್ ಮಾಡದೆ ಇರೋದನ್ನು ಸಹಿಸಲಾರರು ಇವರು. ಇವರನ್ನು ನಿಜವಾಗಿಯೂ ಇಂಪ್ರೆಸ್ ಮಾಡಬೇಕೆಂದರೆ ತುಂಬ ಡೀಸೆಂಟ್ ಆದ, ಪ್ರೀತಿಪೂರ್ವಕವಾದ ಪ್ರಾಮಾಣಿಕವಾದ ಉಡುಗೊರೆ ನೀಡಿ.
ಸಿಂಹ ರಾಶಿಯ ಮಹಿಳೆ ಯಾವಾಗಲೂ ಸ್ಟೈಲ್‌ಗೆ ಬೆಲೆ ನೀಡುತ್ತಾಳೆ. ರಸ್ತೆ ಬದಿಯಲ್ಲಿ ತಿನ್ನೋದು, ರಸ್ತೆ ಬದಿಯ ವಸ್ತುಗಳನ್ನು ಕೊಳ್ಳೋದು ಇವರಿಗೆ ಇಷ್ಟವಾಗಲ್ಲ. ಆಕೆಯ ಬಳಿ ಹಣವಿಲ್ಲದಿದ್ದರೂ, ಇಂಥ ರಸ್ತೆ ಬದಿಯ ವಾತಾವರಣ ಆಕೆಗೆ ಇಷ್ಟವಾಗಲ್ಲ. ದುಬಾರಿ ಗಿಫ್ಟ್‌ಗಳೆಂದರೆ ಈಕೆಗೆ ಇಷ್ಟ. ಕೆಲವೊಮ್ಮೆ ಹಠಮಾರಿಯೂ ಆಗುವ ಇವರು ಗರ್ವಿಷ್ಟರಾಗಿಯೂ ಕಾಣುತ್ತಾರೆ.
ತುಂಬ ದಯಾಳುವಾಗಿರುವ ಇವರು ತಮ್ಮ ಮಕ್ಕಳನ್ನು ತುಂಬ ಕಾಳಜಿಯಿಂದ ಬೆಳೆಸುತ್ತಾರೆ. ಬುದ್ಧಿವಂತಿಕೆ, ಪ್ರತಿಭೆ ಹಾಗೂ ಗಟ್ಟಿತನ ಇವೆಲ್ಲವೂ ಇವರಲ್ಲಿರುತ್ತದೆ. ಇವೆಲ್ಲವುಗಳ ಜತೆಗೇ ಇರುವ ಸ್ತ್ರೀತ್ವ ಕೂಡಾ ಈಕೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಮದುವೆಯಾದ ಮೇಲೆ ಕೆಲಸಕ್ಕೆ ಹೋಗೋದು ಬೇಡ ಎಂದೆಲ್ಲ ಹೇಳಿದರೆ ಆಕೆ ಸಹಿಸುವುದಿಲ್ಲ. ಕೆಲಸವೆಂಬುದು ಆಕೆಯನ್ನು ಸದಾ ಜೀವಂತಿಕೆಯಲ್ಲಿರುವಂತೆ ಮಾಡುತ್ತದೆ. ಅತ್ಯುತ್ತಮ ಹೆಂಡತಿಯಾಗುವ ಅವರು, ಅತಿಥಿ ಸತ್ಕಾರದಲ್ಲೂ ಎತ್ತಿದ ಕೈ. ಆದರೆ ಹಣದ ಬಗ್ಗೆ ಅಂತಹ ಹಿಡಿತ ಇವರಲ್ಲಿರುವುದಿಲ್ಲ. ಇವರ ಅಭಿರುಚಿಗಳೆಲ್ಲ ದುಬಾರಿಯಾಗಿರುತ್ತದೆ. ಆದರೆ ಅವುಗಳು ನಿಜಕ್ಕೂ ಅದ್ಭುತವಾಗಿರುತ್ತದೆ.
ಮಕ್ಕಳನ್ನು ಮುದ್ದು ಮಾಡುತ್ತಾ ಅವರಿಗೆ ತುಂಬ ಪ್ರೋತ್ಸಾಹ ನೀಡುತ್ತಾಳೆ. ಆದರೆ ಅವರಿಂದ ಗೌರವವನ್ನೂ ಬಯಸುತ್ತಾಳಲ್ಲದೆ ಶಿಸ್ತನ್ನೂ ಕೂಡಾ. ಅವಳು ತನ್ನ ಸ್ವಾತಂತ್ರ್ಯ ಬಯಸುವ ಜತೆಗೆ ಮಕ್ಕಳಿಗೂ ಸಾಕಷ್ಟು ಸ್ವಾತಂತ್ರ್ಯ ನೀಡುತ್ತಾಳೆ. ಕೆಲವೊಮ್ಮೆ ಸ್ವಲ್ಪ ಅಸೂಯೆ ಪಡುವ ುಣವೂ ಇವರಲ್ಲಿದೆ. ಅಷ್ಟೇ ಅಲ್ಲ. ತುಂಬ ಪೊಸೆಸಿವ್ ಕೂಡಾ. ಆದರೆ ಆಕೆಯನ್ನು ಕಂಟ್ರೋಲ್ ಮಾಡಲು, ಅಥವಾ ಡಾಮಿನೇಟ್ ಮಾಡಲು ನೋಡಿದರೆ ಆಕೆ ಸಹಿಸುವುದಿಲ್ಲ. ಇವುಗಳಲ್ಲಿ ಬ್ಯಾಲೆನ್, ಆಗಿ ಸಂಬಂಧ ತೆಗೆದುಕೊಂಡು ಹೋಗಲು ಗಂಡ ತಯಾರಿದ್ದರೆ, ಸಿಂಹ ರಾಶಿಯ ಹೆಂಡತಿ ಖಂಡಿತವಾಗಿಯೂ ಪ್ರೀತಿಯ ಮಳೆಯೇ ಆಗುತ್ತಾಳೆ.
ಮೆಯೇ. ಏನಾದರೊಂದು ತರಲೆ ಮಾಡುತ್ತಲೇ ಇರುವ ಈ ಮಕ್ಕಳಿಗೆ ಬದ್ಧತೆ ಕಡಿಮೆ.
Subscribe to:
Post Comments (Atom)
No comments:
Post a Comment